ವಿಷಯಕ್ಕೆ ಹೋಗು

ಮೊಗ್ಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಸ್ಯಶಾಸ್ತ್ರದಲ್ಲಿ, ಮೊಗ್ಗು ಎಂದರೆ ಬೆಳವಣಿಗೆಯಾಗಿರದ ಅಥವಾ ಮೂಲಾವಸ್ಥೆಯ ಕುಡಿ ಮತ್ತು ಸಾಮಾನ್ಯವಾಗಿ ಎಲೆಯ ಸಂಧಿಕೋನದಲ್ಲಿ ಅಥವಾ ಕಾಂಡದ ತುದಿಯಲ್ಲಿ ಸ್ಥಿತವಾಗಿರುತ್ತದೆ. ಒಮ್ಮೆ ರೂಪಗೊಂಡ ಮೇಲೆ, ಮೊಗ್ಗು ಸ್ವಲ್ಪ ಕಾಲ ಜಡ ಸ್ಥಿತಿಯಲ್ಲಿ ಇರಬಹುದು, ಅಥವಾ ತಕ್ಷಣ ಕುಡಿಯಾಗಿ ರೂಪಗೊಳ್ಳಬಹುದು. ಮೊಗ್ಗುಗಳು ಹೂವುಗಳು ಅಥವಾ ಗಿಡ್ಡನೆಯ ಕುಡಿಗಳನ್ನು ವಿಕಸಿಸಲು ವಿಶೇಷೀಕೃತಗೊಂಡಿರಬಹುದು, ಅಥವಾ ಸಾಮಾನ್ಯ ಕುಡಿ ಬೆಳವಣಿಗೆಯ ಸಂಭ್ಯಾವ್ಯತೆಯನ್ನು ಹೊಂದಿರಬಹುದು.

ಅನೇಕ ದಾರುವುಳ್ಳ ಸಸ್ಯಗಳ ಮೊಗ್ಗುಗಳು, ವಿಶೇಷವಾಗಿ ಸಮಶೀತೋಷ್ಣ ಅಥವಾ ತಂಪು ವಾಯುಗುಣಗಳಲ್ಲಿ, ಪೊರೆಗಳೆಂಬ ಮಾರ್ಪಾಡುಗೊಂಡ ಎಲೆಗಳ ಕವಚದಿಂದ ರಕ್ಷಿತವಾಗಿರುತ್ತವೆ. ಇವು ಮೊಗ್ಗಿನ ಹೆಚ್ಚು ಸೂಕ್ಷ್ಮ ಭಾಗಗಳನ್ನು ಬಿಗಿಯಾಗಿ ಸುತ್ತುವರಿಯುತ್ತವೆ. ಅನೇಕ ಮೊಗ್ಗು ಪೊರೆಗಳು ಅಂಟಂಟಾದ ವಸ್ತುವಿನಿಂದ ಆವರಿಸಲ್ಪಟ್ಟಿರುತ್ತವೆ ಮತ್ತು ಇದು ಹೆಚ್ಚಿನ ರಕ್ಷಣೆಯ ಕಾರ್ಯನಿರ್ವಹಿಸುತ್ತದೆ. ಮೊಗ್ಗು ಬೆಳವಣಿಗೆಯಾದಾಗ, ಪೊರೆಗಳು ಸ್ವಲ್ಪಮಟ್ಟಿಗೆ ಹಿಗ್ಗಬಹುದು ಆದರೆ ಸಾಮಾನ್ಯವಾಗಿ ಕೇವಲ ಉದುರಿಹೋಗುತ್ತವೆ, ಮತ್ತು ಬೆಳೆಯುತ್ತಿರುವ ಕಾಂಡದ ಮೇಲ್ಮೈ ಮೇಲೆ ಅಡ್ಡಲಾಗಿ ಉದ್ದವಾದ ಗುರುತುಗಳ ಸರಣಿಯನ್ನು ಹಿಂದೆಬಿಡುತ್ತವೆ. ಈ ಗುರುತುಗಳ ಮೂಲಕ ಯಾವುದೇ ಎಳೆ ಶಾಖೆಯ ವಯಸ್ಸನ್ನು ತೀರ್ಮಾನಿಸಬಹುದು, ಏಕೆಂದರೆ ಪ್ರತಿ ವರ್ಷದ ಬೆಳವಣಿಗೆಯು ಒಂದು ಮೊಗ್ಗಿನ ರಚನೆಯಲ್ಲಿ ಅಂತ್ಯವಾಗುತ್ತದೆ, ಮತ್ತು ಇದರ ರಚನೆಯು ಮೊಗ್ಗು ಪೊರೆ ಗುರುತುಗಳ ಒಂದು ಹೆಚ್ಚುವರಿ ಗುಂಪನ್ನು ಸೃಷ್ಟಿಸುತ್ತದೆ. ಶಾಖೆಯ ಮುಂದುವರಿದ ಬೆಳವಣಿಗೆಯಿಂದ ಸ್ವಲ್ಪ ವರ್ಷಗಳ ನಂತರ ಈ ಗುರುತುಗಳು ಅಳಿಸಿಹೋಗುತ್ತವೆ. ಹಾಗಾಗಿ ಈ ವಿಧಾನದಿಂದ ಹೆಚ್ಚು ವಯಸ್ಸಾದ ಶಾಖೆಗಳ ಒಟ್ಟು ವಯಸ್ಸನ್ನು ತೀರ್ಮಾನಿಸಲಾಗದು.

ಅನೇಕ ಸಸ್ಯಗಳಲ್ಲಿ ಮೊಗ್ಗಿನ ಮೇಲೆ ಪೊರೆಗಳ ರಚನೆಯಾಗುವುದಿಲ್ಲ, ಮತ್ತು ಆಗ ಮೊಗ್ಗನ್ನು ಬೆತ್ತಲೆ ಮೊಗ್ಗು ಎಂದು ಕರೆಯಲಾಗುತ್ತದೆ.[] ಅಂತಹ ಮೊಗ್ಗುಗಳಲ್ಲಿನ ಅತಿಸೂಕ್ಷ್ಮ ಚೆನ್ನಾಗಿ ವಿಕಾಸಗೊಳ್ಳದ ಎಲೆಗಳು ಹಲವುವೇಳೆ ವಿಪರೀತವಾಗಿ ರೋಮವುಳ್ಳವಾಗಿರುತ್ತವೆ. ಕೆಲವು ಪೊದೆಸಸ್ಯಗಳಲ್ಲಿ ಬೆತ್ತಲೆ ಮೊಗ್ಗುಗಳು ಕಂಡುಬರುತ್ತವೆ, ಉದಾಹರಣೆಗೆ ಸೂಮ್ಯಾಕ್ ಮತ್ತು ವೈಬರ್ನಮ್‍ಗಳ ಕೆಲವು ಪ್ರಜಾತಿಗಳು ಮತ್ತು ಮೂಲಿಕೆಯಂಥ ಸಸ್ಯಗಳಲ್ಲಿ. ಅನೇಕ ಮೂಲಿಕೆಯಂಥ ಸಸ್ಯಗಳಲ್ಲಿ, ಮೊಗ್ಗುಗಳು ಇನ್ನೂ ಹೆಚ್ಚು ಕಿರಿದಾಗಿರುತ್ತವೆ, ಮತ್ತು ಹಲವುವೇಳೆ ಎಲೆಗಳ ಸಂಧಿಕೋನಗಳಲ್ಲಿ ಜೀವಕೋಶಗಳ ವ್ಯತ್ಯಾಸವಿಲ್ಲದ ರಾಶಿಗಳನ್ನು ಹೊಂದಿರುತ್ತವೆ. ಅಂತ್ಯ ಮೊಗ್ಗು ಕಾಂಡದ ತುದಿಯಲ್ಲಿ ಸ್ಥಿತವಾಗಿರುತ್ತದೆ ಮತ್ತು ಪಾರ್ಶ್ವ ಮೊಗ್ಗುಗಳು ಬದಿಯಲ್ಲಿ ಕಂಡುಬರುತ್ತವೆ. ಎಲೆಕೋಸಿನ ಶಿರವು ಒಂದು ಅಸಾಧಾರಣವಾಗೊ ದೊಡ್ಡ ಅಂತ್ಯ ಮೊಗ್ಗಾದರೆ, ಬ್ರಸೆಲ್ಸ್ ಮೊಳಕೆಗಳು ದೊಡ್ಡ ಪಾರ್ಶ್ವ ಮೊಗ್ಗುಗಳಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Walters, Dirk R., and David J. Keil. 1996. Vascular plant taxonomy. Dubuque, Iowa: Kendall/Hunt Pub. Co. page 598.
"https://kn.wikipedia.org/w/index.php?title=ಮೊಗ್ಗು&oldid=882000" ಇಂದ ಪಡೆಯಲ್ಪಟ್ಟಿದೆ