ಕೊಂಕಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಂಕಣಿ
कोंकणी
Konkanidev.jpg 
ಉಚ್ಛಾರಣೆ: IPA: kõkɵɳi (standard), kõkɳi (popular)
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಕೊಂಕಣವು , ಮಹಾರಾಷ್ಟ್ರ, ಗೋವಾ,ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳನ್ನು ಒಳಗೊಂಡಿದೆ; ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಅಂತಹ ಭಾರತೀಯ ಕೇಂದ್ರಾಡಳಿತ ಪ್ರದೇಶಗಳನ್ನು ಸಹ ಒಳಗೊಂಡಿದೆ.

ಕೊಂಕಣಿಯನ್ನು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಕೆನ್ಯಾ, [೧] ಉಗಾಂಡಾ, ಪಾಕಿಸ್ತಾನ, ಪರ್ಷಿಯನ್ ಗಲ್ಫ್, [೨] ಪೋರ್ಚುಗಲ್ನಲ್ಲೂ ಸಹ ಮಾತನಾಡುತ್ತಾರೆ.

ಒಟ್ಟು 
ಮಾತನಾಡುವವರು:
7.4 million
ಭಾಷಾ ಕುಟುಂಬ: Indo-European
 Indo-Iranian
  Indo-Aryan
   Southern Zone
    Marathi–Konkani
     ಕೊಂಕಣಿ 
ಬರವಣಿಗೆ: Pre-colonial: Goykanadi
Post-colonial: Devanagari (official),[note ೧] Roman,[note ೨] Kannada,[note ೩] and Malayalam
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:  ಭಾರತ Goa
ನಿಯಂತ್ರಿಸುವ
ಪ್ರಾಧಿಕಾರ:
Various academies and the government of Goa[೩]
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: kok
ISO/FDIS 639-3: either:
gom – Goan Konkani
knn – Maharashtrian Konkani 
Konkanispeakers.png
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಕೊಂಕಣಿಯು ಭಾರತ ದೇಶದ ಪಶ್ಚಿಮ ಕರಾವಳಿಯ ಒಂದು ಆಡುಭಾಷೆಯಾಗಿದೆ.ಗೋವಾ ರಾಜ್ಯದ ಅಧಿಕೃತ ಭಾಷೆ ಕೊಂಕಣಿಯಾಗಿದೆ. ಕೊಂಕಣಿಗೆ ತನ್ನದೇ ಆದ ಲಿಪಿಯಿಲ್ಲ.ಕೊಂಕಣಿಯು ಭಾರತದ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸಲ್ಪಟ್ಟ ೨೨ಭಾಷೆಗಳಲ್ಲಿ ಒಂದಾಗಿದೆ.ಕೊಂಕಣಿಯು ಅನೇಕ ಉಪಭಾಷೆಗಳನ್ನು ಹೊಂದಿದೆ.

ಸಮಕಾಲೀನ ಕೊಂಕಣಿ

ಸಮಕಾಲೀನ ಕೊಂಕಣಿಯನ್ನು ದೇವನಾಗರಿ, ಕನ್ನಡ, ಮಲಯಾಳಂ, ಪರ್ಷಿಯನ್ ಮತ್ತು ಲ್ಯಾಟಿನ್ ಬರವಣಿಗೆಗಳಲ್ಲಿ ಬರೆಯಲಾಗುತ್ತದೆ. ಇದನ್ನು ತಮ್ಮ ತಮ್ಮ ಸ್ಥಳೀಯ ಭಾಷೆಗಳ ಲಿಪಿಯಲ್ಲಿ ಹೆಚ್ಚಾಗಿ ಬರೆಯುತ್ತಾರಾದರೂ ದೇವನಾಗರಿ ಲಿಪಿಯಲ್ಲಿ ಗೋವಾದವರ Antruz ಭಾಷೆ ಸ್ಟ್ಯಾಂಡರ್ಡ್ ಕೊಂಕಣಿ ಎಂದು ಗುರುತಿಸಲಾಗಿದೆ.

ಕೊಂಕಣಿಯ ಪುನರುಜ್ಜೀವನ

ಗೋವಾದ ಕ್ರಿಶ್ಚಿಯನ್ ಸಮುದಾಯದವರು ಅಧಿಕೃತವಾಗಿ ಹಾಗು ಸಾಮಾಜಿಕವಾಗಿ ಪೋರ್ಚುಗೀಸ್ ಭಾಷೆಯನ್ನು ಬಳಸುತ್ತಿದ್ದರಾದ್ದರಿಂದ ಕೊಂಕಣಿಯ ಸ್ಥಿತಿ ದಯನೀಯವಾಗಿತ್ತು.ಕೊಂಕಣಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ವಿಭಾಗಗಳಿತ್ತು. ಅದಲ್ಲದೆ ಹಿಂದೂಗಳ ಕೊಂಕಣಿಯ ಮೇಲೆ ಮರಾಠಿಯ ಪ್ರಾಬಲ್ಯವಿತ್ತು.ಹೀಗಿರಲು ವಾಮನ ರಘುನಾಥ ಶೆಣೈ ವರ್ದೆ ವಲೌಲಿಕರ್ ಅವರು ಜಾತಿ ಧರ್ಮದ ಭೇಧವಿಲ್ಲದೆ ಕೊಂಕಣಿ ಸಮುದಾಯದವರನ್ನು ಒಗ್ಗೂಡಿಸಲು ಶ್ರಮಿಸಿದರು . ಪೋರ್ಚುಗೀಸರ ವಿರುದ್ಧ ಮತ್ತು ಮರಾಠಿ ಪ್ರಾಬಲ್ಯತೆಯ ವಿರುದ್ಧ ಬಹುತೇಕ ಏಕಾಂಗಿಯಾಗಿ ಹೋರಾಡಿದರು.ಕೊಂಕಣಿಯಲ್ಲಿ ಅನೇಕ ಲೇಖನಗಳನ್ನು ಬರೆದರು.ಹಾಗಾಗಿ ಅವರನ್ನು ಆಧುನಿಕ ಕೊಂಕಣಿ ಸಾಹಿತ್ಯದ ಪ್ರವರ್ತಕರೆಂದು ಪರಿಗಣಿಸಲಾಗಿದೆ.ಅವರು ನಿಧನ ಹೊಂದಿದ ದಿನದಂದು(ಏಪ್ರಿಲ್ ೯) "ವಿಶ್ವ ಕೊಂಕಣಿ ದಿನ"ವನ್ನು ಆಚರಿಸಲಾಗುತ್ತಿದೆ.

ಸ್ವಾತಂತ್ರ್ಯನಂತರದ ಅವಧಿಯಲ್ಲಿ[ಬದಲಾಯಿಸಿ]

೧೯೬೧ ರಲ್ಲಿ ಪೋರ್ಚುಗೀಸರಿಂದ ಸ್ವಾಧೀನಪಡಿಸಿಕೊಂಡ ನಂತರ ಗೋವಾ ರಾಜ್ಯವು ಕೇಂದ್ರದ ಆಡಳಿತಕ್ಕೊಳಪಟ್ಟಿತು.ಕೊಂಕಣಿ ಸ್ವತಂತ್ರ ಭಾಷೆಯೊ ಅಥವಾ ಮರಾಠಿಯ ಉಪಭಾಷೆಯೊ ಎಂಬ ಬಗ್ಗೆ ಚರ್ಚಿಸಲಾಯಿತು.ಜನಾಭಿಪ್ರಾಯ ಸಂಗ್ರಹಿಸಿದ ನಂತರ ಗೋವಾವನ್ನು ಸ್ವತಂತ್ರ ರಾಜ್ಯವಾಗಿಯೆ ಉಳಿಸಲಾಯಿತು.

ಸ್ವತಂತ್ರ ಭಾಷೆಯಾಗಿ ಗುರುತಿಸುವಿಕೆ[ಬದಲಾಯಿಸಿ]

ಕೊಂಕಣಿ ಮರಾಠಿ ಪ್ರಾಂತ್ಯ ಮತ್ತು ಒಂದು ಸ್ವತಂತ್ರ ಭಾಷೆಯಲ್ಲ ಎಂದು ಕೆಲವು ಮರಾಠಿಗರ ಒತ್ತಾಯ ಮುಂದುವರಿಯಿತು.ವಿವಾದ ಇತ್ಯರ್ಥಗೊಳಿಸಲು ಭಾಷಾ ತಜ್ಞರ ಒಂದು ಸಮಿತಿಯನ್ನು ನೇಮಿಸಲಾಯಿತು. ೨೬ ಫೆಬ್ರವರಿ ೧೯೭೫ ರಂದು ಸಮಿತಿಯು ಕೊಂಕಣಿಯು ಒಂದು ಸ್ವತಂತ್ರ ಮತ್ತು ಸಾಹಿತ್ಯಕ ಭಾಷೆ ಮತ್ತು ಅದರ ಮೇಲೆ ಪೋರ್ಚುಗೀಸ್ ಭಾಷೆಯ ಗಾಢ ಪ್ರಭಾವವಿದೆ ಎಂಬ ತೀರ್ಮಾನಕ್ಕೆ ಬಂದಿತು.

ಅಧಿಕೃತ ಭಾಷೆಯ ಸ್ಥಾನಮಾನ[ಬದಲಾಯಿಸಿ]

ಕೊಂಕಣಿ ಪ್ರೇಮಿಗಳು ೧೯೮೬ ರಲ್ಲಿ ಕೊಂಕಣಿಗೆ ಅಧಿಕೃತ ಸ್ಥಾನಮಾನದ ಬೇಡಿಕೆಯೊಂದಿಗೆ ಚಳುವಳಿ ಪ್ರಾರಂಭಿಸಿದರು. ವಿವಿಧೆಡೆ ಚಳುವಳಿ ಹಿಂಸೆಗೆ ತಿರುಗಿತು. ಕ್ಯಾಥೋಲಿಕ್ ಸಮುದಾಯದ ಎಲ್ಲಾ ಆರು ಚಳುವಳಿಗಾರರ ಸಾವು ಸಂಭವಿಸುತು.ಅಂತಿಮವಾಗಿ ೪ ಫೆಬ್ರುವರಿ ೧೯೮೭ ರಂದು ಗೋವಾ ಶಾಸಕಾಂಗ ಕೊಂಕಣಿ ಯನ್ನುಗೋವಾದ ಅಧಿಕೃತಭಾಷೆ ಎಂದು ಘೋಷಿಸಿತು.೨೦ ಆಗಸ್ಟ್ ೧೯೯೨ ರಂದು ಭಾರತಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಕೊಂಕಣಿಯನ್ನು ಸೇರಿಸಿದಾಗ ಅದು ಭಾರತದ ರಾಷ್ಟ್ರೀಯ ಅಧಿಕೃತ ಭಾಷೆಗಳಲ್ಲಿ ಒಂದಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. Whiteley, Wilfred Howell (1974). Language in Kenya. Oxford University Press,. p. 589.{{cite book}}: CS1 maint: extra punctuation (link)
  2. Kurzon, Denis (2004). Where East looks West: success in English in Goa and on the Konkan Coast Volume 125 of Multilingual matters. Multilingual Matters,. p. 158. ISBN 978-1-85359-673-5.{{cite book}}: CS1 maint: extra punctuation (link)
  3. "The Goa Daman and Diu Official Language Act" (PDF). Government of India. Retrieved 5 March 2010.
  1. Devanagari has been promulgated as the official script.
  2. Roman script is not mandated as an official script by law. However, an ordinance passed by the government of Goa allows the use of Roman script for official communication.
  3. The use of Kannada script is not mandated by any law or ordinance. However, in the state of Karnataka, Konkani can be taught using the Kannada script instead of the Devanagari script.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕೊಂಕಣಿ&oldid=1146174" ಇಂದ ಪಡೆಯಲ್ಪಟ್ಟಿದೆ