ನೀಲಂ ಸಂಜೀವ ರೆಡ್ಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೀಲಂ ಸಂಜೀವ ರೆಡ್ಡಿ
ನೀಲಂ ಸಂಜೀವ ರೆಡ್ಡಿ
ಜನ್ಮ ದಿನಾಂಕ: ೧೮ ಮೇ ೧೯೧೩
ನಿಧನರಾದ ದಿನಾಂಕ: ೧ ಜೂನ್ ೧೯೯೬
ಭಾರತದ ರಾಷ್ಟ್ರಪತಿಗಳು
ಅವಧಿಯ ಕ್ರಮಾಂಕ: ೬ನೆ ರಾಷ್ಟ್ರಪತಿ
ಅಧಿಕಾರ ವಹಿಸಿದ ದಿನಾಂಕ: ೨೫ ಜುಲೈ ೧೯೭೭
ಅಧಿಕಾರ ತ್ಯಜಿಸಿದ ದಿನಾಂಕ: ೨೫ ಜುಲೈ ೧೯೮೨
ಪೂರ್ವಾಧಿಕಾರಿ: ಫಕ್ರುದ್ದೀನ್ ಅಲಿ ಅಹ್ಮದ್
ಮಧ್ಯಾಂತರ ಪುರ್ವಾಧಿಕಾರಿ: ಬಿ ಡಿ ಜತ್ತಿ
ಉತ್ತರಾಧಿಕಾರಿ: ಜೈಲ್ ಸಿ೦ಗ್

ನೀಲಂ ಸಂಜೀವ ರೆಡ್ಡಿ ೧೯೭೭ - ೧೯೮೨ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಆರನೇ ರಾಷ್ಟ್ರಪತಿಗಳು, ಇವರು ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ. ಇವರು ಆಂಧ್ರ ಪ್ರದೇಶ ರಾಜ್ಯ ಜಿಲ್ಲೆಯ ಅನಂತಪುರ ಜಿಲ್ಲೆಯ ಇಲ್ಲೂರು ಹಳ್ಳಿಯಲ್ಲಿ ಹುಟ್ಟಿದರು. ೧೯೬೪ರಲ್ಲಿ ಕೇಂದ್ರ ಸರಕಾರದ ಮಂತ್ರಿ ಮಂಡಲದಲ್ಲಿ ಉಕ್ಕು ಮತ್ತು ಗಣಿ ಖಾತೆಯ ಸಚಿವರಾದರು. ಮುಂದೆ ೧೯೬೬ ರಲ್ಲಿ ಸಾರಿಗೆ. ನಾಗರಿಕ ವಿಮಾನಯಾನ, ಪ್ರವಾಸೋದ್ಯಮ ಮತ್ತು ನೌಕಾ ಸಾರಿಗೆಯ ಸಚಿವರಾಗಿದ್ದರು. ೧೯೬೭ ರಲ್ಲಿ ಲೋಕಸಭೆಯ ಸಭಾಪತಿಯಾಗಿ ಸೇವೆ ಸಲ್ಲಿಸಿ ಅಭೂತಪೂರ್ವ ಮೆಚ್ಚುಗೆಯನ್ನು ಗಳಿಸಿದರು.

1969 ರಲ್ಲಿ, ಅಂದಿನ ಭಾರತದ ರಾಷ್ಟ್ರಪತಿಯಾದ ಡಾ.ಝಕೀರ್ ಹುಸೇನ್ ರ ಸಾವಿನ ನಂತರ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಹೆಸರಿಸಲಾ ಯಿತು. ಪಕ್ಷದ ಅಭ್ಯರ್ಥಿಯಾಗಿ ಮತ್ತೊಂದು ಹುದ್ದೆಗಾಗಿ ಸ್ಪರ್ಧಿಸುವಾಗ, ಸದ್ಯ ಇರುವ ಹುದ್ದೆಯ ಲಾಭ ಪಡೆಯಬಾರದೆಂದು ತಮ್ಮ ಲೋಕಸಭಾ ಸಭಾಪತಿ ಪದವಿಗೆ ಚುನಾವಣೆ ಯ ಮೊದಲೇ ರಾಜೀನಾಮೆ ಕೊಟ್ಟರು. ಆದರೆ ಇಂದಿರಾ ಗಾಂಧಿ, ಸಂಜೀವ ರೆಡ್ಡಿ ತನ್ನ ಮಾತಿನಂತೆ ನಡೆಯದ ತುಂಬಾ ಸ್ವತಂತ್ರ ಮನೋಭಾವದ ವ್ಯಕ್ತಿ ಎಂದು ತಿಳಿದು, ಪಕ್ಷದ ಮತದಾರರನ್ನು ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳುವ ಬದಲು, ತಮ್ಮ ಆತ್ಮ ಸಾಕ್ಷಿಯ ಪ್ರಕಾರ ಮತದಾನ ಮಾಡಲು ಅವಕಾಶ ನೀಡುವ ನಿಲುವು ತೆಗೆದು ಕೊಂಡರು. ಇದರ ಅರ್ಥ ವಾಸ್ತವವಾಗಿ ವಿ.ವಿ.ಗಿರಿ ಅವರಿಗೆ ತನ್ನ ಬೆಂಬಲವನ್ನು ಸೂಚಿಸುವುದಾಗಿತ್ತು. ಆ ಸಂದರ್ಭದಲ್ಲಿ ಸಂಜೀವ ರೆಡ್ಡಿ ಚುನಾವಣೆಯಲ್ಲಿ ಸೋತರು. ಅವರು ಸಕ್ರಿಯ ರಾಜಕೀಯ ದಿಂದ ನಿವೃತ್ತಿ ಹೊಂದಿ ತಮ್ಮ ಗ್ರಾಮಕ್ಕೆ ಮರಳಿ ತಮ್ಮ ತಂದೆಯ ಉದ್ಯೋಗವಾದ ಕೃಷಿಯಲ್ಲಿ ತೊಡಗಿದರು.

ಅವರು ೧೯೭೫ ರಲ್ಲಿ ಶ್ರೀ ಜಯಪ್ರಕಾಶ್ ನಾರಾಯಣ್ ಜೊತೆಗೆ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದರು. ಮಾರ್ಚ್ ೧೯೭೭ ರಲ್ಲಿ, ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಆಂಧ್ರ ಪ್ರದೇಶದ ನಂದ್ಯಾಲ ಕ್ಷೇತ್ರದಿಂದ ಲೋಕ ಸಭೆಗೆ ಸ್ಪರ್ಧಿಸಿದರು. ಅವರು ಆಂಧ್ರ ಪ್ರದೇಶದಿಂದ ಆಯ್ಕೆಯಾದ ಏಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರು ಸರ್ವಾನುಮತ ದಿಂದ ೨೬ ಮಾರ್ಚ್ ೧೯೭೭ ರಂದು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಅವರನ್ನು ಈವರೆಗೆ ಭಾರತೀಯ ಸಂಸತ್ತಿನ ಲೋಕಸಭೆ ಕಂಡ ಅತ್ಯುತ್ತಮ ಸ್ಪೀಕರ್ ಎಂದು ಬಣ್ಣಿಸಲಾಗಿದೆ.

ಅವರು ಜುಲೈ ೧೯೭೭ ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರು ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಪತಿಯೂ ಭಾರತದ ಈವರೆಗಿನ ಇತಿಹಾಸದಲ್ಲಿ ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿಯೂ ಹೌದು.

ಅವರು ೧೯೯೬ ರಲ್ಲಿ ಬೆಂಗಳೂರಿನಲ್ಲಿ ತೀರಿಕೊಂಡರು.