ಮೀರಾ ಕುಮಾರ್

ವಿಕಿಪೀಡಿಯ ಇಂದ
Jump to navigation Jump to search
ಮೀರಾ ಕುಮಾರ್
Meira Kumar
Meira Kumar.jpg

ಲೋಕಸಭೆಯ 15 ನೇ ಸ್ಪೀಕರ್
ಅಧಿಕಾರ ಅವಧಿ
4 June 2009 – 18 May 2014
ಪ್ರತಿನಿಧಿ ಕರಿಯಾ ಮುಂಡಾ
ಪೂರ್ವಾಧಿಕಾರಿ ಸೋಮನಾಥ ಚಟರ್ಜಿ
ಉತ್ತರಾಧಿಕಾರಿ ಸುಮಿತ್ರಾ ಮಹಾಜನ್

ಅಧಿಕಾರ ಅವಧಿ
10 May 2004 – 12 May 2014
ಪೂರ್ವಾಧಿಕಾರಿ ಮುನಿ ಲಾಲ್
ಉತ್ತರಾಧಿಕಾರಿ ಛೇಡಿ ಪಾಸ್ವಾನ್
ವೈಯಕ್ತಿಕ ಮಾಹಿತಿ
ಜನನ (1945-03-31) 31 March 1945 (age 74)
ಪಾಟ್ನಾ, ಬಿಹಾರ, ಬ್ರಿಟಿಷ್ ಇಂಡಿಯಾ
ರಾಜಕೀಯ ಪಕ್ಷ ಕಾಂಗ್ರೆಸ್
ಸಂಗಾತಿ(ಗಳು) ಮಂಜುಲ್ ಕುಮಾರ್
ಮಕ್ಕಳು 1 ಮಗ, 2 ಪುತ್ರಿಯರು
ತಂದೆ/ತಾಯಿ ಜಗ್ಜೀವನ್ ರಾಮ್ (ತಂದೆ)

ಇಂದ್ರನಿ ದೇವಿ (ತಾಯಿ)

ಅಭ್ಯಸಿಸಿದ ವಿದ್ಯಾಪೀಠ ದೆಹಲಿ ವಿಶ್ವವಿದ್ಯಾಲಯ
ವೃತ್ತಿ ವಕೀಲ, ರಾಜಕಾರಣಿ, ರಾಜತಾಂತ್ರಿಕ

ಮೀರಾ ಕುಮಾರ್ ಭಾರತೀಯ ರಾಜಕಾರಣಿ, ವಕೀಲೆ ಮತ್ತು ಐದು ಬಾರಿ ಸಂಸತ್ ಸದಸ್ಯರಾಗಿದ್ದರು. ಭಾರತೀಯ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ 2009 ರಿಂದ 2014 ರವರೆಗೆ ಕಾರ್ಯನಿರ್ವಹಿಸಿದ್ದಾರೆ . ಅವರು ಪ್ರಸ್ತುತ ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ ಅಧ್ಯಕ್ಷೀಯ ಯುಪಿಎ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿದ್ದಾರೆ.[೧][೨].[೩][೪]

ಆರಂಭಿಕ ಜೀವನ[ಬದಲಾಯಿಸಿ]

ಮೀರಾ ಕುಮಾರ್ ಬಿಹಾರದ ಅರಾಹ್ ಜಿಲ್ಲೆಯಲ್ಲಿ ಮಾಜಿ ಉಪ ಪ್ರಧಾನಿ ಮತ್ತು ಪ್ರಮುಖ ದಲಿತ ನಾಯಕ ಜಗ್ಜೀವನ್ ರಾಮ್ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ಇಂದ್ರನಿ ದೇವಿಯವರಿಗೆ ಜನಿಸಿದರು. ಅವರು ಜೈಪುರದಲ್ಲಿನ ವೆಲ್ಹಾಮ್ ಗರ್ಲ್ಸ್ ಸ್ಕೂಲ್, ಡೆಹ್ರಾಡೂನ್ ಮತ್ತು ಮಹಾರಾಣಿ ಗಾಯತ್ರಿ ದೇವಿ ಗರ್ಲ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಣದ ನಂತರ ಬಾನಸ್ಥಾಲಿ ವಿದ್ಯಾಪೀಠದಲ್ಲಿ ಅಲ್ಪ ಅವಧಿಯವರೆಗೆ ಅಧ್ಯಯನ ಮಾಡಿದರು. ಎಮ್.ಎ ಮತ್ತು ಎಲ್.ಎಲ್.ಬಿ. ಇಂದ್ರಪ್ರಸ್ಥ ಕಾಲೇಜಿನಲ್ಲಿ ಮತ್ತು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ನಿಂದ ಪಡೆದರು. 2010 ರಲ್ಲಿ ಬಾಣಸ್ಥಾಲಿ ವಿದ್ಯಾಪೀಠ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.[೫][೬]

ಭಾರತದ ರಾಯಭಾರಿ[ಬದಲಾಯಿಸಿ]

1970ರಲ್ಲಿ ಇವರು ಭಾರತೀಯ ವಿದೇಶ ಸೇವೆಗೆ ಸೇರ್ಪಡೆಗೊಂಡಿದ್ದರು. ಹಲವಾರು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.[೭]

ರಾಜಕೀಯ[ಬದಲಾಯಿಸಿ]

1985ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಅವರು, ಆ ವರ್ಷ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಬಿಜ್ನೋರ್ ಕ್ಷೇತ್ರದಿಂದ ಸ್ಪರ್ಧಿಸಿ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಮಾಯಾವತಿಯವರನ್ನು ಸೋಲಿಸಿ ಆಯ್ಕೆಯಾಗಿದ್ದರು.8, 11 ಹಾಗೂ 12ನೇ ಲೋಕಸಭೆಗಳಿಗೆ ದೆಹಲಿಯ ಕರ್ನೊಲ್ ಭಾಗ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.1999ರ ಮಹಾ ಚುನಾವಣೆಯಲ್ಲಿ ಸೋತಿದ್ದರು. 2004 ಮತ್ತು 2009 ರಲ್ಲಿ ಬಿಹಾರದ ಸಸಾರಾಮ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. [೮] [೯]

2014ರಲ್ಲಿ ಸೋಲು[ಬದಲಾಯಿಸಿ]

2004ರಿಂದ 2009ರವರೆಗೆ ಕೇಂದ್ರದ ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಸಚಿವೆಯಾಗಿದ್ದರು. 2009ರಲ್ಲಿ ಲೋಕಸಭೆಯ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಸಸಾರಾಮ್ ಕ್ಷೇತ್ರದಲ್ಲಿ ಬಿಜೆಪಿಯ ಛೆಡ್ಡಿ ಪಾಸ್ವಾನ್ ವಿರುದ್ಧ 63,327 ಮತಗಳ ಅಂತರದಲ್ಲಿ ಸೋತಿದ್ದರು.[೧೦]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]