ಮಠದ ಪಾಟೀಲ್ ಪ್ರಕಾಶ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಠದ ಪಾಟೀಲ್ ಪ್ರಕಾಶ್ ಅಥವಾ ಎಮ್ ಪಿ ಪ್ರಕಾಶ್ (೧೯೪೦-೨೦೧೧), ಕರ್ನಾಟಕದ ಹಿರಿಯ ರಾಜಕಾರಣಿ. ಇವರು ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು.

ಎಮ್ ಪಿ ಪ್ರಕಾಶ್

ವೈಯಕ್ತಿಕ ಜೀವನ[ಬದಲಾಯಿಸಿ]

ಪ್ರಕಾಶ್ ರವರು ಬೆಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಯಲ್ಲಿ, ಜುಲೈ ೧೧ ೧೯೪೦ ರಂದು, ಲಿಂಗಾಯತರ ಕುಟುಂಬದಲ್ಲಿ ಜನಿಸಿದರು. ಇವರು ಎಮ್.ಎ., ಎಲ್.ಎಲ್.ಬಿ. ಪದವಿ ಪಡೆದಿದ್ದರೆ. ಇವರು ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಲ್ಲದೆ ಹಲವು ನಾಟಕಗಳನ್ನು ರಚಿಸಿ ಅದರಲ್ಲಿ ನಟನೆ ಕೂಡ ಮಾಡಿದ್ದರೆ.

ಅನುವಾದ ಸಾಹಿತ್ಯ[ಬದಲಾಯಿಸಿ]

 • ಪ್ರೀತಿಯೇ ದೇವರು ಮತ್ತು ಇತರ ಕಥೆಗಳು (ಅನುವಾದಿತ ಕಥಾಸಂಕಲನ)
 • ಸೂರ್ಯಶಿಖಾರಿ (ಅನುವಾದಿತ ನಾಟಕ)
 • ಡೊಮಿಂಗೋ ಪಿಯಾಸ್ ಕಂಡ ವಿಜಯನಗರ (ಅನುವಾದ)
 • ಅಲೆಕ್ಸಾಂದಡರ ಜೆ. ಗ್ರೀನ್ ಲಾ ಮತ್ತು ಕಾಲಿನ್ಗ್ಸ್ ಕಂಡ ವಿಜಯನಗರ (ಅನುವಾದ)
 • ಚುನಾವಣಾ ಸುಧಾರಣೆಗಳು (ಅನುವಾದ: ಮೂಲ- ರಾಮಕೃಷ್ಣ ಹೆಗಡೆ)
 • ನನ್ನ ಜೀವನ ಮತ್ತು ರಾಜಕೀಯ (ಎಸ್. ನಿಜಲಿಂಗಪ್ಪ ಅವರ ಆತ್ಮಕಥನ ಅನುವಾದ)

ಅಭಿನಂದನ ಗ್ರಂಥಗಳು[ಬದಲಾಯಿಸಿ]

 • ಬಹುಮುಖಿ
 • ಕ್ರಿಯಾಶೀಲ
 • ಮಲ್ಲಿಗೆ ಮುಡಿಲು

ಪ್ರವಾಸ ಕಥನಗಳು[ಬದಲಾಯಿಸಿ]

 • ಕಳಿಂಗ ಸೂರ್ಯ
 • ಥೈಲ್ಯಾಂಡ್ ಪ್ರವಾಸ
 • ಅಮೇರಿಕಾ ಪ್ರವಾಸ

ಸಾಂಸ್ಕೃತಿಕ ಲೇಖನಗಳು[ಬದಲಾಯಿಸಿ]

 • ರಂಗಾಯಣದ ಕುಸುಮಬಾಲೆ: ಒಂದು ಅನುಭವ
 • ಯಾರ ತಲೆದಂಡ?
 • ಯಾತಕ್ಕೆ ಮಳೆ ಹೋದವೋ...

ರಾಜಕೀಯ ಲೇಖನಗಳು[ಬದಲಾಯಿಸಿ]

 • ಒಂದು ಕೋಟಿ ರುಪಾಯಿ ಹಗರಣ
 • ಕೊರಳಿಗೆ ಉರುಳಾಡುತ್ತಿರುವ ಡನ್ಕೆಲ್ ಪ್ರಸ್ತಾಪ
 • ಮೂಲೆಗುಂಪಾದ ರೋಜಗಾರ್

ರಾಜಕೀಯ ಜೀವನ[ಬದಲಾಯಿಸಿ]

 • ೧೯೮೩-೧೯೮೫-ವಿಧಾನ ಸಭಾ ಸದಸ್ಯ, ಸಾರಿಗೆ ಮತ್ತು ಕಾರ್ಮಿಕ ಸಚಿವ.
 • ೧೯೮೫-೮೭-ಕೃಷಿ ಸಚಿವ.
 • ೧೯೮೭-೮೮-ಪ್ರವಾಸೋದ್ಯಮ, ಸಂಸ್ಕೃತಿ, ಮಾಹಿತಿ ಹಾಗು ಪ್ರಚಾರ ಹಾಗು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಚಿವ.
 • ೧೯೯೪-೯೯ ವಿಧಾನ ಸಭಾ ಸದಸ್ಯ ಹಾಗು ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಹಾಗು ವಕ್ಫ್ಸ್ ಸಚಿವ.
 • ೧೯೯೯ ರಿಂದ ಮೇ ೨೦೦೪ ರ ವರೆಗೆ -ಶಾಸನಸಭೆಯು ಸದಸ್ಯ
 • ೨೦೦೪ ಜೆ ಡಿ ಎಸ್ ಸರ್ಕಾರದಲ್ಲಿ ಕಂದಾಯ ಮಂತ್ರಿ

ಕ್ಯಾನ್ಸರ್ ವಿರುದ್ಧ ಹೋರಾಟ ಹಾಗು ನಿಧನ[ಬದಲಾಯಿಸಿ]

ಪ್ರಕಾಶ್ ದೀರ್ಘ ಕಾಲ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಹಾಗು ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆದಿದ್ದಾಗಿಯೂ ಸುದ್ಧಿ ಬಂದಿತ್ತು. ಆದರೆ, ಫೆಬ್ರವರಿ ೯ ೨೦೧೧ ಬುಧವಾರ ಬೆಳಗಿನ ಜಾವ ೫ ಗಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಟೆಂಪ್ಲೇಟು:ಕರ್ನಾಟಕದ ಉಪಮುಖ್ಯಮಂತ್ರಿಗಳು