ನಾಯ್ಕಿ ಭಾಷೆ
ನಾಯ್ಕಿ కొలామి | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |
ಒಟ್ಟು ಮಾತನಾಡುವವರು: |
10,000 | |
ಭಾಷಾ ಕುಟುಂಬ: | ಮಧ್ಯ ಕೊಲಾಮಿ-ನಾಯ್ಕಿ ನಾಯ್ಕಿ | |
ಬರವಣಿಗೆ: | ದೇವನಾಗರಿ, ತೆಲುಗು ಲಿಪಿ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು
| |
ISO/FDIS 639-3: | nit
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ನಾಯಕಿ, ಅಥವಾ ಆಗ್ನೇಯ ಕೊಲಾಮಿ, ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿ ಬಳಸಲಾಗುವ ಬುಡಕಟ್ಟು ಮಧ್ಯ ದ್ರಾವಿಡ ಭಾಷೆಯಾಗಿದೆ. ಉಪಭಾಷೆಗಳು ನಾಯ್ಕಿ ಮೂಲ, ಅಥವಾ ಚಂದ, ಮತ್ತು ನಾಯ್ಕ್‌ರಿ.[೧] (ಕೃಷ್ಣಮೂರ್ತಿ 2003:57)
ನಾಯ್ಕಿ ಮಧ್ಯದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಉಪಭಾಷಾವರ್ಗದ ಒಂದು ಭಾಷೆ. ರಾಬರ್ಟ ಕಾಲ್ಡ್‍ವೆಲ್ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣವನ್ನು ರಚಿಸಿದ ಕಾಲಕ್ಕೆ ತಿಳಿಯದ, ಇತ್ತೀಚಿಗೆ ಸುಮಾರು 1925 ರಲ್ಲಿ ಬೆಳಕಿಗೆ ಬಂದ ಭಾಷೆಯಿದು. ಟಿ. ಬರೊ ಮತ್ತು ಎಸ್. ಭಟ್ಟಾಚಾರ್ಯ ಅವರು ಬೆಳಕಿಗೆ ತಂದ ದ್ರಾವಿಡ ಭಾಷೆಗಳಲ್ಲಿ ಇದು ಒಂದು. ಟಿ. ಬರೊ ಮತ್ತು ಭಟ್ಟಾಚಾರ್ಯ ಅವರುಗಳು ಸಿದ್ದಪಡಿಸಿದ ಪರ್ಜಿ ಭಾಷೆ ಎಂಬ ಗ್ರಂಥದಲ್ಲಿ ನಾಯ್ಕಿ, ಪರ್ಜಿ, ಗದಬ ಭಾಷೆಗಳ ಪ್ರಸ್ತಾಪವಿದೆ. ಮಹಾರಾಷ್ಟ್ರ ರಾಜ್ಯದ ಛಾಂದಾ ಜಿಲ್ಲೆಯ ಸುತ್ತಮುತ್ತಲ ಪ್ರದೇಶದಲ್ಲಿ ನಾಯ್ಕಿ ಭಾಷೆಯನ್ನು ಆಡುವವರು ಕಾಣಸಿಗುವರು. 1961 ರ ಜನಗಣತಿಯ ಪ್ರಕಾರ ಇವರ ಸಂಖ್ಯೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು. ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಈ ಭಾಷೆಯನ್ನು ಆಡುವವರು ಅಲ್ಲಲ್ಲಿ ಕಂಡುಬರುವರು. ಇವರು ಯಾವ ಕಡೆಯಿಂದ ವಲಸೆ ಬಂದಿರಬಹುದು, ಯಾವ ಕಾಲದಲ್ಲಿ ಬಂದಿರಬಹುದು, ಭಾಷೆಯ ಮೊದಲ ಸ್ವರೂಪ ಯಾವುದು, ಇವರ ಆಚಾರ ವ್ಯವಹಾರಗಳು ಎಂಥವು ಎಂಬ ಬಗ್ಗೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ.
ಟಿ.ಬರೊ ಮತ್ತು ಎಂ.ಬಿ. ಎಮಿನೊ ಅವರು ತಮ್ಮ ದ್ರಾವಿಡ ಭಾಷೆಗಳ ಜ್ಞಾತಿಪದಕೋಶದ ಪ್ರಸ್ತಾವನೆಯಲ್ಲಿ ನಾಯ್ಕಿ ಭಾಷೆಯನ್ನು ಕೊಲಾಮಿ ಭಾಷೆಯ ಉಪಭಾಷೆ ಇರಬಹುದೆಂದು ಊಹಿಸಿದ್ದಾರೆ. ನಾಯ್ಕಿ ಸರ್ವವಿಧದಲ್ಲಿಯೂ ಆದಿಲಾಬಾದ್ ಕೊಲಾಮಿಯನ್ನೇ ಹೋಲುವುದರಲ್ಲಿ ಸಂಶಯವೇನಿಲ್ಲವಾದರೂ ಭ, ಕೃಷ್ಣಮೂರ್ತಿ,ಎಂ.ಬಿ ಎಮಿನೊ, ಟಿ.ಬರೊ ಮತ್ತು ಎಸ್. ಭಟ್ಟಾಚಾರ್ಯ ಮುಂತಾದ ದ್ರಾವಿಡ ಭಾಷಾಶಾಸ್ತ್ರಜ್ಞರು ಈಚೆಗೆ ಕೊಲಾಮಿ ಮತ್ತು ನಾಯ್ಕಿ ಭಾಷೆಗಳನ್ನು ಬೇರೆಬೇರೆ ಸ್ವತಂತ್ರ ದ್ರಾವಿಡ ಭಾಷೆಗಳು ಎಂದು ಒಪ್ಪಕೊಂಡಿದ್ದಾರೆ.
ನಾಯ್ಕಿ ಭಾಷೆಯ ಪ್ರದೇಶ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ನಡುವಿನ ಭಾಗವಾದರೂ ನಾಯ್ಕಿಯ ಮೇಲೆ ತೆಲುಗಿನ ಪ್ರಭಾವವೇ ಅಧಿಕವಾಗಿ ಕಂಡುಬರುತ್ತದೆ. ನಾಯ್ಕಿ, ಕೊಲಾಮಿ, ಗದಬ ಭಾಷೆಗಳಿಗೆ ಲಿಪಿ ಸೌಲಭ್ಯವಿಲ್ಲ. ಅಲ್ಲದೆ ಅವುಗಳಲ್ಲಿ ಯಾವ ಸಾಹಿತ್ಯವೂ ಇಲ್ಲ.
ಧ್ವನಿಶಾಸ್ತ್ರ
[ಬದಲಾಯಿಸಿ]ಸ್ವರಗಳು
[ಬದಲಾಯಿಸಿ]ನಾಲಗೆಯ ಮುಂಬಾಗ | ನಾಲಗೆಯ ಮಧ್ಯೆ | ನಾಲಗೆಯ ಹಿಂಬಾಗ | ||||
---|---|---|---|---|---|---|
ಹ್ರಸ್ವ | ದೀರ್ಘ | ಹ್ರಸ್ವ | ದೀರ್ಘ | ಹ್ರಸ್ವ | ದೀರ್ಘ | |
ಉನ್ನತ | i | iː | u | uː | ||
ಮಧ್ಯ | e | eː | o | oː | ||
ಅವನತ | a | aː |
ವ್ಯಂಜನಗಳು
[ಬದಲಾಯಿಸಿ]ಓಷ್ಠ್ಯ | ದಂತ್ಯ | ಮೂರ್ಧನ್ಯ | ತಾಲವ್ಯ | ಕಂಠ್ಯ | ಗಲಕುಹರಿ | |||
---|---|---|---|---|---|---|---|---|
ಅನುನಾಸಿಕ | m | n | ŋ | |||||
ಸ್ಪರ್ಷ /ಘರ್ಷ |
ಅಘೋಷ | ಸರಳ | p | t, ts | ʈ | tʃ | k | |
ಮಹತ್ವಾಕಾಂಕ್ಷೆ | pʰ | tʰ | ʈʰ | kʰ | ||||
ಘೋಷ | ಸರಳ | b | d | ɖ | dʒ | g | ||
ಮಹತ್ವಾಕಾಂಕ್ಷೆ | bʱ | dʱ | ɖʱ | dʒʱ | gʱ | |||
ಘರ್ಷ | v | s | h | |||||
ಕಂಪಿತ | r | |||||||
ಅಂದಾಜು | l | ɭ | j |
ದ್ರಾವಿಡಾ ಭಾಷಾ ಪರಿವಾರಕ್ಕೆ ಸೇರಿದ ದಕ್ಷಿಣ ದ್ರಾವಿಡ ಭಾಷೆಗಳಾದ ತಮಿಳು, ತೆಲುಗು ಮಲಯಾಳಂ ಮುಂತಾದ ಭಾಷೆಗಳಲ್ಲಿ ಪೂರ್ವ ದ್ರಾವಿಡ ಪೂರ್ವ ಸ್ವರಗಳಾದ ಇ ಮತ್ತು ಎ ಗಳ ಮೊದಲಿನ ಕಕಾರ ಚಕಾರವಾದರೆ, ಇದೇ ಮಧ್ಯ ದ್ರಾವಿಡ ಭಾಷೆಗಳಾದ ಕೊಲಾಮಿ, ನಾಯ್ಕಿ, ಗದಬ, ಪರ್ಜಿ ಭಾಷೆಗಳಲ್ಲಿ ಹಾಗೆ ಆಗುವುದಿಲ್ಲ. ಕಕಾರವಾಗಿಯೆ ಉಳಿಯುತ್ತದೆ. ಉಳಿದ ಮಧ್ಯ ದ್ರಾವಿಡ ಭಾಷೆಗಳಲ್ಲಿ ಕಕಾರ ಸಕಾರವಾಗಿ ಪರಿವರ್ತನೆಗೊಳ್ಳುತ್ತದೆ. ಈ ದೃಷ್ಟಿಯಿಂದ ಕನ್ನಡದ ಕೇರು ಎಂಬ ಪದ ತಮಿಳಿನಲ್ಲಿ ಚೇರು ಎಂತಲೂ ತೆಲುಗಿನಲ್ಲಿ ಚೆರುಗ ಎಂತಲೂ ಮಲೆಯಾಳಂನಲ್ಲಿ ಚೇರುಕ ಎಂತಲೂ ಪರ್ಜಿ ಕೊಲಾಮಿ ಮತ್ತು ನಾಯ್ಕಿಗಳಲ್ಲಿ ಕೇದ್ ಎಂದೂ ದೊರೆಯುತ್ತದೆ. ಇದೇ ಪದ ಗದಬ ಭಾಷೆಯಲ್ಲಿ ಕೇಟಿ ಎಂದು ಪರಿವರ್ತನೆಗೊಂಡಿದೆ. ನಾಯ್ಕಿಯಲ್ಲಿ ಕೊಲಾಮಿಯಲ್ಲಿನಂತೆ ಐದು ದೀರ್ಘ ಸ್ವರಗಳು ಐದು ಹೃಸ್ವಸ್ವರಗಳು ಇವೆ. ಹಾಗೆಯೇ ನಾಯ್ಕಿಯಲ್ಲಿ ಹದಿನೆಂಟು ವ್ಯಂಜನ ದ್ವನಿಮಾಗಳಿವೆ. ಆದರೂ ಅದರ ಎಲ್ಲಾ ಅಂಶಗಳು ಕನ್ನಡವನ್ನು ಹೋಲುವುದಿಲ್ಲ. ಅಮ್ಮ ಎಂಬ ಪದ ಕನ್ನಡ ಮತ್ತು ನಾಯ್ಕಿಯಲ್ಲಿ ಒಂದೇ ಆಗಿದೆ. ಕನ್ನಡದ ಅಂಗಡಿ ಎಂಬುದು ನಾಯ್ಕಿಯಲ್ಲಿ ಅಂಗಾರಿ ಎಂತಲೂ ಬೊಕ್ಕೆ ಎಂಬುದು ಬೊಗ್ಗ ಎಂತಲೂ ಪರಿವರ್ತನೆಗೊಂಡಿದೆ. ನಾಯ್ಕಿ ಮತ್ತು ಕೊಲಾಮಿ ಭಾಷೆಗಳಲ್ಲಿ ಸಾಕಷ್ಟು ಪದಗಳು ತೆಲುಗು ಪದಗಳನ್ನೇ ಹೋಲುತ್ತವೆಯಾದರೂ ಳ್, ಣ್, ಡ್ ವ್ಯಂಜನಗಳು ಕ್ರಮವಾಗಿ ಲ್, ನ್ ಮತ್ತು ದ್ ಆಗಿ ಪರಿವರ್ತನೆಗೊಂಡಿರುವುದನ್ನು ಅಲ್ಲಲ್ಲಿ ಕಾಣಬಹುದು. ಪದ ಮಧ್ಯದಲ್ಲಿ ಡಕಾರದ ಸ್ಥಾನದಲ್ಲಿ ಢಕಾರ ವಿಶೇಷವಾಗಿ ಕಂಡುಬರುವುದು. ವ್ಯಾಕರಣಕ್ಕೆ ಸಂಬಂಧಿಸಿದ ನಾಮಪದ, ಸರ್ವನಾಮ, ಕ್ರಿಯಾಪದ, ಇತ್ಯಾದಿ ಪದಸಮೂಹಗಳು ಕ್ರಮಬದ್ದವಾಗಿದ್ದು ಎಲ್ಲಾವಿಧದಲ್ಲಿಯೂ ಕೊಲಾಮಿ ಭಾಷೆಯನ್ನೇ ಹೋಲುತ್ತವೆ. ವಚನ ಲಿಂಗ ವಿಭಕ್ತಿ ಪ್ರತ್ಯಯಗಳಲ್ಲಿ ಹೆಚ್ಚು ರೂಪಗಳು ಹಾಗೂ ಕಾಲಸೂಚಕ, ವಿಧ್ಯರ್ಥಕ ಹಾಗೂ ನಕಾರಾತ್ಮಕ ಪ್ರತ್ಯಯಗಳು ಕೊಲಾಮಿ ಭಾಷೆಗೆ ಬಹು ಹತ್ತಿರದವಾಗಿವೆ ಎಂದು ಹೇಳಬಹುದು. ಉತ್ತಮ ಪುರುಷ ಬಹುವಚನ ಸರ್ವನಾಮಗಳಲ್ಲಿ ವಿಶೇಷವಾಗಿ ಕಂಡುಬರುವ ವ್ಯಾವರ್ತಕ ಹಾಗೂ ಅಭಿವ್ಯಾವರ್ತಕ ರೂಪಗಳು ಕೊಲಾಮಿ ಮತ್ತು ನಾಯ್ಕಿಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ. ಈ ವೈಶಿಷ್ಟ್ಯ ದ್ರಾವಿಡ ಭಾಷೆಗಳಿಗೆ ಸಹಜವಾದದ್ದು. ಹಾಗೆಯೆ ಆತ್ಮಾರ್ಥಕ ಸರ್ವನಾಮರೂಪಗಳು ಏಕವಚನದಲ್ಲಿ ತಾನ್, ತನ್ ಎಂತಲೂ ಬಹುವಚನದಲ್ಲಿ ತಾಮ್, ತಮ್ ಎಂತಲೂ ನಾಯ್ಕಿಯಲ್ಲಿ ಕ್ರಮವಾಗಿ ಕಂಡುಬರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Naiki language". iiab.me. Archived from the original on 2024-01-14. Retrieved 2024-01-14.
- ↑ Krishnamurti (2003), pp. 72
- ↑ Krishnamurti, Bhadriraju (16 January 2003). "The Dravidian Languages" (in ಇಂಗ್ಲಿಷ್). Cambridge University Press.