ಪಾಟೀಲ ಪುಟ್ಟಪ್ಪ

ವಿಕಿಪೀಡಿಯ ಇಂದ
Jump to navigation Jump to search

ನಾಡೋಜ ಪಾಟೀಲ ಪುಟ್ಟಪ್ಪ ಹುಬ್ಬಳ್ಳಿ ಮೂಲದ ಖ್ಯಾತ ಲೇಖಕರು. ಇವರು 'ಪ್ರಪಂಚ' ಪತ್ರಿಕೆಯ ಸ್ಥಾಪಕ ಸಂಪಾದಕರು.

ಪಾಟೀಲ ಪುಟ್ಟಪ್ಪ ಜನಿಸಿದ್ದು ೧೯೨೧ ಜನೆವರಿ ೧೪ರಂದು, ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ. ಓದಿದ್ದು ಕುರುಬಗೊಂಡ,ಬ್ಯಾಡಗಿ, ಹಾವೇರಿ, ಧಾರವಾಡ‍ದಲ್ಲಿ. ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ.

ಮುಂಬಯಿಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ. ೧೯೪೫ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದರು ಪುಟ್ಟಪ್ಪ. ೧೯೪೯ರಲ್ಲಿ ಕೆಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ‍ದಲ್ಲಿ ಸ್ನಾತಕೋತ್ತರ ಪದವಿ. ಅಮೆರಿಕೆಯಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ. ೧೯೫೪ರಲ್ಲಿ ಪ್ರಪಂಚ ಪತ್ರಿಕೆಯ ಸ್ಥಾಪನೆ.

೧೯೬೨‍ರಿಂದ ೧೯೭೪‍ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ೧೯೪೨‍ರ ಅಗಸ್ಟ ೯ರಂದು ಕಾಲೇಜಿನ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧಿ ಟೊಪ್ಪಿಗೆ ಹಾಕಿದ್ದರು

ಪುಟ್ಟಪ್ಪನವರ ಕೃತಿಗಳು[ಬದಲಾಯಿಸಿ]

  • ನಮ್ಮ ದೇಶ ನಮ್ಮ ಜನ
  • ನನ್ನದು ಈ ಕನ್ನಡ ನಾಡು
  • ಕರ್ನಾಟಕದ ಕಥೆ
  • ಪಾಪು ಪ್ರಪಂಚ
  • ಶಿಲಾಬಾಲಿಕೆ ನುಡಿದಳು
  • ಗವಾಕ್ಷ ತೆರೆಯಿತು
  • ಸಾವಿನ ಮೇಜವಾನಿ