ವಿಷಯಕ್ಕೆ ಹೋಗು

ಸಂಬಾರ ಪದಾರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಲವು ಸಂಬಾರ ಪದಾರ್ಥಗಳು

ಸಂಬಾರ ಪದಾರ್ಥ (ಮಸಾಲೆ ಪದಾರ್ಥ) ಎಂದರೆ ಮುಖ್ಯವಾಗಿ ಆಹಾರಕ್ಕೆ ರುಚಿಕೊಡಲು, ಬಣ್ಣಕೊಡಲು, ಅಥವಾ ಅದನ್ನು ಸಂರಕ್ಷಿಸಲು ಬಳಸಲಾದ ಬೀಜ, ಹಣ್ಣು, ಬೇರು, ತೊಗಟೆ, ಅಥವಾ ಇತರ ಸಸ್ಯಜನ್ಯ ವಸ್ತು. ಸಂಬಾರ ಪದಾರ್ಥಗಳು ಮೂಲಿಕೆಗಳಿಂದ ಭಿನ್ನವಾಗಿವೆ. ಮೂಲಿಕೆಗಳೆಂದರೆ ರುಚಿಗಾಗಿ ಅಥವಾ ಅಲಂಕಾರಕ್ಕಾಗಿ ಬಳಸಲಾದ ಸಸ್ಯಗಳ ಎಲೆಗಳು, ಹೂವುಗಳು ಅಥವಾ ಕಾಂಡಗಳು. ಅನೇಕ ಸಂಬಾರ ಪದಾರ್ಥಗಳು ಸೂಕ್ಷಜೀವಿ ನಿರೋಧಕ ಗುಣಗಳನ್ನು ಹೊಂದಿವೆ[೧]. ಇದು ಹೆಚ್ಚು ಸಾಂಕ್ರಾಮಿಕ ರೋಗಗಳನ್ನು ಹೊಂದಿರುವ ಹೆಚ್ಚು ಬಿಸಿ ವಾತಾವರಣಗಳಲ್ಲಿ ಸಂಬಾರ ಪದಾರ್ಥಗಳನ್ನು ಏಕೆ ಹೆಚ್ಚು ಸಾಮಾನ್ಯವಾಗಿ ಬಳಸಲಾಗುತ್ತದೆ, ಮತ್ತು ವಿಶೇಷವಾಗಿ ಹಾಳಾಗುವ ಸಾಧ್ಯತೆಯಿರುವ ಮಾಂಸದ ಅಡಿಗೆಯಲ್ಲಿ ಸಂಬಾರ ಪದಾರ್ಥಗಳ ಬಳಕೆಯು ಏಕೆ ಮುಖ್ಯವಾಗಿದೆ ಎಂಬುದನ್ನು ವಿವರಿಸಬಹುದು. ಸಂಬಾರ ಪದಾರ್ಥಗಳನ್ನು ಕೆಲವೊಮ್ಮೆ ಔಷಧಿಗಳು, ಧಾರ್ಮಿಕ ಆಚರಣೆಗಳು, ಸೌಂದರ್ಯವರ್ಧಕಗಳು ಅಥವಾ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕೆಲವು ಉದಾಹರಣೆಗಳೆಂದರೆ ದಾಲ್ಚಿನ್ನಿ, ಕರಿಮೆಣಸು, ಲವಂಗ, ಜಾಯಿಕಾಯಿ, ಜೀರಿಗೆ, ಅರಿಸಿನ ಇತ್ಯಾದಿ.

ಉಲ್ಲೇಖಗಳು[ಬದಲಾಯಿಸಿ]

  1. Shelef, L.A. (1984). "Antimicrobial Effects of Spices". Journal of Food Safety. 6 (1). doi:10.1111/j.1745-4565.1984.tb00477.x.