ಲೋಕಸಭೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ ೫೫೨ ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ ೫೩೦ ಸದಸ್ಯರು ಚುನಾಯಿತರಾಗುತ್ತಾರೆ. ೨೦ ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ ೨೫ ವರ್ಷ ವಯಸ್ಸಾಗಿರಬೇಕು.

ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ಪ್ರಸ್ಥ್ಹುತ ಕಾರ್ಯ ನಿರ್ವಹಿಸುತ್ತಿರುವ ೧೫ ನೆಯ ಲೋಕಸಭೆ ಮೇ, ೨೦೦೯ ರಲ್ಲಿ ಸೇರಿತು.

ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (೫೪೫ ಸದಸ್ಯರು: ೫೪೩ ಚುನಾಯಿತ + ೨ ನೇಮಿತ):

ರಾಜ್ಯಗಳು:

 1. ಆಂಧ್ರ ಪ್ರದೇಶ - ೪೨
 2. ಅರುಣಾಚಲ ಪ್ರದೇಶ - ೨
 3. ಅಸ್ಸಾಮ್ - ೧೪
 4. ಬಿಹಾರ - ೪೦
 5. ಚತ್ತೀಸ್‌ಗಢ - ೧೧
 6. ಗೋವ - ೨
 7. ಗುಜರಾತ್ - ೨೬
 8. ಹರ್ಯಾಣಾ - ೧೦
 9. ಹಿಮಾಚಲ ಪ್ರದೇಶ - ೪
 10. ಜಮ್ಮು ಮತ್ತು ಕಾಶ್ಮೀರ - ೬
 11. ಜಾರ್ಖಂಡ್ - ೧೪
 12. ಕರ್ನಾಟಕ - ೨೮
 13. ಕೇರಳ - ೨೦
 14. ಮಧ್ಯ ಪ್ರದೇಶ - ೨೯
 15. ಮಹಾರಾಷ್ಟ್ರ - ೪೮
 16. ಮಣಿಪುರ - ೨
 17. ಮೇಘಾಲಯ - ೨
 18. ಮಿಜೋರಮ್ - ೧
 19. ನಾಗಾಲ್ಯಾಂಡ್ - ೧
 20. ಒರಿಸ್ಸಾ - ೨೧
 21. ಪಂಜಾಬ್ - ೧೩
 22. ರಾಜಸ್ಥಾನ - ೨೫
 23. ಸಿಕ್ಕಿಮ್ - ೧
 24. ತಮಿಳುನಾಡು - ೩೯
 25. ತ್ರಿಪುರಾ - ೨
 26. ಉತ್ತರ ಪ್ರದೇಶ - ೮೫
 27. ಉತ್ತರಾಂಚಲ - ೫
 28. ಪಶ್ಚಿಮ ಬಂಗಾಳ - ೪೨

ಕೇಂದ್ರಾಡಳಿತ ಪ್ರದೇಶಗಳು

 1. ಅಂಡಮಾನ್ ಮತ್ತು ನಿಕೋಬಾರ್ - ೧
 2. ಚಂಡೀಗಢ - ೧
 3. ದಾದ್ರಾ ಮತ್ತು ನಗರ್ ಹವೇಲಿ - ೧
 4. ಡಾಮನ್ ಮತ್ತು ಡಿಯು - ೧
 5. ದೆಹಲಿ - ೭
 6. ಲಕ್ಷದ್ವೀಪ - ೧
 7. ಪಾಂಡಿಚೆರಿ - ೧

ಕೆಲಸ[ಬದಲಾಯಿಸಿ]

ಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಸಧ್ಯ ಲೋಕಸಭೆಯ ಸಭಾಧ್ಯಕ್ಷರಾಗಿದ್ದಾರೆ. ಇವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು.

ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ.

ಭಾರತ ಸರ್ಕಾರದ ಶಾಸಕಾಂಗದ ಇನ್ನೊಂದು ಸಭೆ ರಾಜ್ಯಸಭೆ. ಯಾವುದೇ ಮಸೂದೆಗೆ ಲೋಕಸಭೆ ಒಪ್ಪಿಗೆ ಇತ್ತ ನಂತರ ಅದು ರಾಜ್ಯಸಭೆಗೆ ಹೋಗುತ್ತದೆ. ರಾಜ್ಯಸಭೆಯೂ ಒಪ್ಪಿದ ನಂತರ ಈ ಮಸೂದೆ ಕಾಯಿದೆಯಾಗುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಮಸೂದೆಗಳ ವಿಷಯದಲ್ಲಿ ಮಾತ್ರ ರಾಜ್ಯಸಭೆಯ ಮಂಜೂರಾತಿ ಅಗತ್ಯವಿಲ್ಲ.

ಲೋಕ ಸಭೆಯಲ್ಲಿ ಪಕ್ಷಗಳ ಬಲಾಬಲ ೨೦೦೯-೨೦೧೩[ಬದಲಾಯಿಸಿ]

(೧-೮-೨೦೧೩) ಒಟ್ಟು ಲೋಕ ಸಭಾ ಸದಸ್ಯರು ೫೪೫ - ಬಹುಮತಕ್ಕೆ ೨೭೩ ಸ್ಥಾನಗಳು ಬೇಕು

 • ಚುನಾವಣೆಯ ಫಲಿತಾಂಶ :
 • ೨೦೦೯ ರ ಚುನಾವಣೆ ಯ ನಂತರದ ರಾಜಕೀಯ ಕೂಟಗಳು
 • ಯು ಪಿ ಎ - ಆಡಳಿತ ಪಕ್ಷಗಳ ಕೂಟ
 • ಶ್ರೀ. ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿ ಮುಂದುವರೆದಿದ್ದಾರೆ.
 • ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಿಯನ್ಸ್ - ಯು.ಪಿ.ಎ
 • ( ಕಾಂಗ್ರೆಸ್ + ಜೊತೆಯವರು) =೨೬೨
 • ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ - ೨೦೬;
 • ಡಿಎಮ್ ಕೆ . ೧೮
 • ಎನ್ ಸಿ ಪಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ೯
 • ನ್ಯಾಷನಲ್ ಕಾನ್ಪರೆನ್ಸ್ ೩
 • ಜಾರ್ಖಂಡ್ ಮುಕ್ತಿಮೋರ್ಚ ೨
 • ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್ ೨
 • ವಿದುತಲೈ ತಿರುತಾಯ್ಗಳ್ ಕಚ್ಚಿ ೧
 • ಕೇರಳ ಕಾಂಗ್ರೆಸ್ (ಮಣಿ) ೧
 • ಆಲ್ ಇಚಿಡಿಯಾ ಮುಜ್ಲಿಸ್-ಇತ್ತೇಹಾದ್ -ನುಸ್ಲಿಮೀನ್ -೧
 • ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಥೆವಲೆ) ೦
 • (ಹೊರಗಿನಿಂದ ಬೆಂಬಲ-ಸಮಾಜವಾದಿ ಪಾರ್ಟಿ ೨೩ ; ಬಹುಜನ ಸಮಾಜವಾದಿ ಪಾರ್ಟಿ ೨೧ ; ಆರ್ ಜೆ. ಡಿ. ೪ : ಜೆ ಡಿ ಎಸ್ ೪ ; (ಆರ್ ಎಲ್ಡಿ ೫)ಜೆಡಿಎಸ್ ೩ ; ಪಕ್ಷೆತರ ೪
 • ತೃಣಮೂಲ ಕಾಂಗ್ರೆಸ್ -ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ೧೯ ((ಬೇಬಲ ಹಿಂತೆಗೆದಿದೆ)

ಎನ್ ಡಿ ಎ[ಬದಲಾಯಿಸಿ]

 • ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್ :- ೧೫೯
 • ಭಾರತೀಯ ಜನತಾ ಫಾರ್ಟಿ ೧೧೬.
 • ಜನತಾದಳ (ಯುನ್ಶೆಟೆಡ್ ) ೨೦ (ಬೇಬಲ ಹಿಂತೆಗೆದಿದೆ)
 • ಶಿವ ಸೇನ ೧೧
 • ರಾಷ್ಟೀಯ ಲೋಕದಳ ೫ ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ೦
 • ಶಿರೋಮಣಿಅಕಲಿದಳ ೪
 • ತೆಲಂಗಾಣ ರಾಷ್ಟೀಯ ಸಮಿತಿ ೨
 • ಅಸ್ಸಾಮ್ ಗಣತಂತ್ರ ಪರಿಷತ್ ೧
 • ಇಂಡಿಯನ್ ನ್ಯಾಶನಲ್ ಲೋಕದಳ ೦

೩ ನೇ ಒಕ್ಕೋಟ[ಬದಲಾಯಿಸಿ]

 • ಲೋಕ ಸಭೆಯ ೭೯ ಸ್ಥಾನಗಳು
 • ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್) ೧೬
 • ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ೪
 • ರೆವಲ್ಯೂ ಶನರಿ ಸೋಸಿಯಲಿಸ್ಟ್ ಪಾರ್ಟಿ ೨
 • ಆಲ್ ಇಂಡಿಯಾ ಫಾರ್ವರ‍್ಡ್ ಬ್ಲಾಕ್ ೨
 • ಬಹುಜನ ಸಮಾವಾದಿ ಪಾರ್ಟಿ ೨೧
 • ಬಿಜು ಜನತಾದಳ ೧೪
 • ಆಲ್ ಇಂಡಿಯಾ ದ್ರವಿಡ ಮುನ್ನೇತ್ರ ಕಜಗಂ ೯
 • ತೆಲಗುದೇಶಂ ಪಾರ್ಟಿ ೬
 • ಜನತಾದಳ್ ಸೆಕ್ಯುಲರ್ ೩
 • ಎಮ್ ಡಿ ಎಮ್ ಕೆ ೧
 • ಹರಿಯಾನ ಜನಹಿತ ಕಾಂಗ್ರೆಸ್ ೧
 • ಪಿ ಎಮ್ ಕೆ ೦

ನಾಲ್ಕನೆ ಒಕ್ಕೂಟ :[ಬದಲಾಯಿಸಿ]

 • ಸಮಾಜವಾದಿ ಪಾರ್ಟಿ ೨೩
 • ರಾಷ್ಟ್ರೀಯ ಜನತಾದಳ ೪
 • ಲೋಕ ಜನಶಕ್ತಿ ಪಾರ್ಟಿ ೦
 • ಇತರರು ಮತ್ತು ಪಕ್ಷೇತರರು ೨೭ ಸದಸ್ಯರು

೧೯೯೮ ರಿಂದ ೨೦೦೯ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ[ಬದಲಾಯಿಸಿ]

ವರ್ಷ ಕಾಂಗ್ರೆಸ್.ಸ್ಥಾನ .ಶೇಕಡ ಓಟು. ಹೆಚ್ಚು/ಕಡಿಮೆ ಯು.ಪಿಯೆ. ಬಿ ಜೆ ಪಿ.ಸ್ಥಾನ .ಶೇಕಡ ಓಟು ಹೆಚ್ಚು/ಕಡಿಮೆ. +/-% ಎನ್.ಡಿ.ಎ
1998 141 25.82% - ೧ 26.14% (26.42) 182  :25.59% +25 --- 37.21%(46.61)
1999(0 114 -- -27 Utd. Ft 28.30% 182 -- -- -- 269+29 TDP;37.06%
2004 145 35.4% 31:+7.1% 218+117 /35.4% 138 22.16% -44 -3.76% ಎನ್.ಡಿ.ಎ(-89: 33.3%)
2009 206 +2 28.55% +80 262 +63 ಇತರೆ ಬೆಂಬಲ 37.22% 116 18.80% -3.36% ಎನ್.ಡಿ.ಎ:159:24.63% (:-4.88%)
2009-> ಕಾಂ:ಪಡೆ ದ ಓಟು 153482356 -- ಬಿಜೆಪಿ ಪಡೆದ ಓಟು 102689312 -- -- -- --
2014 2014 2014 2014 2014 2014 2014 2014 2014 --

ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"http://kn.wikipedia.org/w/index.php?title=ಲೋಕಸಭೆ&oldid=462846" ಇಂದ ಪಡೆಯಲ್ಪಟ್ಟಿದೆ