ಕುವೆಂಪು ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕುವೆಂಪು ವಿಶ್ವವಿದ್ಯಾನಿಲಯ/Kuvempu University
ಧ್ಯೇಯ ಬೋಧನೆ ಮೂಲಕ ಕ್ರಿಯಾಶೀಲತೆಯ ಪೋಷಣೆ
ಧ್ಯೇಯ (ಕನ್ನಡ) "Foster Creativity in Teaching"
ಸ್ಥಾಪನೆ 1987 (1987)
ಪ್ರಕಾರ Public
ಕುಲಪತಿಗಳು Vajubhai Rudabhai Vala
Governor of Karnataka
ಉಪಕುಲಪತಿಗಳು Prof. Jogan Shankar
ವಿದ್ಯಾರ್ಥಿಗಳ ಸಂಖ್ಯೆ 9,386[೧]
ಪದವಿ ಶಿಕ್ಷಣ 5,831[೧]
ಸ್ನಾತಕೋತ್ತರ ಶಿಕ್ಷಣ 3,308[೧]
ಡಾಕ್ಟರೇಟ್ ಪದವಿ 238
ಇತರೆ 12
ಸ್ಥಳ Shimoga, Karnataka, India
Coordinates: 13°55′0.12″N 75°34′0.12″E / 13.9167000°N 75.5667000°E / 13.9167000; 75.5667000
ಆವರಣ Rural
230 acres (93 ha) (Main campus)
ಅಂತರ್ಜಾಲ ತಾಣ www.kuvempu.ac.in
150px


ಕುವೆಂಪು ವಿಶ್ವವಿದ್ಯಾನಿಲಯ - ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದು. ಇದರ ಧ್ಯೇಯವಾಕ್ಯ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.

ಪರಿಚಯ[ಬದಲಾಯಿಸಿ]

ಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು. ಇದರ ಮೊದಲ ಕುಲಪತಿಗಳು ಲೇಖಕರಾದ ಶಾಂತಿನಾಥ ದೇಸಾಯಿ ಅವರು. ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇರುವ ಶಂಕರಘಟ್ಟ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ತರೀಕೆರೆಯಿಂದ ೧೮ ಕಿ.ಮೀ ದೂರದಲ್ಲಿದೆ. ಈ ವಿಶ್ವವಿದ್ಯಾಲಯದ ಕುರಿತಾದ ಗೀತೆಯನ್ನು ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ರಚಿಸಿದ್ದಾರೆ.

ಇವನ್ನೂ ನೋಡಿ[ಬದಲಾಯಿಸಿ]

  1. ಕನ್ನಡ ವಿಶ್ವವಿದ್ಯಾಲಯ
  2. ಕರ್ನಾಟಕ ವಿಶ್ವವಿದ್ಯಾಲಯ
  3. ಬೆಂಗಳೂರು ವಿಶ್ವವಿದ್ಯಾಲಯ
  4. ಮೈಸೂರು ವಿಶ್ವವಿದ್ಯಾಲಯ
  5. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
  6. ಗುಲ್ಬರ್ಗಾ ವಿಶ್ವವಿದ್ಯಾಲಯ
  7. ಮಂಗಳೂರು ವಿಶ್ವವಿದ್ಯಾಲಯ
  8. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
  9. ಕೃಷಿ ವಿಶ್ವವಿದ್ಯಾಲಯ, ಧಾರವಾಡ
  10. ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
  11. ಬಿಜಾಪುರ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ
  12. ತುಮಕೂರುವಿಶ್ವವಿದ್ಯಾಲಯ, ತುಮಕೂರು
  13. ಕುವೆಂಪು ವಿಶ್ವವಿದ್ಯಾನಿಲಯ ,ಶಿವಮೊಗ್ಗ
  14. ಬಳ್ಳಾರಿ ವಿಶ್ವವಿದ್ಯಾನಿಲಯ , ಬಳ್ಳಾರಿ 2010


  1. ೧.೦ ೧.೧ ೧.೨ "Kuvempu University - Student enrollment details". UGC. Retrieved 12 February 2012.