ಯಾದಗಿರಿ ಜಿಲ್ಲೆ
ಯಾದಗಿರಿ ಜಿಲ್ಲೆ
ಯಾದಗಿರಿ (ಯಾದವಗಿರಿ) | |
---|---|
city | |
Population (2001) | |
• Total | ೫೮,೮೦೨ |
ಯಾದಗಿರಿ ಇತಿಹಾಸ
[ಬದಲಾಯಿಸಿ]ಈ ಹಿಂದೆ ಈ ಪ್ರದೇಶವನ್ನು "ಯಾದವ" ಎಂಬ ರಾಜವಂಶದವರು ಆಳುತ್ತಿದ್ದರಂತೆ. "ಯಾದವರ" ಈ ವಂಶವನ್ನು ಕೆಲವು ಕಡೆ ಯದುವಂಶ ಎಂದು ಕೂಡಾ ಕೆಲವು ಕಡೆ ಉಲ್ಲೆಖಿಸಲಾಗಿದೆ ಎಂಬುವದು ಬಲ್ಲ ಮೂಲಗಳಿಂದ ತಿಳಿಯುತ್ತದೆ. ಯಾದಗಿರಿ, ಕ್ರಿ. ಪೂ ೧೩೪೭ ರಿಂದ ೧೪೨೫ ರ ವರೆಗೆ ಯಾದವರ ರಾಜಧಾನಿಯಾಗಿತ್ತು. ಆಕಾಲದ ಪ್ರಮುಖರಾದ ಸಂತವರು, ಚಾಲುಕ್ಯರು, ರಾಷ್ಟ್ರಕೂಟರು, ಶಾಹಿಗಳು, ಆದಿಲ್ ಶಾಹಿಗಳು, ನಿಜಾಮ್ ಶಾಹಿಗಳು ಯಾದಗಿರಿಯನ್ನ ಆಳಿದ್ದಾರೆ. ಯಾದಗಿರಿಯಲ್ಲಿ ಒಂದು ಭವ್ಯ ವಾದ ಗುಡ್ಡ ಯಾದಗಿರಿಯ ಹೃದಯ ಭಾಗದಲ್ಲಿದೆ ಇದನ್ನು ಬೆಟ್ಟವೆಂತಲು ಕರೆಯಬಹುದಾಗಿದೆ. ಯಾದವರು ಆಳುತ್ತಿದ್ದ ಈ ನಾಡಿಗೆ ಬೆಟ್ಟ ಅಂದರೆ ಗಿರಿ ಸೇರಿರುವದರಿಂದ ಇದನ್ನು ಮುಂದೆ ಯಾದಗಿರಿ ಎಂದು ಕರೆಯಲಾಯಿತು. ಯಾದವನ ಗಿರಿ’, ಯಾದವ ಗಿರಿ’,ಯಾದಗಿರಿ’, ಯಾದ್ಗೀರ್’ ಎಂದು ಸರಳೀಕೃತಗೊಂಡಿದೆ. ಹೀಗೆ ಹಲವು ನಾಮಗಳಿಂದ ಕರೆಯಲಾಗುತ್ತಿದೆ.
ಯಾದಗಿರಿ ನಗರ
[ಬದಲಾಯಿಸಿ]ರಾಜ್ಯದ ೩೦ನೇ ಜಿಲ್ಲೆಯಾಗಿ ಯಾದಗಿರಿ ಡಿಸೆಂಬರ ೩೦ ೨೦೦೯ ರಿಂದ ಅಸ್ತಿತ್ವಕ್ಕೆ ಬಂದಿದೆ. ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆಯಾಗಿದೆ. ಸಂಪುಟ ಸಭೆಯಲ್ಲಿ ಆ. ೨೭ ೨೦೦೮ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗಾ ಜಿಲ್ಲೆ�ಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಈ ವಿಚಾರವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸೆಂಬರ ೨೩ ೨೦೦೯ ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದರು.
ಯಾದಗಿರಿ ಜಿಲ್ಲೆ
[ಬದಲಾಯಿಸಿ]ಯಾದಗಿರಿ ಕರ್ನಾಟಕ ರಾಜ್ಯದ ೩೦ನೇ ಜಿಲ್ಲೆ. ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ.
ಯಾದಗಿರಿ ಜಿಲ್ಲೆ 5270 ಚದರ ಕೀ. ಮೀ ಪ್ರದೇಶವನ್ನು ಆಕ್ರಮಿಸಿದೆ. ಇದು ರಾಜ್ಯದ ಎರಡನೇ ಚಿಕ್ಕ ಜಿಲ್ಲೆಯಾಗಿದೆ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 8.46% ಪ್ರತಿಶತ ಪ್ರದೇಶವನ್ನು ಒಳಗೊಂಡಿರುವ ಬೌಗೋಳಿಕ ಪ್ರದೇಶವಾಗಿದೆ. ಜಿಲ್ಲೆ ಒಂದು ವಿಭಾಗದ ಉಪ ವಿಭಾಗದಿಂದ ಕೂಡಿರುತ್ತದೆ. ಹಾಗೂ ಜಿಲ್ಲೆ 3 ತಾಲ್ಲೂಕುಗಳು ಮತ್ತು 3 ಶೈಕ್ಷಣಿಕ ವಲಯಗಳಿಂದ ಕೂಡಿದ್ದು, ಅವುಗಳೆಂದರೆ ಯಾದಗಿರಿ,ಶಹಾಪೂರ ಮತ್ತು ಸುರಪುರ. ಜಿಲ್ಲೆಯಲ್ಲಿ ಒಟ್ಟು 16 ಹೋಬಳಿಗಳು, 3 ನಗರಸಭೆ, 3ಪುರಸಭೆ, 1 ಅಜಿತ ಪ್ರದೇಶ ಸಮಿತಿ, 3 ತಾಲೂಕಾ ಪಂಚಾಯತ, 117 ಗ್ರಾಮ ಪಂಚಾಯತ್, 51 ಹಳ್ಳಿಗಳು ಮತ್ತು 4 ವಿಧಾನಸಭಾ ಮತಕ್ಷೇತ್ರಗಳು , ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆ ಯಾದಗಿರಿ, ಶಹಾಪೂರ ಮತ್ತು ಸುರಪುರ ವಿಧಾನಸಭಾ ಮತಕ್ಷೇತ್ರಗಳು ರಾಯಚೂರು ಲೋಕಸಭಾ ವ್ಯಾಪ್ತಿ ಮತ್ತು ಮಿಠಕಲ್ ವಿಧಾನಸಭಾ ಕ್ಷೇತ್ರಗಳು ಗುಲಬರ್ಗಾ ಲೋಕಸಭಾ ವ್ಯಾಪ್ತಿಯನ್ನು ಹೊಂದಿದೆ.
ಶಿಕ್ಷಣ
[ಬದಲಾಯಿಸಿ]ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ೧,೦೨೪ ಪ್ರಾಥಮಿಕ ಶಾಲೆಗಳು, ೧೪೯ ಪ್ರೌಢ ಶಾಲೆಗಳು, ೪೦ ಪದವಿ ಪೂರ್ವ ಕಾಲೇಜುಗಳು, ಮತ್ತು ೬ ಪದವಿ ಕಾಲೇಜುಗಳಿವೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಒಟ್ಟು ೧೨೨೩ ಅಂಗನವಾಡಿ ಶಾಖೆಗಳಿವೆ.
ವೈದ್ಯಕೀಯ ಸೌಲಭ್ಯಗಳು
[ಬದಲಾಯಿಸಿ]ಈ ಜಿಲ್ಲೆಯಲ್ಲಿ ೩ ಆಸ್ಪತ್ರೆಗಳು, ೩ ಆಯುರ್ವೇದ ಆಸ್ಪತ್ರೆಗಳು, ೩೭ ಜನಸಾಮಾನ್ಯ ಆರೋಗ್ಯ ಕೇಂದ್ರಗಳು ಮತ್ತು ೧೨೦ ಕುಟುಂಬ ಕಲ್ಯಾಣ ಕೇಂದ್ರಗಳಿವೆ.
ಜಿಲ್ಲೆಯ ರಚನೆ
[ಬದಲಾಯಿಸಿ]ಯಾದಗಿರಿ ಜಿಲ್ಲೆಯೂ ಹಲವು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ಯಾದಗಿರಿಯಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ಕೃಷ್ಣ ಮತ್ತು ಭೀಮ. ಔದ್ಯೋಗಿಕರಣಕ್ಕೆ ಉತ್ತಮ ಅವಕಾಶಗಳಿದ್ದು, ಈಗಾಗಲೇ ಅಲ್ಲಿನ ಹಿರೆತುಮಕೂರು ಹಳ್ಳಿಯ ಹತ್ತಿರ ಸಕ್ಕರೆ ಮತ್ತು ಇಂಧನ ಕಾರ್ಖಾನೆಗಳು ಆರಂಭವಾಗಿವೆ.
ಯಾದಗಿರಿ ಜಿಲ್ಲೆಯ ತಾಲ್ಲೂಕುಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]
- Pages with script errors
- Articles with short description
- Short description is different from Wikidata
- Pages using infobox settlement with infobox mapframe errors
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕರ್ನಾಟಕದ ಜಿಲ್ಲೆಗಳು