ಅಧ್ಯಕ್ಷೀಯ ಚುನಾವಣೆ 17 ಜುಲೈ 2017 ರಂದು ನಡೆಯಿತು ಮತ್ತು ಜುಲೈ 20 ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕಚೇರಿ ಅಧಿಕಾರ 24 ಜುಲೈ 2017 ರಂದು ಮುಕ್ತಾಯಗೊಳ್ಳಲಿತ್ತು.ಮುಖರ್ಜಿ ಮರು ಚುನಾವಣೆಗೆ ನಿರಾಕರಿಸಿದರು.ಬಿಹಾರದ ಗವರ್ನರ್ ಭಾರತೀಯ ಜನತಾ ಪಕ್ಷದ ರಾಮ್ ನಾಥ್ ಕೋವಿಂದ್ ಅವರು ಆಡಳಿತಾರೂಢ ರಾಷ್ಟ್ರೀಯ ಡೆಮಾಕ್ರಟಿಕ್ ಒಕ್ಕೂಟ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಭ್ಯರ್ಥಿ ಮೀರಾಕುಮಾರ್ ಆಗಿದ್ದರು. ಫೆಡರಲ್, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಶಾಸಕಾಂಗದ ಚುನಾವಣಾ ಕಾಲೇಜಿನ ಚುನಾಯಿತ ಸದಸ್ಯರಿಂದ ಕೋವಿಂದ್ ಸರಿಸುಮಾರಾಗಿ ಮೂರನೇ ಎರಡರಷ್ಟು ಮತಗಳನ್ನು ಪಡೆದರು ಮತ್ತು ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ಆಯ್ಕೆಯಾದರು.ಕೋವಿಂದ್ ಅವರ ಕಚೇರಿಯ ಅವಧಿಯು 25 ಜುಲೈ 2017 ರಂದು ಪ್ರಾರಂಭವಾಯಿತು.
ಭಾರತದ ಸಂವಿಧಾನದ 52ನೇ ವಿಧಿಯು ರಾಷ್ಟ್ರಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೊಂದಿರಲು ನಿರ್ದೇಶಿಸುತ್ತದೆ. ಭಾರತದ ರಾಷ್ಟ್ರಪತಿಯವರು ಸಂವಿಧಾನ ಮುಖ್ಯಸ್ಥರೂ, ರಾಷ್ಟ್ರದ ಪ್ರಥಮ ಪ್ರಜೆಯೂ, ಕಾರ್ಯಾಂಗದ ಮುಖ್ಯಸ್ಥರೂ ಹಾಗೂ ಮೂರು ಭಾರತದ ಸೇನಾಪಡೆಗಳಾದ ವಾಯುಪಡೆ, ಭೂಪಡೆ, ಮತ್ತು ನೌಕಾಪಡೆಯ ಮಹಾದಂಡನಾಯಕರೂ ಆಗಿರುತ್ತಾರೆ. ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು ವಿಶೇಷ ಅಧಿಕಾರಗಳನ್ನು ಹೊಂದಿದ್ದು ಸರ್ವೋನ್ನತ ಸ್ಥಾನವನ್ನು ಹೊಂದಿದ್ದಾರೆ. ಅವರು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ಸಂವಿಧಾನದ ರಕ್ಷಕರೂ ಆಗಿದ್ದಾರೆ. ಆದರೆ ಈ ಎಲ್ಲಾ ಅಧಿಕಾರಗಳ ಮಿತಿಗಾಗಿ ಅವರು ಯಾವುದೇ ಅಧಿಕಾರ ಚಲಾಯಿಸಲು ಪ್ರಧಾನ ಮಂತ್ರಿಯವರ ಅಥವಾ ಕೇಂದ್ರ ಮಂತ್ರಿಮಂಡಳದ ಸಲಹೆಯ ಮೇಲೆ ಮಾತ್ರ ಆಜ್ಞೆ ಮಾಡಬಹುದು.
ಸಂಸತ್ತಿನ ಚುನಾಯಿತ ಸದಸ್ಯರು ಮತ್ತು ಚುನಾವಣಾ ಕಾಲೇಜು ರಚಿಸುವ ಚುನಾಯಿತ ಶಾಸನಸಭೆಯ ಸದಸ್ಯರು, ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಚುನಾಯಿತ ಪ್ರತಿನಿಧಿ ಕ್ಷೇತ್ರದ ಜನಸಂಖ್ಯೆಯ ಮೇಲೆ ಅವಲಂಬಿತವಾಗಿರುವ ವಿಶೇಷ ಸೂತ್ರದ ಪ್ರಕಾರ ಪ್ರತಿ ಮತದ ಮೌಲ್ಯವನ್ನು ಲೆಕ್ಕಹಾಕಲಾಗುತ್ತದೆ.[೨]
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಧಿಕಾರಾವಧಿ ಜುಲೈ 24ರಂದು ಕೊನೆಗೊಳ್ಳಲಿತ್ತು. ಅದಕ್ಕಾಗಿ ರಾಷ್ಟ್ರಪತಿ ಚುನಾವಣೆ ಜುಲೈ 17ರಂದು ನಡೆಯಿಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತ್ತು. (ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿ ಇದ್ದಲ್ಲಿ). ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜುಲೈ 28 ಕೊನೆಯ ದಿನ. ಜುಲೈ 20ರಂದು ಮತ ಎಣಿಕೆ.’ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ತಿಳಿಸಿದರು. ಈ ಬಗ್ಗೆ 14ರಂದು ಅಧಿಸೂಚನೆ ಹೊರಡಿಸಲಾಉಇತು..
ವಿಶೇಷ ಪೆನ್: ರಾಷ್ಟ್ರಪತಿ ಚುನಾವಣೆಯಲ್ಲಿ ಈ ಬಾರಿ ಮತದಾರರಿಗೆ ವಿಶೇಷ ಪೆನ್ ನೀಡಲು ಆಯೋಗ ನಿರ್ಧರಿಸಿದೆ. ಕಳೆದ ವರ್ಷ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಉಂಟಾದ ವಿವಾದದಿಂದಾಗಿ ಈ ಕ್ರಮಕೈಗೊಂಡಿದೆ. ‘ಆಯೋಗವೇ ನೀಡುವ ವಿಶೇಷ ಪೆನ್ ಬಳಸಿ ಮತ ಚಲಾಯಿಸಬೇಕು. ಮತಗಟ್ಟೆಯಲ್ಲಿ ಅಧಿಕಾರಿಗಳು ಈ ಪೆನ್ ನೀಡುತ್ತಾರೆ. ಇತರ ಯಾವುದೇ ರೀತಿಯ ಪೆನ್ ಬಳಸಿ ಮತ ಚಲಾಯಿಸಿದರೆ ಅದು ತಿರಸ್ಕೃತವಾಗಲಿದೆ’ ಎಂದು ಜೈದಿ ತಿಳಿಸಿದ್ದಾರೆ.[೩]
ಈ ಮೇಲಿನ ಸಂಖ್ಯೆಯನ್ನು ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯಲ್ಲಿ ತೆಗೆದುಕೊಂಡರೆ, ಎನ್ಡಿಎ (NDA) ಅಥವಾ ವಿರೋಧ ಪಕ್ಷಗಳು ಇದೀಗ ಸರಳ ಬಹುಮತವನ್ನು ಪಡೆದಿಲ್ಲ. ಆದ್ದರಿಂದ, ಎರಡೂ ಶಿಬಿರದಲ್ಲಿಲ್ಲದ ಟಿಆರ್‍ಎಸ್, ಬಿಜೆಡಿ, ಎಐಎಡಿಎಮ್‍ಕೆ (TRS, BJD ಮತ್ತು AIADMK) ನಂತಹ ತೀರ್ಮಾನಿಸದಿರುವ ಪಕ್ಷಗಳು ಸಂಖ್ಯೆಗಳ ಆಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
೧.) ಬಿಜೆಪಿ, ಶಿವಸೇನೆ, ತೆಲುಗು ದೇಶಂ ಪಕ್ಷ (ಟಿಡಿಪಿ), ಅಕಾಲಿ ದಳ, ಲೋಕ ಜನಶಕ್ತಿ ಪಾರ್ಟಿ (ಎಲ್ಜೆಪಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು 14 ಇತರ ಪಕ್ಷಗಳು ಕೇಂದ್ರದಲ್ಲಿ ರಾಷ್ಟ್ರೀಯ ಡೆಮಾಕ್ರಟಿಕ್ ಅಲೈಯನ್ಸ್ (NDA) ಆಡಳಿತವನ್ನು ಹೊಂದಿವೆ. ಪ್ರಸ್ತುತ ಎನ್ಡಿಎ 5,37,614 ಮತಗಳನ್ನು ಹೊಂದಿದೆ. ಬಹುಮತವನ್ನು ತಲುಪಲು ಈ ಮೈತ್ರಿ 11,828 ಮತಗಳಿಗೆ ಇನ್ನೂ ಕಡಿಮೆಯಾಗಿದೆ.
೨.)ಮತ್ತೊಂದೆಡೆ ಯು.ಪಿ.ಎ. ವಿರೋಧ ಕೂಟ, 4,02,230 ಮತಗಳನ್ನು ಪಡೆವುದನ್ನು ತೋರುತ್ತದೆ. ಇದು ಬಹುಮತಕ್ಕೆ 1,47,212 ಮತಗಳಷ್ಟು ದೊಡ್ಡ ಅಂತರ ಹೊದಿದೆ.
೩.)ಎಡಿಎಡಿಎಂಕೆ, ಬಿಜು ಜನತಾ ದಳ (ಬಿಜೆಡಿ), ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್), ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ), ಆಮ್ ಆದ್ಮಿ ಪಾರ್ಟಿ ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್ಎಲ್ಡಿ) ಗಳು ಈ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. 59,038 ಮತಗಳು. ಈ ಪಕ್ಷಗಳು ಮತ ಪೈನಲ್ಲಿ (ವೃತ್ತನಕ್ಷೆಯಲ್ಲಿ) ಶೇ.13 ರಷ್ಟು ಪಾಲು ಹೊಂದಿವೆ. ಅವುಗಳ ರಾಜ್ಯ ರಾಜಕೀಯ ಮೈದಾನದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಸಂಬಂಧಿಸಿಲ್ಲ.
೪.) ಪ್ರಸ್ತುತ ವಿಷಯದಲ್ಲಿ, ಎಡಿಎಡಿಎಂಕೆ ಬೆಂಬಲದ (59224 ಮತಗಳು) ಮೂಲಕ ಎನ್ಡಿಎ ಕೇವಲ 5,96,838 ಮತಗಳನ್ನು ಪಡೆಯುಲು ಸಾಧ್ಯ. ಅದಕ್ಕಾಗಿ ಹೇಗಾದರೂ, ಕಾಂಗ್ರೆಸ್ ನೇತೃತ್ವದ ವಿರೋಧಿ ಬಣ ತನ್ನ ಅಭ್ಯರ್ಥಿ ಮೇಲುಗೈಸಾಧಿಸಲು, ಕನಿಷ್ಠ ಶಿವಸೇನೆ, ಎಐಎಡಿಎಂಕೆ, ಬಿಜೆಡಿ, ಎಎಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಬೆಂಬಲ ಪಡೆಯುವ ಕಷ್ಟಕರ ಕೆಲಸವನ್ನು ಮಾಡಬೇಕಾಗುವುದು. ಅದು ಬಹುಮತದ ಸಂಖ್ಯೆಯ ಗಡಿಯನ್ನು ದಾಟಿ 5,49,814 ಮತಗಳ ಎಣಿಕೆಗೆ ಬರುತ್ತದೆ.
ಈ ಕೆಲವು ಪ್ರತಿಪಕ್ಷಗಳು ಈಗ ಅಭ್ಯರ್ಥಿ ಮೇಲೆ ಒಮ್ಮತಕ್ಕೆ ಬರದಿದ್ದರೆ, ಅವರು ಸರ್ಕಾರದ ಆಯ್ಕೆ ಮಾಡುವ ಅಭ್ಯರ್ಥಿಯನ್ನು ಬೆಂಬಲಿಸುವರು ಎಂದು ಹೇಳುವ ಮೂಲಕ ಸರ್ಕಾರದ ಅಂಗಳದಲ್ಲಿ ಚೆಂಡನ್ನು ಬಿಟ್ಟು ಹೋಗಿದ್ದಾರೆ. ಹೇಗಾದರೂ, ವಿರೋಧ ಪಕ್ಷಗಳು ಕಾಂಗ್ರೆಸ್ ಹಿಂದೆ ನಿಂತಿವೆ. ಸೋನಿಯಾ ಗಾಂಧಿ, ವಿರೋಧ ಪಕ್ಷಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ.
ಎಐಎಡಿಎಂಕೆ 59224 ಮತಗಳೊಂದಿಗೆ ಇನ್ನೂ ಪ್ರಮುಖ ನಿರ್ಣಾಯಕ ಸ್ಥಾನದಲ್ಲಿ ಉಳಿದಿದೆ ಆದರೆ ಉನ್ನತ ಬಿಜೆಪಿ ನಾಯಕತ್ವವನ್ನು ನಿಯಮಿತವಾಗಿ ಅನುಸರಿಸುತ್ತಿದ್ದರೂ ಸಹ, ಅದು ಪಕ್ಷದ ನಾಯಕತ್ವದ ಬಿಕ್ಕಟ್ಟಿನಿಂದಾಗಿ ಎನ್ಡಿಎ ಅಥವಾ ಪ್ರತಿಪಕ್ಷದ ಬೆಂಬಲವಾಗಿ ಹೊರಬಂದಿಲ್ಲ. ಎಎಪಿಗೆ ಸಂಬಂಧಿಸಿದಂತೆ, ಅದು ಬಿಜೆಪಿಯೊಂದಿಗೆ ಕುಸ್ತಿಯಲ್ಲಿದೆ ಮತ್ತು ಅದು ತಟಸ್ಥವೆಂದು ಹೇಳಿಕೊಂಡಿದ್ದರೂ ಸಹ, ಪ್ರತಿಪಕ್ಷದ ಏಕತೆಯೊಂದಿಗೆ ನಿಲ್ಲುವುದು ಅವರ ಹೆಚ್ಚಿನ ಆಯ್ಕೆಯಾಗಿದೆ.
ಟಿಆರ್‍ಎಸ್ ಗೆ ಸಂಬಂಧಿಸಿದಂತೆ, ಇತ್ತೀಚೆಗೆ ಅಮಿತ್ ಶಾ ಅವರೊಂದಿಗಿನ ಹಣಾಹಣಿ ನೆಡೆದಿದೆ. ಮತ್ತು ರಾಜ್ಯದಲ್ಲಿ ತೆಲಂಗಾಣದ ಬಿಜೆಪಿಯಿಂದ ಎನ್ಡಿಎಗೆ ಕಳವಳ ಉಂಟಾಗಬಹುದು. ಇತ್ತೀಚೆಗೆ ಅಲ್ಲಿಯ ಹಿರಿಯ ಬಿಜೆಪಿ ನಾಯಕ ಎನ್. ಜನಾರ್ದನ ರೆಡ್ಡಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನೇತೃತ್ವದ ಸರಕಾರ ಭ್ರಷ್ಟಾಚಾರದಿಂದ ಮುಳುಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಡಿಯ (ಬಿಜು) ವಿಷಯದಲ್ಲಿ, ಬಿಜೆಪಿ ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿತ್ತು. ಆದರೆ ಸ್ಥಳೀಯಸಂಸ್ಥೆಚುನಾವಣೆಯ ನಂತರ ಸಂಬಂಧ ಹಳಸಿದೆ.[೪]
ಸಂಸತ್ತಿನ ಚುನಾಯಿತ ಸದಸ್ಯರು ಮತ್ತು ಚುನಾವಣಾ ಕಾಲೇಜು ರಚಿಸುವ ಶಾಸನಸಭೆಯ ಸದಸ್ಯರು, ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಚುನಾಯಿತ ಪ್ರತಿನಿಧಿ ಕ್ಷೇತ್ರದ ಜನಸಂಖ್ಯೆಯ ಮೇಲೆ ಅವಲಂಬಿತವಾಗಿರುವ ವಿಶೇಷ ಸೂತ್ರದ ಪ್ರಕಾರ ಪ್ರತಿ ಮತದ ಮೌಲ್ಯವನ್ನು ಲೆಕ್ಕಹಾಕಲಾಗುತ್ತದೆ.
ಮತದಾನ ಕಾಲೇಜ್‍ನಲ್ಲಿ ಒಟ್ಟು 4,896 ಮತದಾರರಿರುತ್ತಾರೆ. ಈ ಚುನಾವಣಾ ಕಾಲೇಜು ದೇಶಾದ್ಯಂತ 543 ಲೋಕಸಭಾಸದಸ್ಯರು,233 ರಾಜ್ಯಸಭಾ ಸದಸ್ಯರು ಒಟ್ಟು 776 ಸಂಸತ್ ಸದಸ್ಯರು (ಎಂಪಿಗಳು) ಮತ್ತು 4,120 ಶಾಸನಸಭೆಗಳ ಸದಸ್ಯರು (ಎಂಎಲ್ಎ)ಗಳನ್ನು ಒಳಗೊಂಡಿದೆ. ಹಿಂದೂಸ್ಥಾನ್ ಟೈಮ್ಸ್ನ ಪ್ರಕಾರ, ಸಂಸದರ ಮತಗಳ ಒಟ್ಟು ಮೌಲ್ಯ 5,49,408 ಮತಗಳು ಮತ್ತು ರಾಜ್ಯ ಕೇಂದ್ರಾಡಳಿತ ಪ್ರದೇಶಗಳ ಶಾಸನ ಸಭಾ ಸದಸ್ಯರ (ಎಂಎಲ್‍ಎ) ಮತಗಳ ಒಟ್ಟು ಮೌಲ್ಯ 5,49,474 ಮತಗಳು. ಎಂಎಲ್ಎ ಮತಗಳ ಮೌಲ್ಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಯುಟಿಗಳ) ನಡುವೆ ಭಿನ್ನವಾಗಿದ್ದು, ಎಂಪಿ ಮತದ ಮೌಲ್ಯವು 708 ಆಗಿದೆ. ಚುನಾವಣಾ ಕಾಲೇಜಿನ ಮತಗಳ ಒಟ್ಟು ಮೌಲ್ಯ 10,98,882 ಮತಗಳು. ಅಧ್ಯಕ್ಷರನ್ನು ಆಯ್ಕೆಮಾಡುವ ಕನಿಷ್ಠ ಸಂಖ್ಯೆ (ಬಹುಮತಕ್ಕೆ) 5,49,442 ಮತಗಳು. (ಇದು ಅಲ್ಪಸ್ವಲ್ಪ ಬದಲಾವಣೆಗಳಾಗುವ ಸಾಧ್ಯತೆ ಇದೆ)[೫][೬]
೧.) ಒಬ್ಬ ಎಂ.ಎಲ್.ಎ.ಯ ಓಟಿನ ಲೆಕ್ಕ: ೧೯೭೧ರ ಸೆನ್ಸಸ್ ನ ಜನಸಂಖ್ಯೆ/ಭಾಗಿಸು/ ೧೦೦೦ X ಚುನಾಯಿತ ಸದಸ್ಯರ ಸಂಖ್ಯೆ;
(೧೯೭೧ ರಲ್ಲಿದ ಜನರಸಂಖ್ಯೆಯನ್ನು ೧೦೦೦ ದಿಂದ ಬಾಗಿಸಿ ಪುನಃ ಆ ರಾಜ್ಯದ ಚುನಾಯಿತ ಶಾಸನ ಸಭಾಸದಸ್ಯರ ಸಂಖ್ಯೆಯಿಂದ ಭಾಗಿಸಬೇಕು; ಅದ ಒಬ್ಬ ಸದಸ್ಯನು ಹೊಂದಿರುವ ಓಟುಗಳು; ಇದು ರಾಜ್ಯ ರಾಜ್ಯಗಳಿಗೆ ಜನಸಂಖ್ಯೆ ಮತ್ತು ಚುನಾಯಿತ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಬದಲಾಗುವುದು.)
ಹಾಲಿ ಇರುವ ಎಲ್ಲಾ ೩೧ ರಾಜ್ಯಗಳ ಎಂ.ಎಲ್.ಎ. ಗಳ ಒಟ್ಟು ಓಟುಗಳು =549474
೨.) ಒಬ್ಬ ಎಂ.ಪಿ. ಸಂಸತ್ ಸದಸ್ಯನ ಓಟು : ಒಟ್ಟು ಮತದಾನ ಮಾಡುವ ಅರ್ಹತೆಯ ಎಂ.ಪಿ. ಗಳು ೭೭೬ ಮೇಲಿನ ಲೆಕ್ಕದಮತೆ ಒಬ್ಬ ಎಂಪಿ.ಗೆ ೭೦೮ ಓಟುಗಳು; ಒಟ್ಟು =.549408
ಲೋಕಸಭೆಯ ಮತ್ತು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ಅನುಮತಿ ಇಲ್ಲ. ರಹಸ್ಯ ಮತದಾನ ಮೂಲಕ ಮತದಾನವನ್ನು ಮಾಡಲಾಗುತ್ತದೆ ಮತ್ತು ಸದಸ್ಯರು ಯಾವುದೇ ಪಕ್ಷದ ಮತನಿರ್ದೇಶನ(ವಿಪ್)ಗಳಿಂದ ಬಂಧಿಸಲ್ಪಡುತ್ತಾರೆ. ಎಮ್ಎಲ್ಎಗಳ ಮತಗಳ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಆದರೆ ಎಂಪಿಗಳ ಮತಗಳ ಮೌಲ್ಯವನ್ನು ನಿಗದಿಪಡಿಸಲಾಗಿದೆ. ಒಟ್ಟಾರೆ ಚುನಾವಣಾ ಕಾಲೇಜಿನಲ್ಲಿ ಸಂಸದರು ಮತ್ತು ಶಾಸಕರ (ಪ್ರತಿ/50 ಪ್ರತಿಶತ) ಮತಗಳಿಗೆ ಸಮನಾದ ಬೆಲೆಯನ್ನು ನೀಡಲಾಗುತ್ತದೆ.
ಏಕೈಕ ವರ್ಗಾವಣೆ ಮಾಡಬಹುದಾದ ಮತಗಳ ಮೂಲಕ ಪ್ರಮಾಣಾನುಗುಣ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಚುನಾವಣೆ ನಡೆಯುತ್ತದೆ. ಅಭ್ಯರ್ಥಿಗಳ ಹೆಸರುಗಳ ವಿರುದ್ಧ, ಅವನ / ಅವಳ ಆದ್ಯತೆಯ ಕ್ರಮದಲ್ಲಿ, ಪ್ರತಿ ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 1, 2, 3 ಮತ್ತು ಇನ್ನಿತರ ಸ್ಥಾನಗಳನ್ನು ಇಟ್ಟುಕೊಂಡು ಆದ್ಯತೆಗಳನ್ನು ಗುರುತಿಸಬೇಕು.
(ಎಂದರೆ ಪ್ರತಿಯೊಬ್ಬ ಅಭ್ಯರ್ಥಿಗೂ ಓಟು ಮಾಡಬೇಕು; ಮೊದಲಿನ ಆದ್ಯತೆಯ ಅಭ್ಯರ್ಥಿಗೆ 1; ನಂತರ 2 ನೇ ಅದ್ಯತೆಗೆ 2; ಮೂರನೇ ಅದ್ಯತೆಗೆ 3; ಹೀಗೆ ಎಲ್ಲರಿಗೂ ಓಟುಮಾಡಬೇಕು). ಆದರೆ ಆದ್ಯತೆಯ ಮೇಲೆ ಒಬ್ಬರಿಗಿಂತ ಹೆಚ್ಚು ಓಟು ಮಾಡುವುದು ಮತದಾರರಿಗೆ ಇಷ್ಟವಿದ್ದರೆ ಮಾತ್ರಾ; ಅದು ಅವರ ಆಯ್ಕೆಗೆ ಬಿಟ್ಟಿದ್ದು; ಮೊದಲ ಆದ್ಯತೆಯ ವೋಟು ಮಾಡುವುದು ಮತ್ತು ಅದಕ್ಕೆ 1,ಎಂದು ಸೂಚಿಸುವುದು ಮಾತ್ರಾ ಕಡ್ಡಾಯ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯಂತೆ ಹಲವು ಆದ್ಯತೆಗಳು ಇರಬಹುದು. ಮತವನ್ನು ಮಾನ್ಯವೆಂದು ಪರಿಗಣಿಸುವ ಮೊದಲ ಆದ್ಯತೆಯನ್ನು ಗುರುತಿಸುವುದು ಮೇಲೆ ಹೇಳಿದಂತೆ ಕಡ್ಡಾಯವಾಗಿದೆ. ಇತರ ಆದ್ಯತೆಗಳನ್ನು ಗುರುತಿಸುವುದು ಐಚ್ಛಿಕವಾಗಿರುತ್ತದೆ. ಒಂದು ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲು ಮೊದಲ ಆದ್ಯತೆಯ ಮತಗಳ "ಮತದಾನದಲ್ಲಿ 50% ಮತಗಳು +1" (ಕೋಟಾ) ಅಗತ್ಯವಿದೆ.
ಯಾವುದೇ ಅಭ್ಯರ್ಥಿ ಅಗತ್ಯ ಕೋಟಾವನ್ನು ಪಡೆಯದಿದ್ದರೆ, ಅತಿ ಕಡಿಮೆ ಮೊದಲ ಆದ್ಯತೆಯ ಮತಗಳನ್ನು ಪಡೆಯುವ ಅಭ್ಯರ್ಥಿಯನ್ನು ಕೈಬಿಡಲಾಗುತ್ತದೆ. ಈ ಅಭ್ಯರ್ಥಿಯ ಎರಡನೇ ಆದ್ಯತೆಯ ಮತಗಳನ್ನು ನಂತರ ಉಳಿದ ಅಭ್ಯರ್ಥಿಗಳ ನಡುವೆ ಹಂಚಲಾಗುತ್ತದೆ. ಅಭ್ಯರ್ಥಿಯು ಅಗತ್ಯವಾದ ಕೋಟಾವನ್ನು ಪಡೆಯುವವರೆಗೆ 'ಅಂದರೆ "ಮತದಾನದಲ್ಲಿ 50% ಮತಗಳು +1" (ಕೋಟಾ)', ಈ ಪ್ರಕ್ರಿಯೆಯ ಹೊರಗಿಡುವಿಕೆ ಮತ್ತು ಹೊರಹಾಕುವಿಕೆ ಪುನರಾವರ್ತನೆಯಾಗುತ್ತದೆ. (ಎಂದರೆ ನಂತರ ಕನಿಷ್ಟ ಮತ ಪಡೆದ ಎರಡನೇ ಅಭ್ಯರ್ಥಿಯನ್ನು ೩ ನೆಯ ಆದ್ಯತೆಯ ಮತಗಳನ್ನು ಉಳಿದವರಿಗೆ ಸೇರಿಸುವುದು ಈ ಕ್ರಮ ಬಹುಮತ ಬರುವವರೆಗೆ ಮುಂದುವರೆಸುವುದು ) ಹೀಗೆ ಎಣಿಕೆಯಾದಾಗ "50% ಮತಗಳು +1" ಅಥವಾ ಅದಕ್ಕೂ ಹೆಚ್ಚು ಮತ ಪಡೆದವರನ್ನು ವಿಜೇತರೆಂದು ಘೋಷಿಸಲಾಗುವುದು.
ಒಂದು ವೇಳೆ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ, ಹೊರತುಪಡಿಸಿದ ನಂತರ, ಯಾವುದೇ ಅಭ್ಯರ್ಥಿ ಅಗತ್ಯವಾದ ಕೋಟಾವನ್ನು ಪಡೆದುಕೊಳ್ಳದಿದ್ದರೆ ಮತ್ತು ಅಂತಿಮವಾಗಿ ಉಳಿದ ಹೆಚ್ಚು ಮತ ಪಡೆದ ಒಬ್ಬ ಅಭ್ಯರ್ಥಿ - ಏಕೈಕ ಮುಂದುವರೆದ ಅಭ್ಯರ್ಥಿಯಾಗಿ ಉಳಿದವನ/ಳನ್ನು, ಅವರು ಚುನಾಯಿತರಾಗಿದ್ದಾರೆಂದು ಘೋಷಿಸಲಾಗುವುದು.
ಈ ಸಂಕೀರ್ಣ ಲೆಕ್ಕಾಚಾರದ ವಿಧಾನದ ಉದ್ದೇಶವು ಭಾರತದ ರಾಷ್ಟ್ರಪತಿಯು ಭಾರತದ ಒಕ್ಕೂಟದ ಸಮಾನ ಪ್ರತಿನಿಧಿ ಎಂದು ಖಚಿತಪಡಿಸಿಕೊಳ್ಳುವುದು. ಇದು ಭಾರತದ ಸಂವಿಧಾನದ ಚೈತನ್ಯವನ್ನು ಅನುಸರಿಸುತ್ತದೆ, ಸಂವಿಧಾನವು "ಸಂಪೂರ್ಣವಾಗಿ ಒಕ್ಕೂಟ ಅಥವಾ ಸಂಪೂರ್ಣವಾಗಿ ಏಕಸ್ವಾಮ್ಯ ಪಾತ್ರವಹಿಸುವುದಿಲ್ಲ"; ಅದು ರಾಜ್ಯಗಳ ಸಹಕಾರ (ಫೆಡರಲಿಸಮ್) ಮತ್ತು ಒಕ್ಕೂಟಕ್ಕೆ ಸಮಾನ ಪ್ರಾಮುಖ್ಯತೆ ಕೊಡುವುದು.[೭][೮][೯]
ಗ್ವಾಲಿಯರ್‌ನ ಲಶ್ಕರ್ ನಿವಾಸಿ ಆನಂದ್ ಸಿಂಗ್ ಕುಶ್ವಾ ಅವರು ತಾರಗಂಜ್ ಪ್ರದೇಶದಲ್ಲಿ ಪುಟ್ಟ ಅಂಗಡಿಯಲ್ಲಿ ಚಹಾ ಮಾರಾಟ ನಡೆಸುತ್ತಿದ್ದಾರೆ. ಮಾಹಿತಿಯ ಪ್ರಕಾರ, ಕುಶ್ವಾ ಅವರು ದೆಹಲಿಗೆ ತೆರಳಿ ಸಂಸತ್‌ನಲ್ಲಿ ಮುಖ್ಯ ಚುನಾವಣಾ ಅಧಿಕಾರಿಯನ್ನು ಭೇಟಿ ಮಾಡಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಕುಶ್ವಾ ಅವರು ಸಲ್ಲಿಸಿರುವ ಆಸ್ತಿ ವಿವರದ ಪ್ರಮಾಣಪತ್ರದ ಪ್ರಕಾರ, ಐದು ಸಾವಿರ ನಗದು, ಬೈಸಿಕಲ್, ಮನೆ, ಚಹಾ ಅಂಗಡಿ ಮತ್ತು ಪತ್ನಿಯ ಮಾಂಗಲ್ಯ ಸರವನ್ನು ಹೊಂದಿದ್ದಾಗಿ ಹೇಳಿದ್ದಾರೆ. ಅವರು ರೂ.12 ಸಾವಿರ ಬ್ಯಾಂಕ್ ಮತ್ತು ಇತರ ರೂ.60 ಸಾವಿರ ಸಾಲವನ್ನು ತೋರಿಸಿದ್ದಾರೆ.[೧೧]
ಬಿಹಾರದ ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಅವರನ್ನು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ನವದೆಹಲಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಕೋವಿಂದ್ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿದರು. ಕೋವಿಂದ್ ಅವರು ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು 1999 ಮತ್ತು 2002ರ ಅವಧಿಯಲ್ಲಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷದ ರಾಷ್ಟ್ರೀಯ ವಕ್ತಾರರಾಗಿಯೂ ಅವರು ಕೆಲಸ ಮಾಡಿದ್ದರು.ಕೋಲಿ ಸಮುದಾಯಕ್ಕೆ ಸೇರಿದ ಕೋವಿಂದ್ ಅವರು ಉತ್ತರ ಪ್ರದೇಶದ ಕಾನ್ಪುರ್ ದೇಹಾತ್‌ನಲ್ಲಿ 1945ರ ಅಕ್ಟೋಬರ್ 1ರಂದು ಜನಿಸಿದರು. ಕೋವಿಂದ್ ಅವರು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿದ್ದರು[೧೨]
ದಿ.23 Jun, 2017 ರಂದು ಕೋವಿಂದ್ ಅವರು ಸಂಸತ್ ಭವನದಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.[೧೩]
ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಯಾಗಿ ವಿಪಕ್ಷಗಳ ಪರವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಘೋಷಿಸಿದರು. 2009–14ರ ವರೆಗೂ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ ಮೀರಾ ಕುಮಾರ್ ವಕೀಲರಾಗಿಯೂ ಸೇವೆ ಸಲ್ಲಿಸಿದ್ದು, ಐದು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 17 ಪಕ್ಷಗಳ ಮುಖಂಡರು ಸೇರಿದ್ದ ವಿಪಕ್ಷಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭ್ಯರ್ಥಿ ಆಯ್ಕೆ ಘೋಷಿಸಿದರು.[೧೪]
ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರು ದಿ.28 ಜೂನ್, 2017 ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರತಿಪಕ್ಷ ನಾಯಕರ ಜತೆ ಸಂಸತ್ ಭವನದ ಒಂದನೇ ದ್ವಾರದ ಮೂಲಕ ತೆರಳಿದ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರ ಬಳಿ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.[೧೫]
ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷ ಲೆಕ್ಕಾಚಾರದಂತೆ ನೆಡೆದರೆ ಎನ್‌ಡಿಎಯ ಅಭ್ಯರ್ಥಿ ರಾಮನಾಥ ಕೋವಿಂದ್ ಶೇ 62ರಷ್ಟು ಮತಗಳನ್ನು ಪಡೆದು, ಗೆಲುವು ಸಾಧಿಸುವುದು ನಿಚ್ಚಳವಾಗಿದೆ. ಯುಪಿಎ ಮತ್ತು ಇತರ ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರು ಶೇ 34ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಅವರು ಇದೇ 28ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಭಾರತದ 14ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಆಯ್ಕೆಯಾಗಿದ್ದಾರೆ. ಭಾರತದ 14 ನೇ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಜುಲೈ 25 ರಂದುಪ್ರಮಾಣ ವಚನ ಸ್ವೀಕರಿಸಲಿದ್ದಾರೆ
ಚುನಾವಣಾ ಕಾಲೇಜಿನಿಂದ ರಾಮ್ ನಾಥ್ ಕೋವಿಂದ್ 65.65% ರಷ್ಟು ಮತಗಳನ್ನು ಪಡೆದಿದ್ದಾರೆ. ಅವರ ಎದುರಾಳಿ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಮೀರಾ ಕುಮಾರ್ 34.35% ರಷ್ಟು ಪಡೆದು ಹಿಂದೆ ಇದ್ದಾರೆ.
ಕೋವಿಂದ್ ಅವರು 7,02,044 ಮತಗಳೊಂದಿಗೆ 2930 ಮತಗಳನ್ನು ಪಡೆದರು.ಮೀರಾ ಕುಮಾರ್ ಅವರು 3,67,314 ಮೌಲ್ಯದೊಂದಿಗೆ 1,844 ಮತಗಳನ್ನು ಪಡೆದರು ಮತ್ತು 77 ಮತಗಳು ಅಮಾನ್ಯವಾಗಿದೆ ಎಂದು ಅಧ್ಯಕ್ಷರು ಚುನಾವಣೆಯಲ್ಲಿ 2017 ರ ಚುನಾವಣಾಧಿಕಾರಿ ಅನೂಪ್ ಮಿಶ್ರಾ ಹೇಳಿದ್ದಾರೆ.
71 ವರ್ಷದ ಕೋವಿಂದ್ ಅವರು 522 ಸಂಸತ್ ಸದಸ್ಯರ ಮತಗಳನ್ನು ಪಡೆದರೆ, ಕುಮಾರ್ ಅವರು 225 ಸಂಸದರ ಮತಗಳನ್ನು ಪಡೆದರು. 771 ಚುನಾಯಿತ ಸಂಸದರು ತಮ್ಮ ಮತಪತ್ರವನ್ನು ಚಲಾಯಿಸಲು ಅರ್ಹರಾಗಿದ್ದಾರೆ.[೧೮]
ಸಂಸತ್ ಭವನದಲ್ಲಿ ಒಂದು ಸೇರಿದಂತೆ ಒಟ್ಟು ಮೂವತ್ತೆರಡು ಮತದಾನ ಕೇಂದ್ರಗಳನ್ನು ವಿವಿಧ ರಾಜ್ಯಗಳಲ್ಲಿ ಸ್ಥಾಪಿಸಲಾಯಿತು. 4,896 ಮತದಾರರು - 4,120 ಶಾಸಕರು ಮತ್ತು 776 ಚುನಾಯಿತ ಸಂಸದರು - ತಮ್ಮ ಮತಪತ್ರವನ್ನು ಚಲಾಯಿಸಲು ಅರ್ಹರಾಗಿದ್ದರು. ಶಾಸಕಾಂಗ ಸಮಿತಿಯೊಂದಿಗೆ ರಾಜ್ಯಗಳವಿಧಾನ ಪರಿಷತ್ತಿನ ಎಂ,ಎಲ್.ಸಿ.ಗಳು ಚುನಾವಣಾ ಕಾಲೇಜಿನ ಭಾಗವಾಗಿಲ್ಲ(MLCs of states with legislative council are not part of the Electoral College).[೧೯]
ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಆಧಿಕಾರ ಸ್ವೀಕಾರ:ವಿಧಿ ವಿಧಾನ
ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ರಾಮನಾಥ ಕೋವಿಂದ್ ಅವರು ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೋವಿಂದ್ ಅವರು ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೊಂದಿಗೆ ರಾಷ್ಟ್ರಪತಿ ಭವನದಿಂದ ಮೆರವಣಿಗೆಯಲ್ಲಿ ಸಂಸತ್ ಭವನಕ್ಕೆ ಬಂದರು.
ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಮಧ್ಯಾಹ್ನ 12.15ಕ್ಕೆ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸಿದ ರಾಮನಾಥ ಕೋವಿಂದ್ ಅವರಿಗೆ ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಹಸ್ತಲಾಘವ ಮಾಡಿ, ರಾಷ್ಟ್ರಪತಿ ಸ್ಥಾನ ಅಲಂಕರಿಸುವಂತೆ ಸ್ಥಾನ ಬದಲಾಯಿಸಿಕೊಂಡರು. ರಾಮನಾಥ ಕೋವಿಂದ್ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್ ಆವರಣದಲ್ಲಿ 21 ಸುತ್ತು ಗುಂಡು ಹಾರಿಸಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಮನಾಥ ಕೋವಿಂದ್ ಅವರು ಸಹಿ ಹಾಕಿದರು. ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸ್ವಾಗತಿಸಿ ಸಂಸತ್ ಭವನದ ಸೆಂಟ್ರಲ್ ಹಾಲ್‌ಗೆ ಕರೆ ತರಲಾಯಿತು. ರಾಷ್ಟ್ರಗೀತೆ ಹಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.[೨೦]