ಪತ್ರಿಕೋದ್ಯಮ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಪತ್ರಿಕೋದ್ಯಮವು[೧] ವಾರ್ತೆಗಳನ್ನು ಸಂಗ್ರಹಿಸಿ ಜನಸಮೂಹಕ್ಕೆ ಪ್ರಸರಿಸುವ ಕಾಯಕಗಳು. ಈ ಮಾಹಿತಿಯನ್ನು ಪತ್ರಿಕೆಗಳು, ಆಕಾಶವಾಣಿ, ದೂರದರ್ಶನ, ಅಂತರ್ಜಾಲ ಇತ್ಯಾದಿ ಮಾಧ್ಯಮಗಳಲ್ಲಿ ಪ್ರಸರಿಸಲಾಗಬಹುದು. ಸರ್ಕಾರ ಮೂಲಗಳಿಂದ ,ಹಾಗೂ ಸರ್ಕಾರೇತರ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಪರಿಷ್ಕರಿಸಿದ ನಂತರ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತದೆ. "ಪತ್ರಿಕೆಗಳಿಗೆ ಸುದ್ದಿಗಳೇ ಜೀವಾಳ" ಸುದ್ದಿಗಳಿಲ್ಲದ ಪತ್ರಿಕೆಗಳನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ.ಉತ್ತಮ ರಾಷ್ಟ್ರ, ಹಾಗೂ ಸಮಾಜಗಳನ್ನು ನಿರ್ಮಿಸಲು ಪತ್ರಿಕೆಗಳು,ದೂರದರ್ಶನ ಮಾಧ್ಯಮ,ಶ್ರವ್ಯ ಮಾಧ್ಯಮ, ತನ್ನದೇ ಆದ ಕರ್ತವ್ಯವನ್ನು ನಿಭಾಯಿಸುತ್ತಿದೆ. ಪತ್ರಿಕೆ ಎಂದರೇ ಕೇವಲ ಸುದ್ದಿ ಸಮಾಚಾರಗಳನ್ನು ನೀಡುವ ಮದ್ಯಮವಲ್ಲಾ . ಜನರಿಗೆ ಶಿಕ್ಷಣ , ಮನೋರಂಜನೆ, ಜಾಗೃತಿ, ಪ್ರೇರೇಪಿಸುವ ವಿಚಾರಗಳಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ಹಾಗೆಯೇ ಸಾರ್ವಜನಿಕರಿಂದ ಯಾವದೇ ಲಾಭಗಳನ್ನು ಅಪೇಷ್ಕಿಸದೇ ಕಾರ್ಯವನ್ನು ನಿರ್ವಹಿಸುತ್ತಿದೆ. ಪ್ರತಿಯೊಂದು ಪತ್ರಿಕೆಗಳು ತಮ್ಮದೇ ಆದ ಜವಾಬ್ದಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುತ್ತದೆ. ಪ್ರಸ್ತುತದ ದಿನಗಳಲ್ಲಿ ಪತ್ರಿಕೆಗಳು ಮತ್ತು ವಿದ್ಯುದ್ಮನ ಮಾಧ್ಯಮಗಳು ಬಹಳಷ್ಟು ಸದ್ದು ಮಾಡುತ್ತಿವೆ. ಜನರ ಸಮಸ್ಯೆಗಳಿಗೆ ಓಗೊಟ್ಟು ಸೂಕ್ತ ಪರಿಹಾರ/ನ್ಯಾಯ ದೊರಕಿಸಿಕೊಡುವಂಥಹ ಕೆಲಸ ಮಾಡುತಿವೆ. thumb|left|ಕರ್ನಾಟಕದ ಪತ್ರಿಕೆ ವಿಜಯವಾಣಿಉಲ್ಲೇಖ[ಬದಲಾಯಿಸಿ]

     ಪತ್ರಿಕೆಗಳು ಜನಾದರಣೀಯ ಮಾಧ್ಯಮ

    ಪತ್ರಿಕೋದ್ಯಮ ಎಂಬುದು ಪ್ರತಿ ಹಳ್ಳಿ, ಗ್ರಾಮ, ಜಿಲ್ಲೆ, ರಾಜ್ಯ, ದೇಶ ಹಾಗು ಅಂತರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು  ಪ್ರತಿ ಜನರಿಗೂ ತಲುಪಿಸಬೇಕೆನ್ನುವ ಉದ್ದೇಶದಿಂದ ಆರಂಭವಾದ ಮುದ್ರಣ ಮಾಧ್ಯಮವಾಗಿದೆ. ಶತಮಾನದ ಹಿಂದೆ ಪಾಶ್ಚಾತ್ಯರಿಂದ ಕರ್ನಾಟಕದಲ್ಲಿ ಪರಿಚಿತವಾಯಿತು ಪತ್ರಿಕಾರಂಗ. ಜರ್ಮನ್ ನ ಮತಪ್ರಚಾರಕನಾದ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್ ರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ ಎಂದು ಗುರುತಿಸಲಾಗುತ್ತದೆ. 1843 ರಲ್ಲಿ ಜುಲೈ 1 ರಂದು #ಮಂಗಳೂರು_ಸಮಾಚಾರ ಎಂಬ ನಾಲ್ಕು ಪುಟಗಳ ಪತ್ರಿಕೆಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಹೊರತಂದ. ಈ ಹಿನ್ನಲೆಯಲ್ಲಿ  ಜುಲೈ ತಿಂಗಳ ಮೊದಲ ದಿನವನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ಕರ್ನಾಟಕದ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಸಂಸ್ಥೆ ಆರಂಭಿಸಿದ ಪತ್ರಿಕೋದ್ಯಮ, ಇಂದು ದಿನಪತ್ರಿಕೆ, ವಾರಪತ್ರಿಕೆ, ಎಂಬ ಹೆಸರಿನಲ್ಲಿ ಪ್ರತಿ ಸುದ್ದಿಗಳನ್ನು ಜನಮನಕ್ಕೆ ತಲುಪಿಸುವಲ್ಲಿ ಸಫಲವಾಗಿದೆ. ಮಾನವನ ಬೆಳವಣಿಗೆಯಲ್ಲಿ ಮುದ್ರಣ ಮಾಧ್ಯಮ ಮಹತ್ತರವಾದ ಬದಲಾವಣೆಗಳನ್ನು ತಂದಿರುವುದಲ್ಲದೆ, ಜನರಲ್ಲಿ ಜ್ಞಾನದ ಅರಿವನ್ನು ಮೂಡಿಸಿದವು. ಇಂದು ಪತ್ರಿಕೋದ್ಯಮವು ಹಲವಾರು ಬದಲಾವಣೆಗಳನ್ನು ಕಂಡಿದೆ. ಮುದ್ರಣ ಆಧಾರಿತ ಪತ್ರಿಕೋದ್ಯಮ ಇಂದು ಆನ್ಲೈನ್ ಸೆಳೆತಕ್ಕೆ ಒಳಗಾಗುತ್ತಿದೆ. ತಂತ್ರಜ್ಞಾನದ ಮಹಿಮೆಯಿಂದ ಪತ್ರಿಕೆಗಳ ವ್ಯಾಮೋಹ ಜನರಲ್ಲಿ ಕಡಿಮೆಯಾಗಿದೆ.

ಬೆಳಗ್ಗಿನ ಜಾವದಲ್ಲಿ ಚಹಾದೊಡನೆ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡವರಲ್ಲಿ ಪ್ರತಿಕ್ರಿಯೆ ಕೇಳಿದಲ್ಲಿ ಅವರ ಅನುಭವ ಕೇಳುವುದೇ ಒಂದು ಚಂದ. ಹಿತವಾದ ಸ್ಪರ್ಷದೊಡನೆ ಇಂಚಿಂಚೂ ಪತ್ರಿಕೆಯನ್ನು ಓದುವ ಪರಿಪಾಟಲು ಇರುವವರಿಗೆ , ಒಂದು ದಿನದ ಪತ್ರಿಕೆ ಸಿಗದಿದ್ದರೆ ಅಂದಿನ ಅವರ ಕಾರ್ಯಕಲಾಪಗಳೇ ಸರಿಯಾಗಿ‌ ನಡೆಯದೆನ್ನುವವರನ್ನೂ ನಾವು ಕಾಣುತ್ತೇವೆ. ಪತ್ರಿಕೆಗಳನ್ನು ಓದುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುವುದು ಎನ್ನುವುದು ಹಿರಿಯರ ಉವಾಚ ಇದು ಸತ್ಯವೂ ಹೌದು. ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗ ಮಾಹಿತಿ, ಹೀಗೆ  ಸಾಮಾಜಿಕವಾಗಿ ಸಹಾಯಕವಾಗುವಂತೆ ಪತ್ರಿಕೆಗಳು ಅಚ್ಚಾಗುತ್ತವೆ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅಮೋಘ ರೀತಿಯಲ್ಲಿ ಸಹಾಯಕವಾಗಿರುವ ಪತ್ರಿಕೆಗಳು ಬರಹಗಾರರನ್ನು ಪ್ರೋತ್ಸಾಹಿಸುವ ಮುಖ್ಯ ಮಾಧ್ಯಮವಾಗಿ ರೂಪುಗೊಂಡಿದೆ. ಹೊಸ ಹೊಸ ಬರಹಗಾರರು, ಓದುವ ಅಭಿರುಚಿ ಇರುವವರು, ಸಾಹಿತ್ಯ ಕ್ಷೇತ್ರ, ಚಿತ್ರಕಥೆ,ಸುದ್ದಿ,ಅಂಕಣ,ಸಂಪಾದಕೀಯ,ಧಾರವಾಹಿ, ಜಾಹೀರಾತು,ಪದಬಂಧ,ರಾಜಕೀಯ,ಕ್ರೀಡೆ,ಭವಿಷ್ಯ, ಹೀಗೆ ಹತ್ತು ಹಲವು ರೀತಿಯಲ್ಲಿ ಸೃಜನಶೀಲವಾಗಿ ತಯಾರಾಗುವ ಪತ್ರಿಕೆಗಳು ಒಂದಷ್ಟು ಉದ್ಯೋಗ ಸೃಷ್ಟಿಗೂ ಕಾರಣವಾಗಿ, ಆಸಕ್ತರಿಗೆ ಉದ್ಯೋಗದ ಬಾಗಿಲನ್ನೂ ತೆರೆದಿದೆ.
ವಾರ್ತೆಗಳನ್ನು ಸಂಗ್ರಹಿಸಿ ಜನಸಮೂಹಕ್ಕೆ ಪ್ರಸಾರ ಮಾಡುವ ಕಾಯಕವೇ ಪತ್ರಿಕೋದ್ಯಮದ ಉನ್ನತ ಧ್ಯೇಯವಾಗಿದೆ.. ಪತ್ರಿಕೆ, ಆಕಾಶವಾಣಿ,ದೂರದರ್ಶನ, ಅಂತರ್ಜಾಲ ಹೀಗೆ ಸರ್ಕಾರ ಹಾಗು ಸರ್ಕಾರೇತರ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಪರಿಷ್ಕರಿಸಿದ ನಂತರ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ.

ಪತ್ರಿಕೆಗಳಿಗೆ ಮುಖ್ಯವಾದುದೆಂದರೆ ಸುದ್ದಿಗಳು. ಜಾಗೃತಿ,ಮನೋರಂಜನೆ,ಶಿಕ್ಷಣ ಹೀಗೆ ನಿಸ್ವಾರ್ಥ ಮನೋಭಾವದಿಂದ ಜನರ ಮನಗೆಲ್ಲುವ ಮಾಧ್ಯಮವಾಗಿ ಸಮಾಜದ ಏಳಿಗೆಗಾಗಿ ಸದಾ ಶ್ರಮಿಸುವ ಪತ್ರಿಕಾ ಮಾಧ್ಯಮವು ಕರ್ನಾಟಕದಲ್ಲಿ ಕನ್ನಡ ಭಾಷೆಯ ಉಳಿವಿಗೂ ಒಂದರ್ಥದಲ್ಲಿ ಕಾರಣವಾಗಿದೆ ಎಂದರೆ ಅಲ್ಲಗಳೆಯುವಂತಿಲ್ಲ. ಸಾಮಾಜಿಕವಾಗಿ, ಸಾರ್ವಜನಿಕವಾಗಿ, ಸರ್ಕಾರದಿಂದ ಆಗಬೇಕಾದಂತಹ ಕೆಲಸ ಕಾರ್ಯಗಳ ಕುರಿತು ಸರ್ಕಾರದ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವ ಪತ್ರಿಕೆಗಳನ್ನು ಜನಾದರಣೀಯ ಮಾಧ್ಯಮ ಎನ್ನಬಹುದು.

✒️ಚಂದನ್ ನಂದರಬೆಟ್ಟು.