ಸಿದ್ದರಾಮಯ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಸಿದ್ದರಾಮಯ್ಯ
Siddaramaiah1.jpg

ಹಾಲಿ
ಅಧಿಕಾರ ಸ್ವೀಕಾರ 
೧೩ ಮೇ ೨೦೧೩
ಪೂರ್ವಾಧಿಕಾರಿ ಜಗದೀಶ ಶೆಟ್ಟರ್ (ಬಿಜೆಪಿ)
ಉತ್ತರಾಧಿಕಾರಿ ಹಾಲಿ ಸದಸ್ಯರು
ಮತಕ್ಷೇತ್ರ ವರುಣ, ಮೈಸೂರು

ಕರ್ನಾಟಕದ ಉಪ ಮುಖ್ಯಮಂತ್ರಿ
ಅಧಿಕಾರ ಅವಧಿ
೩೧ ಮೇ ೧೯೯೬ – ೭ ಅಕ್ಟೋಬರ್ ೧೯೯೯
ಪೂರ್ವಾಧಿಕಾರಿ ಜೆ_ಹೆಚ್_ಪಟೇಲ್
ಉತ್ತರಾಧಿಕಾರಿ himself
ಮತಕ್ಷೇತ್ರ ಚಾಮುಂಡೇಶ್ವರಿ
ಅಧಿಕಾರ ಅವಧಿ
೨೮ ಮೇ ೨೦೦೪ – ೫ ಆಗಸ್ಟ್ ೨೦೦೫[೧]
ಪೂರ್ವಾಧಿಕಾರಿ himself
ಉತ್ತರಾಧಿಕಾರಿ ಎಮ್.ಪಿ.ಪ್ರಕಾಶ
ಮತಕ್ಷೇತ್ರ ಚಾಮುಂಡೇಶ್ವರಿ
ವೈಯುಕ್ತಿಕ ಮಾಹಿತಿ
ಜನನ (1948-08-12)ಆಗಸ್ಟ್ 12, 1948
ರಾಷ್ಟ್ರೀಯತೆ  ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಪಾರ್ವತಿi
ಮಕ್ಕಳು ರಾಕೇಶ್, ಯತೀಂದ್ರ
ಧರ್ಮ ನಿರೀಶ್ವರವಾದಿ[೨][೩]

ಸಿದ್ದರಾಮಯ್ಯ (ಜನನ: ೧೨ ಆಗಸ್ಟ್, ೧೯೪೮) ಕರ್ನಾಟಕದ ೨೨ನೇ ಮುಖ್ಯಮಂತ್ರಿ. ೨೦೧೩ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿ.

ಬಾಲ್ಯ[ಬದಲಾಯಿಸಿ]

ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ ೧೯೪೮ರ ಆಗಸ್ಟ್೧೨ ರಂದು ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರದು ತುಂಬು ಮನೆಯ ಅವಿಭಕ್ತ ಕುಟುಂಬ. ಚಿಕ್ಕಂದಿನಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತಿದ್ದಾರೆ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿ ಯರ್ ಆಗಿ ನಂತರ ೧೯೭೮ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು.

ರಾಜಕೀಯ ಜೀವನ[ಬದಲಾಯಿಸಿ]

 • ೧೯೮೩ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದ ಸಿದ್ಧರಾಮಯ್ಯ, ಕನ್ನಡ ಕಾವಲು ಸಮಿತಿಯನ್ನು ಜನಮನದಲ್ಲಿ ಚಿರಸ್ಥಾಯಿಯಾಗಿಸಿದರು.
 • ೧೯೮೫ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಾಗ, ಸಿದ್ಧರಾಮಯ್ಯನವರ ಕನ್ನಡ ಕಾವಲು ಸಮಿತಿಯ ಕೆಲಸದಿಂದ ಉತ್ತೇಜಿತರಾದ ರಾಮಕೃಷ್ಣ ಹೆಗ್ಡೆ, ಇವರನ್ನು ಪಶುಸಂಗೋಪನೆ ಸಚಿವರನ್ನಾಗಿ ನೇಮಿಸಿದರು. ಸಂಪುಟ ಪುನರ್ರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
 • ೧೯೮೯ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. ೧೯೯೨ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು. ೧೯೯೪ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು.
 • ೧೯೯೪ರಲ್ಲಿ ನಬಾರ್ಡ್ ಅಧ್ಯಕ್ಷರಾದ ಪಿ. ಕೋಟಯ್ಯನವರ ಮುಂದೆ ಸಮರ್ಥವಾಗಿ ವಾದ ಮಂಡಿಸಿ, ರೈತರ ಸಾಲ ಮನ್ನಾ ಮಾಡುವ ದೇವೇಗೌಡರ ಚುನಾವಣೆಯ ವಾಗ್ದಾನವನ್ನು ನಡೆಸಿಕೊಟ್ಟರು. ೧೯೯೬ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ಮೊದಲ ಬಾರಿ ಮುಖ್ಯಮಂತ್ರಿಯಾಗುವ ಉತ್ಸಾಹ ವ್ಯಕ್ತ ಪಡಿಸಿದರು. ಇದು ಕುರುಬ ಸಮಾಜದಲ್ಲಿ ರಾಜಕೀಯ ಪ್ರಜ್ನೆ ಮತ್ತು ಹುಮ್ಮಸ್ಸು ಮೂಡಿಸಿತು. ಆದರೆ, ತಮಗಿಂತ ಹಿರಿಯರಾದ ಜೆ. ಎಚ್. ಪಟೇಲರು ಮುಖ್ಯಮಂತ್ರಿಯಾಗಲು ಮುಂದಾದಾಗ, ತಾವೇ ಪಟೇಲರಿಗೆ ಸಮರ್ಥನೆ ನೀಡಿ, ತಾವು ಉಪಮುಖ್ಯಮಂತ್ರಿಯಾದರು.
 • ರಾಮಕೃಷ್ಣ ಹೆಗ್ಡೆಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದಾಗ, ಅದನ್ನು ಸಮರ್ಥಿಸಿದ ಸಿದ್ಧರಾಮಯ್ಯ, ಜನತಾದಳದಲ್ಲೇ ಉಳಿದರು. ೫ ಬಾರಿ ಬಜೆಟ್ ಮಂಡಿಸಿ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದರು. ಆದರೆ, ಅವರ ಆಸೆಯಂತೆ ಖೋತಾ ಇಲ್ಲದ ಬಜೆಟ್ ಮಂಡಿಸಲು ಆಗಲಿಲ್ಲ. (ಪಿ. ಮರಿಯಪ್ಪ ನವರು ಮಾತ್ರ ಖೋತಾ ರಹಿತ ಬಜೆಟ್ ಮಂಡಿಸಿದ ಕೀರ್ತಿ ಹೊಂದಿದ್ದಾರೆ).
 • ೧೯೯೯ರ ಚುನಾವಣೆಯ ಹೊತ್ತಿಗೆ ಜನತಾ ದಳ ೨ ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. ೧೯೯೯ರ ಚುನಾವಣೆಯಲ್ಲಿ ಸೋತರೂ ಸಹಿತ, ಪಕ್ಷದ ಸಂಘಟನೆ ಮಾಡಿ, ೨೦೦೪ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು.
 • ೨೦೦೪ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿ ಆಗುವ ಅವಕಾಶ ಅರ್ಹತೆ ಇದ್ದರೂ ಆಗಲಿಲ್ಲ. ೨ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಧರ್ಮಸಿಂಗ್ ಮುಖ್ಯಮಂತ್ರಿಯಾದರು, ಅಹಿಂದ (ಅಲ್ಪ ಸಂಖ್ಯಾತರು, ಹಿಂದುಳಿದವರು ಮತ್ತು ದಲಿತ) ಸಂಘಟನೆಯನ್ನು ಬಲಪಡಿಸಲು ಮುಂದಾದ ಸಿದ್ಧರಾಮಯ್ಯ, ದೇವೇಗೌಡರ ಕೋಪಕ್ಕೆ ಒಳಗಾದರು.
 • ಜುಲೈ ೨೪, ೨೦೦೫ರಂದು ಹುಬ್ಬಳ್ಳಿಯಲ್ಲಿ ಅಹಿಂದದ ದೊಡ್ಡ ಸಮಾವೇಶ ಏರ್ಪಡಿಸಿದ ಸಿದ್ಧರಾಮಯ್ಯ, ಬಹುತೇಕ ಸಚಿವ ಸಂಪುಟದಿಂದ ಹೊರನಡೆಯಲು ಸಿದ್ಧರಾದರು. ಸಿದ್ಧರಾಮಯ್ಯ, ಎಚ್. ಸಿ. ಮಹಾದೇವಪ್ಪ ಮತ್ತು ಸತೀಶ್ ಜಾರಕಿಹೊಳಿ, ಈ ಮೂವರನ್ನು ಧರ್ಮಸಿಂಗ್ ಸಂಪುಟದಿಂದ ಕಿತ್ತು ಹಾಕಿ, ಎಂ. ಪಿ. ಪ್ರಕಾಶ್‌ರನ್ನು ಉಪಮುಖ್ಯಮಂತ್ರಿ ಮಾಡಿದರು. ಸಿದ್ಧರಾಮಯ್ಯ ಮತ್ತು ಸಂಗಡಿಗರನ್ನು ಜಾತ್ಯತೀತ ಜನತಾದಳದಿಂದ ವಜಾ ಮಾಡಲಾಯ್ತು.
 • ಅಧಿಕಾರ ರಾಜಕಾರಣದ ಮತ್ತೊಂದು ಮಜಲು ಕಂಡ ಸಿದ್ಧರಾಮಯ್ಯರನ್ನು ಪ್ರಾದೇಶಿಕ ಪಕ್ಷ ರಚಿಸುವಂತೆ, ಹಲವು ಸಾಹಿತಿಗಳು ಮತ್ತು ಪತ್ರಕರ್ತರು ಸಲಹೆ ನೀಡಿದರು. ಆದರೆ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಎಂದೂ ಸ್ವತಂತ್ರವಾಗಿ ಅಧಿಕಾರ ಹಿಡಿಯಲಾರವು ಎಂದು ಸ್ಪಷ್ಟವಾಗಿ ತಿಳಿದಿದ್ದರು. ಕುರುಬ ಸಮುದಾಯದ ಪ್ರಶ್ನಾತೀತ ನಾಯಕರೆಂದು ಬಿಂಬಿತವಾಗಿದ್ದ ಸಿದ್ದರಾಮಯ್ಯ ನವರು ದೇವೆಗೌಡರ ವಿರುದ್ಧ ರಾಜಕೀಯವಾಗಿ ಸೆಡ್ಡು ಹೊಡೆದರು.
 • ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಕಾಂಗ್ರೆಸ್ ಪಕ್ಷ ಸೇರಿ, ೨೦೦೬ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ, ಈ ಚುನಾವಣೆಯನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡರು. ಕುತೂಹಲ ಕೆರಳಿಸಿದ ಉಪಚುನಾವಣೆಯ ವೀಕ್ಷಕರಾಗಿ ಬಂದ ರೇಮಂಡ್ ಪೀಟರ್, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರಿಗೆ ಚುನಾವಣೆಯ ಕ್ಷೇತ್ರದಿಂದ ಹೊರನಡೆಯುವಂತೆ ಆದೇಶ ಹೊರಡಿಸಿದರು.
 • ಸಿದ್ಧರಾಮಯ್ಯ ೨೫೭ ಮತಗಳ ಅಂತರದಿಂದ ಬಿಜೆಪಿ-ಜಾತ್ಯತೀತ ಜನತಾದಳದ ಜಂಟಿ ಅಭ್ಯರ್ಥಿ ಶಿವಬಸಪ್ಪರನ್ನು ಸೋಲಿಸಿದರು.[೪] ಸದನದಲ್ಲಿ ಸರ್ಕಾರವನ್ನು ಕಟು ನುಡಿಗಳಿಂದ ತರಾಟೆಗೆ ತೆಗೆದುಕೊಳ್ಳುವ ಸಿದ್ಧರಾಮಯ್ಯ, ಉತ್ತಮ ಕೆಲಸಗಳಿಗೆ ಬೆಂಬಲ ಮತ್ತು ಮೆಚ್ಚುಗೆ ಕೂಡ ಸೂಚಿಸುತ್ತಿದ್ದರು. ೨೦೦೮ರಲ್ಲಿ ಗೆದ್ದ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದರು.
 • ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಮತ್ತು ಅಕ್ರಮ ಗಣಿಗಾರಿಕೆಯ ಬಲವನ್ನು ವಿರೋಧಿಸಲು, ಬೆಂಗಳೂರಿನಿಂದ ಬಳ್ಳಾರಿಗೆ ಜಾಥಾ ನಡೆಸಿದ ಸಿದ್ಧರಾಮಯ್ಯ, ಮೂಲ ಕಾಂಗ್ರೆಸ್ಸಿಗರಿಗಿಂತಲೂ ಹೆಚ್ಚು ಉತ್ಸಾಹದಿಂದ ಮುಂದಾದರು. ೨೦೧೩ರ ಚುನಾವಣೆಯ ಹೊತ್ತಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು.
 • ಮೇ ೧೦ ೨೦೧೩ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ ೧೩ ೨೦೧೪ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ದೇವರ ಹೆಸರಿನ ಬದಲು ಸತ್ಯ ಹೆಸರಿನಲ್ಲಿ ಅಧಿಕಾರದ ಗದ್ದುಗೆ ಏರಿದ ಸಿದ್ಧರಾಮಯ್ಯ, ಅದೇ ದಿನ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಹಿಂದುಳಿದ ವರ್ಗಗಳ ಉದ್ಯೋಗ ಸಾಲ ಮನ್ನಾ ಮಾಡಿದರು.


 1. ಕರ್ನಾಟಕದ ಮುಖ್ಯಮಂತ್ರಿ (೧೩ ಮೇ ೨೦೧೩ – )
 2. ಕರ್ನಾಟಕದ ಉಪ ಮುಖ್ಯಮಂತ್ರಿ (ಎರಡು ಬಾರಿ, ೧೯೯೬ ಮತ್ತು ೨೦೦೪)
 3. ಹಣಕಾಸು ಸಚಿವ
 4. ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಸಚಿವ (೧೯೯೫)
 5. ರೇಷ್ಮೆಕೃಷಿ ಮತ್ತು ಪಶು ಸಂಗೋಪನೆ ಸಚಿವ
 6. ಸಾರಿಗೆ ಸಚಿವ
 7. ವಿಧಾನಸಭಾ ವಿರೋಧ ಪಕ್ಷದ ನಾಯಕ ೨೦೦೮-೨೦೧೩

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Special Correspondent: Siddaramaiah, two others dropped., The Hindu,Aug 06, 2005.
 2. [೧], Rediff,May 13, 2013.
 3. [೨], Times of India,May 13, 2013.
 4. salambangalore.blogspot.sg/2006/12/siddaramaiah-wins-chamundeshwari-by.html

ಹೊರಕೊಂಡಿಗಳು[ಬದಲಾಯಿಸಿ]