ಚಂದ್ರಗುತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರಗುತ್ತಿಯು ರೇಣುಕಾಂಬಾ ದೇವಾಲಯ ಮತ್ತು ಬೆಟ್ಟದಮೇಲಿರುವ ಪುರಾತನವಾದ ಕೋಟೆಗೆ ಪ್ರಸಿದ್ದವಾಗಿದೆ. ಇಲ್ಲಿ ಪುರಾಣ ಪ್ರಸಿದ್ಧವಾದ ಪರುಶುರಾಮನ ತಾಯಿಯಾದ ರೇಣುಕಾಂಬೆ ದೇವಾಲಯವಿದೆ. ಎದುರಿಗೆ ಪರಶುರಾಮ ಮತ್ತು ಏಳು ಹೆಡೆ ನಾಗೇಂದ್ರನ ದೇವಾಲಯವು ಇದೆ. ಇಲ್ಲಿ ಎತ್ತರವಾದ ಗುಡ್ಡವಿರುವುದರಿಂದ ಕದಂಬರ ಕಾಲದಲ್ಲಿ ಕೋಟೆ ನಿರ್ಮಾಣಮಾಡಿ ಯುದ್ಧಕಾಲದಲ್ಲಿ ಬಳಸುತ್ತಿದ್ದರು. ಇಲ್ಲಿಂದ ಬನವಾಸಿಗೆ ಸುರಂಗಮಾರ್ಗವಿತ್ತೆಂಬ ಪ್ರತೀತಿ ಇದೆ.

ದೇವಾಲಯದ ಬೆಟ್ಟ ಎತ್ತರವಾಗಿದ್ದು ಚಾರಣಪ್ರಿಯರೂ ಕೂಡ ಭೇಟಿ ನೀಡಬಹುದಾದ ಸ್ಥಳ. ಬೆಟ್ಟ ಹತ್ತಲು ಕಾಲು ದಾರಿಯಿದ್ದು ದುರ್ಗಮವಾಗಿರುವುದರಿಂದ ಉತ್ತಮ ಚಾರಣದ ಅನುಭವ ನೀಡುತ್ತದೆ. ಬೆಟ್ಟದ ಮೇಲೆ ಬಂಡೆಗಳಿಂದಾದ ಹೆಜ್ಜೆಯ ಆಕಾರದ ಕೊಳವೊಂದಿದ್ದು ಇದು ಭೀಮನ ಹೆಜ್ಜೆಯಿಂದಾಗಿದ್ದೆಂಬ ಪ್ರತೀತಿಯಿದೆ. ಇಲ್ಲಿಯೇ ಮದ್ದು ಗುಂಡುಗಳನ್ನು ಶೇಖರಿಸಿಡಲು ಬಳಸುತ್ತಿದ್ದ ಮನೆಯೂ ಕೂಡ ಇದೆ. ಇದಲ್ಲದೆ ಹತ್ತುವಾಗ ದಾರಿಯಲ್ಲಿ ಕೋಟೆಗಳು, ಯುದ್ದದಲ್ಲಿ ಬಳಸುತ್ತಿದ್ದ ಫಿರಂಗಿಗಳನ್ನೂ ನೋಡಬಹುದು.

ಇಲ್ಲಿ ಅಮವಾಸ್ಯೆ ಮತ್ತು ನವರಾತ್ರಿಗಳಲ್ಲಿ ಹೆಚ್ಚಾಗಿ ಜನಜಂಗುಳಿ ಕಂಡುಬರುತ್ತದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದಿಂದ ಬರುವ ಭಕ್ತಾದಿಗಳು ಅಧಿಕ.