ಭಾರತದ ಉಪ ರಾಷ್ಟ್ರಪತಿ

ವಿಕಿಪೀಡಿಯ ಇಂದ
Jump to navigation Jump to search
Vice-President of India
Emblem of India.svg
Vice-President Mohammad Hamid Ansari
Incumbent
ವೆಂಕಯ್ಯ ನಾಯ್ಡು

since 11 ಆಗಸ್ಟ್ 2017
Residenceಉಪಾಧ್ಯಕ್ಷ ಹೌಸ್
Appointerಭಾರತದ ಚುನಾವಣಾ ಕಾಲೇಜ್
Term lengthಐದು ವರ್ಷಗಳು, ನವೀಕರಿಸಬಹುದಾದ
Salaryಭಾರತೀಯ ರೂಪಾಯಿ₹೧,೨೫,೦೦೦ (US$೨,೭೭೫) per month (February 2015)
Websitevicepresidentofindia.nic.in

ಭಾರತದ ಉಪ ರಾಷ್ಟ್ರಪತಿಗಳು ಭಾರತ ಸರ್ಕಾರಕಾರ್ಯಾಂಗದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.

  • ೧೦ ಆಗಸ್ಟ್ ೨೦೦೭ರಂದು ಆಯ್ಕೆಗೊಂಡ ಹಮೀದ್ ಅನ್ಸಾರಿ ಪ್ರಸಕ್ತವಾಗಿ ಭಾರತದ ಉಪ ರಾಷ್ಟ್ರಪತಿಗಳು.

ಉಪ ರಾಷ್ಟ್ರಪತಿ ಚುನಾವಣೆ ೨೦೧೭[ಬದಲಾಯಿಸಿ]

  • ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅವಧಿ ಆಗಸ್ಟ್ 10ಕ್ಕೆ ಕೊನೆಯಾಗಿದೆ.
  • ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 5ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಗುರುವಾರ ಘೋಷಿಸಿದೆ. ಉಪರಾಷ್ಟ್ರಪತಿ ಚುನಾವಣೆ ವಿಷಯವಾಗಿ ಜುಲೈ 4ರಂದು ಅಧಿಸೂಚನೆ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಜುಲೈ 18. ಜುಲೈ 19ರಂದು ನಾಮಪತ್ರಗಳ ಪರಿಶೀಲನೆ. ನಾಮಪತ್ರ ವಾಪಸ್ ಪಡೆಯಲು ಜುಲೈ 21 ಕೊನೆಯ ದಿನ. ಆಗಸ್ಟ್ 5ರಂದೇ ಮತ ಎಣಿಕೆಯೂ ನಡೆದು ಉಪರಾಷ್ಟ್ರಪತಿಯಾಗಿ ವೆಂಕಯ್ಯನಾಯ್ಡುರವರು ಆಯ್ಕೆಯಾದರು. (ಚುನಾವಣಾ ಆಯುಕ್ತ ನಸೀಮ್ ಜೈದಿ)[೧]

ಆಯ್ಕೆ ವಿಧಿ ವಿಧಾನ[ಬದಲಾಯಿಸಿ]

  • ಭಾರತೀಯ ಸಂವಿಧಾನದ 66 ನೇ ವಿಧಿಯು ಉಪಾಧ್ಯಕ್ಷರ ಚುನಾವಣೆಯ ವಿಧಾನವನ್ನು ಹೇಳುತ್ತದೆ. ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ಪರೋಕ್ಷವಾಗಿ ಚುನಾಯಿತರಾಗುತ್ತಾರೆ, ಏಕೈಕ ವರ್ಗಾವಣೆ ಮಾಡಬಹುದಾದ ಮತಗಳ ಮೂಲಕ ಪ್ರಮಾಣಾನುಗುಣ ಪ್ರತಿನಿಧಿಗಳ ವ್ಯವಸ್ಥೆಯ ಪ್ರಕಾರ ಮತ್ತು ಮತದಾನವು ಚುನಾವಣಾ ಆಯೋಗದಿಂದ ನಡೆಸಲ್ಪಟ್ಟ ರಹಸ್ಯ ಮತದಾನದ ಮೂಲಕ ನಡೆಯುವುದು.[೨]
  • ಚುನಾವಣೆ ವೇಳೆ ವಿಶೇಷ ಪೆನ್ ನಲ್ಲೇ ತಮ್ಮ ಆಯ್ಕೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಬೇಕು. ಬೇರೆ ಪೆನ್ ಗಳನ್ನು ಬಳಕೆ ಮಾಡಿದ್ದೇ ಆದರೆ ಆ ಮತ ಅಸಿಂಧುವಾಗುತ್ತದೆ. ೨೦೧೭ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಕ್ಷಗಳು ತಮ್ಮ ಸಂಸದರಿಗೆ ಇಂಥಹದ್ದೇ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡುವಂತಿಲ್ಲ.[೩]

ಆಡಳಿತ ಪಕ್ಷ ಎನ್.ಡಿ.ಎ. ಅಭ್ಯರ್ಥಿ[ಬದಲಾಯಿಸಿ]

ವಿಪಕ್ಷ ಅಭ್ಯರ್ಥಿ[ಬದಲಾಯಿಸಿ]

  • ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ ಅವರನ್ನು ಉಪ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಸೇರಿದಂತೆ ವಿವಿಧ ವಿರೋಧ ಪಕ್ಷಗಳು 11 ಜುಲೈ 2017 ಮಂಗಳವಾರ ಸಭೆ ಸೇರಿ ಗೋಪಾಲ ಕೃಷ್ಣ ಗಾಂಧಿಯನ್ನು ಒಮ್ಮತದಿಂದ ಆಯ್ಕೆ ಮಾಡಿವೆ.[೪]

ಉಪರಾಷ್ಟ್ರಪತಿಯಾಗಿ ಎಂ. ವೆಂಕಯ್ಯ ನಾಯ್ಡು ಆಯ್ಕೆ[ಬದಲಾಯಿಸಿ]

  • ಸಂಸತ್‌ ಭವನದಲ್ಲಿ ದಿ.5 ಆಗಸ್ಟ್, 2017 ನಡೆದ ಚುನಾವಣೆಯಲ್ಲಿ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು ಆಯ್ಕೆಯಾದರು.
  • ಶೇಕಡಾ 98.21ರಷ್ಟು ಮತ ಚಲಾವಣೆ;ಒಟ್ಟು 785 ಸಂಸದರ ಪೈಕಿ 771 ಮಂದಿ ಮತ ಚಲಾಯಿಸಿದ್ದಾರೆ.
  • ಎಂ. ವೆಂಕಯ್ಯ ನಾಯ್ಡು (ಎನ್‌ಡಿಎ ಅಭ್ಯರ್ಥಿ) ಅವರು ಪಡೆದ ಮತ :516
  • ಗೋಪಾಲಕೃಷ್ಣ ಗಾಂಧಿ (ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ)ಪಡೆದ ಮತ:244 [೫]

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]