ಶಿವಮೊಗ್ಗ
ಶಿವಮೊಗ್ಗ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಶಿವಮೊಗ್ಗ |
ನಿರ್ದೇಶಾಂಕಗಳು | |
ವಿಸ್ತಾರ | 50 km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
- /ಚದರ ಕಿ.ಮಿ. |
ನಗರಸಭೆ ಉಪಾಧ್ಯಕ್ಷರು | ಮಂಗಳಾ ಅಣ್ಣಪ್ಪ |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 577 201-೪ - +91-(0)8182 - ಶಿವಮೊಗ್ಗ KA-14, ಸಾಗರ KA-15 |
ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ.
ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ. ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ[ಸೂಕ್ತ ಉಲ್ಲೇಖನ ಬೇಕು].
ಚರಿತ್ರೆ[ಬದಲಾಯಿಸಿ]
ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿತ್ತು.
ಪ್ರವಾಸೀ ತಾಣಗಳು[ಬದಲಾಯಿಸಿ]
ಜಲಪಾತಗಳು ಮತ್ತು ಅಣೆಕಟ್ಟುಗಳು
- ಜೋಗದ ಜಲಪಾತ
- ಚಂದ್ರಗುತ್ತಿ "ಶ್ರೀ ರೇಣುಕಾಂಬ ದೇವಸ್ಥಾನ" ಮತ್ತು ಕೋಟೆ
- ೧೨ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ
- ಲಿಂಗನಮಕ್ಕಿ ಅಣೆಕಟ್ಟು
- ಒನಕೆ-ಅಬ್ಬೆ ಜಲಪಾತ
- ಭದ್ರಾ ನದಿ ಯೋಜನೆ, ಲಕ್ಕವಳ್ಳಿ
- ತು೦ಗಾ ನದಿ ಯೋಜನೆ, ಗಾಜನೂರು ಅಣೆಕಟ್ಟು
- ಆಗುಂಬೆ
- ಮಂಡಗದ್ದೆ ಪಕ್ಷಿದಾಮ.
- ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ
- ಕು೦ದಾದ್ರಿ ಬೆಟ್ಟ
- ಕುಪ್ಪಳ್ಳಿಯ ಕವಿಶೈಲ
- ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ
- ಕೂಡ್ಲಿ - ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಸ್ಠಳ
- ಹಿಡ್ಲುಮನೆ ಜಲಪಾತ (ನಿಟ್ಟೂರು)
- ದಬ್ಬೆ ಜಲಪಾತ
- ಚೀಲನೂರು ಗ್ರಾಮದ ಜೋಗದ ಜಲಪಾತ
- ಕೊಡಚಾದ್ರಿ ಬೆಟ್ಟ
- ಶಿವಪ್ಪನಾಯಕನ ಕೋಟೆ (ಬಿದನೂರು ನಗರ)
- ಸಿಗಂದೂರು
- ತಾವರೆ ಕೊಪ್ಪದ ಸಿಂಹ ಧಾಮ
- ಚೀಲನೂರು ಸೊರಬ ತಾಲ್ಲೂಕು
- ಸೊರಬ ತಾಲ್ಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)
- ಕವಲೇದುರ್ಗ ಕೋಟೆ
- ಕೆಳದಿ ಕೋಟೆ
- ಸಕ್ರೇಬೈಲು ಬಿಡಾರ ಆನೆಗಳ ಬಿಡಾರ
- ಕೊಡಚಾದ್ರಿ ಬೆಟ್ಟ
ಕಾಗೋಡು ಸತ್ಯಾಗ್ರಹ, ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ.
ವಿಮಾನ ನಿಲ್ದಾಣ[ಬದಲಾಯಿಸಿ]
ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ೨೦೧೧ರಲ್ಲಿ ಪ್ರಾರಂಭವಾಯಿತು. ಗುತ್ತಿಗೆದಾರರು ಮತ್ತು ಪಾಲುದಾರರ ಜೊತೆ ಅಭಿಪ್ರಾಯಭೇದ ತಲೆದೋರಿ ಕೆಲಸವು ೨೦೧೫ರಲ್ಲಿ ನಿಂತುಹೋಯಿತು. ಈಗ ಮತ್ತೆ 2020 ರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಿದ್ದಾರೆ[೧]
ಕುವೆಂಪು ವಿಶ್ವವಿದ್ಯಾನಿಲಯ[ಬದಲಾಯಿಸಿ]
ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ ೨೭ ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಸಿಧ್ಹ ಸಾಹಿತಿ ಕೆ. ವಿ. ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.
ಗಿರಿ-ಶಿಖರಗಳು[ಬದಲಾಯಿಸಿ]
- ಆಗುಂಬೆ, ಸೂರ್ಯಾಸ್ತಕ್ಕೆ ವಿಶ್ವಪ್ರಸಿದ್ದ
- ಕೊಡಚಾದ್ರಿ
- ಕುಂದಾದ್ರಿ ಬೆಟ್ಟ. ~ಜೈನ ಕ್ಷೇತ್ರ
- ಬರೆಕಲ್ ಬತೆರಿ
- ನಿಶಾನೆ ಗುಡ್ಡ
- ಹೆದ್ದಾರಿಖಾನ್
- ಮೊಳಕಾಲ್ಮುರಿ ಗುಡ್ಡ
- ಜೊಗಿ ಗುಡ್ಡ
- ಮುಪ್ಪಾನೆ
ನದಿಗಳು[ಬದಲಾಯಿಸಿ]
ಚರಿತ್ರೆ ಮತ್ತು ಧರ್ಮ[ಬದಲಾಯಿಸಿ]
- ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು
- ನಗರ, ಬಿದನೂರು ಸಂಸ್ಥಾನದ ರಾಜಧಾನಿ
- ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ
- ಶಿವಪ್ಪ ನಾಯಕನ ಅರಮನೆ
- ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್
- ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ.
- ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ.
- ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ
- ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ.
- ನಾಡಕಲಸಿ ಸಾಗರ ತಾಲ್ಲೂಕು; ಪ್ರಾಚೀನ ದೇವಾಲಯ
- ಉರುಗನಹಳ್ಳಿ- ಸೊರಬ ತಾಲ್ಲೂಕು - ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ
- ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ
- * ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ,ತೀರ್ಥಹಳ್ಳಿ ಬಳಿ. ಶ್ರೀರಾಮನು ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ ಸ್ಥಳ.
ವನ್ಯಜೀವಿ[ಬದಲಾಯಿಸಿ]
- ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ
- ಸಕ್ಕರೆಬೈಲು, ಆನೆ ತರಬೇತಿ ಶಿಬಿರ
- ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ
- ಸೊರಬ ತಾಲ್ಲೂಕಿನ ಚೀಲನೂರು ಕಾಡು ನವಿಲುಗಳ ವಾಸಸ್ಥಾನ
ಐತಿಹಾಸಿಕ ವ್ಯಕ್ತಿಗಳು[ಬದಲಾಯಿಸಿ]
- ಕೆಳದಿಯ ಚೆನ್ನಮ್ಮಾಜಿ
- ಅಲ್ಲಮಪ್ರಭು ದೇವರು
- ಕೆಳದಿ ಶಿವಪ್ಪ ನಾಯಕ
- ಅಕ್ಕಮಹಾದೇವಿ, [ ಉಡುತಡಿ ,ಶಿಕಾರಿಪುರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ]
ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]
- ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ.
- ಡಾ.ಎಸ್.ಆರ್. ರಾವ್ (ಶಿಕಾರಿಪುರ ರಂಗನಾಥ ರಾವ್) ಭಾರತದ ಹೆಸರಾಂತ ಪ್ರಾಚ್ಯ ವಸ್ತು ತಜ್ಞ
- ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
- ಪಿ.ಲಂಕೇಶ್, ಲೇಖಕ-ಪತ್ರಕರ್ತರು
- ನಾ. ಡಿಸೋಜ, ಸಾಹಿತಿ
- ಎಮ್.ಕೆ. ಇ೦ದಿರ, ಕಾದ೦ಬರಿಕಾರ್ತಿ
- ಕೆ.ವಿ.ಸುಬ್ಬಣ್ಣ, ಸಾಹಿತಿ ಮತ್ತು ನಾಟಕಕಾರ
- ಜಿ. ಎಸ್. ಶಿವರುದ್ರಪ್ಪ, ಕರ್ನಾಟಕದ ರಾಷ್ಟ್ರಕವಿ
- ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಪ್ರಸಿದ್ದ ಕವಿ
- ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ
- ಡಾ.ಟಿ.ಎಂ.ಶಿವಾನಂದಯ್ಯ ಹಿರಿಯ ಆಯುರ್ವೇದ ವೈದ್ಯರು
- ಹೊ.ಅ.ನರಸಿಂಹ ಮೂರ್ತಿ ಅಯ್ಯಂಗಾರ್,ಮಾಜಿ-ರಾಜ್ಯ ರ್ಕಾರ್ಯದರ್ಶಿಗಳು,ವಿಶ್ವ ಹಿಂದೂ ಪರಿಷತ್.
- ಅಭಿನಯ ಚಕ್ರವರ್ಥಿ, ಕಿಚ್ಚ ಸುದೀಪ್, ಖ್ಯಾತ ಚಲನಚಿತ್ರ ನಟ
- *
ತಾಲ್ಲೂಕುಗಳು[ಬದಲಾಯಿಸಿ]
ತಾಲ್ಲೂಕು | ಎತ್ತರ (ಮಿ.) | ಹೋಬಳಿಗಳ ಸಂಖ್ಯೆ | ನಿವಾಸಿತ ಹಳ್ಳಿಗಳ ಸಂಖ್ಯೆ | ಅನಿವಾಸಿತ ಹಳ್ಳಿಗಳ ಸಂಖ್ಯೆ | ವಿಸ್ತಿರಣ (ಚ. ಕಿ.ಮಿ) |
---|---|---|---|---|---|
ತೀರ್ಥಹಳ್ಳಿ | ೬೧೦ | ೫ | ೨೪೫ | ೨ | ೧೨೪೭ |
ಭಧ್ರಾವತಿ | ೫೯೪ | ೬ | ೧೪೬ | ೭ | ೬೯೦ |
ಶಿಕಾರಿಪುರ | ೬೦೩ | ೫ | ೧೫೩ | ೨೨ | ೯೦೯ |
ಶಿವಮೊಗ್ಗ | ೫೭೧ | ೮ | ೧೯೮ | ೨೪ | ೧೧೦೮ |
ಸಾಗರ | ೫೭೯ | ೬ | ೨೩೩ | ೫ | ೧೯೪೦ |
ಸೊರಬ | ೫೭೯ | ೬ | ೨೬೮ | ೩೮ | ೧೧೪೮ |
ಹೊಸನಗರ | ೫೭೨ | ೪ | ೧೯೭ | ೫ | ೧೪೨೩ |
ಜನಸಂಖ್ಯೆ[ಬದಲಾಯಿಸಿ]
ಶಿವಮೊಗ್ಗ ಜಿಲ್ಲಾ ಜನ ಸಂಖ್ಯಾ ವಿವರ | |||||
---|---|---|---|---|---|
ತಾಲ್ಲೂಕು | ಸಾಕ್ಷರತೆ ಪ್ರಮಾಣ (%) | ಒಟ್ಟು (2011) | ಗಂಡಸರು | ಹೆಂಗಸರು/ಪ್ರಮಾಣ | ರ2001 ರ ಗಣತಿ |
ಶಿವಮೊಗ್ಗ ಜಿಲ್ಲೆ | 74.89 | 17,55,512 | 8,79,817 | 8,75,695/995 | ಲಭ್ಯವಿಲ್ಲ |
ಶಿವಮೊಗ್ಗ ತಾಲ್ಲೂಕು | 77 | 5,07,083 | 2,55,317 | 251761/969 | 4,45,192 |
ಭದ್ರಾವತಿ ತಾಲ್ಲೂಕು | 77 | 3,39,930 | 1,70,291. | 1,69,636/997 | 3,38,989 |
ಭದ್ರಾವತಿ ನಗರ | -- | 1,50,776 | ಲಭ್ಯವಿಲ್ಲ | ಲಭ್ಯವಿಲ್ಲ | 1,60,662 |
ತೀರ್ಥಹಳ್ಳಿ | 83.05 | 1,41,453 | 69,593 | 71,869/1038 | 1,43,207 |
ಶಿವಮೊಗ್ಗ ಗ್ರಾಮೀಣ | -- | 1,26,916 | ಲಭ್ಯವಿಲ್ಲ | ಲಭ್ಯವಿಲ್ಲ | 1,28,399 |
ಸಾಗರ | 81.00 | 2,06,112 | 1,02,276 | 1,03,834/1012 | 2,00,995 |
ಹೊಸನಗರ | 81.5 | 1,18,148 | 58,503 | 59,645/1037 | 1,15,000 |
ಶಿಕಾರಿಪುರ | 76.5 | 2,41,943 | 1,22,527 1, | 19,413/980 | 2,13,590 |
ಸೊರಬ | 77 | 2,00,843 | 1,01,297 | 91,546/999 | 1,85,572 |
ಉಲ್ಲೇಖ[ಬದಲಾಯಿಸಿ]
ಕೆಳಗಿನ ಲೇಖನಗಳನ್ನೂ ನೋಡಿ[ಬದಲಾಯಿಸಿ]
ಇದನ್ನೂ ನೋಡಿ[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]

- ಶಿವಮೊಗ್ಗ ಗ್ಲೋರಿ
- ಶಿವಮೊಗ್ಗ ಮಹಾನಗರಪಾಲಿಕೆ Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
- ಶಿವಮೊಗ್ಗ ಜಿಲ್ಲಾ ಪಂಚಾಯತ್ Archived 2009-01-19 ವೇಬ್ಯಾಕ್ ಮೆಷಿನ್ ನಲ್ಲಿ.
- ಶಿವಮೊಗ್ಗದ ಬಗ್ಗೆ ಮಾಹಿತಿ
- ಶಿವಮೊಗ್ಗ ಜಿಲ್ಲೆಯ ನಕ್ಷೆ