ವಿಷಯಕ್ಕೆ ಹೋಗು

ಕುಯಿ ಭಾಷೆ (ಭಾರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಯಿ
ಕಂಡ, ಕಂಡ್, ಖೋಂಡ್, ಖೋಂಡಿ, ಖೋಂಡೋ, ಕೊಡು, ಕೋಡುಲು, ಕುಯಿಂಗ, ಕುಯ್
କୁଇ
ಉಚ್ಛಾರಣೆಟೆಂಪ್ಲೇಟು:IPA-or
ಮೂಲಭಾರತ
ಸ್ಥಳೀಯ ಪ್ರದೇಶಒಡಿಶಾ
ಜನಾಂಗೀಯತೆಖೋಂಡ್ಸ್, ದಾಲ್, ಸೀತಾ ಕಾಂಡ
Native speakers
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"".[]
ದ್ರಾವಿಡ
  • ದಕ್ಷಿಣ-ಮಧ್ಯ
    • ಗೊಂಡಿ–ಕುಯಿ
      • ಕುವಿ–ಕುಯಿ
        • ಕುಯಿ
ಒಡಿಯಾ ಲಿಪಿ
ಒಡಿಯಾ ಬ್ರೈಲ್
Language codes
ISO 639-3Either:
uki  ಕುಯಿ (ಪ್ರಮಾಣಿತ)
dwk  Dawik Kui
Glottologkuii1252
ಇಎಲ್‌ಪಿKui (India)

ಕುಯಿ (କୁଇ)(ಕಂಧ್, ಖೋಂಡಿ, ಖೋಂಡ್, ಖೋಂಡೋ, ಕಂದ, ಕೊಡು (ಕೋಡು), ಕೊಡುಲು, ಕುಯಿಂಗ (ಕುಯಿಂಗ), ಕುಯ್) ಎಂಬುದು ದಕ್ಷಿಣ-ಮಧ್ಯ ದ್ರಾವಿಡ ಭಾಷೆಯಾಗಿದ್ದು, ಪೂರ್ವ ಭಾರತದ ಒಡಿಶಾ ರಾಜ್ಯದ ಕಂಧ ಸಮುದಾಯದವರು ಮಾತನಾಡುತ್ತಾರೆ. ಇದನ್ನು ಹೆಚ್ಚಾಗಿ ಒಡಿಶಾದಲ್ಲಿ ಮಾತನಾಡುತ್ತಾರೆ ಮತ್ತು ಒಡಿಯಾ ಲಿಪಿಯಲ್ಲಿ ಬರೆಯುತ್ತಾರೆ. 941,988 ನೋಂದಾಯಿತ ಸ್ಥಳೀಯ ಭಾಷಿಕರು, ಇದು 1991 ರ ಭಾರತೀಯ ಜನಗಣತಿಯಲ್ಲಿ 29 ನೇ ಸ್ಥಾನದಲ್ಲಿದೆ.[] ಚಾರಿತ್ರಿಕವಾಗಿ ಕುಯಿ ಭಾಷೆಯನ್ನು ಕುಯಿಂಗಾ ಭಾಷೆ ಎಂದೂ ಕರೆಯಲಾಗುತ್ತಿತ್ತು. ಇದು ಗೊಂಡಿ ಮತ್ತು ಕುವಿ ಭಾಷೆಗಳಿಗೆ ನಿಕಟ ಸಂಬಂಧ ಹೊಂದಿದೆ.

ದ್ರಾವಿಡ ಭಾಷೆ

[ಬದಲಾಯಿಸಿ]

ಇದು ಮಧ್ಯದ್ರಾವಿಡ ಭಾಷೆಗಳಲ್ಲೊಂದು, ಇದರ ಕ್ಷೇತ್ರ ಒರಿಯ ಮತ್ತು ತೆಲುಗು ಭಾಷೆಗಳ ನಡುವಿನದು. ಇತ್ತೀಚಿಗಿನ ಅಂದಾಜಿನಂತೆ ಇದು ೧೦ ಲಕ್ಷಕ್ಕಿಂತಲೂ ಹೆಚ್ಚು ಜನರ ಭಾಷೆ ಎಂದು ಪರಿಗಣತವಾಗಿದೆ. ತೆಲುಗು ಮತ್ತು ಒರಿಯ ಭಾಷೆಗಳ ದಟ್ಟಪ್ರಭಾವ ಇದರ ಮೇಲುಂಟು. ಒಂದೇ ಕ್ಷೇತ್ರದಲ್ಲಿ ಕಂಡು ಬಂದರೂ ಕುವಿ ಮತ್ತು ಕುಈ ಭಾಷೆಗಳು ಭಿನ್ನಭಾಷೆಗಳು. ಆಧುನಿಕ ಭಾಷಾವಿಜ್ಞಾನಿಗಳ ದೃಷ್ಟಿಯಲ್ಲಿ ಅವು ಬೇರೆ ಬೇರೆ ಸ್ವತಂತ್ರ ಭಾಷೆಗಳು ಎಂಬ ಅಭಿಪ್ರಾಯವಿದೆ. ಮಧ್ಯದ್ರಾವಿಡ ಭಾಷೆಗಳಲ್ಲಿ ಕೊಲಾಮಿ, ನಾಯ್ಕಿ ಭಾಷೆಗಳ ಸಂಬಂಧ ಇರುವಂತಹ ಕುಈ, ಕುವಿಭಾಷಣಗಳ ಸಂಬಂಧ ಎಂದು ಕೆಲವು ವಿದ್ವಾಂಸರು ಮನಗಂಡಿದ್ದಾರೆ. ಈ ಎರಡು ಭಾಷೆಗಳ ಧ್ವನಿವ್ಯವಸ್ಥೆ, ಆಕೃತಿವiರಚನೆ, ವಾಕ್ಯರಚನೆ, ಮತ್ತು ವ್ಯಾಕರಣಾಂಶಗಳನ್ನು ಹೋಲಿಸಿ ನೋಡಿದಾಗ ಇವುಗಳ ಸಾಮ್ಯ ತಿಳಿದು ಬರುವುದು. ಈ ಎರಡು ಭಾಷೆಗಳಿಗೂ ಲಿಪಿ ಇಲ್ಲ. ಈ ಭಾಷೆಯನ್ನು ಆಡುವ ಜನರು ಬೆಟ್ಟಗುಡ್ಡಗಳಲ್ಲಿಯೇ ಹೆಚ್ಚಾಗಿ ವಾಸಮಾಡುವಂಥವರು. ಕುವಿಭಾಷೆ ಒರಿಯಕ್ಕಿಂತಲೂ ಹೆಚ್ಚಾಗಿ ತೆಲುಗು ಭಾಷೆಯನ್ನೇ ಹೋಲುತ್ತದೆ. ಇಲ್ಲಿನ ಧ್ವನಿವ್ಯವಸ್ಥೆ ಕುಈ ಭಾಷೆಯನ್ನೂ ಲಿಂಗವಚನ, ವಿಭಕ್ತಿಪ್ರತ್ಯಯಗಳು ಗೋಂಡಿ, ಖೊಂಡ, ಕುರು ಮತ್ತು ಕುಈ ಭಾಷೆಗಳನ್ನೂ ಪದಸಮೂಹ ಕುರುಖ್, ಗೋಂಡಿ, ಖೊಂಡ್, ಮತ್ತು ಕುಈ ಭಾಷೆಗಳನ್ನೂ ವ್ಯಾಕರಣಾಂಶಗಳು ಮುಖ್ಯವಾಗಿ ಗೋಂಡಿ, ಖೊಂಡ, ಕುರುಖ್, ಮಲ್ತೊ ಮತ್ತು ಕುಈ ಭಾಷೆಯನ್ನೂ ಹೆಚ್ಚಾಗಿ ಹೋಲುತ್ತವೆ. ಅಲ್ಲದೆ, ಎ.ಜಿ. ಫಿಟ್ಸ್ಜೆರಾಲ್ಡ್ ಎಂಬಾತ 1933ರಲ್ಲಿ ಕುವಿ ಭಾಷೆ ಎಂಬ ಗ್ರಂಥವನ್ನು ಬರೆದು ಭಾಷೆಯ ಪರಿಚಯ ಕೊಟ್ಟಿದ್ದಾನೆ. ಕುವಿಭಾಷೆಯ ವ್ಯಾಕರಣಕ್ಕೆ ಸಂಬಂದಿಸಿ ಹೆಚ್ಚಿನ ವಿಚಾರಗಳು ಬೆಳಕಿಗೆ ಬಂದಿಲ್ಲ.

ಧ್ವನಿಶಾಸ್ತ್ರ

[ಬದಲಾಯಿಸಿ]

ವ್ಯಂಜನಗಳು

[ಬದಲಾಯಿಸಿ]
ವ್ಯಂಜನಗಳು []
ಓಷ್ಠ್ಯ ದಂತ್ಯ ಮೂರ್ಧನ್ಯ ತಾಲವ್ಯ ಕಂಠ್ಯ ಗಲಕುಹರ
ಅನುನಾಸಿಕ m n ɳ
ಸ್ಪರ್ಷ ಅಘೋಷ p t ʈ t͡ʃ k
ಘೋಷ b d ɖ d͡ʒ ɡ
ಅಂದಾಜು ಮಧ್ಯ ʋ ~ b j
ಪಾರ್ಶ್ವ l
ಘರ್ಷ s h
ಕಂಪಿತ ɾ ɽ

ಸ್ವರಗಳು

[ಬದಲಾಯಿಸಿ]

ಕುಯಿ ಭಾಷೆಯು ಐದು ಸಣ್ಣ ಸ್ವರಗಳನ್ನು ಮತ್ತು ಐದು ದೀರ್ಘ ಸ್ವರಗಳನ್ನು ಹೊಂದಿದೆ.[] ಸ್ವರಗಳನ್ನು ಐಪಿಎ ನಲ್ಲಿ ಕೆಳಗೆ ವಿವರಿಸಲಾಗಿದೆ.[]

ಸ್ವರಗಳು
ನಾಲಗೆ ಮುಂಭಾಗ ನಾಲಗೆ ಕೇಂದ್ರ ನಾಲಗೆ ಹಿಂದೆ
ಹ್ರಸ್ವ ದೀರ್ಘ ಹ್ರಸ್ವ ದೀರ್ಘ ಹ್ರಸ್ವ ದೀರ್ಘ
ಉನ್ನತ i u
ಮಧ್ಯ e o
ಅವನತ a

ಉಲ್ಲೇಖಗಳು

[ಬದಲಾಯಿಸಿ]
  1. ಟೆಂಪ್ಲೇಟು:Ethnologue21
    ಟೆಂಪ್ಲೇಟು:Ethnologue21
  2. "Statement 1: Abstract of speakers' strength of languages and mother tongues - 2011". www.censusindia.gov.in. Office of the Registrar General & Census Commissioner, India. Retrieved 2018-07-07.
  3. Krishnamurti, Bhadriraju (2003). The Dravidian languages (null ed.). Cambridge: Cambridge University Press. p. 56. ISBN 978-0-511-06037-3.
  4. Winfield, W.W. (1928). A grammar of the Kui language. Bibliotheca Indica. Printed at the Baptist mission press, Pub. by the Asiatic society of Bengal. p. 1. Retrieved 2020-11-08.
  5. Krishnamurti, Bhadriraju (16 January 2003). "The Dravidian Languages" (in ಇಂಗ್ಲಿಷ್). Cambridge University Press.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: