ಮಾಲಿ
ಧ್ಯೇಯ: "Un peuple, un but, une foi" "ಒಂದು ಜನತೆ ಒಂದು ಗುರಿ ಒಂದು ಧರ್ಮ" | |
ರಾಷ್ಟ್ರಗೀತೆ: Pour l'Afrique et pour toi, Mali "ಆಫ್ರಿಕಕ್ಕಾಗಿ ಮತ್ತು ಮಾಲಿ ನಿನಗಾಗಿi" | |
ರಾಜಧಾನಿ | ಬಮಾಕೊ |
ಅತ್ಯಂತ ದೊಡ್ಡ ನಗರ | ಬಮಾಕೊ |
ಅಧಿಕೃತ ಭಾಷೆ(ಗಳು) | ಫ್ರೆಂಚ್ |
ಸರಕಾರ | ಅರೆ ಅಧ್ಯಕ್ಷೀಯ ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಅಮದೌ ತೌಮಾನಿ ತೌರೆ |
- ಪ್ರಧಾನಿ | ಮೊದಿಬೊ ಸಿದಿಬೆ |
ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
- ಘೋಷಿತ ದಿನಾಂಕ | ಸೆಪ್ಟೆಂಬರ್ 22 1960 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,240,192 ಚದರ ಕಿಮಿ ; (24ನೆಯದು) |
478,839 ಚದರ ಮೈಲಿ | |
- ನೀರು (%) | 1.6 |
ಜನಸಂಖ್ಯೆ | |
- ಜುಲೈ 2007ರ ಅಂದಾಜು | 11,995,402 (73ನೆಯದು) |
- ಸಾಂದ್ರತೆ | 11 /ಚದರ ಕಿಮಿ ; (207ನೆಯದು) 28 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $14.400 ಬಿಲಿಯನ್ (125ನೆಯದು) |
- ತಲಾ | $1,154 (166ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಚಲಾವಣಾ ನಾಣ್ಯ/ನೋಟು | ಸಿ.ಎಫ್.ಎ. ಫ್ರಾಂಕ್ (XOF )
|
ಸಮಯ ವಲಯ | (UTC) |
ಅಂತರಜಾಲ ಸಂಕೇತ | .ml |
ದೂರವಾಣಿ ಸಂಕೇತ | +223
|
ಮಾಲಿ (ಅಧಿಕೃತ ಹೆಸರು - ಮಾಲಿ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಒಂದು ರಾಷ್ಟ್ರ. ಆಫ್ರಿಕಾ ಖಂಡದಲ್ಲಿ ಮಾಲಿ ೭ನೆಯ ಅತಿ ದೊಡ್ಡ ರಾಷ್ಟ್ರ. ಮಾಲಿ ಉತ್ತರಕ್ಕೆ ಅಲ್ಜೀರಿಯ, ಪೂರ್ವಕ್ಕೆ ನೈಜರ್, ದಕ್ಷಿಣದಲ್ಲಿ ಬುರ್ಕಿನಾ ಫಾಸೊ ಮತ್ತು ಕೋತ್ ದ ಐವರಿ, ನೈಋತ್ಯದಲ್ಲಿ ಗಿನಿ ಹಾಗೂ ಪಶ್ಚಿಮಕ್ಕೆ ಸೆನೆಗಾಲ್ ಮತ್ತು ಮಾರಿಟಾನಿಯ ದೇಶಗಳಿವೆ. ಮಾಲಿಯ ಉತ್ತರ ಭಾಗವು ಸಹಾರಾ ಮರುಭೂಮಿಯ ಅಂಗವಾಗಿದೆ. ಹೆಚ್ಚಿನ ಜನವಸತಿಯುಳ್ಳ ದಕ್ಷಿಣದ ಭಾಗವು ನೈಜರ್ ಮತ್ತು ಸೆನೆಗಾಲ್ ನದಿಗಳ ಬಯಲು ಪ್ರದೇಶವಾಗಿದೆ. ಹಿಂದೆ ಫ್ರೆಂಚ್ ಸುಡಾನ್ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಹೆಸರು ಈಗ ಮಾಲಿ ಸಾಮ್ರಾಜ್ಯದ ನೆನಪಿಗಾಗಿ ಮಾಲಿ ಎಂದಾಗಿದೆ. ಸ್ಥಳೀಯ ಬಂಬಾರಾ ಭಾಷೆಯಲ್ಲಿ ಮಾಲಿ ಪದದ ಅರ್ಥ ನೀರುಕುದುರೆ.