ಚಿತ್ತಾಪುರ
ಚಿತ್ತಾಪುರ
Chitapur | |
---|---|
ಪಟ್ಟಣ | |
Country | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಗುಲ್ಬರ್ಗ |
Area | |
• Total | ೩.೫ km೨ (೧.೪ sq mi) |
Elevation | ೪೦೩ m (೧,೩೨೨ ft) |
Population (2011) | |
• Total | ೩೧,೨೯೯[೧] |
• Density | ೭,೭೦೬.೮೬/km೨ (೧೯,೯೬೦.೭/sq mi) |
Languages | |
• Official | ಕನ್ನಡ |
Time zone | UTC+5:30 (IST) |
ಪಿನ್ ಕೋಡ್ | 585211 |
Telephone code | 08474 |
ಲಿಂಗ ಅನುಪಾತ | 1:1 ♂/♀ |
Website | chittapuratown |
ಚಿತ್ತಾಪುರ ಕರ್ನಾಟಕ ರಾಜ್ಯದ, ಕಲಬುರಗಿ ಜಿಲ್ಲೆಯ ಪುರಸಭೆ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ ೪೬ ಕಿ. ಮೀ ದೂರದಲ್ಲಿದೆ.[೨][೩]
ಜನಸಂಖ್ಯೆ
[ಬದಲಾಯಿಸಿ]೨೦೧೧ರ ಭಾರತದ ಜನಗಣತಿಯ ಪ್ರಕಾರ ಚಿತ್ತಾಪುರ 31299 ಜನಸಂಖ್ಯೆಯನ್ನು ಹೊಂದಿದ್ದು, 15489 ಪುರುಷರು ಮತ್ತು 15810 ಮಹಿಳೆಯರು ಇದ್ದಾರೆ.[೧]
ಕೃಷಿ
[ಬದಲಾಯಿಸಿ]ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ ಇದರ ಉಪ-ನದಿ ಕಾಗಿನಾ ಇರುತ್ತವೆ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಚಿತ್ತಾಪುರ್ ತಾಲ್ಲೂಕಿನಲ್ಲಿ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳು. ಇಲ್ಲಿ ಪ್ರಸಿದ್ಧ ನಾಗವಿ ದೇವಾಲಯ ಇದೆ. ಇದು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು, ಇಂದಿಗೂ ಬಹಳ ಪ್ರಸಿದ್ದವಾಗಿದೆ.ತೆಂಗಳಿ, ನಾಲವಾರ, ಶಹಬಾದ, ರಾವೂರ, ಕಾಳಗಿ, ಗು೦ಡಗುರ್ತಿ, ವಾಡಿ, ಇ೦ಗಳಗಿ, ದಿಗ್ಗಾಂವ ಪ್ರಮುಖ ಹಳ್ಳಿಗಳು. ಅಲ್ಲದೇ ಇಲ್ಲಿ ಶಹಾಬಾದ್ ಕಲ್ಲುಗಳು ಪ್ರಸಿದ್ಧ. ಇದೆ ತಾಲೂಕಿನ ದಕ್ಷಿಣ ಭಾಗದಲ್ಲಿ ಭೀಮಾ ನದಿಯು ಹರಿಯುತ್ತದೆ ಇದೆ ನದಿಯ ದಡದ ಮೇಲೆ ಸುಪ್ರಸಿದ್ದ ಸನ್ನತಿ ಗ್ರಾಮದ ಹತ್ತಿರ ಚಂದ್ರಲಾಂಬ ದೇವಾಲಯವಿದೆ. ನಾಲವಾರ ರೇಲ್ವೆ ಸ್ಟೇಶನ್ ನಿಂದ 18 ಕಿ ಮೀ ದೂರದಲ್ಲಿರುತ್ತದೆ. ಈ ತಾಲೂಕಿನಲ್ಲಿ ಹೇರಳವಾಗಿ ಶಹಾಬಾದ ಕಲ್ಲುಗಳು ದೊರಿಯುವುದರಿಂದ ಸಿಮೆಂಟ್ ಕಾರ್ಖಾನೆಗಳು ಸಹ ಇವೆ.
ಆರೋಗ್ಯ ಕೇಂದ್ರ
[ಬದಲಾಯಿಸಿ]ಚಿತ್ತಾಪುರದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಇದೆ.[೪]
ಶಿಕ್ಷಣ
[ಬದಲಾಯಿಸಿ]- ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು, ಚಿತ್ತಾಪುರ[೫]
- ಸರ್ಕಾರ ಪದವಿಪೂರ್ವ ಕಾಲೇಜು,ಚಿತ್ತಾಪುರ
- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ,ಚಿತ್ತಾಪುರ[೬]
ಸಾರಿಗೆ/ಸಂಪರ್ಕ
[ಬದಲಾಯಿಸಿ]- ಬಸ್ಸು :ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಸೇವೆ ಒದಗಿಸುತ್ತದೆ.
- ರೈಲು : ಚಿತ್ತಾಪುರದಲ್ಲಿ ರೈಲು ನಿಲ್ದಾಣ ಇದೆ. ಇಲ್ಲಿಂದ ಮುಂಬಯಿ, ಪುಣೆ, ಗುಲ್ಬರ್ಗ, ಸೋಲಾಪುರ್, ಬೆಂಗಳೂರು, ಹೈದ್ರಾಬಾದ್ ಮುಂತಾದ ನಗರಗಳಿಗೆ ಈ ರೈಲ್ವೆ ನಿಲ್ದಾಣದ ಮೂಲಕ ಸಂಚರಿಸಬಹುದು.
- ವಿಮಾನ: ಹತ್ತಿರದ ವಿಮಾನ ನಿಲ್ದಾಣ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್ 180 ಕಿ.ಮೀ ದೂರದಲ್ಲಿದೆ.
ಉಲ್ಲೇಖನಗಳು
[ಬದಲಾಯಿಸಿ]- ↑ ೧.೦ ೧.೧ "ಚಿತ್ತಾಪುರ 2011 ಜನಗಣತಿ". census2011.co.in accessdate 12 October 2016.
- ↑ "Chittapur, Karnataka". google.co.in/maps accessdate 12 October 2016.
- ↑ "Talukas in Gulbarga District, Karnataka". census2011.co.in accessdate 12 October 2016.
- ↑ "ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಚಿತ್ತಾಪುರ". www.asklaila.com accessdate 12 October 2016.
- ↑ "ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು, ಚಿತ್ತಾಪುರ". entrance-exam.net/ accessdate 12 October 2016.
- ↑ "ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ,ಚಿತ್ತಾಪುರ". ampletrails.com accessdate 12 October 2016.