ಬಿ.ಡಿ.ಜತ್ತಿ

ವಿಕಿಪೀಡಿಯ ಇಂದ
(ಬಿ ಡಿ ಜತ್ತಿ ಇಂದ ಪುನರ್ನಿರ್ದೇಶಿತ)
Jump to navigation Jump to search
ಬಸಪ್ಪ ದಾನಪ್ಪ ಜತ್ತಿ
ಬಿ.ಡಿ.ಜತ್ತಿ

ಪ್ರಸಕ್ತ
ಅಧಿಕಾರ ಪ್ರಾರಂಭ 
ಫೆಬ್ರವರಿ ೧೧, ೧೯೭೭
ಪೂರ್ವಾಧಿಕಾರಿ ಫಕ್ರುದ್ದೀನ್ ಅಲಿ ಅಹ್ಮದ್
ಉತ್ತರಾಧಿಕಾರಿ ನೀಲಂ ಸಂಜೀವ ರೆಡ್ಡಿ

ಜನನ ಸೆಪ್ಟೆಂಬರ್ ೧೦,೧೯೧೨
ಸಾವಳಗಿ, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಕರ್ನಾಟಕ
ಮರಣ ಜೂನ್ 7, 2002(2002-06-07) (ವಯಸ್ಸು 89)
ರಾಜಕೀಯ ಪಕ್ಷ ಪಕ್ಷೇತರ
ಧರ್ಮ ಹಿಂದು

ಬಸಪ್ಪ ದಾನಪ್ಪ ಜತ್ತಿ(ಬಿ.ಡಿ.ಜತ್ತಿ) (ಸೆಪ್ಟೆಂಬರ್ ೧೦,೧೯೧೨ - ಜೂನ್ ೦೭, ೨೦೦೨) - ಭಾರತದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಜನಿಸಿದರು. ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮಪಂಚಾಯತಿಯಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ.

ಮುಖ್ಯ ಮಂತ್ರಿಯ ಪದವಿಯಿಂದ ಉಪರಾಷ್ಟ್ರಪತಿಯವರೆಗೆ[ಬದಲಾಯಿಸಿ]

ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು ರಾಜಕೀಯ "ಜಟ್ಟಿ"ಎಂದು ಜತ್ತಿ ಹೆಸರು ಗಳಿಸಿದ್ದಾರೆ.

ತುರ್ತು ಪರಿಸ್ಥಿತಿಯ ನಂತರ ನೆಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು ಪ್ರಧಾನಿ ಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ, ನಿಜಲಿಂಗಪ್ಪನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ ನೀಲಂ ಸಂಜೀವ ರೆಡ್ಡಿಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ.

ವೃತ್ತಿ ಜೀವನ[ಬದಲಾಯಿಸಿ]

೧೯೪೦ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು.

ಪ್ರಮುಖ ಹುದ್ದೆಗಳು[ಬದಲಾಯಿಸಿ]

ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು:

  • ಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯ (೧೯೪೩)
  • ಮುಂಬಯಿ ವಿಧಾನಸಭೆಯ ಶಾಸಕ (೧೯೪೯)
  • ಮುಂಬಯಿ ರಾಜ್ಯದ ಉಪ ಮುಖ್ಯಮಂತ್ರಿ (೧೯೫೫)
  • ಭೂಸುಧಾರಣಾ ಮಂಡಲದ ಅಧ್ಯಕ್ಷ (೧೯೫೭)
  • ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (೧೯೫೮)
  • ಮೈಸೂರ ರಾಜ್ಯದ ೫ನೇಯ ಮುಖ್ಯಮಂತ್ರಿ (ಮೇ ೧೬, ೧೯೫೮ ರಿಂದ ಮಾರ್ಚ್ ೯,೧೯೬೨)
  • ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ (೧೯೬೮-೧೯೭೨)
  • ಒಡಿಶಾ ರಾಜ್ಯದ ರಾಜ್ಯಪಾಲ (೧೯೭೨ - ೧೯೭೭)
  • ಭಾರತದ ೫ನೇಯ ಉಪರಾಷ್ಟ್ರಪತಿ (ಅಗಸ್ಟ ೩೧, ೧೯೭೪ ರಿಂದ ಅಗಸ್ಟ ೩೦, ೧೯೭೯)
  • ಭಾರತದ ಹಂಗಾಮಿ ರಾಷ್ಟ್ರಪತಿ (೧೧-೦೨-೧೯೭೭ ರಿಂದ ೨೫-೦೭-೧೯೭೭)

ಅನ್ನದಾನಯ್ಯ ಪುರಾಣಿಕ,ಕೆ.ಎಂ.ನಂಜಪ್ಪ,ವೈ.ಸಿ.ಬಸಪ್ಪ,ಗಂಗಪ್ಪ,ಬಿ.ಎಸ್.ಶಂಕರಪ್ಪಶೆಟ್ಟಿ, ಪಾವಟೆ ಮೊದಲಾದ ಗಣ್ಯರ ಜೊತೆಗೂಡಿ, ಬೆಂಗಳೂರಿನಲ್ಲಿ ಅಖಿಲ ಭಾರತ ಬಸವ ಸಮಿತಿ ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ ಅನ್ನದಾನಯ್ಯ ಪುರಾಣಿಕನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ.