ವಿಷಯಕ್ಕೆ ಹೋಗು

ಡಿ. ಎನ್. ಶಂಕರ ಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಡಾ.ಡಿ. ಎನ್. ಶಂಕರ ಭಟ್ಟ'

ದರ್ಬೆ ನಾರಾಯಣಭಟ್ಟ ಶಂಕರ ಭಟ್ಟರು ಕನ್ನಡದ ನುಡಿಯರಿಗರು (ಭಾಷಾತಜ್ಞರು). ಇವರು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಭಾಷಾಪ್ರತಿಪಾದನೆಯ ಮೂಲಕ ಕನ್ನಡ ಭಾಷಾ ಪ್ರಪಂಚಕ್ಕೆ ಅಚ್ಚಕನ್ನಡದ ಡಿ.ಎನ್.ಶಂಕರ ಭಟ್ಟರೆಂದು ಪ್ರಸಿದ್ಧರಾಗಿದ್ದಾರೆ.

ಜನನ ಹಾಗೂ ವಿದ್ಯಾಭ್ಯಾಸ

[ಮೂಲವನ್ನು ಸಂಪಾದಿಸು]

ಶಂಕರಭಟ್ಟರು ೧೫ ಜುಲೈ, ೧೯೩೫ರಂದು ಪುತ್ತೂರಿನಲ್ಲಿ ಜನಿಸಿದರು. ಪುಣೆ ವಿಶ್ವವಿದ್ಯಾಲಯದಿಂದ ೧೯೬೨ರಲ್ಲಿ ಭಾಷಾಶಾಸ್ತ್ರದಲ್ಲಿ ಪಿ.ಎಚ್.ಡಿ ಗಳಿಸಿದರು. ೧೯೬೬ ರಲ್ಲಿ ಬ್ರಿಟಿಷ್ ಕೌನ್ಸಿಲ್‌ನ ಫೆಲೋಶಿಪ್‌ಗೆ ಆಯ್ಕೆಯಾಗಿ ಇಂಗ್ಲೀಷ್‌ನಲ್ಲಿ ಉಪಭಾಷಾ ಪರಿವೀಕ್ಷಣೆಯ ವಿಧಾನಗಳ ಕುರಿತು ಅಧ್ಯಯನ ಮಾಡಿದರು.[]

ಅಧ್ಯಯನ ಮತ್ತು ವೃತ್ತಿಜೀವನ

[ಮೂಲವನ್ನು ಸಂಪಾದಿಸು]

ಕೆಲಸ ಮತ್ತು ಹುದ್ದೆಗಳು

[ಮೂಲವನ್ನು ಸಂಪಾದಿಸು]
  • ಪುಣೆ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷಾಶಾಸ್ತ್ರದ ಪ್ರಾಧ್ಯಾಪಕ, ೧೯೬೨-೬೫
  • ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಲ್ಯಾಂಗ್ವೆಜ್ ಯುನಿವರ್ಸಲ್ಸ್ ಯೋಜನೆಯಲ್ಲಿ ರಿಸರ್ಚ್ ಅಸೋಸಿಯೇಟ್, ೧೯೭೩-೭೫
  • ಪುಣೆಯ ಡೆಕ್ಕನ್ ಕಾಲೇಜ್‌ನಲ್ಲಿ ಟಿಬೆಟೊ ಬರ್ಮನ್ ಭಾಷೆಗಳ ರೀಡರ್, ೧೯೬೫-೭೯
  • ತಿರುವನಂತಪುರ ಐ.ಎಸ್.ಡಿ.ಎಲ್ ನಲ್ಲಿ ಭಾಷಾ ಪ್ರಾಧ್ಯಾಪಕ, ೧೯೭೯-೮೫
  • ಇಂಫಾಲ್‌ನ ಮಣಿಪುರ ವಿಶ್ವವಿದ್ಯಾಲಯದಲ್ಲಿ ಭಾಷಾ ಪ್ರಾಧ್ಯಾಪಕರಾಗಿ, ೧೯೮೫-೮೮
  • ಮೈಸೂರಿನ ಭಾರತೀಯ ಭಾಷಾ ಸಂಸ್ಠಾನದಲ್ಲಿ ಯು.ಜಿ.ಸಿ ವತಿಯಿಂದ ನಿಯೋಜಿತ ಸಂಶೋಧನಾ ವಿಜ್ಞಾನಿ, ೧೯೮೮-೯೫
  • ಬೆಲ್ಜಿಯಂನ ಆಂಟ್‌ವರ್ಪ್ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಸ್ಕಾಲರ್, ೧೯೯೭
  • ಆಸ್ಟ್ರೇಲಿಯದ ಮೆಲ್ಬೊರ್ನ್ ನಗರದ ಲಾ ಬ್ರೋಬೆ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕ, ೨೦೦೦
  • ಜರ್ಮನಿಯ, ಲೀಪ್ಝಿಗ್ ನಗರ ಮ್ಯಾಕ್ಸ್ ಪ್ಲಾನ್ಕ್ ಇನ್ಸ್ಟಿಟ್ಯೂಟ್‌ನಲ್ಲಿ ಅತಿಥಿ ವಿಜ್ಞಾನಿಯಾಗಿ, ೨೦೦೧

ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯದಲ್ಲಿ ಕರಾವಳಿಯ ತುಳು ಹಾಗೂ ಕೊರಗ ಭಾಷೆಗಳ ಬಗ್ಗೆಯೂ, ಹವ್ಯಕ ಕನ್ನಡದ ವ್ಯಾಕರಣದ ಬಗ್ಗೆಯೂ ಕೃತಿಗಳನ್ನು ರಚಿಸಿದ್ದಾರೆ. ಇದೇ ಸಮಯದಲ್ಲಿ ಟಿಬೇಟೋ-ಬರ್ಮನ್ ಭಾಷೆಗಳಾದ ಬೋರೋ ಹಾಗೂ ಥಂಖುರ್ ಭಾಷೆಗಳ ವ್ಯಾಕರಣ ಹಾಗೂ ಶಬ್ದಕೋಶದ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಇವರು ಸರ್ವನಾಮಗಳ ಕುರಿತು ಬರೆದ "ಪ್ರೊನೌನ್ಸ್" ಎಂಬ ಪುಸ್ತಕವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದೆ. ನಿವೃತ್ತಿಯ ನಂತರ ಕನ್ನಡ ವ್ಯಾಕರಣದ ಬಗ್ಗೆ ಸಂಪೂರ್ಣವಾಗಿ ಗಮನ ಹರಿಸಿರುವ ಶಂಕರಭಟ್ಟರು "ಕನ್ನಡ ಸರ್ವನಾಮಗಳು", "ಕನ್ನಡ ಶಬ್ದರಚನೆ", ಮುಂತಾದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಕನ್ನಡ ವ್ಯಾಕರಣದ ಕುರಿತು ನಿಲುವು

[ಮೂಲವನ್ನು ಸಂಪಾದಿಸು]

ಕನ್ನಡದ ಬರಹ ಸಾಮಾನ್ಯ ಜನರ ಮಾತಿನಿಂದ ಬೇರೆ ಆಗುತ್ತಿದೆ. ಇದರಿಂದ ಬರಹ ಕಲಿಯುವವರಿಗೆ ಕಷ್ಟವಾಗುತ್ತಿದೆ. ಕನ್ನಡಿಗರ ಉಚ್ಚಾರಣೆಯಲ್ಲಿ ಮಹಾಪ್ರಾಣ ವ್ಯಂಜನಗಳು, ಋಕಾರ, ಷಕಾರ, ವಿಸರ್ಗ ಮೊದಲಾದವುಗಳು ಕಾಣಿಸುವುದಿಲ್ಲ []ಎಂದು ಪ್ರತಿಪಾದಿಸುವ ಭಟ್ಟರು, ಸಂಸ್ಕೃತ ಪದಗಳನ್ನು 2 ಸಾವಿರ ವರ್ಷಗಳ ಹಿಂದೆ ಹೇಗಿದ್ದಿತೋ ಹಾಗೆಯೇ ಬರೆಯುವುದು ಕುರುಡು ಅನುಕರಣೆಯೆಂದು ಮಹಾಪ್ರಾಣ ಅಕ್ಷರಗಳನ್ನು ಕನ್ನಡಕ್ಕೆ ಒಗ್ಗುವಂತೆ ಅಲ್ಪಪ್ರಾಣಗಳಾಗಿ ಬರೆಯುವಂತೆ ಕೆಲವು ಲಿಪಿ ಮಾರ್ಪಾಡುಗಳನ್ನು ಮುಂದಿಟ್ಟಿದ್ದಾರೆ. ಹಾಗೆಯೇ, ಬರಹಗನ್ನಡದಲ್ಲಿ ಎರವಲು ಪದಗಳನ್ನು ಮಿತಿಯಲ್ಲಿಟ್ಟು ಕನ್ನಡದ್ದೇ ಆದ ಪದಗಳನ್ನು ಬಳಕೆಗೆ ತರುವ ನಿಟ್ಟಿನಲ್ಲಿ "ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು" ಹಾಗೂ "ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು" ಎಂಬ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.[] ಅವರು ಮಾರ್ಪಡಿಸಿದ ಹೊಸಬರಹವು "ಎಲ್ಲರ ಕನ್ನಡ" ಎಂದು ಗುರುತಿಸಲ್ಪಟ್ಟಿದೆ.

ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು ಕನ್ನಡ ವ್ಯಾಕರಣ ಎಂದು ಕರೆಯುತ್ತಾ ಬಂದಿದ್ದಾರೋ, ಅದು ನಿಜಕ್ಕೂ ಕನ್ನಡ ವ್ಯಾಕರಣವೇ ಅಲ್ಲ. ಸಂಸ್ಕ್ರತ ವ್ಯಾಕರಣದ ಕಟ್ಟಲೆಗಳನ್ನು ಕನ್ನಡದಲ್ಲಿ ಕಾಣಲು ನಡೆಸಿದ ವ್ಯರ್ಥ ಪ್ರಯತ್ನ ಮಾತ್ರ[] ಎಂದೆನ್ನುವ ಶಂಕರಭಟ್ಟರು ಈ ಕುರಿತು "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ", "ಕನ್ನಡ ಸೊಲ್ಲರಿಮೆ", ಮುಂತಾದ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.

ಶಂಕರಭಟ್ಟರು ೨೮ಕ್ಕೂ ಹೆಚ್ಚಿನ ಪುಸ್ತಕಗಳನ್ನು ಹಾಗೂ ೧೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ. ಕೆಳಗಿನದು ಅವರ ಕೃತಿಗಳ ಅಪೂರ್ಣ ಪಟ್ಟಿ.

  • ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು, ಬಿ.ಮಂಚಾಲೆ, ಸಾಗರ, ೨೦೧೭
  • ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು, ಬಾಶಾ ಪ್ರಕಾಶನ, ಹೆಗ್ಗೋಡು, ೨೦೦೯
  • ಮಾತಿನ ಒಳಗುಟ್ಟು, ಬಾಶಾ ಪ್ರಕಾಶನ, ಹೆಗ್ಗೋಡು, ೨೦೦೯
  • ಕನ್ನಡ ನುಡಿ ನಡೆದು ಬಂದ ದಾರಿ, ಬಾಶಾ ಪ್ರಕಾಶನ, ಹೆಗ್ಗೋಡು, ೨೦೦೭
  • ಕನ್ನಡ ಬರಹವನ್ನು ಸರಿಪಡಿಸೋಣ, ಬಾಶಾ ಪ್ರಕಾಶನ, ಮಯ್ಸೂರು, ೨೦೦೫
  • ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?, ಬಾಶಾ ಪ್ರಕಾಶನ, ಮಯ್ಸೂರು, ೨೦೦೫
  • Pronouns: A Cross Linguistic Study, Oxford, Oxford University Press, ೨೦೦೪
  • ಕನ್ನಡ ವಾಕ್ಯಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, ೨೦೦೪
  • ಕನ್ನಡ ಸರ್‍ವನಾಮಗಳು, ಬಾಶಾ ಪ್ರಕಾಶನ, ಮಯ್ಸೂರು, ೨೦೦೩
  • ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಬಾಶಾ ಪ್ರಕಾಶನ, ಮಯ್ಸೂರು, ೨೦೦೦
  • Introducing grammatical notions, University of Pune, Pune, ೨೦೦೦
  • The prominence of tense, aspect and Mood: a new basis for language typology, John Benjamins, Amsterdam, ೧೯೯೯.
  • ಕನ್ನಡ ಶಬ್ದರಚನೆ, ಕ್ರಯ್ಸ್ತ ಕಾಲೇಜು, ಕನ್ನಡ ಸಂಗ, ಬೆಂಗಳೂರು, ೧೯೯೯. ತಿದ್ದಿದ ಮುಂದಿನ ಒಬ್ಬೆ: ಕನ್ನಡ ಪದಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, ೨೦೦೨.
  • Manipuri grammar (written jointly with M.S. Ningomba), Lincom Europa, Munich, ೧೯೯೭
  • The adjectival category, John Benjamins, Amsterdam, ೧೯೯೪
  • Grammatical relations, Routledge, London, ೧೯೯೧. Reprinted by Bejing World Publishers, Bejing in ೧೯೯೨.
  • An introduction to linguistics, Teachers’ Forum, Imphal. ೧೯೮೬
  • Identification, Dravidian Linguistics Association, Trivandrum, ೧೯೮೧
  • Referents of noun phrases, Deccan College, Pune, ೧೯೭೯
  • ಕನ್ನಡ ವಾಕ್ಯಗಳು, ಗೀತಾ ಬುಕ್ ಹವ್ಸ್, ಮಯ್ಸೂರು, ೧೯೭೮
  • Pronominalization, Deccan College, Pune, ೧೯೭೮
  • Sound change, Bhasha Prakashan, Pune, ೧೯೭೨, Revised edition, published by Motilal Banarsidass, New Delhi, ೧೯೯೯.
  • The Koraga language, Deccan College, Pune, ೧೯೭೧
  • Outline grammar of Havyaka, Deccan College, Pune, ೧೯೭೧
  • ಭಾಷೆಯ ಬಗೆಗೆ ನೀವೇನು ಬಲ್ಲಿರಿ?, ಬಾಶಾ ಪ್ರಕಾಶನ, ಪುಣ, ೧೯೭೦, ತಿದ್ದಿದ ಎರಡನೆ ಒಬ್ಬೆ: ಕನ್ನಡ ಸಂಗ, ಪುತ್ತೂರು, ೧೯೯೮; ತಿದ್ದಿದ ಮೂರನೆ ಒಬ್ಬೆ: ಬಾಶಾ ಪ್ರಕಾಶನ, ೨೦೦೨.
  • ಕನ್ನಡ ಭಾಷೆಯ ಸಂಕ್ಷಿಪ್ತ ಚರಿತ್ರೆ, ಭಾಷಾ ಪ್ರಕಾಶನ, ಪುಣೆ, ೧೯೭೦; ತಿದ್ದಿದ ಒಬ್ಬೆ: ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೫.
  • Tankhur Naga vocabulary, Deccan College, Pune, ೧೯೬೯
  • Boro grammar and vocabulary, Deccan College, Pune, ೧೯೬೮
  • Descriptive analysis of Tulu, Deccan College, Pune, ೧೯೬೭

ಪ್ರಶಸ್ತಿ ಹಾಗೂ ಗೌರವಗಳು

[ಮೂಲವನ್ನು ಸಂಪಾದಿಸು]
  • ಡಿ.ಎನ್.ಶಂಕರ ಬಟ್ (ಈ ಪುಟದಲ್ಲಿ ಲೇಖನದ- ಬರಹ ಶಂಕರ ಭಟ್ಟರು ಮುಂದಿಟ್ಟಿರುವ "ಹೊಸಬರಹ"ದಲ್ಲಿದೆ)
  1. 1 2 "ಡಾ. ಡಿ. ಎನ್. ಶಂಕರ ಬಟ್". Retrieved 2025-12-26.
  2. 1 2 ಕನ್ನಡ ಕಸುವಿನ ಕ್ರಾಂತಿಕಾರಿಗೆ ಪಂಪ ಸಮ್ಮಾನ, ವಿಜಯ ಕರ್ನಾಟಕ, ೧೮ ಡಿಸೆಂಬರ್, ೨೦೧೩
  3. "ಎಲ್ಲರ ಕನ್ನಡ: ಯಾವುದು ಕನ್ನಡ ವ್ಯಾಕರಣ?". Vijay Karnataka. Retrieved 2025-12-26.
  4. ಶಂಕರ ಭಟ್‌ಗೆ ಪಂಪ ಪ್ರಶಸ್ತಿ Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಜಾವಾಣಿ, ೧೮ ಡಿಸೆಂಬರ್, ೨೦೧೩

ಹೊರಕೊಂಡಿಗಳು

[ಮೂಲವನ್ನು ಸಂಪಾದಿಸು]