ವಿಷಯಕ್ಕೆ ಹೋಗು

ಕನ್ನಡದ ಉಪಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ
ಕನ್ನಡ-ಬಡಗ
ಭೌಗೋಳಿಕ
ಹಂಚಿಕೆ
ದಕ್ಷಿಣ ಭಾರತ
ಭಾಷಾ ವರ್ಗೀಕರಣದ್ರಾವಿಡ
ಉಪವಿಭಾಗಗಳು
Glottologbada1263[೧]

ಕನ್ನಡ ಉಪಭಾಷೆಗಳು, ಕನ್ನಡ-ಬಡಗ ಭಾಷೆಗಳನ್ನು ಸಂಯೋಜಿಸುವ ವಿಶಾಲ ಅರ್ಥದಲ್ಲಿ, ಕರ್ನಾಟಕ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಸಾಹಿತ್ಯಿಕ ಕನ್ನಡವನ್ನು ಹೊರತುಪಡಿಸಿ ದೂರದರ್ಶನ, ಸುದ್ದಿ ಮತ್ತು ಸಾಹಿತ್ಯದಲ್ಲಿ ಬಳಸಲಾಗುವ ಅನೇಕ ಉಪಭಾಷೆಗಳಿವೆ.

ಕನ್ನಡ ಭಾಷಾ ಪ್ರದೇಶವನ್ನು ಗಮನಿಸಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರಲ್ಲಿ ಅನೇಕ ಬಗೆಯ ಭಾಷಾ ಪ್ರಭೇದಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಮುಖ್ಯವಾಗಿ ಮೈಸೂರು ಕನ್ನಡ, ಕರಾವಳಿ ಕನ್ನಡ, ಧಾರವಾಡ ಕನ್ನಡ, ಸಿರ್ಸಿ ಕನ್ನಡ, ಗುಲ್ಬರ್ಗಾ ಕನ್ನಡ- ಎಂಬ ಉಪಭಾಷಾ ಪ್ರಭೇದಗಳನ್ನು ಗುರುತಿಸಬಹುದು. ಈ ಪ್ರಭೇದಗಳನ್ನು ಪ್ರಾದೇಶಿಕವಾಗಿ ಹಾಗೂ ಸಾಮಾಜಿಕವಾಗಿ ಪರಿಶೀಲಿಸಲು ಹೊರಟಾಗ ಇವುಗಳಲ್ಲೇ ಎಷ್ಟೋ ಬಗೆಯ ಒಳ ಪ್ರಭೇದಗಳು ಇರುವುದು ಕಂಡುಬರುತ್ತದೆ.

ಕನ್ನಡದ ಉಪಭಾಷೆಗಳು[ಬದಲಾಯಿಸಿ]

ಅಚ್ಚಕನ್ನಡದ ಉಪಭಾಷಾ ಗುಂಪುಗಳು :[೨]

ಕರಾವಳಿ ಕರ್ನಾಟಕ[ಬದಲಾಯಿಸಿ]

 • ಮಂಗಳೂರು ಕನ್ನಡ
 • ಹಾಲಕ್ಕಿ ಅಚ್ಚಗನ್ನಡ
 • ಬಾರ್ಕೂರು
 • ಹವ್ಯಕ
 • ಕುಂದಗನ್ನಡ
 • ಶಿರಸಿ ಕನ್ನಡ
 • ಮಲೆನಾಡು ಕನ್ನಡ
 • ನಾಡೋರ್ ಕನ್ನಡ
 • ಅಂಕೋಲಾ ಕನ್ನಡ

ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ರೀತಿಯ ಕನ್ನಡ ಬಳಕೆಯಲ್ಲಿದೆ. ತುಳು, ಕೊಂಕಣಿ, ಮರಾಠಿ, ಮಲೆಯಾಳಂ ಮೊದಲಾದ ಭಾಷೆಗಳನ್ನು ಮನೆಮಾತಾಗಿ ಬಳಸುವ ಜನರು ಪರಸ್ಪರ ಸಾಧನೆಗಾಗಿ ಬಳಸುವ ಕನ್ನಡ ಒಂದು ರೀತಿಯದಾದರೆ ನಾಡವರು, ಹವ್ಯಕ, ಗೌಡ, ಕೋಟ, ಕುಂಬಾರ, ಬೈರ ಮೊದಲಾದ ಸಮಾಜಗಳಿಗೆ ಸೇರಿದ ಜನ ತಮ್ಮತಮ್ಮೊಳಗೆ ಬಳಸುವ ಕನ್ನಡ ಇನ್ನೊಂದು ರೀತಿಯದು. ಇವುಗಳಲ್ಲಿ ಮೊದಲಿನದನ್ನು ಸಾಂಪರ್ಕಿಕ ಕನ್ನಡವೆಂದು ಎರಡನೆಯದನ್ನು ತಾಯಿನುಡಿ ಕನ್ನಡವೆಂದೂ ಪ್ರತ್ಯೇಕಿಸಿ ಹೇಳಬಹುದು.

ಹೊರಗಿನಿಂದ ಬಂದವರಿಗೆ ಈ ಜಿಲ್ಲೆಯಲ್ಲಿ ಮೊದಲಿಗೆ ಕೇಳಿಸುವುದು ಸಾಂಪರ್ಕಿಕ ಕನ್ನಡ. ಇದನ್ನು ಆಡುವವರು ಬೇರೆ ಬೇರೆ ಭಾಷೆಗಳನ್ನು ಮನೆಮಾತಾಗಿ ಬಳಸುವವರಾದ್ದರಿಂದ, ಈ ನುಡಿಯಲ್ಲಿ ತುಳು, ಕೊಂಕಣಿ ಮೊದಲಾದ ಭಾಷೆಗಳ ಪ್ರಭಾವ ಹೆಚ್ಚು ಕಾಣಿಸುತ್ತದೆ. ಅಲ್ಲದೆ, ಈ ಕನ್ನಡವನ್ನು ಬಹುಮಂದಿ ಶಾಲೆ, ಕಾಲೇಜು, ಪುಸ್ತಕ, ಪತ್ರಿಕೆ ಇವುಗಳ ಮೂಲಕ ಮತ್ತು ಸಭೆ, ನಾಟಕಗಳ ಮೂಲಕ ಪಡೆದಿರುವರಾದ್ದರಿಂದ ಇದು ಆಡುನುಡಿಗಿಂತಲೂ ಬರೆಹದ ಕನ್ನಡವನ್ನೇ ಹೆಚ್ಚು ಹೋಲುತ್ತದೆ. ಸಾಂಪರ್ಕಿಕ ಕನ್ನಡ ಯಾವ ರೀತಿಯಲ್ಲಿ ಬೆಳೆದುಬಂದಿದೆ. ಅದರ ಬೆಳವಣಿಗೆಗೂ ಆಡುನುಡಿಯ ಬೆಳವಣಿಗೆಗೂ ಏನು ಭೇದವಿದೆ. ಅದರಲ್ಲಿ ಬೇರೆ ಬೇರೆ ಸಮಾಜಗಳಿಗೆ ಮತ್ತು ಆ ಸಮಾಜದವರ ಮಾತೃಭಾಷೆಗಳಿಗೆ ಅನುಗುಣವಾಗಿ ಹೇಗೆ ಪ್ರಭೇದಗಳು ಮೂಡಿಬಂದಿವೆ. ಅದರ ಮೇಲೆ ವಿದ್ಯಾಭ್ಯಾಸದ ಪ್ರಭಾವ ಎಂಥದ್ದು ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸಲು ಇನ್ನೂ ಬಹಳಷ್ಟು ಸಂಶೋಧನೆಗಳನ್ನು ನಡೆಸುವ ಆವಶ್ಯಕತೆಯಿದೆ.

ದಕ್ಷಿಣ ಕರ್ನಾಟಕ[ಬದಲಾಯಿಸಿ]

 • ಅರುವು
 • ಬೆಂಗಳೂರು ಕನ್ನಡ
 • ಚಾಮರಾಜನಗರ
 • ಮಂಡ್ಯ
 • ಬಣಕಲ್ ಕನ್ನಡ
 • ಸೋಲಿಗ
 • ಕನ್ನಡ ಕುರುಂಬ
 • ದಕ್ಷಿಣ ಕರ್ನಾಟಕ ಪ್ರಾ೦ತ ಭಾಷೆ

ಮೈಸೂರು ಕನ್ನಡ[ಬದಲಾಯಿಸಿ]

ಮೈಸೂರು, ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ,ಕೋಲಾರ, ತುಮಕೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಮತ್ತು ಚಿಕ್ಕಮಗಳೂರು- ಈ ಜಿಲ್ಲೆಗಳಲ್ಲಿ ಆಡುವ ಕನ್ನಡಭಾಷೆಯನ್ನು ಮೈಸೂರುಕನ್ನಡ ಎಂದು ಕರೆಯುವುದು ವಾಡಿಕೆ.

ಮೈಸೂರು ಕನ್ನಡದ ವಿದ್ಯಾವಂತ ಹಾಗೂ ಅವಿದ್ಯಾವಂತರ ಭಾಷೆಗಳ ನಡುವೆ ವ್ಯಾಕರಣ ವಿಚಾರಗಳಲ್ಲಿ ಕೇವಲ ಸ್ವಲ್ಪ ಅಂತರ ಕಂಡುಬರುತ್ತದೆ. ಅವನು ಎಂಬುದನ್ನು ಅವುï್ನ, ಅವ ಎಂತಲೂ ಕೆಲವು ರೂಪಗಳು ವ್ಯತ್ಯಾಸಗೊಂಡು ಬಳಕೆಯಲ್ಲಿರುವುದನ್ನು ಗಮನಿಸಬಹುದು. ಹಾಗೆಯೇ ಮಾಡುತ್ತೇನೆ, ಮಾಡ್ತೇನೆ, ಮಾಡ್ತಿನಿ, ನೋಡುತ್ತೇನೆ, ನೋಡ್ತೇನೆ, ನೋಡುವ, ಮಾಡೋಣ, ಮಾಡುವ ಎಂಬ ವಿಧ್ಯರ್ಥಕ ರೂಪಗಳೂ ವಿದ್ಯಾವಂತ ಹಾಗೂ ಅವಿದ್ಯಾವಂತರ ನಡುವೆ ವ್ಯತ್ಯಸ್ತಗೊಂಡು ಉಚ್ಚಾರಗೊಳ್ಳುವುದನ್ನು ಕಾಣಬಹುದು.

ಸಿರ್ಸಿ ಕನ್ನಡ[ಬದಲಾಯಿಸಿ]

ಸಿರ್ಸಿ ಕನ್ನಡ ವನ್ನು ಮಲೆನಾಡಿನ ಸಿರ್ಸಿ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಾದ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ದಾಂಡೇಲಿ, ಸೊರಬ, ಹಳಿಯಾಳ ತಾಲೂಕಿನಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ಪಶ್ಚಿಮ ಘಟ್ಟ ಶ್ರೇಣಿಗಳ ತಪ್ಪಲಿನಲ್ಲಿ ಬರುವ ಸಿರ್ಸಿ ನಗರವು ಕನ್ನಡದ ಮೊದಲ ರಾಜವಂಶ ಕದಂಬರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಸಿರ್ಸಿ ಕನ್ನಡದಲ್ಲಿ ಹಳೆಗನ್ನಡ ಮತ್ತು ಮಲೆನಾಡಿನ ಕನ್ನಡಗಳ ಶಬ್ದವು ಹೆಚ್ಚಾಗಿ ಬಳಕೆಯಲ್ಲಿವೆ.

ಉತ್ತರ ಕರ್ನಾಟಕ[ಬದಲಾಯಿಸಿ]

 • ವಿಜಯಪುರ ಕನ್ನಡ
 • ಕಲಬುರಗಿ ಕನ್ನಡ
 • ಧಾರವಾಡ ಕನ್ನಡ
 • ಬೆಳಗಾವಿ

ಧಾರವಾಡ ಕನ್ನಡ[ಬದಲಾಯಿಸಿ]

ಇದು ಕನ್ನಡದ ಪ್ರಾದೇಶಿಕ ಉಪಭಾಷೆಗಳಲ್ಲಿ ಪ್ರಮುಖ ಉಪಭಾಷಾಪ್ರಭೇದ. ಇದರಲ್ಲಿ ಧಾರವಾಡ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಭಾಷಾರೂಪಗಳು ಸಮಾವೇಶಗೊಳ್ಳುತ್ತವೆ. ಜಿಲ್ಲೆ ಜಿಲ್ಲೆಗೆ, ತಾಲ್ಲೂಕು ತಾಲ್ಲೂಕಿಗೆ, ಮತ್ತೆ ಒಳಭೇದಗಳು ಕಂಡುಬಂದರೂ ಈ ಪ್ರದೇಶದ ವಿಶಿಷ್ಟ ರೂಪಗಳೆನ್ನಲು ಬರುವಂಥ ಪ್ರಯೋಗಗಳಿವೆ. ಈ ಪ್ರಯೋಗಗಳನ್ನು ಇತರ ಉಪಭಾಷಾ ಪ್ರಭೇದಗಳಲ್ಲಿ ಕಂಡುಬರುವ ರೂಪಗಳೊಡನೆ ಹೋಲಿಸಿ ನೋಡಿದಾಗ ಧಾರವಾಡ ಕನ್ನಡದ ವೈಶಿಷ್ಟ್ಯಗಳು ವಿಶಿಷ್ಟವಾಗಿ ಕಂಡುಬಂದು, ಅದಕ್ಕೆ ಒಂದು ಬಿನ್ಹಸ್ಥಾನ ಒದಗಿಸಿಕೊಡುತ್ತವೆ.

ಗುಲ್ಬರ್ಗಾ ಕನ್ನಡ[ಬದಲಾಯಿಸಿ]

ಗುಲ್ಬರ್ಗಾ, ಬಿದರೆ, ರಾಯಚೂರು ಜಿಲ್ಲೆಗಳ ಕನ್ನಡವನ್ನು ಹೈದರಾಬಾದ್ ಕರ್ನಾಟಕ ಕನ್ನಡ ಎಂದೂ ಕರೆಯುವುದುಂಟು. ಈ ಉಪಭಾಷೆಯ ಮೇಲೆ ಮರಾಠಿ, ಉರ್ದು, ಸಂಸ್ಕೃತಗಳ ಪ್ರಭಾವ ತೀವ್ರತರವಾಗಿ ಆಗಿದೆ. ಮೊದಲಿಗೆ ಈ ಉಪಭಾಷೆಯನ್ನಾಡುವ ಪ್ರದೇಶ ಹೈದರಾಬಾದ್ ನಿಜಾಮರ ಆಳಿಕೆಗೆ ಒಳಗಾಗಿತ್ತಾದ ಕಾರಣ ಉರ್ದು ಈ ಭಾಷೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಈ ಉಪಭಾಷೆಯಲ್ಲೂ ಉಳಿದ ಕನ್ನಡದ ಉಪ ಭಾಷೆಗಳಲ್ಲಿ ಕಂಡುಬರುವಂತೆ ಆ ಧ್ವನಿಮಾ ಆ್ಯ ಮತ್ತು ಆ ಎಂಬ ಎರಡು ಧ್ವನಿಮಾ ಆಗಿ ರೂಪ ತಾಳಿದೆ. ಚ ಮತ್ತು ಜ ಎಂಬ ಈಷತ್ ಸ್ಪರ್ಶ ವ್ಯಂಜನ ಧ್ವನಿಮಾಗಳು ಈ ಕನ್ನಡದಲ್ಲಿ ಕಂಡುಬರುತ್ತವೆ. ಇವುಗಳ ಜೊತೆಗೆ ಚ ಜ ಎಂಬ ತಾಲವ್ಯ ಸ್ಪರ್ಶವ್ಯಂಜನ ಧ್ವನಿಮಾಗಳೂ ಬಳಕೆಯಲ್ಲಿವೆ. ಎಷ್ಟೋ ವೇಳೆ ಉರ್ದುವಿನ ಪ್ರಭಾವದಿಂದ ಕನ್ನಡದ ಜ ವ್ಯಂಜನ ಧ್ವನಿಮಾಕ್ಕೆ ಬದಲು ಜ ಬಳಕೆಯಾಗುತ್ತದೆ ಉದಾ: ಬೀಜ > ಬೀಜ, ಶಿಷ್ಟ ಕನ್ನಡದ ವಕಾರಾಂತ ಶಬ್ದಗಳು ವ್ಯಂಜನಾಂತವಾಗಿವೆ.

ನೈಋತ್ಯ ಕರ್ನಾಟಕ[ಬದಲಾಯಿಸಿ]

 • ಅರೆಭಾಷೆ ಅಥವಾ ಗೌಡ ಕನ್ನಡ
 • ತಿಪಟೂರು
 • ರಬಕವಿ
 • ನಂಜನಗೂಡು ಕನ್ನಡ

ಆಗ್ನೇಯ ಕರ್ನಾಟಕ[ಬದಲಾಯಿಸಿ]

 • ಕೋಲಾರ
 • ತುಮಕೂರು

ಕನ್ನಡ ಭಾಷೆಗಳು[ಬದಲಾಯಿಸಿ]

 • ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಬಡಗ ಸಮುದಾಯದವರು ಮಾತನಾಡುವ ಬಡಗ -ಸಂಬಂಧಿತ ಭಾಷೆ ಕನ್ನಡವಾಗಿದೆ.[೩]
 • ಉರಳಿ, ಹೊಲಿಯ ಮತ್ತು ಸೋಲಿಗ ಕೂಡ ಕನ್ನಡಕ್ಕೆ ಹತ್ತಿರವಾದವು.
 • ಕುಂದಗನ್ನಡಹವಿಗನ್ನಡಅರೆಭಾಷೆ ಕನ್ನಡ ಒಳಗೊ೦ಡು ಕನ್ನಡದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಸಾಮುದಾಯಿಕ ಭಾಷೆಗಳಿವೆ. 

ಪ್ರಾದೇಶಿಕ ಉಪಭಾಷೆಗಳು[ಬದಲಾಯಿಸಿ]

ಉಪಭಾಷೆಗಳಲ್ಲಿ ಮೇಲೆ ಚರ್ಚಿಸಲಾದ ಪ್ರಾದೇಶಿಕ ಉಪಭಾಷೆಗಳ ಜೊತೆಗೆ ಆಯಾ ವಿಶಿಷ್ಟ ಸಮುದಾಯಕ್ಕೆ ಸೇರಿದ ಉಪಭಾಷೆಗಳೂ ಇವೆ. ಸೋಲಿಗ, ಬಡಗ, ಅರೆಭಾಷೆ, ಹವ್ಯಕ, ಕುರುಬ (ಕುರುಂಬ) ಇತ್ಯಾದಿ ಭಾಷೆಗಳು ಈ ಗುಂಪಿಗೆ ಸೇರುತ್ತವೆ.

ಸೋಲಿಗ[ಬದಲಾಯಿಸಿ]

ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ, ಮೈಸೂರು ಜಿಲ್ಲೆಯ, ಹೆಗ್ಗಡದೇವನಕೋಟೆ, ಕಾಕನಕೋಟೆ ಹಾಗೂ ಬೆಂಗಳೂರು, ಮಂಡ್ಯ, ತುಮಕೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಾಸವಾಗಿರುವ ಸೋಲಿಗ (ಶೋಲಿಗ) ಎಂಬ ಆದಿವಾಸಿ ಜನಾಂಗದವರ ಆಡು ಭಾಷೆ.

ಸೋಲಿಗ ಭಾಷೆಯನ್ನು ಸಾಮಾನ್ಯವಾಗಿ ಸೋಲಿಗ ಕನ್ನಡ ಎಂದು ಕರೆಯುವುದು ರೂಡಿs. ಮೈಸೂರು ಜಿಲ್ಲೆಯ ಕೊಳ್ಳೇಗಾಲ, ಯಳಂದೂರು ಮತ್ತು ಚಾಮರಾಜನಗರದ ಸುತ್ತಮುತ್ತಲ ಪ್ರದೇಶದ ಕನ್ನಡ ಭಾಷೆಯಲ್ಲಿ. ಸೋಲಿಗಕನ್ನಡದಲ್ಲಿ ಕಂಡುಬರುವ ಕೆಲವು ವೈಶಿಷ್ಟಗಳನ್ನು ಕಾಣಬಹುದು. ಉದಾಹರಣೆಗೆ ಕರೆ > ಕರಿ, ಮರೆ > ಮರಿ, ಬರೆ > ಬರಿ, ತೆರೆ > ತೆರಿ, ಇತ್ಯಾದಿ. ಮಗು, ಮಕ್ಕಳು ಎಂಬ ಪದ ಈ ಸುತ್ತಮುತ್ತಲ ಪ್ರದೇಶಗಳಲ್ಲಿಯ ಕನ್ನಡದಲ್ಲಿ ಮಕ್ಕ, ಮಕ್ಕಗ ಎಂದು ಬಳಕೆಯಲ್ಲಿದೆ. ನಾಸಿಕತ್ವ ಈ ಭಾಷೆಯಲ್ಲಿ ಅರ್ಥವ್ಯತ್ಯಾಸವನ್ನುಂಟುಮಾಡುವ ಸಾಮಥರ್ಯ್‌ವನ್ನು ಪಡೆದಿದೆ. ಉದಾಹರಣೆಗೆ ಆವ > ಅವನು, ಬನ್ನೆ > ಬಂದೆ, ಮಾದ > ಮಾದ ಇತ್ಯಾದಿ. ಸೋಲಿಗರ ಕನ್ನಡಕ್ಕೂ ಹಾಗೂ ಶಿಷ್ಟ ಕನ್ನಡಕ್ಕೂ ಇರುವ ಕೆಲವು ವೈಶಿಷ್ಟ್ಯಗಳನ್ನು ಹೀಗೆ ಗುರುತಿಸಬಹುದು. ಸೋಲಿಗ ಕನ್ನಡದಲ್ಲಿ ಶಕಟರೇಫ ಸ್ವತಂತ್ರ ವರ್ಣವಾಗಿಯೂ ವಿ ಕಾರ ಒಂದು ಧ್ವನಿಪ್ರಭೇದವಾಗಿಯೂ ಬಳಕೆಯಲ್ಲಿವೆ.

ಉದಾಹರಣೆಗೆ: ಸೋ. ಕನ್ನಡ ಶಿ. ಕನ್ನಡ ಅ¾ೆ ಅರೆಬಂಡೆ ಮು¾Ä ಮುರಿ ಕೆ¾Â ಕೆರೆ ಕೋಳಿ ಕೋಳಿ ಉ¾Ä ಉಳು ಉಳು ಮಳೆ ಮಳೆ ಶಿಷ್ಟ ಕನ್ನಡದಲ್ಲಿ ನಪುಂಸಕಲಿಂಗಗಳಿಗೆ ಹತ್ತುವ ಬಹುವಚನ ಪ್ರತ್ಯಯ ಸೋಲಿಗ ಕನ್ನಡದಲ್ಲಿ ಗ ಆಗಿದೆ.

ಉದಾಹರಣೆಗೆ: ಸೋ. ಕನ್ನಡ ಶಿ. ಕನ್ನಡ ಮರಗ ಮರಗಳು ಆನೆಗ ಆನೆಗಳು ಕುರಿಗ ಕುರಿಗಳು ಎತ್ತುಗ ಎತ್ತುಗಳು

ಚತುರ್ಥಿವಿಭಕ್ತಿ ಪ್ರತ್ಯಯಗಳಲ್ಲೂ ಸೋಲಿಗ ಕನ್ನಡ ಶಿಷ್ಟ ಕನ್ನಡದಿಂದ ಬೇರೆಯಾಗಿದೆ.

ಉದಾಹರಣೆಗೆ : ಸೋ. ಕನ್ನಡ ಶಿ. ಕನ್ನಡ ಕಾಡಿಗ ಕಾಡಿಗೆ ಕರುವಿಗ ಕರುವಿಗೆ ನನಗ ನನಗೆ ಹುಲಿಕ ಹುಲಿಗೆ ಮನೆಕ ಮನೆಗೆ ಮರಕ ಮರಕ್ಕೆ ಅದಕ ಅದಕ್ಕೆ

ಭೂತಕಾಲ ಪ್ರತ್ಯಯವಾದ ನ್ ಕನ್ನಡದ ಬೇರೆ ಯಾವ ಉಪಭಾಷೆಗಳಲ್ಲೂ ಕಂಡುಬರುವುದಿಲ್ಲ, ಸೋಲಿಗ ಭಾಷೆಯಲ್ಲಿ ಕಂಡುಬರುತ್ತದೆ. ಈ ಭೂತಕಾಲ ಪ್ರತ್ಯಯ ಕೇವಲ ಉತ್ತಮಪುರುಷ ಏಕವಚನ ಬಹುವಚನಗಳಲ್ಲೂ ಹಾಗೂ ಪ್ರಥಮ ಪುರುಷ ಏಕವಚನದಲ್ಲೂ ಬರುತ್ತದೆ. ಸೋ. ಕನ್ನಡ ಶಿ. ಕನ್ನಡ ಹೋನೆ ಹೋದೆ ಹೋನೊ ಹೋದೆವು ಹೋನ ಹೋದ (ಹೋದನು) ಈಗ ಸೋಲಿಗರು ಕನ್ನಡದ ಇತರ ಉಪಭಾಷೆಗಳನ್ನಾಡುವ ಜನರ ಸಂಪರ್ಕವನ್ನು ಹೊಂದುತ್ತಿರುವುದರಿಂದ, ಕಾಲಕ್ರಮೇಣ ಇವರ ಕನ್ನಡದಲ್ಲಿಯ ವೈಶಿಷ್ಟ್ಯಗಳು ಮರೆಯಾಗಬಹುದು. ಆದ್ದರಿಂದ ಈ ಉಪಭಾಷೆಯಲ್ಲಿ ದೊರೆಯುವ ಜನಪದ ಸಾಹಿತ್ಯವನ್ನು ಆದಷ್ಟು ಬೇಗ ಸಂಗ್ರಹಿಸುವ ಅವಶ್ಯಕತೆ ಇದೆ. (ಕೆ.ಎಸ್.ಜಿ.)

ಬಡಗ ಭಾಷೆ[ಬದಲಾಯಿಸಿ]

ಬಡಗ ಭಾಷೆಯು  ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ಬಡಗ ಸಮುದಾಯದ ಆಡು ಭಾಷೆ.

ಈ ಭಾಷೆಯನ್ನು ಇತ್ತೀಚೆಗೆ ಕೆಲವು ವಿದ್ವಾಂಸರು ಒಂದು ಸ್ವತಂತ್ರ ದ್ರಾವಿಡ ಭಾಷೆ ಎಂದು ಪರಿಗಣಿಸಿದ್ದಾರೆ. ತಮಿಳುನಾಡು, ಕರ್ನಾಟಕÀ ಮತ್ತು ಕೇರಳ ರಾಜ್ಯಗಳ ನಡುವೆ ಸಾಲಾಗಿ ಹಬ್ಬಿರುವ ಮಧುಮಲೈ ಮತ್ತು ನೀಲಗಿರಿಬೆಟ್ಟಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಾಗಿರುವ ಸು.ಒಂದು ಲಕ್ಷಕ್ಕೂ ಹೆಚ್ಚು ಬಡಗರು ಈ ಭಾಷೆಯನ್ನಾಡುವರು. ಬಡಗ ಭಾಷೆಯಲ್ಲಿ ಹತ್ತು ಸ್ವರಧ್ವನಿಮಾಗಳು, 19 ವ್ಯಂಜನ ಧ್ವನಿಮಾಗಳು ಪ್ರಧಾನವಾಗಿ ಕಂಡುಬರುತ್ತವೆ. ಕನ್ನಡದಲ್ಲಿ ಪ ಕಾರ ಹ ಕಾರವಾಗಿ ಪರಿವರ್ತನೆಗೊಂಡಿರುವಂತೆ ಬಡಗದಲ್ಲಿ ಈ ಪರಿವರ್ತನೆ ಕಂಡುಬರುವುದಿಲ್ಲ. ಅನೇಕ ವ್ಯಾಕರಣಾಂಶಗಳಲ್ಲಿ ಬಡಗಭಾಷೆ ಕನ್ನಡ ಭಾಷೆಯನ್ನೇ ಹೆಚ್ಚು ಹೋಲುತ್ತದೆ. ಹಳಗನ್ನಡದ ಎಷ್ಟೋ ಧ್ವನಿಗಳೂ ಧ್ವನಿಮಾಗಳು, ಪದಗಳು ಮತ್ತು ವ್ಯಾಕರಣ ವೈಶಿಷ್ಟ್ಯಗಳು ಈ ಭಾಷೆಯಲ್ಲಿ ಕಂಡುಬರುತ್ತವೆ. ಬಡಗ ಭಾಷೆಯ ಮೇಲೆ ತಮಿಳು ಮತ್ತು ಮಲೆಯಾಳಂ ಭಾಷೆಗಳ ಪ್ರಭಾವ ತೀವ್ರತರವಾಗಿ ಕಂಡುಬಂದರೂ ಇದನ್ನು ತಮಿಳು ಭಾಷೆಯ ಅಥವಾ ಮಲೆಯಾಳಂ ಭಾಷೆಯ ಉಪಭಾಷೆ ಎಂದು ಹೇಳಲು ಬರುವುದಿಲ್ಲ.

ಭಾರತೀಯ ಭಾಷೆಗಳ ಸರ್ವೇಕ್ಷಣಾ ಕಾರ್ಯವನ್ನು ಕೈಗೊಂಡಿದ್ದ ಜಾರ್ಜ್ ಗ್ರಿಯರ್ಸನ್ ಬಡಗ ಭಾಷೆಯನ್ನು ಕನ್ನಡದ ಉಪಭಾಷೆ ಎಂದು ಪರಿಗಣಿಸಿ, ಈ ಕಾರಣದಿಂದಲೇ ಇದರ ಪ್ರಸ್ತಾಪವನ್ನು ಕನ್ನಡ ಭಾಷೆಯೊಂದಿಗೆ ಕೈಗೊಂಡಿದ್ದಾನೆ. ಹವ್ಯಕ: ಹೆಚ್ಚಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲಸಿರುವ ಹವ್ಯಕರ ಆಡುಭಾಷೆ. ಇದನ್ನು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಆಡುವವರಿದ್ದಾರೆ. ಇದು ಕನ್ನಡದ ಉಪಭಾಷೆಯಾಗಿದ್ದರೂ ಇದನ್ನಾಡುವ ಜನ ಹವ್ಯಕ ಕನ್ನಡ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಭಾಷೆಗೆ ತನ್ನದೇ ಆದ ಲಿಪಿ ಸೌಲಭ್ಯವಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಕುಮಟ ಮುಂತಾದ ಕಡೆ ಆಡುವ ಹವ್ಯಕ ಭಾಷೆಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಳ್ಯ, ಪುತ್ತೂರು, ಮೂಡಬಿದರೆ, ಬಂಟ್ವಾಳ, ಮಂಗಳೂರು, ಉಡುಪಿ ಮುಂತಾದ ಕಡೆ ಆಡುವ ಭಾಷೆಗೂ ತುಂಬ ಅಂತರ ಕಂಡುಬರುತ್ತದೆ. ಈ ಅಂತರ ಅನುನಾಸಿಕತೆ, ತಾಲವ್ಯೀಕರಣ, ಓಷ್ಟ್ಯೀಕರಣ ಇತ್ಯಾದಿ ಧ್ವನಿಲಕ್ಷಣಗಳಲ್ಲಿ ಹೆಚ್ಚು. ಹಾಗೆಯೇ ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಆಡುವ ಹವ್ಯಕ ಭಾಷೆಯಲ್ಲೂ ಈ ವ್ಯತ್ಯಾಸಗಳಿವೆ. ಇದಕ್ಕೆ ಕಾರಣ ಕೆಲವು ಕಡೆ ತುಳು ಮಲೆಯಾಳಂ ಭಾಷೆಗಳ, ಮತ್ತೆ ಕೆಲವು ಕಡೆ ಕನ್ನಡ ಕೊಡಗು ಮತ್ತು ಕೊಂಕಣಿ ಭಾಷೆಗಳ ಪ್ರಭಾವವೆನ್ನಬಹುದು. ಹವ್ಯಕ ಭಾಷೆಯಲ್ಲಿ ಸಂಸ್ಕೃತ ಪದಗಳು ಹೆಚ್ಚು. ಉಚ್ಚಾರದಲ್ಲಿ ಕೆಲವು ಸಂಸ್ಕೃತ ಪದಗಳು ವಿಕೃತಗೊಂಡಿವೆ; ಕೆಲವು ವ್ಯತ್ಯಾಸಗೊಂಡಿವೆ: ಮತ್ತೆ ಕೆಲವು ಹಾಗೆಯೇ ಉಳಿದುಕೊಂಡಿವೆ. ಈ ಭಾಷೆಯ ಧ್ವನಿಮಾ ಆಕೃತಿಮಾ ವಾಕ್ಯರಚನಾ ವ್ಯವಸ್ಥೆಗಳನ್ನು ಗಮನಿಸಿದಾಗ ಪುರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಅಂಶಗಳು ಕಂಡುಬರುತ್ತವೆ. ಅದರಲ್ಲೂ ಪುರ್ವದ ಹಳಗನ್ನಡ ರೂಪಗಳು ಹೇರಳವಾಗಿ ಕಂಡುಬರುತ್ತವೆ. ವ್ಯಾಕರಣಾಂಶಗಳಲ್ಲಿ ಈ ಭಾಷೆ ನಡುಗನ್ನಡವನ್ನೇ ಹೆಚ್ಚು ಹೋಲುತ್ತದೆ. ಅಬಿsವ್ಯಾಪಕ, ವ್ಯಾವರ್ತಕ, ಪ್ರಥಮಪುರುಷ ಬಹುವಚನಗಳಲ್ಲಿನ ವ್ಯತ್ಯಾಸ ಹಳಗನ್ನಡ, ನಡುಗನ್ನಡಗಳಲ್ಲಿರುವಂತೆಯೇ ಇದೆ.[೪]

ಕುರುಬ[ಬದಲಾಯಿಸಿ]

(ಕುರುಂಬ): ಕೇರಳದ ವೈನಾಡು (ಮಲಬಾರು), ತಮಿಳು ನಾಡಿನ ನೀಲಗಿರಿ, ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಬೆಟ್ಟಗುಡ್ಡಗಳಲ್ಲಿ ವಾಸಿಸುವ ಕುರುಬ ಎಂಬ ಆದಿವಾಸಿ ಜನಾಂಗದವರು ಈ ಭಾಷೆಯನ್ನಾಡುತ್ತಾರೆ. ಕುರುಬರಲ್ಲಿ ಪ್ರಮುಖವಾಗಿ ಊರುಕುರುಬ,ಕಾಡುಕುರುಬ ಎಂಬ ಎರಡು ಪಂಗಡಗಳಿವೆ. ಈ ಪಂಗಡಗಳಲ್ಲಿಯೂ ಹಲವಾರು ಒಳಪಂಗಡಗಳಿವೆ. ಇವರು ಆಡುವ ಭಾಷೆಯನ್ನು ಕುರುಬಕನ್ನಡ ಎಂದು ಕರೆಯುತ್ತಾರೆ. ಕನ್ನಡ ಭಾಷೆಯಲ್ಲಿ ಕಂಡುಬರುವ ಕೆಲವು ಸ್ವರ ಮತ್ತು ವ್ಯಂಜನ ಧ್ವನಿಮಾಗಳು ಈ ಭಾಷೆಯಲ್ಲೂ ಕಂಡುಬರುತ್ತವೆ. ಕಾಡುಕುರುಬರ ಭಾಷೆಯಲ್ಲಿ ಹಳಗನ್ನಡದ ಭಾಷಾಂಶಗಳು ಹೆಚ್ಚು. ಈ ಭಾಷೆಯ ಮೇಲೆ ತಮಿಳು ಮತ್ತು ಮಲೆಯಾಳಂ ಭಾಷೆಗಳು ಪ್ರಭಾವ ಬೀರಿದ್ದು ಕೆಲವರು ಭಾಷಾತಜ್ಞರು ಕುರುಬ ಭಾಷೆಯನ್ನು ಕನ್ನಡದ ಉಪಭಾಷೆ ಎಂದೂ ಮತ್ತೆ ಕೆಲವರು ತಮಿಳಿನ ಉಪಭಾಷೆ ಎಂದೂ ಅನುಮಾನಿಸಿದ್ದಾರೆ.  

ಉರಾಳಿ[ಬದಲಾಯಿಸಿ]

ಉರಾಳಿ, ಕನ್ನಡಕ್ಕೆ ಸಂಬಂಧಿಸಿರುವ ಒಂದು ಅಳಿವಿನಂಚಿನಲ್ಲಿರುವ ದ್ರಾವಿಡ ಭಾಷೆ.

ಕನ್ನಡ ಭಾಷೆಗಳು[ಬದಲಾಯಿಸಿ]

 • ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಬಡಗ ಸಮುದಾಯದವರು ಮಾತನಾಡುವ ಬಡಗ -ಸಂಬಂಧಿತ ಭಾಷೆ ಕನ್ನಡವಾಗಿದೆ.[೫]
 • ಉರಳಿ, ಹೊಲಿಯ ಮತ್ತು ಸೋಲಿಗ ಕೂಡ ಕನ್ನಡಕ್ಕೆ ಹತ್ತಿರವಾದವು.
 • ಕುಂದಗನ್ನಡಹವಿಗನ್ನಡಅರೆಭಾಷೆ ಕನ್ನಡ ಒಳಗೊ೦ಡು ಕನ್ನಡದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಸಾಮುದಾಯಿಕ ಭಾಷೆಗಳಿವೆ. 

ಬಡಗ[ಬದಲಾಯಿಸಿ]

ಬಡಗ ಭಾಷೆಯು  ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ಬಡಗ ಸಮುದಾಯದ ಆಡು ಭಾಷೆ. 

ಉರಾಳಿ[ಬದಲಾಯಿಸಿ]

ಉರಾಳಿ, ಕನ್ನಡಕ್ಕೆ ಸಂಬಂಧಿಸಿರುವ ಒಂದು ಅಳಿವಿನಂಚಿನಲ್ಲಿರುವ ದ್ರಾವಿಡ ಭಾಷೆ.

ಕನ್ನಡ ಭಾಷೆಯ ವಿದ್ವಾಂಸರು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Hammarström, Harald; Forkel, Robert; Haspelmath, Martin, eds. (2017). "ಬಡಗ–ಕನ್ನಡ". Glottolog 3.0. Jena, Germany: Max Planck Institute for the Science of Human History. {{cite book}}: Unknown parameter |chapterurl= ignored (help)
 2. Michail Andronov, 2003. A comparative grammar of the Dravidian languages
 3. http://www.censusindia.gov.in/2011Census/Language_MTs.html
 4. http://karavenalnudi.blogspot.in/2011/06/blog-post_536.html
 5. http://www.censusindia.gov.in/2011Census/Language_MTs.html
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: