ಕನ್ನಡ ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
Jump to navigation Jump to search
ಕನ್ನಡ ವಿಶ್ವವಿದ್ಯಾಲಯ
ಕನ್ನಡ ವಿಶ್ವವಿದ್ಯಾಲಯ
ಸ್ಥಾಪನೆ೧೯೯೧
ಪ್ರಕಾರಸಾರ್ವಜನಿಕ
ಉಪಕುಲಪತಿಗಳುಮಲ್ಲಿಕಾ ಘಂಟಿ
ಸಿಬ್ಬಂದಿ'-'
ವಿದ್ಯಾರ್ಥಿಗಳ ಸಂಖ್ಯೆ'-'
ಪದವಿ ಶಿಕ್ಷಣ'-'
ಸ್ನಾತಕೋತ್ತರ ಶಿಕ್ಷಣ'-'
ಡಾಕ್ಟರೇಟ್ ಪದವಿ'-'
ಇತರೆ'-'
ಆವರಣಗ್ರಾಮಾಂತರ
ಅಂತರ್ಜಾಲ ತಾಣwww.kannadauniversity.org
'ಮಾತೆಂಬುದು ಜ್ಯೋತಿರ್ಲಿಂಗ'


ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸ್ಥಾಪಿತವಾಗಿರುವ ವಿಶ್ವವಿದ್ಯಾನಿಲಯ. ಚಂದ್ರಶೇಖರ ಕಂಬಾರರು ಇದರ ಮೊದಲ ಕುಲಪತಿಗಳಾಗಿದ್ದರು. ಫ್ರೊ. ಎಂ. ಎಂ. ಕಲಬುರ್ಗಿಯವರು ಎರಡನೆಯ ಕುಲಪತಿಯಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಮಲ್ಲಿಕಾ ಘಂಟಿ ಅವರು ಕುಲಪತಿಯಾಗಿದ್ದಾರೆ. ಕರ್ನಾಟಕ ಹಾಗು ಕನ್ನಡದ ಬಗೆಗೆ ಸಂಶೋಧನೆ ನಡೆಸಲು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಎಲ್ಲ ರೀತಿಯ ಅರಿವು ಕನ್ನಡದಲ್ಲಿ ಸಿಗುವಂತಾಗಬೇಕು. ಹಾಗೆಯೇ ಕನ್ನಡ ಮತ್ತು ಕರ್ನಾಟಕದ ಬಗೆಗೆ ಬೇರೆ ಭಾಷೆಗಳಲ್ಲಿ ಅರಿವು ದೊರಕುವಂತೆ ಮಾಡುವುದು ಈ ವಿಶ್ವವಿದ್ಯಾಲಯದ ಉದ್ದೇಶ.

ವಿಶ್ವವಿದ್ಯಾಲಯದ ವೈಶಿಷ್ಟ್ಯ[ಬದಲಾಯಿಸಿ]

 • ಈ ವಿಶ್ವವಿದ್ಯಾಲಯದಲ್ಲಿ ವಿದ್ಯೆಯನ್ನು ಕಲಿಸುವುದಕ್ಕಿಂತ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಶೋಧನೆಯ ಫಲಿತಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತದೆ. ಇದುವರೆವಿಗೂ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಪುಸ್ತಕಗಳ ಸಂಖ್ಯೆ ಸಾವಿರವನ್ನು ದಾಟಿದೆ. ಈ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರವು ಕನ್ನಡದ ಶ್ರೇಷ್ಟ ಸಾಹಿತ್ಯ ಪಠ್ಯಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ ಪ್ರಕಟಿಸುತ್ತಿದೆ.
 • ಇದುವರೆವಿಗೂ ಮೂರು ಸಂಪುಟಗಳು ಡಾ. ತಾರಕೇಶ್ವರ್ ರವರ ಸಂಚಾಲಕತ್ವದಲ್ಲಿ ಹೊರಬಂದಿವೆ. ಇದಲ್ಲದೆ ಹಲವಾರು ವಿದ್ವತ್ ಪತ್ರಿಕೆಗಳನ್ನೂ ಪ್ರಕಟಿಸುತ್ತಿದೆ. ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್ ಎಂಬ ಇಂಗ್ಲಿಷ್ ಜರ್ನಲ್ ಕೂಡ ಪ್ರಕಟಿಸುತ್ತಿದೆ. ವಿಶ್ವವಿದ್ಯಾಲಯದ ಮೂಲ ಕೇಂದ್ರವು ಹಂಪಿಗೆ ೫ ಕಿ.ಮೀ. ದೂರದಲ್ಲಿ ಹೊಸಪೇಟೆಯಿಂದ ೧೬ ಕಿ.ಮೀ. ದೂರದಲ್ಲಿ ವಿದ್ಯಾರಣ್ಯ ಎಂಬ ೮೦೦ ಎಕರೆಗಳ ಆವರಣದಲ್ಲಿದೆ. ಇದಲ್ಲದೆ ಬಾದಾಮಿ, ಕುಪ್ಪಳಿ, ಕೂಡಲಸಂಗಮಗಳಲ್ಲಿ ಉಪಗ್ರಹ ಕೇಂದ್ರಗಳನ್ನು ಹೊಂದಿದೆ.

ವಿಶ್ವವಿದ್ಯಾಲಯದ ಸ್ವರೂಪ[ಬದಲಾಯಿಸಿ]

ಈ ವಿಶ್ವವಿದ್ಯಾಲಯದಲ್ಲಿ ಮೂರು ಅಂಗಗಳಿವೆ:

 1. ಅಧ್ಯಯನಾಂಗ
 2. ಆಡಳಿತಾಂಗ
 3. ಪ್ರಸಾರಾಂಗ

ವಿಶ್ವವಿದ್ಯಾಲಯದ ಮೂರು ನಿಕಾಯಗಳು[ಬದಲಾಯಿಸಿ]

 1. ಭಾಷಾ ನಿಕಾಯ,
 2. ಸಮಾಜ ವಿಜ್ಞಾನ ನಿಕಾಯ,
 3. ಲಲಿತಕಲಾ ನಿಕಾಯ

ಭಾಷಾ ನಿಕಾಯದಲ್ಲಿರುವ ವಿಭಾಗಗಳು[ಬದಲಾಯಿಸಿ]

 1. ಭಾಷಾಂತರ ಅಧ್ಯಯನ ವಿಭಾಗ
 2. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ
 3. ಕನ್ನಡ ಭಾಷಾಧ್ಯಯನ ವಿಭಾಗ
 4. ದ್ರಾವಿಡ ಸಂಸ್ಕೃತಿ ವಿಭಾಗ
 5. ಹಸ್ತಪ್ರತಿ ವಿಭಾಗ
 6. ಮಹಿಳಾ ಅಧ್ಯಯನ ವಿಭಾಗ

ಸಮಾಜ ವಿಜ್ಞಾನ ನಿಕಾಯದಲ್ಲಿರುವ ವಿಭಾಗಗಳು[ಬದಲಾಯಿಸಿ]

 1. ಪುರಾತತ್ವ ಮತ್ತು ಪ್ರಾಚೀನ ಇತಿಹಾಸ ವಿಭಾಗ
 2. ಚರಿತ್ರೆ ವಿಭಾಗ
 3. ಜಾನಪದ ಅಧ್ಯಯನ ವಿಭಾಗ
 4. ಬುಡಕಟ್ಟು ಅಧ್ಯಯನ ವಿಭಾಗ
 5. ಅಭಿವೃದ್ಧಿ ಅಧ್ಯಯನ್ ವಿಭಾಗ

ಲಲಿತಕಲಾ ನಿಕಾಯದಲ್ಲಿರುವ ವಿಭಾಗಗಳು[ಬದಲಾಯಿಸಿ]

 1. ಸಂಗೀತ ವಿಭಾಗ
 2. ದೃಶ್ಯಕಲಾವಿಭಾಗ
 3. ಶಿಲ್ಪಕಲಾ ವಿಭಾಗ

ಅಧ್ಯಯನ ಕೇಂದ್ರಗಳು[ಬದಲಾಯಿಸಿ]

 1. ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ
 2. ಮಹಿಳಾ ಅಧ್ಯಯನ ಕೇಂದ್ರ, ಹಂಪಿ
 3. ಭಾಷಾಂತರ ಕೇಂದ್ರ, ಹಂಪಿ
 4. ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲ ಸಂಗಮ

ನೀಡಲಾಗುವ ಪ್ರಶಸ್ತಿಗಳು[ಬದಲಾಯಿಸಿ]

ಕನ್ನಡ ವಿಶ್ವವಿದ್ಯಾಲಯವು ಕನ್ನಡದಲ್ಲಿ ಸೇವೆ ಸಲ್ಲಿಸಿದ ಮಹನೀಯರುಗಳಿಗೆ ಈ ಕೆಳಕಂಡ ಪ್ರಶಸ್ತಿ, ಪದವಿಗಳನ್ನು ನೀಡುತ್ತಾ ಬಂದಿದೆ.

 1. ನಾಡೋಜ ಪ್ರಶಸ್ತಿ
 2. ಡಿ ಲಿಟ್ ಪದವಿ

ಇತರೆ ಕೊಂಡಿಗಳು[ಬದಲಾಯಿಸಿ]