ಭಾರತದ ರಾಷ್ಟ್ರಪತಿ

ವಿಕಿಪೀಡಿಯ ಇಂದ
Jump to navigation Jump to search
ರಾಷ್ಟ್ರಪತಿ ಭಾರತದ ಗಣರಾಜ್ಯ
Flag of India.svg
Emblem of India.svg
ಭಾರತದ ಲಾಂಛನ
RamNathKovind (cropped).jpg
ಹುದ್ದೆಯಲ್ಲಿರುವವರು
ರಾಮನಾಥ ಕೋವಿಂದ್

ರಿಂದ ೨೫ ಜುಲೈ ೨೦೧೭
ನಿವಾಸ ರಾಷ್ಟ್ರಪತಿ ಭವನ
ವಿನಿಯೋಗಾಧಿಕಾರಿ ಚುನಾವಣಾ ಕಾಲೇಜ್ (ಭಾರತ)
ಕಚೇರಿ ಅವಧಿ ಐದು ವರ್ಷಗಳು. ಕಚೇರಿಯಲ್ಲಿ ಯಾವುದೇ ಅವಧಿ ಮಿತಿಗಳನ್ನು ವಿಧಿಸಲಾಗುವುದಿಲ್ಲ.
ಉದ್ಘಾಟನಾ ಕರ್ಮಚಾರಿ ಬಾಬು ರಾಜೇಂದ್ರ ಪ್ರಸಾದ್
೨೬ ಜನವರಿ ೧೯೫೦
ರಚನೆ ಭಾರತದ ಸಂವಿಧಾನ
೨೬ ಜನವರಿ ೧೯೫೦
ಉಪರಾಷ್ಟ್ರಪತಿ ಭಾರತದ ಉಪ ರಾಷ್ಟ್ರಪತಿ
ವೇತನ ಭಾರತೀಯ ರೂಪಾಯಿ₹೫,೦೦,೦೦೦ (US$೧೧,೧೦೦) (per month)[೧]
ಅಂತರ್ಜಾಲ ಪುಟ ಭಾರತದ ರಾಷ್ಟ್ರಪತಿ

ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳುಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ .ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ.

ಸಂಕ್ಷಿಪ್ತ ಇತಿಹಾಸ[ಬದಲಾಯಿಸಿ]

ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ಬ್ಯಾಟನ್). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು. ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.[೨]

ಸಾ೦ವಿಧಾನಿಕ ಪಾತ್ರ[ಬದಲಾಯಿಸಿ]

Flag of the President of India

ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು:

 • ಭಾರತೀಯ ಪ್ರಜೆಯಾಗಿರಬೇಕು
 • ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ
 • ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು

ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ ಪ್ರಧಾನಮಂತ್ರಿಗಳದ್ದು (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ ಸಂಸತ್ತಿಗೆ ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು.

ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಡುವುದು.

ರಾಷ್ಟ್ರಾಧ್ಯಕ್ಷರ ಚುನಾವಣೆ[ಬದಲಾಯಿಸಿ]

ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ
 • ಸಂಸತ್ತಿನ ಎರಡೂ ಸಭೆಗಳ ಲೋಕಸಭೆ ಮತ್ತು ರಾಜ್ಯಸಭೆಗಳ ಚುನಾಯಿತ ಸದಸ್ಯರು.
 • ಪ್ರತಿ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರು
 • ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ ಜನಸಂಖ್ಯೆ, ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ.

ಅಧಿಕಾರ ಸ್ವೀಕಾರ ವಿಧಿ ವಿಧಾನ[ಬದಲಾಯಿಸಿ]

ರಾಷ್ಟ್ರಪತಿಗಳ ಮೆರವಣಿಗೆ; ಗೌರವ ಸ್ವೀಕಾರ
 • 25 Jul, 2017;
 • ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ರಾಮನಾಥ ಕೋವಿಂದ್‌ ಅವರು ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೋವಿಂದ್‌ ಅವರು ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೊಂದಿಗೆ ರಾಷ್ಟ್ರಪತಿ ಭವನದಿಂದ ಮೆರವಣಿಗೆಯಲ್ಲಿ ಸಂಸತ್‌ ಭವನಕ್ಕೆ ಬಂದರು.
 • ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯಾಹ್ನ 12.15ಕ್ಕೆ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸಿದ ರಾಮನಾಥ ಕೋವಿಂದ್‌ ಅವರಿಗೆ ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಹಸ್ತಲಾಘವ ಮಾಡಿ, ರಾಷ್ಟ್ರಪತಿ ಸ್ಥಾನ ಅಲಂಕರಿಸುವಂತೆ ಸ್ಥಾನ ಬದಲಾಯಿಸಿಕೊಂಡರು. ರಾಮನಾಥ ಕೋವಿಂದ್‌ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್‌ ಆವರಣದಲ್ಲಿ 21 ಸುತ್ತು ಗುಂಡು ಹಾರಿಸಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.
 • ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಮನಾಥ ಕೋವಿಂದ್‌ ಅವರು ಸಹಿ ಹಾಕಿದರು. ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಸ್ವಾಗತಿಸಿ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ಗೆ ಕರೆ ತರಲಾಯಿತು. ರಾಷ್ಟ್ರಗೀತೆ ಹಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.[೩]

ಮಹಾಭಿಯೋಗ[ಬದಲಾಯಿಸಿ]

ಸಂವಿಧಾನದ ೬೧ ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು.

ಪಟ್ಟಿ[ಬದಲಾಯಿಸಿ]

ಅನುಕ್ರಮ ಹೆಸರು ಅಧ್ಯಕ್ಷತೆ ಆರಂಭ ಅಧ್ಯಕ್ಷತೆ ಅಂತ್ಯ ಚಿತ್ರ
೦೧ ಡಾ. ರಾಜೇಂದ್ರ ಪ್ರಸಾದ್ ಜನವರಿ ೨೬, ೧೯೫೦ ಮೇ ೧೩, ೧೯೬೨ ಡಾ. ರಾಜೇಂದ್ರ ಪ್ರಸಾದ್
೦೨ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಮೇ ೧೩, ೧೯೬೨ ಮೇ ೧೩, ೧೯೬೭ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್
೦೩ ಡಾ. ಜಾಕಿರ್ ಹುಸೇನ್ ಮೇ ೧೩, ೧೯೬೭ ಮೇ ೩, ೧೯೬೯ ಡಾ. ಜಾಕಿರ್ ಹುಸೇನ್
* ವರಾಹಗಿರಿ ವೆಂಕಟ ಗಿರಿ ಮೇ ೩, ೧೯೬೯ ಜುಲೈ ೨೦, ೧೯೬೯ ವರಾಹಗಿರಿ ವೆಂಕಟ ಗಿರಿ
* ಮಹಮ್ಮದ್ ಹಿದಾಯತುಲ್ಲಾ ಜುಲೈ ೨೦, ೧೯೬೯ ಆಗಸ್ಟ್ ೨೪, ೧೯೬೯ ಮಹಮ್ಮದ್ ಹಿದಾಯತುಲ್ಲಾ
೦೪ ವರಾಹಗಿರಿ ವೆಂಕಟ ಗಿರಿ ಆಗಸ್ಟ್ ೨೪, ೧೯೬೯ ಆಗಸ್ಟ್ ೨೪, ೧೯೭೪ ವರಾಹಗಿರಿ ವೆಂಕಟ ಗಿರಿ
೦೫ ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ ೨೪, ೧೯೭೪ ಫೆಬ್ರವರಿ ೧೧, ೧೯೭೭ ಫಕ್ರುದ್ದೀನ್ ಅಲಿ ಅಹ್ಮದ್
* ಬಿ ಡಿ ಜತ್ತಿ ಫೆಬ್ರವರಿ ೧೧, ೧೯೭೭ ಜುಲೈ ೨೫, ೧೯೭೭ ಬಿ ಡಿ ಜತ್ತಿ
೦೬ ನೀಲಂ ಸಂಜೀವ ರೆಡ್ಡಿ ಜುಲೈ ೨೫, ೧೯೭೭ ಜುಲೈ ೨೫, ೧೯೮೨ ನೀಲಂ ಸಂಜೀವ ರೆಡ್ಡಿ
೦೭ ಗ್ಯಾನಿ ಜೈಲ್ ಸಿಂಗ್ ಜುಲೈ ೨೫, ೧೯೮೨ ಜುಲೈ ೨೫, ೧೯೮೭ ಗ್ಯಾನಿ ಜೈಲ್ ಸಿಂಗ್
೦೮ ರಾಮಸ್ವಾಮಿ ವೆಂಕಟರಾಮನ್ ಜುಲೈ ೨೫, ೧೯೮೭ ಜುಲೈ ೨೫, ೧೯೯೨ ರಾಮಸ್ವಾಮಿ ವೆಂಕಟರಾಮನ್
೦೯ ಡಾ. ಶಂಕರ ದಯಾಳ ಶರ್ಮ ಜುಲೈ ೨೫, ೧೯೯೨ ಜುಲೈ ೨೫, ೧೯೯೭ ಡಾ. ಶಂಕರ ದಯಾಳ ಶರ್ಮ
೧೦ ಡಾ. ಕೆ ಆರ್ ನಾರಾಯಣನ್ ಜುಲೈ ೨೫, ೧೯೯೭ ಜುಲೈ ೨೫, ೨೦೦೨ ಡಾ. ಕೆ ಆರ್ ನಾರಾಯಣನ್
೧೧ ಡಾ. ಎ ಪಿ ಜೆ ಅಬ್ದುಲ್ ಕಲಮ್ ಜುಲೈ ೨೫, ೨೦೦೨ ಜುಲೈ ೨೫, ೨೦೦೭ ಡಾ. ಎ ಪಿ ಜೆ ಅಬ್ದುಲ್ ಕಲಮ್
೧೨ ಪ್ರತಿಭಾ ಪಾಟೀಲ್ ಜುಲೈ ೨೫, ೨೦೦೭ ಜುಲೈ ೨೫, ೨೦೧೨ ಪ್ರತಿಭಾ ಪಾಟೀಲ್
೧೩ ಪ್ರಣಬ್ ಮುಖರ್ಜಿ ಜುಲೈ ೨೫, ೨೦೧೨ ೨೫ ಜುಲೈ ೨೦೧೭ ಪ್ರಣಬ್ ಮುಖರ್ಜಿ
೧೪ ರಾಮ್‍ನಾಥ್ ಕೋವಿಂದ್ ಜುಲೈ ೨೫, ೨೦೧೭ ಪ್ರಸಕ್ತ ರಾಮ್ ನಾಥ್ ಕೋವಿಂದ್

* ಹಂಗಾಮಿ

ವೇತನ[ಬದಲಾಯಿಸಿ]

ರಾಷ್ಟ್ರಪತಿಗಳ ವೇತನ[ಸೂಕ್ತ ಉಲ್ಲೇಖನ ಬೇಕು]
Date established ಸಂಬಳ ೨೦೦೯ರ ಸಂಬಳ
ಜನೆವರಿ ೨೦,೨೦೦೯ {{INRConvert|500000}the first } ಭಾರತೀಯ ರೂಪಾಯಿ₹೫,೦೦,೦೦೦ (US$೧೧,೧೦೦)
Sources:[ಸೂಕ್ತ ಉಲ್ಲೇಖನ ಬೇಕು]


 • ರಾಷ್ಟ್ರಪತಿಗಳ ವೇತನ:ರೂ.500000/-[೪]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]