ವಿಷಯಕ್ಕೆ ಹೋಗು

ಗೊಂಡಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೊಂಡಿ ಇಂದು ಗೊಂಡರು ಜನಾಂಗದ ಭಾಷೆ. ಗೊಂಡರು ಭಾರತದ ಬುಡಕಟ್ಟು ಜನರಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ೧೯೯೯ ರ ಜನಗಣತಿಯ ಪ್ರಕಾರ ಗೊಂಡರು ೯,೩೧,೯೦೦೦ ಜನಸಂಖ್ಯೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಈ ಜನಾಂಗ ಗಣನೀಯವಾಗಿ ಮಹಾರಾಷ್ಟ್ರ, ಛತ್ತೀಸಗಡ, ಆಂಧ್ರಪ್ರದೇಶ, ಒರಿಸ್ಸಾ, ಗುಜರಾತ್, ಪಶ್ಚಿಮ ಬಂಗಾಳ, ಕರ್ನಾಟಕದ ಉತ್ತರದಲ್ಲಿ ಕಾಣಸಿಗುತ್ತಾರೆ. ಈ ಎಲ್ಲಾ ಕಡೆಯಲ್ಲೂ ಗೊಂಡಿ ಭಾಷೆಯು ಹೇರಳವಾಗಿ ಬಳಕೆಯಲ್ಲಿದೆ. ಗೊಂಡಿ ಭಾಷೆಯು ದ್ರಾವಿಡ ಭಾಷಾ ಗುಂಪಿಗೆ ಸೇರಿದ್ದಾಗಿದೆ. ಈ ಭಾಷೆಯು ತೆಲುಗು ಹಾಗೂ ತಮಿಳು ಭಾಷೆಗೆ ತುಂಬಾ ಹೋಲುವ ಭಾಷೆಯಾಗಿದೆ.

ಗೊಂಡಿಭಾಷೆಯ ಇತಿಹಾಸ

[ಬದಲಾಯಿಸಿ]

ಕ್ರಿ.ಶ ೩೫೮ರಲ್ಲಿ ಗೊಂಡಿ ಸಮುದಾಯದ ಅರಸರು ಕರ್ನಾಟಕ ಉತ್ತರವನ್ನು ಆಳ್ವಿಕೆ ನಡೆಸಿದ್ದರು ಎಂದು ಶಾಸನಗಳ ಮೂಲಕ ತಿಳಿದುಬರುತ್ತದೆ.[] ನಾಲ್ಕು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗೊಂಡಿ ಭಾಷೆ ತನ್ನದೇ ಆದ ಪರಂಪರೆ ಹೊಂದಿದೆ.ಈ ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಿಸಬೇಕಾದ ಅರ್ಹತೆಯೂ ಇದೆ.ಈ ಭಾಷೆಯ ಬಗ್ಗೆ ಅನೇಕ ಭಾಷಾತಜ್ಞರು ಸಂಶೋಧನೆಯನ್ನು ನಡೆಸಿದ್ದಾರೆ. ಗೊಂಡರ ಭಾಷೆಯು ಎಲ್ಲಾ ಸ್ಥಳಗಳಲ್ಲಿಯೂ ಒಂದೇ ರೀತಿ ಇಲ್ಲ.ಅದು ಪ್ರದೇಶದಿಂದ ಪ್ರದೇಶಕ್ಕೆ ವ್ಯಾತ್ಯಾಸಗೊಂಡಿದೆ.ಬದಲಾವಣೆ ಜೀವಂತ ಭಾಷೆಯ ಮುಖ್ಯಲಕ್ಷಣ. ಸಹಜವಾಗಿಯೇ ನೆರೆಹೊರೆಯ ಭಾಷೆಗಳ ಪ್ರಭಾವ ಜೀವಂತ ಭಾಷೆಯ ಮೇಲೆ ಉಂಟಾಗುತ್ತದೆಯಾದರೂ ಗೊಂಡರ ಭಾಷೆ ತನ್ನ ವೈಶಿಷ್ಟ್ಯತೆಯನ್ನೂ ಇಂದಿಗೂ ಉಳಿಸಿಕೊಂಡಿದೆ.[]

ಗೊಂಡಿಭಾಷೆಯ ಸಾಹಿತ್ಯ[]

[ಬದಲಾಯಿಸಿ]

ಗೊಂಡರ ಸಾಹಿತ್ಯ ಸಮೃದ್ಧವಾಗಿದೆ. ಕಾವ್ಯ,ಕಥೆ,ಪುರಾಣ, ಐತಿಹ್ಯ,ಗಾದೆ ಮತ್ತು ಒಗಟು ಈ ಪ್ರಕಾರಗಳ ಸಾಹಿತ್ಯವನ್ನು ಗೊಂಡರು ಸೃಷ್ಟಿಸಿದ್ದಾರೆ. ಆದರೆ ಪುರಾಣಗಳನ್ನು ಅವರು ಹೆಚ್ಚಾಗಿ ಸೃಷ್ಟಿಮಾಡಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಯಾವುದೇ ಒಂದು ಜನಾಂಗದ ಪುರಾಣಗಳು ಆಯಾ ಜನಾಂಗವು ತನ್ನ ಬಗ್ಗೆ ತಾನು ಇಟ್ಟಿಕೊಂಡಿರುವ ಕಲ್ಪನೆಗಳನ್ನು ವ್ಯಕ್ತಪಡಿಸುತ್ತದೆ. ತಾವು ಯಾರು,ಯಾಕೆ ಹೀಗಿದ್ದೇವೆ ಎಂಬುದನ್ನು ಕಂಡುಕೊಳ್ಳಲು ಪ್ರತಿಯೊಂದು ಜನಾಂಗವು ಪುರಾಣಗಳ ರಚನೆಯನ್ನು ಕೈಗೊಳ್ಳುತ್ತದೆ. ಈ ಜಾಗತಿಕ ತಿಳುವಳಿಕೆಯ ಹಿನ್ನೆಲೆಯಲ್ಲಿ ಗೊಂಡರ ಪುರಾಣ ರಚನೆ ಆಶ್ಚರ್ಯಕರ ಏನೂ ಕಾಣುವುದಿಲ್ಲ.[]

ಛತ್ತೀಸಗಡದ ಗೊಂಡಾ ಗುಂಪಿನ ಬುಡಕಟ್ಟು ಜನರು ತೀರಾ ಇತ್ತೀಚಿಗೆ ಮೊಬೈಲ್ ಅಪ್ಲಿಕೇಶನ್ ಸಹಾಯದೊಂದಿಗೆ ತಮ್ಮ ಮಾತೃಭಾಶ್ರಯಲ್ಲೇ ಸುದ್ದಿಗಳನ್ನು ಆಲಿಸುತ್ತಿದ್ದಾರೆ. ಟೆಕ್ಸ್ಟ್ ಟು ಸ್ಪಿಚ್ ತಂತ್ರಜ್ಞಾನವನ್ನು ಹೊಂದಿರುವ ಆದಿವಾಸಿ ರೇಡಿಯೋ ಅಪ್ಲಿಕೇಶನ್ ಗೊಂಡಿ ಭಾಷೆಯಲ್ಲಿ ವರದಿಗಳನ್ನು ಒದಲಿದೆ. ಇದು ವಿವಿಧ ಬಾಹ್ಯ ಮೂಲಗಳಿಂದ ಗೊಂಡಿ ಭಾಷೆಯಲ್ಲಿ ವಿಷಯಗಳ ಭಂಡಾರವನ್ನು ಲಭ್ಯವಿರುವಂತೆ ಮಾಡುತ್ತಿದೆ. ಒಟ್ಟಾರೆ "ಗೊಂಡಿ" ಭಾಷೆ ಈ ಡಿಜಿಟಲ್ ಯುಗಕ್ಕೂ ಹೊಂದಿಕೊಂಡು ತನ್ನ ಭಾಷೆಯ ಪ್ರಸರತೆ ಹಾಗೂ ಪ್ರಸಿದ್ಧತೆ ಹೆಚ್ಚಿಸಿಕೊಳ್ಳುವತ್ತಾ ಹೆಜ್ಜೆ ಇಟ್ಟಿದೆ

ಗೊಂಡಿ ಭಾಷೆಬಳಕೆಯಲ್ಲಿರುವ ಪ್ರದೇಶಗಳು:

  1. ಮಹಾರಾಷ್ಟ್ರ
  2. ಛತ್ತೀಸಗಡ,
  3. ಆಂಧ್ರಪ್ರದೇಶ
  4. ಒರಿಸ್ಸಾ
  5. ಗುಜರಾತ್
  6. ಪಶ್ಚಿಮ ಬಂಗಾಳ
  7. ಕರ್ನಾಟಕ

ಗೊಂಡಿ ಭಾಷೆಯ ಉಪಭಾಷೆಗಳು

[ಬದಲಾಯಿಸಿ]
  • ಡೋರ್ಲಾ
  • ಮಡಿಯಾ
  • ಮುರಿಯಾ
  • ರಾಜ್ ಗೊಂಡ್

ಒಟ್ಟು ಮಾತನಾಡುವವರು:೨೦೧೧ರ ಜನಗಣತಿಯ ಪ್ರಕಾರ ೧೧ ಮಿಲಿಯನ್ ಅಷ್ಟು ಜನರು ಮಾತನಾಡುತ್ತಾರೆ.

ಗೊಂಡಿಬರವಣಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://www.prajavani.net/news/article/2017/01/12/465402.html
  2. https://www.thehindu.com/society/this-indian-language-can-be-written-by-only-100-people/article23384526.ece
  3. https://www.quora.com/Which-script-is-used-to-write-the-Gondi-language
  4. https://shodhganga.inflibnet.ac.in/bitstream/10603/100010/6/06_chapter%201.pdf
  5. https://www.omniglot.com/writing/gondi.htm