ವಿಷಯಕ್ಕೆ ಹೋಗು

ಕಮಲಾ ಹಂಪನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಮಲಾ ಹಂಪನಾ
೨೦೧೭ ರಲ್ಲಿ ಕಮಲಾ
ಜನನ(೧೯೩೫-೧೦-೨೮)೨೮ ಅಕ್ಟೋಬರ್ ೧೯೩೫
ದೇವನಹಳ್ಳಿ, ಬೆಂಗಳೂರು, ಮೈಸೂರು ಸಾಮ್ರಾಜ್ಯ, ಬ್ರಿಟಿಷ್ ಇಂಡಿಯಾ
ಮರಣJune 22, 2024(2024-06-22) (aged 88)
ಬೆಂಗಳೂರು
ಕಾವ್ಯನಾಮಕಮಲಾ ಪ್ರಿಯಾ
ವೃತ್ತಿಬರಹಗಾರ್ತಿ, ಪ್ರಾಧ್ಯಾಪಕಿ
ಭಾಷೆಕನ್ನಡ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಪ್ರಕಾರ/ಶೈಲಿಕವನ
ಸೃಜನಶೀಲ
ವಿಮರ್ಶೆ
ಜೀವನಚರಿತ್ರೆ
ಪ್ರಮುಖ ಕೆಲಸ(ಗಳು)ತುರಂಗಭಾರತ, ಅನೇಕಾಂತವಾದ, ಜೈನಸಾಹಿತ್ಯ ಪರಿಸರ
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
ಬಾಬಾ ಆಮ್ಟೆ ಪ್ರಶಸ್ತಿ
ನಾಡೋಜ ಪ್ರಶಸ್ತಿ
ಬಾಳ ಸಂಗಾತಿಹಂಪ ನಾಗರಾಜಯ್ಯ
ಮಕ್ಕಳು

ಕಮಲಾ ಹಂಪನಾ ಅವರು ಕನ್ನಡದ ಲೇಖಕರು. ಅವರು ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಪ್ರಾಚೀನ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲ ಪ್ರಕಾರಗಳಲ್ಲೂ ಕೊಡುಗೆಗಳನ್ನು ನೀಡಿದ್ದಾರೆ.

ಜನನ, ಅಧ್ಯಯನ

[ಬದಲಾಯಿಸಿ]

ಕಮಲಾ ಹಂಪನಾ ಅವರು, ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್-ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ ೨೮-೧೦-೧೯೩೫ರಲ್ಲಿ ಜನಿಸಿದರು. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ೧೯೫೩ರಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರಿದು ೧೯೫೫-೫೮ರಲ್ಲಿ ಬಿ.ಎ. ಆನರ್ಸ್ ಮಾಡಿದರು. ೧೯೫೯ರಲ್ಲಿ ಕನ್ನಡ ಅಧ್ಯಾಪಕಿಯಾಗಿ ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.

ಹಂ.ಪ.ನಾಗರಾಜಯ್ಯನವರು ಇವರ ಪತಿ. ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಅವರ ಸಂಶೋಧನೆಗಳು ಅವರಿಗೆ ಗೌರವಗಳನ್ನು ತಂದುಕೊಟ್ಟಿವೆ. ಜೈನ ಕೃತಿಗಳನ್ನು ಕುರಿತು ಆಳವಾದ ವಿವೇಚನೆಯನ್ನು ಒಳನೋಟವನ್ನು ಅವರು ತಮ್ಮ ಬರಹಗಳಲ್ಲಿ ಹೊಮ್ಮಿಸಿದ್ದಾರೆ.[]

೮೯ ವರ್ಷಗಳ ತುಂಬು ಜೀವನ ನಡೆಸಿದ ಕಮಲಾ ಹಂಪನಾ ಅವರು ೨೦೨೪ರ ಜೂನ್‌ ೨೨ರಂದು ಬೆಂಗಳೂರಿನಲ್ಲಿ ನಿಧನರಾದರು.[]

ಸಾಹಿತ್ಯ ಕೃತಿಗಳು

ಕೃತಿಗಳು

[ಬದಲಾಯಿಸಿ]

ಕಥಾಸಂಕಲನ

[ಬದಲಾಯಿಸಿ]
  1. ನಕ್ಕಿತು ಹಾಲಿನ ಬಟ್ಟಲು
  2. ರೆಕ್ಕೆ ಮುರಿದಿತ್ತು
  3. ಚಂದನಾ
  4. ಬಣವೆ

ಸಂಶೋಧನೆ

[ಬದಲಾಯಿಸಿ]
  1. ತುರಂಗಭಾರತ - ಒಂದು ಅಧ್ಯಯನ
  2. ಶಾಂತಿನಾಥ
  3. ಆದರ್ಶ ಜೈನ ಮಹಿಳೆಯರು
  4. ಅನೇಕಾಂತವಾದ
  5. ನಾಡು ನುಡಿ ನಾವು
  6. ಜೈನ ಸಾಹಿತ್ಯ ಪರಿಸರ
  7. ಬದ್ದವಣ
  8. ರೋಣದ ಬಸದಿ

ವಿಮರ್ಶೆ-ವೈಚಾರಿಕ

[ಬದಲಾಯಿಸಿ]
  1. ಬಾಸಿಂಗ
  2. ಬಾಂದಳ
  3. ಬಡಬಾಗ್ನಿ
  4. ಬಿತ್ತರ
  5. ಬೊಂಬಾಳ
  6. ಗುಣದಂಕಕಾರ್ತಿ ಅತ್ತಿಮಬ್ಬೆ
  7. Attimabbe and Chalukyas

ಸಂಪಾದನೆ

[ಬದಲಾಯಿಸಿ]
  1. ಸುಕುಮಾರ ಚರಿತೆಯ ಸಂಗ್ರಹ
  2. ಭರತೇಶ ವೈಭವ
  3. ಕೆ.ಎಸ್.ಧರಣೇಂದ್ರಯ್ಯನವರ ಸ್ಮೃತಿಗ್ರಂಥ
  4. ಶ್ರೀ ಪಚ್ಚೆ
  5. ಸಹಸ್ರಾಭಿಷೇಕ
  6. ಚಾವುಂಡರಾಯ ಪುರಾಣ
  7. ಡಾ.ಡಿ.ಎಲ್.ನರಸಿಂಹಾಚಾರ್ ರ ಆಯ್ದ ಲೇಖನಗಳು
  8. ಹಳೆಯ ಗದ್ಯ ಸಾಹಿತ್ಯ
  9. ದಾನಚಿಂತಾಮಣಿ - ಸ್ಮರಣಸಂಚಿಕೆ
  10. ಜೈನ ಧರ್ಮ
  11. ಸುವರ್ಣ ಭಾರತಿ, ಸಂಪುಟ - ೩
  12. ಜೈನಕಥಾಕೋಶ (ಸಹ ಸಂಪಾದಕಿ)
  13. ಷೋಡಶ ಭಾವನಾ ಕಾವ್ಯ

ಜೀವನ ಪರಿಚಯ

[ಬದಲಾಯಿಸಿ]
  1. ಮಹಾವೀರರ ಜೀವನ ಸಂದೇಶ
  2. ಮುಡಿಮಲ್ಲಿಗೆ
  3. ಆ ಮುಖ

ವಚನ ಸಂಕಲನ

[ಬದಲಾಯಿಸಿ]
  1. ಬಿಂದಲಿ
  2. ಬುಗುಡಿ

ಶಿಶು ಸಾಹಿತ್ಯ

[ಬದಲಾಯಿಸಿ]
  1. ಅಕ್ಕ ಮಹಾದೇವಿ
  2. ಹೆಳವನಕಟ್ಟೆ ಗಿರಿಯಮ್ಮ
  3. ವೀರವನಿತೆ ಓಬವ್ವ
  4. ಜನ್ನ
  5. ಚಿಕ್ಕವರಿಗಾಗಿ ಚಿತ್ರದುರ್ಗ
  6. ಡಾ.ಬಿ.ಆರ್.ಅಂಬೇಡ್ಕರ್
  7. ಮುಳುಬಾಗಿಲು
  8. ಮಕ್ಕಳೊಡನೆ ಮಾತುಕತೆ

ಅನುವಾದ

[ಬದಲಾಯಿಸಿ]
  1. ಬೀಜಾಕ್ಷರ ಮಾಲೆ(ಸರಸ್ವತಿ ಬಾಯಿಗಿರಿಯವರು ತೆಲುಗಿನಲ್ಲಿ ಬರೆದಿರುವ ೬೫ ಪದ್ಯಗಳ ಭಾವಾನುವಾದ)
  2. ಜಾತಿ ನಿರ್ಮೂಲನೆ (ಡಾ.ಅಂಬೇಡಕರರವರ Annihilation of caste ಕೃತಿಯ ಅನುವಾದ)
  3. ಭಾರತದಲ್ಲಿ ಜಾತಿಗಳು
  4. ಏಷಿಯಾದ ಹಣತೆಗಳು
  5. ಜಾತಿಮೀಮಾಂಸೆ

ಆಕಾಶವಾಣಿ ನಾಟಕ - ರೂಪಕಗಳು

[ಬದಲಾಯಿಸಿ]
  1. ಬಕುಳ
  2. ಬಾನಾಡಿ
  3. ಬೆಳ್ಳಕ್ಕಿ

ಕಾದಂಬರಿ

[ಬದಲಾಯಿಸಿ]
  1. ಶರ್ಮಿಳಾ

ಗೌರವ ಪುರಸ್ಕಾರ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. http://kannadasahithyaparishattu.in/?p=623 ೭೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು; ಕಮಲಾ ಹಂಪನಾ
  2. "ಸಾಹಿತಿ ಕಮಲಾ ಹಂಪನಾ ನಿಧನ". 23 Jun 2024. {{cite web}}: |first= missing |last= (help)