ಜೇವರ್ಗಿ (ತಾಲ್ಲೂಕು)
ಜೇವರ್ಗಿ
Jewargi | |
---|---|
ತಾಲೂಕು | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಕಲಬುರಗಿ |
ಲೋಕಸಭೆ | ಕಲಬುರಗಿ |
Area | |
• Total | ೪.೨೫ km೨ (೧.೬೪ sq mi) |
Population (2011) | |
• Total | ೨೫,೬೮೬ |
• Density | ೪,೫೧೧.೫೩/km೨ (೧೧,೬೮೪.೮/sq mi) |
Time zone | UTC+5:30 (IST) |
ಪಿನ್ ಕೋಡ್ | 585 310 |
Telephone code | 08442 |
Vehicle registration | KA 32 |
Website | karnataka |
ಜೇವರ್ಗಿ ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ 43 ಕಿ.ಮೀ ದೂರದಲ್ಲಿದೆ. ಮೊದಲು ಇದನ್ನು ಆಂದೋಲಾ ಎಂದು ಕರೆಯಲಾಗುತ್ತಿತ್ತು. ತಾಲ್ಲೂಕಿನ ಮುಖ್ಯಸ್ಥಳವಾದ ಜೇವರಗಿಯಲ್ಲಿ ಅನೇಕ ಬಸದಿಗಳಿವೆ. ಇದು ಜೈನರ ಯಾತ್ರಾಸ್ಥಳ. ಈ ಪಟ್ಟಣದ ಉತ್ತರಕ್ಕೆ ಭೀಮಾನದಿ ಹರಿಯುತ್ತದೆ. ಗುಲ್ಬರ್ಗ-ಬಿಜಾಪುರ ಮಾರ್ಗ ಜೇವರಗಿ ಪಟ್ಟಣದ ಮೂಲಕ ಹಾಯ್ದು ಹೋಗುತ್ತದೆ.
ಫೆಬ್ರವರಿ ಅಂತ್ಯದಿಂದ ಜೂನ್ ತಿಂಗಳ ಮೊದಲ ವಾರದವರೆಗೆ ಬಿಸಿಲು ಹೆಚ್ಚು. ವಾರ್ಷಿಕ ಸರಾಸರಿ ಮಳೆ 600 ಮಿಮೀ. ತಾಲ್ಲೂಕಿನದು ಆರೋಗ್ಯಕರವಾದ ಶುಷ್ಕ ವಾಯುಗುಣ.
ಈ ತಾಲ್ಲೂಕಿನಲ್ಲಿ ಸುಣ್ಣದ ಕಲ್ಲು ಹೇರಳವಾಗಿ ಸಿಗುತ್ತದೆ. ಅದನ್ನು ವಾಡಿ ಹಾಗೂ ಶಾಹಬಾದ್ ಸಿಮೆಂಟ್ ಕಾರ್ಖಾನೆಗಳಿಗೆ ಕಳಿಸುತ್ತಾರೆ. ಇಲ್ಲಿಯದು ಫಲವತ್ತಾದ ಕಪ್ಪುಭೂಮಿ. ಜನರ ಪ್ರಧಾನ ಕಸಬು ಕೃಷಿ. ಜೋಳ, ಸಜ್ಜೆ, ಗೋದಿ, ಮೆಣಸಿನಕಾಯಿ, ಹತ್ತಿ, ಎಣ್ಣೆಕಾಳುಗಳು-ಇವು ಇಲ್ಲಿಯ ಕೃಷಿ ಉತ್ಪನ್ನಗಳು, ತಾಲ್ಲೂಕಿನ ಉತ್ತರ ಭಾಗದಲ್ಲಿ ಭೀಮಾ ನದಿಯ ನೀರನ್ನು ಸ್ವಲ್ಪಮಟ್ಟಿಗೆ ಬಳಸಿಕೊಳ್ಳುತ್ತಾರೆ. ತಾಲ್ಲೂಕಿನ ಬಹುಭಾಗದಲ್ಲಿ ಮಳೆಯನ್ನೇ ಆಶ್ರಯಿಸಿ ಬೆಳೆ ತೆಗೆಯುತ್ತಾರೆ. ಗುಲ್ಬರ್ಗ ಜಿಲ್ಲೆಯ ಇತರ ಭಾಗಗಳಂತೆ ಇದೂ ಅನೇಕ ಬಾರಿ ಅಭಾವ ಪರಿಸ್ಥಿತಿಗೆ ಒಳಗಾಗಿದೆ. 1972ರಲ್ಲಿ ಈ ತಾಲ್ಲೂಕಿನಲ್ಲಿ ಅಭಾವ ಪರಿಸ್ಥಿತಿ ಉಂಟಾಗಿತ್ತು.
ಭೌಗೋಳಿಕ
[ಬದಲಾಯಿಸಿ]ಸಮುದ್ರ ಮಟ್ಟದಿಂದ ೩೯೩ಮೀಟರ್ ಎತ್ತರದಲ್ಲಿ ಇದೆ, ೪.೨೫ ಕಿಮೀ ವಿಸ್ತೀರ್ಣ ಹೊಂದಿದೆ. ಭೀಮ ಹೊಳೆಯು ಈ ತಾಲೋಕಿನಲ್ಲಿ ಹರಿಯುವುದು. ೨೦೧೦ರ ಬೇಸಿಗೆಯಲ್ಲಿ ೪೬ಡಿಗ್ರಿ ಬಿಸಲು ದಾಖಲಾಗಿದೆ. ಜೇವರಗಿ ತಾಲ್ಲೂಕಿನ ವಿಸ್ತೀರ್ಣ 1,932.6 ಚ.ಕಿ.ಮೀ. ತಾಲ್ಲೂಕಿನಲ್ಲಿ ಐದು ಉಪವಿಭಾಗಗಳಿವೆ. 1 ಜೇವರಗಿ, 2 ಇಜೇರಿ, 3 ನೆಲೋಗಿ 4 ಯಡ್ರಾಮಿ ಮತ್ತು 5 ಆಂದೋಲಾ, ತಾಲ್ಲೂಕಿನಲ್ಲಿರುವ ಹಳ್ಳಿಗಳು 162.
ಜನಸಂಖ್ಯೆ
[ಬದಲಾಯಿಸಿ]೨೦೧೧ರ ಭಾರತದ ಜನಗಣತಿಯ ಪ್ರಕಾರ ಜೀವರ್ಗಿ 25686 ಜನಸಂಖ್ಯೆಯನ್ನು ಹೊಂದಿದ್ದು, 12976 ಪುರುಷರು ಮತ್ತು 12710 ಮಹಿಳೆಯರು ಇದ್ದಾರೆ.[೧]
ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]- ಕಡಕೋಳ ಮಡಿವಾಲೇಶ್ವರ ಮಠ
ಕಡಕೋಳ ಮಡಿವಾಲೇಶ್ವರ ಮಠ ಯಡ್ರಾಮಿಯಿಂದ ೬ ಕಿ.ಮೀ. ದೂರದಲ್ಲಿರುವ ಚಿಣಗೇರಿ ಹೊಳೆಯ ಎಡದಂಡೆಯ ಮೇಲಿರುವ ಧಾರ್ಮಿಕ ಕೇಂದ್ರಮಾಗಿದೆ. ಶರಣಬಸವೇಶ್ವರರ ಸಮಕಾಲೀನರಾದ ಕಡಕೋಳ ಮಡಿವಾಳಪ್ಪನವರ ಮಠದಿಂದಾಗಿ ಈ ಊರು ಪ್ರಸಿದ್ಧವಾಗಿದೆ. ಕಲ್ಬುರ್ಗಿ ತಾಲೂಕಿನ ಬಿದನೂರಿನಲ್ಲಿ ಜನಿಸಿದ ಮಡಿವಾಳಪ್ಪ ಶರಣ ಬಸವೇಶ್ವರರ ಪ್ರಭಾವದಿಂದ ಅರಳಗುಂಡಿಗೆಯಲ್ಲಿ ಸ್ವಲ್ಪಕಾಲ ಇದ್ದು ನಂತರ ಕಡಕೋಳಕ್ಕೆ ಬಂದು ನೆಲೆಸಿ ಅಲ್ಲೆ ಐಕ್ಯರಾದರು. ಇವರ ಸಮಾಧಿಯು ಇಲ್ಲಿದ್ದು ಮಡಿವಾಳಪ್ಪ ಮಠವೆಂದು ರೂಡಿಯಲ್ಲಿದೆ. ಮಡಿವಾಳೇಶ್ವರ ಮಠ ಪ್ರಾಚೀನ ಕಟ್ಟಡವಾಗಿದ್ದು ವಿಶಾಲವಾದ ಪ್ರಾಕಾರದಲ್ಲಿರುವ ಗುಡಿಯಲ್ಲಿ ವೇದಿಕೆಯ ಮೇಲೆ ಮಡಿವಾಳಪ್ಪ ಹಾಗೂ ಶಿಷ್ಯನ ಗದ್ದುಗೆಯು ಇರುವ ಭೀಮಾಶಂಕರನ ಗುಡಿ ಇದೆ. ವಚನಕಾರರಾಗಿದ್ದ ಮಡಿವಾಳಪ್ಪನವರು “ಕೈವಲ್ಯ ವಾಕ್ಯಾಮೃತ” ಎಂಬ ವಚನ ಕೃತಿಯನ್ನು ರಚಿಸಿದ್ದು ಹಲವಾರು ತತ್ವ ಪದಗಳನ್ನು ರಚಿಸಿದ್ದ[೨] ef>
- ಮಳ್ಳಿ
ಜೀವರ್ಗಿಯಿಂದ ೫೦ ಕಿ.ಮೀ.ದೂರದಲ್ಲಿರುವ ಮಳ್ಳಿಯು ನೆರೆಯ ಕುಳಗೇರಿ ಗ್ರಾಮದ ಶಾಸನದಲ್ಲಿ “ಮಣಳಿ” ಎಂದೇ ಪ್ರಖ್ಯಾತವಾಗಿದೆ.ಈ ಗ್ರಾಮ ಚೌಡೇಶ್ವರಿಯ ಜಾತ್ರೆಯಿಂದಾಗಿ ಮಹತ್ವ ಪಡೆದಿದೆ.ಈ ಊರಿನಲ್ಲಿ ಇರುವ ಅವಶೇಷಗಳ ಆಧಾರದ ಮೇಲೆ ಇದರ ಪ್ರಾಚೀನತೆಯನ್ನು ಸುಮಾರು ೧೦-೧೧ನೇ ಶತಮಾನದವು ಎಂದು ಗುತುತಿಸಬಹುದಾಗಿದೆ.ಇಲ್ಲಿ ಜಾತ್ರೆಯ ಮೊದಲ ದಿನ, ಚೌಡೇಶ್ವರಿಯ ಎರಡು ಬೆಳ್ಳಿಯ ಮುಖವಾಡಗಳನ್ನು ಪೂಜಿಸಿ ರಾತ್ರಿ ಊರಲ್ಲಿ ಮೆರೆಸುತ್ತಾರೆ. ಎರಡನೆಯ ದಿನ ಜಾತ್ರೆಯಲ್ಲಿ ದೇವಿಯರ ಮುಖವಾಡವನ್ನು ಧರಿಸಿ ಬಡಿಗೆಯಾಟ ಆಡುವರು. ಊರಲ್ಲಿ ಹನುಮಂತ, ಚೌಡಮ್ಮ, ಮರಗಮ್ಮನ ಗುಡಿಗಳಿದ್ದು. ಗಾಂಧೀಜಿಗೆಂದೇ ನಿರ್ಮಿಸಿದ ಗಾಂಧೀಗುಡಿ ಇರುವುದು ವಿಶಿಷ್ಟವಾಗಿದೆ. ಅಲ್ಲದೆ ಇಲ್ಲಿರುವ ಸಕ್ಕರೆ ಕಾರ್ಖಾನೆಯು ಪ್ರಸಿದ್ಧವಾಗಿದೆ.[೨]
ಜೇವರ್ಗಿ ಷಣ್ಮುಖ ಶಿವಯೋಗಿಗಮಠ:-
12ನೇ ಶತಮಾನದಲ್ಲಿ ಇಲ್ಲಿ ಪ್ರಮುಖ ವಚನಕಾರರಾದ ಶ್ರೀ ಷಣ್ಮುಖ ಶಿವಯೋಗಿಗಳು ನಡೆದಾಡಿದ ನೆಲ ಎಂದು ಪ್ರಸಿದ್ದಿ ಪಡೆದಿದೆ.ಇವರು ತಮ್ಮ ವಚನಗಳಮೂಲಕ ಮುಕ್ತಯ ಮಾರ್ಗ ಹಾಗೂ ಸಮಾಜೀಕ ಸಮಾನತೆಯ ತತ್ವಗಳನ್ನು ಸಾರಿದರು.
ರಾಜು ಮುದ್ದಡಗಿ
ಶಿಕ್ಷಣ
[ಬದಲಾಯಿಸಿ]- ಸರ್ಕಾರಿ ಪದವಿಪೂರ್ವ ಕಾಲೇಜು,ಜೀವರ್ಗಿ[೩]
- ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು,ಜೀವರ್ಗಿ[೪]
- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ,ಜೀವರ್ಗಿ.[೫]
ಉಲ್ಲೇಖನಗಳು
[ಬದಲಾಯಿಸಿ]- ↑ "Jevargi Population Census 2011". census2011.co.in accessdate 13 October 2016.
- ↑ ೨.೦ ೨.೧ "ಜೀವರ್ಗಿ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು". www.kanaja.in accessdate 13 October 2016. Archived from the original on 5 ಜೂನ್ 2016. Retrieved 13 ಅಕ್ಟೋಬರ್ 2016.
- ↑ "ಸರ್ಕಾರಿ ಪದವಿಪೂರ್ವ ಕಾಲೇಜು,ಜೀವರ್ಗಿ". www.pue.kar.nic.in accessdate 13 October 2016.
- ↑ "Government First Grade Degree College, Jevargi". www.prokerala.com accessdate 13 October 2016.
- ↑ "GOVT. ITI, Jevargi". www.pue.kar.nic.in accessdate 13 October 2016.
- Pages with non-numeric formatnum arguments
- Pages using the JsonConfig extension
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ಕರ್ನಾಟಕದ ಪ್ರಮುಖ ಸ್ಥಳಗಳು
- ಗುಲ್ಬರ್ಗಾ ಜಿಲ್ಲೆಯ ತಾಲೂಕುಗಳು