ಪ್ರಪಂಚ (ಪತ್ರಿಕೆ)

ವಿಕಿಪೀಡಿಯ ಇಂದ
Jump to navigation Jump to search

ಪ್ರಪಂಚ, ಕನ್ನಡದ ಪ್ರಮುಖ ವಾರ ಪತ್ರಿಕೆಗಳಲ್ಲೊಂದು. ಹುಬ್ಬಳ್ಳಿಯ ಕನ್ನಡದ ಖ್ಯಾತ ಲೇಖಕರಾದ ಪಾಟೀಲ ಪುಟ್ಟಪ್ಪ ನವರು ಇದರ ಸ್ಥಾಪಕ ಸಂಪಾದಕರು.ಪ್ರಪಂಚ ವಾರಪತ್ರಿಕೆ ೧೯೫೪ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭವಾಯಿತು.ಸ್ವಾತಂತ್ರ್ಯಾನಂತರ ಪ್ರಾರಂಭವಾದ ಮುಂಬಯಿ-ಕರ್ನಾಟಕದ ವಾರಪತ್ರಿಕೆಗಳಲ್ಲಿ ಪ್ರಮುಖವಾದುದು.ಇದರ ಸ್ಥಾಪಕ ಸಂಪಾದಕರಾದ ಪಾಟೀಲ ಪುಟ್ಟಪ್ಪನವರು ಅಮೆರಿಕದಲ್ಲಿ ಪತ್ರಿಕೋದ್ಯಮದಲ್ಲಿ ಪ್ರೌಢ ವ್ಯಾಸಂಗ ಮಾಡಿ ,ಪತ್ರಿಕೋದ್ಯಮದಲ್ಲಿ ಎಂಎಸ್‌ಸಿ ಡಿಗ್ರಿ ಸಂಪಾದಿಸಿ,ಹಿಂದಿರುಗಿ ಬಂದು ಈ ಪತ್ರಿಕೆಯನ್ನು ಪ್ರಾರಂಭಿಸಿದರು.