ಎಸ್. ಬಂಗಾರಪ್ಪ

ವಿಕಿಪೀಡಿಯ ಇಂದ
(ಬಂಗಾರಪ್ಪ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಎಸ್.ಬಂಗಾರಪ್ಪ'
ಸಾರೇಕೊಪ್ಪ ಬಂಗಾರಪ್ಪ

ಅಧಿಕಾರ ಅವಧಿ
೧೭ ಅಕ್ಟೋಬರ್ ೧೯೯೦ – ೧೯ನವಂಬರ್ ೧೯೯೨
ರಾಜ್ಯಪಾಲ ಭಾನು ಪ್ರತಾಪ್ ಸಿಂಗ್
ಖುರ್ಷಿದ್ ಆಲಮ್ ಖಾನ್
ಪೂರ್ವಾಧಿಕಾರಿ ವೀರೇಂದ್ರ ಪಾಟೀಲ್
ಉತ್ತರಾಧಿಕಾರಿ ಎಂ.ವೀರಪ್ಪಮೊಯ್ಲಿ
ಮತಕ್ಷೇತ್ರ ಸೊರಬ

ಅಧಿಕಾರ ಅವಧಿ
೧೯೯೬ – ೧೯೯೮
ಪೂರ್ವಾಧಿಕಾರಿ ಕೆ.ಜಿ.ಶಿವಪ್ಪ
ಉತ್ತರಾಧಿಕಾರಿ ಆಯನೂರು ಮಂಜುನಾಥ
ಅಧಿಕಾರ ಅವಧಿ
೧೯೯೯ – ೨೦೦೯
ಪೂರ್ವಾಧಿಕಾರಿ ಆಯನೂರು ಮಂಜುನಾಥ
ಉತ್ತರಾಧಿಕಾರಿ ಬಿ.ವೈ.ರಾಘವೇಂದ್ರ
ವೈಯುಕ್ತಿಕ ಮಾಹಿತಿ
ಜನನ 26 ಅಕ್ಟೋಬರ್ 1933
ಕುಬಟೂರು, ಶಿವಮೊಗ್ಗ ಜಿಲ್ಲೆ
ಮರಣ 26 ಡಿಸೆಂಬರ್ 2011(2011-12-26) (ವಯಸ್ಸು 79)
ಬೆಂಗಳೂರು
ರಾಜಕೀಯ ಪಕ್ಷ ಹಲವಾರು (ಏಳು)
ಸಂಗಾತಿ(ಗಳು) ಶಕುಂತಳ
ಮಕ್ಕಳು ಮಧು ಬಂಗಾರಪ್ಪ, ಕುಮಾರ ಬಂಗಾರಪ್ಪಸಾರೇಕೊಪ್ಪ ಬಂಗಾರಪ್ಪ ಕರ್ನಾಟಕ ರಾಜ್ಯದ ೧೨ ನೇ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಜನನ[ಬದಲಾಯಿಸಿ]

ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ. ಬಡವರ ಬಂಧು, ಮಾಜೀ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಬಡಬಗ್ಗರ ಪಾಲಿನ ಆಶ್ರಯದಾತ ಹಾಗೂ ಹಲವು ಪಕ್ಷಗಳ ಸೃಷ್ಟಿಕರ್ತ. ಎಸ್. ಬಂಗಾರಪ್ಪನವರು ತಮ್ಮ ಬೆಂಗಳೂರಿನ ಸದಾಶಿವನಗರದ ಸ್ವಂತ ನಿವಾಸದಲ್ಲಿ ವಾಸಿಸುತ್ತಿದ್ದು, ತಮ್ಮ ಕೊನೆಯುಸಿರಿರುವವರೆಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ೧೯೩೩ ರ ಅಕ್ಟೋಬರ್, ೨೬ ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದಲ್ಲಿ ಜನಿಸಿದರು. ತಂದೆ ಕಲ್ಲಪ್ಪ . ಹಾಗೂ ತಾಯಿ ಕಲ್ಲಮ್ಮ. ಬಂಗಾರಪ್ಪನವರು ಬಿ.ಎ, ಎಲ್.ಎಲ್.ಬಿ ಪದವೀಧರರಾಗಿದ್ದು 'ಸಮಾಜ ವಿಜ್ಞಾನದಲ್ಲಿ ಡಿಪ್ಲೊಮ' ಗಳಿಸಿದ್ದಾರೆ. ಸಮಾಜವಾದಿ ನಾಯಕ ಶಾಂತವೀರ ಗೋಪಾಲಗೌಡರ ಶಿಷ್ಯರಾಗಿ ೧೯೬೨ ರಲ್ಲಿ ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಿದರು. ಸಾಗರ-ಸೊರಬ ಜಂಟಿ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಆಯ್ಕೆಗೊಂಡರು. ವಕೀಲಿವೃತ್ತಿಯನ್ನು ನಡೆಸುತ್ತಿದ್ದರು.

ನಿಧನ[ಬದಲಾಯಿಸಿ]

ಶ್ರೀ.ಬಂಗಾರಪ್ಪ ನವರು ಸ್ವಲ್ಪದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು ಬೆಂಗಳೂರು ನಗರದ ಮಲ್ಯ ಆಸ್ಪತ್ರೆ ಗೆ ಡಿಸೆಂಬರ್ ೮ ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸನ್, ೨೦೧೧ ರ, ರವಿವಾರ, ಡಿಸೆಂಬರ್, ೨೫ ರಂದು, ಮಧ್ಯರಾತ್ರಿ ೧೨-೪೫ಕ್ಕೆ ಕೊನೆಯುಸಿರೆಳೆದರು. ಬಂಗಾರಪ್ಪನವರು ಪತ್ನಿ,ಶಕುಂತಲಾ ಬಂಗಾರಪ್ಪ, ಹಾಗೂ ಇಬ್ಬರು ಗಂಡು ಮಕ್ಕಳು, ಕುಮಾರ ಬಂಗಾರಪ್ಪ,, ಮಧು ಬಂಗಾರಪ್ಪ,, ಮೂರು ಜನ ಹೆಣ್ಣು ಮಕ್ಕಳು, ಸುಜಾತ, ಗೀತ, ಅನಿತ, ಸೇರಿದಂತೆ ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

ಅಂತಿಮ ಸಂಸ್ಕಾರ[ಬದಲಾಯಿಸಿ]

ಸನ್,೨೦೧೧ ರ, ಡಿಸೆಂಬರ್,೨೭, ಮಂಗಳವಾರದಂದು ಅಂತಿಮ ಸಂಸ್ಕಾರ ಜರುಗಿತು. ಅದರ ವಿವರಗಳು ಹೀಗಿವೆ. ಬೆಂಗಳೂರಿನಿಂದ ಕುಬಟೂರಿಗೆ ಶ್ರೀ.ಬಂಗಾರಪ್ಪನವರ ಶವವನ್ನು ಬೆಳಿಗ್ಗೆ ೪-೩೦ ಕ್ಕೆ ತರಲಾಯಿತು. ಅಲ್ಲಿಂದ ೪ ಕಿ.ಮೀ.ದೂರದ ಲಕ್ಕವಳ್ಳಿಯ ಅವರ ತೋಟದಲ್ಲಿ ಶ್ರೀ.ಬಂಗಾರಪ್ಪನವರ ತಂದೆ, ತಾಯಿಯರ ಸಮಾಧಿಯ ಎದುರಿಗೆ ಪೂಜೆಗಳನ್ನು ಸಲ್ಲಿಸಿ, ಪುನಃ ಕುಬಟೂರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆ ಆನವಟ್ಟಿ, ಸಮನ ಹಳ್ಳಿ, ಕುಪ್ಪಗಡ್ಡೆ, ತವನಂದಿ, ಕೊರಗೋಡು, ಗುಡವಿಕಾನ್, ಮತ್ತು ಹಳೇ ಸೊರಬ ದಿಂದ ಸೊರಬಕ್ಕೆ ತೆರಳುವ ಹೊತ್ತಿಗೆ ಮಧ್ಯಾನ್ಹ ೩ ಗಂಟೆಯಾಗಿತ್ತು. 'ಸೊರಬದ ಪದವೀ ಪೂರ್ವ ಕಾಲೇಜಿನ ಮೈದಾನ'ದಲ್ಲಿ 'ಬಂಗಾರಪ್ಪನವರ ಶವ'ವನ್ನು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ತದ ನಂತರ 'ರಾಜ್ಯ ಪೋಲೀಸ್ ಪಡೆ' 'ರಾಷ್ಟ್ರಗೀತೆಯನ್ನು ಪಠಿಸಿ' ಸಕಲ ಮರ್ಯಾದೆಗಳೊಂದಿಗೆ, ಮೂರು ಸುತ್ತಿನ ಕುಶಾಲ ತೋಪಿನ ಗೌರವದೊಂದಿಗೆ ಸಂಸ್ಕಾರ ವಿಧಿ ಮುಗಿಯಿತು. ಶವ ಸಂಸ್ಕಾರದ ಪ್ರಮುಖ ವಿಧಿಗಳಲ್ಲೊಂದಾದ 'ಅಗ್ನಿಸ್ಪರ್ಶ ಕಾರ್ಯ'ವನ್ನು ಸಂಜೆ ೭-೧೫ ಕ್ಕೆ, ಶ್ರೀ.ಬಂಗಾರಪ್ಪನವರ ಕೊನೆಯ ಮಗ, ಮಧು ಬಂಗಾರಪ್ಪ ನವರು ಮಾಡಿದರು. ಅಪಾರ ಜನಸ್ತೋಮ ಅವರ ಸಾವಿಗೆ ಶೋಕವನ್ನು ವ್ಯಕ್ತಪಡಿಸಿತು. ಅಲ್ಲಿ ನೆರೆದಿದ್ದ ಪ್ರಮುಖ ರಾಜಕಾರಣಿಗಳೆಂದರೆ- ಮುಖ್ಯಮಂತ್ರಿ ಸದಾನಂದ ಗೌಡ, ವಿರೋಧ ಪಕ್ಷದ ನಾಯಕ, ಸಿದ್ಧರಾಮಯ್ಯ, ರಾಜ್ಯ ಬಿ.ಜೆ.ಪಿ.ಘಟಕದ ಅಧ್ಯಕ್ಷ, ಕೆ.ಎಸ್. ಈಶ್ವರಪ್ಪ, ಶ್ರೀ.ಬಂಗಾರಪ್ಪನವರ ಪತ್ನಿ, ಪುತ್ರರು, ಪುತ್ರಿಯರು ಹಾಗೂ ಅಪಾರ ಹಿತೈಷಿಗಳು ಹಾಜರಿದ್ದು ತಮ್ಮ ಅಂತಿಮ ಗೌರವವನ್ನು ಸಲ್ಲಿಸಿದರು. ಶ್ರೀ.ಬಂಗಾರಪ್ಪನವರಿಗೆ, ಗೌರವ ಸೂಚಿಸುವ ಸಲುವಾಗಿ ಎಲ್ಲ ಸರಕಾರಿ ಕಚೇರಿಗಳ ಮೇಲೆ, ರಾಷ್ಟ್ರಧ್ವಜವನ್ನು ಅರ್ಥಮಟ್ಟದಲ್ಲಿ ಹಾರಿಸಲಾಯಿತು.