ಹೊಸನಗರ

ವಿಕಿಪೀಡಿಯ ಇಂದ
Jump to navigation Jump to search
{{#if:|
Hosanagar [೧]
ಹೊಸನಗರ
—  ಪಟ್ಟಣ  —
Hosanagar [೧] is located in Karnataka
Hosanagar [೧]
Hosanagar [೧]
Location in Karnataka, India
ರೇಖಾಂಶ: 13°55′N 75°04′E / 13.92°N 75.07°E / 13.92; 75.07ನಿರ್ದೇಶಾಂಕಗಳು: 13°55′N 75°04′E / 13.92°N 75.07°E / 13.92; 75.07
ದೇಶ  ಭಾರತ
ರಾಜ್ಯ ಕರ್ನಾಟಕ
ಜಿಲ್ಲೆ ಶಿವಮೊಗ್ಗ
ಉಪವಿಭಾಗ ಸಾಗರ
ಸರ್ಕಾರ
 - MLA ಕಾಗೋಡು ತಿಮ್ಮಪ್ಪ [೨]
ಎತ್ತರ ೫೮೫ ಮೀ (೧,೯೧೯ ಅಡಿ)
ಜನಸಂಖ್ಯೆ (2001)
 - ಒಟ್ಟು ೫,೦೪೨
 - ಸಾಂದ್ರತೆ ./ಚದರ ಕಿಮಿ (./ಚದರ ಮೈಲಿ)
{{{language}}} {{{ಭಾಷೆ}}}
PIN 577418

ಹೊಸನಗರ ಇದು ಶಿವಮೊಗ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ತಾಲೂಕಿನಲ್ಲಿನ ಬಿದನೂರು ನಗರ ಎಂಬ ಊರನ್ನು ಶಿವಪ್ಪನಾಯಕನು ತನ್ನ ಆಳ್ವಿಕೆಯ ರಾಜಧಾನಿಯನ್ನಾಗಿ ಮಾಡಿಕೊಂಡ್ಡಿದ್ದನೆಂದು ಇತಿಹಾಸ ಹೇಳುತ್ತದೆ. ಆ ಕಾಲದಲ್ಲಿ ಈ ಊರನ್ನು 'ಕಳೂರು' ಎಂದು ಕರೆಯುತ್ತಿದ್ದರು. ಕ್ರಮೇಣ ಬಿದನೂರು ನಗರ ’ಹಳೇನಗರ’ ವಾದರೆ, ಜನವಸತಿ ಹೆಚ್ಚುತ್ತಾ ಬಂದ ಈ ಪ್ರದೇಶ ’ಹೊಸನಗರ’ ಎಂದು ಕರೆಸಿಕೊಂಡಿತು. ಇಲ್ಲಿನ ಹುಡುಗರು ಸ್ನೇಹಕ್ಕೆ ಹೆಚ್ಚು ಒತ್ತು ನೀಡುತ್ತಾರೆ.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಈ ತಾಲೂಕಿನ ಮುಖ್ಯ ಪ್ರೇಕ್ಶಣೀಯ ಸ್ಥಳಗಳು:

 • ಹುಂಚ: ಇದು ಜೈನರ ತೀರ್ಥಕ್ಷೇತ್ರ. ಇದು ತಾಲ್ಲೂಕು ಕೇಂದ್ರವಾದ ಹೊಸನಗರದಿಂದ ೨೨.೫ (22.5) ಕಿ.ಮೀ ದೂರದಲ್ಲಿದೆ. ಶಿವಮೊಗ್ಗ ನಗರದಿಂದ ೫೪ (54) ಕಿ.ಮಿ. ದೂರದಲ್ಲಿದೆ ಮತ್ತು ತೀರ್ಥಹಳ್ಳಿಯಿಂದ ೨೫ (25)ಕಿ.ಮಿ. ದೂರದಲ್ಲಿದೆ. 10 ಮತ್ತು 11ನೇ ಶತಮಾನದ ಪಂಚಕೂಟ ಬಸದಿ (ಜೈನ ದೇವಾಲಯ), ಪದ್ಮಾವತಿ ದೇವಾಲಯ, ಜೈನ ಮಠ ನೋಡುವಂತವು.
 • ಕೊಡಚಾದ್ರಿ ಬೆಟ್ಟ,
 • ಅರಿಶಿನಗುಂಡಿ ಜಲಪಾತ,
 • ಶಿವಪ್ಪನಾಯಕನ ಕೋಟೆ(ನಗರ),
 • ಹಿಡ್ಲುಮನೆ ಜಲಪಾತ,
 • ಕಾರಣಗಿರಿ ದೇವಸ್ಥಾನ
 • ಶಂಕರೇಶ್ವರ ದೇವಸ್ಥಾನ, ಕೋಡೂರು
 • ಜೇನುಕಲ್ಲಮ್ಮ ದೇವಾಲಯ, ಅಮ್ಮನಘಟ್ಟ, ಕೋಡೂರು
 • ಚಕ್ರ,
 • ಮಾನಿ,
 • ವರಾಹಿ ಡ್ಯಾಮ್ .

ಕರ್ನಾಟಕದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ(ಹುಲಿಕಲ್) ಈ ತಾಲೂಕಿನಲ್ಲಿದೆ. ಜೆಟ್ಟಿಮನೆ, ಬೆಳ್ಳಕ್ಕ, ಅಂಬ್ಲಾಡಿ ಪ್ರದೇಶಗಳು ಯಾವಾಗಲು ತಂಪಾಗಿರುವ ಈ ತಾಲೂಕಿನ ಪ್ರದೇಶಗಳು. ತಾಲೂಕಿನ ಬಹುತೇಕ ಭಾಗ ಶರಾವತಿ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಹೊಸನಗರ&oldid=993776" ಇಂದ ಪಡೆಯಲ್ಪಟ್ಟಿದೆ