ಲಿಂಗಾಯತ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಕಿಪೀಡಿಯ ಶೈಲಿಯಲ್ಲಿ ಇಲ್ಲ


ಲಿಂಗಾಯತ ಧರ್ಮ: ಸಮಾನತೆ, ಭ್ರಾತೃತ್ವ ನೈತಿಕತೆ, ಪ್ರಗತಿ, ಸಮೃದ್ಧಿ ಮತ್ತು ಜ್ಞಾನದ ಸಂಕೇತ!

ಭಾರತವು ಸನಾತನ ಧರ್ಮ, ಜೈನ, ಬೌದ್ಧ, ಸಿಖ್ ಧರ್ಮಗಳಂತೆ ಲಿಂಗಾಯತ ಧರ್ಮದ ಜನ್ಮಸ್ಥಳವಾಗಿದೆ. ಲಿಂಗಾಯತ ಧರ್ಮವು ಸಮಾನತೆ ಸಾರಿದ, ಬಹು ಪ್ರಗತಿಶೀಲ ಸ್ವತಂತ್ರ ಸ್ವಾವಲಂಬಿ ಮತ್ತು ಪರಿಪೂರ್ಣ ಧರ್ಮವಾಗಿದೆ.

ಲಿಂಗಾಯತ ಧರ್ಮವು ಸಮಾಜದಲ್ಲಿರುವ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆ. ವಿರುದ್ಧ ಹೋರಾಡಿ ಕಲ್ಯಾಣ ರಾಜ್ಯ ಸ್ಥಾಪಿಸಲು ಬದ್ಧವಾಗಿದೆ. ಲಿಂಗಾಯತ ಧರ್ಮವು ಸಮಾನತೆ ಸಾರುತ್ತ ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಹಕ್ಕುಗಳನ್ನು, ತತ್ವಗಳನ್ನು ಎತ್ತಿಹಿಡಿಯುವ, ಮೂಲಕ ತುಳಿತಕ್ಕೋಳಗಾದ ದೀನ ದಲಿತರಿಗೆ, ಅಸ್ಪೃಶ್ಯರಿಗೆ ಅವಕಾಶ ನೀಡುವ ಮೂಲಕ ಕ್ರಾಂತಿಕಾರಕ ಧರ್ಮವಾಗಿದೆ.

ಲಿಂಗಾಯತ ಧರ್ಮವು ಎಲ್ಲಾ ಜಾತಿಗಳ ಮತ್ತು ಎಲ್ಲಾ ಉದ್ಯೋಗಗಳ ಜನರನ್ನು (ಬ್ರಾಹ್ಮಣ ನಿಂದ ಭಂಗಿಯವರೆಗೆ) ಆಕರ್ಷಸಿ ಎಲ್ಲರನ್ನು ಇಷ್ಟಲಿಂಗ ದೀಕ್ಷೆ ಮೂಲಕ ತನ್ನತ್ತ ಸೆಳೆದುಕೊಂಡಿತು. ಇದನ್ನು ನಾವು ಹಲವು ಶರಣರ ವಚನಗಳಲ್ಲಿ ಕಾಣಬಹುದು.

ಲಿಂಗಾಯತ ಧರ್ಮವು ಈ ಕೆಳಗೆ ಕೊಟ್ಟಿರುವ ತನ್ನ ಸ್ವಂತ ವಿಶೇಷ ಗುಣಲಕ್ಷಣಗಳಿಂದ ಒಂದು ಬಹು ಪ್ರಗತಿಶೀಲವಾಗಿದೆ.

ಧರ್ಮ ಸ್ಥಾಪಕರು: ಬಸವಣ್ಣ(೧೧೩೪-೧೧೯೬ CE)

ಧರ್ಮ ಸಾಹಿತ್ಯ (ಧರ್ಮಗ್ರಂಥ): ವಚನ ಸಾಹಿತ್ಯ?

ಧರ್ಮ ಭಾಷೆ: ಕನ್ನಡ

ಧರ್ಮದ ದೇವರ ಹೆಸರು: ಕೂಡಲಸಂಗಮದೇವ ನಿರಾಕಾರ ನಿರಂಜನ

ಧರ್ಮ ಲಾಂಛನ: ವಿಶ್ವದಾಕಾರದಲ್ಲಿರುವ ವಿಶ್ವಾತ್ಮನ ಕುರುಹಾದ ಇಷ್ಟಲಿಂಗ

ಧರ್ಮ ಸಂಸ್ಕಾರ: ಲಿಂಗಧಾರಣ/ ಇಷ್ಟಲಿಂಗ ದೀಕ್ಷೆ

ದರ್ಶನ: ಷಟಸ್ಥಲ ದರ್ಶನ

ಸಮಾಜ ಶಾಸ್ತ್ರ: ಶಿವಾಚಾರ-ಸಾಮಾಜಿಕ ಸಮಾನತೆ

ನೀತಿ ಶಾಸ್ತ್ರ: ಗಣಾಚಾರ / ಭೃತ್ಯಾಚಾರ

ಅರ್ಥ ಶಾಸ್ತ್ರ: ಸದಾಚಾರ (ಕಾಯಕ- ದಾಸೋಹ-ಪ್ರಸಾದ)

- See more at: http://lingayatreligion.com/K/index.htm#sthash.0k75nl76.dpuf

ಲಿಂಗಾಯತ[ಬದಲಾಯಿಸಿ]

ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ ಹೊಂದಿರುವ ಲಿಂಗಾಯತ ಧರ್ಮ. -ಶಕ್ತಿ ವಿಶಿಷ್ಟಾದ್ವೈತ ). ಇದೊಂದು ಜಾತಿಯಲ್ಲ. ಇದರ ಸಂಸ್ಥಾಪಕರು ಬಸವಣ್ಣ(. ೧೧೩೪-೧೧೯೬ CE) ನವರು. ವೀರಶೈವ ಮಹಾಸಭೆ­ಯವರು ತಾವು ಹಿಂದೂ ಧರ್ಮದ ಭಾಗವಲ್ಲ, ತಮ್ಮದು ಒಂದು ಸ್ವತಂತ್ರ ಧರ್ಮ­ವಾಗಿ­ರುವುದರಿಂದ ತಮಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡ­ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ್ಧರು. ಆದರೆ ಅದನ್ನು ಕೇಂದ್ರ ಸರ್ಕಾರ ಈ ಮನವಿಯನ್ನು ನಿರಾಕರಿಸಿದೆ.

[೧]

ಇತಿಹಾಸ[ಬದಲಾಯಿಸಿ]

ಲಿಂಗಾಯತವು ಒಂದು ಜಾತಿ, ಧರ್ಮವಲ್ಲ.[ಬದಲಾಯಿಸಿ]

ಹುಟ್ಟಿನಿಂದ ಮಾನವರನ್ನ ಮೇಲು ಕೇಳೆಂದು ವಿಭಜನೆ ಮಾಡುವುದು ಜಾತಿ; ಹುಟ್ಟಿನಿಂದ ಎಲ್ಲರು ಸಮಾನರು ಎಂದು ಘೋಷಿಸಿ ಯಾವ ಜಾತಿ, ವರ್ಗ, ವರ್ಣ ಭೇದವಿಲ್ಲದೆ ಆಸಕ್ತಿ ಇದ್ದವರೆಲ್ಲರೂ ದೀಕ್ಷಾ ಸಂಸ್ಕಾರ ಪಡೆಯಲು ಬರುತ್ತದೆ ಎಂದು ಹೇಳುವುದು ಧರ್ಮ. ಈ ಧಾರ್ಮಿಕ ಸಂಸ್ಕಾರ ದಿಂದ, ವ್ಯಕ್ತಿ ಯು ಸಾಧಿಸಿದ ನಿಲುವಿನಿಂದ ಅವನು ಶ್ರೇಷ್ಠ, ಕನಿಷ್ಠನಾಗುವುನು ಎನ್ನುವುದು ಧರ್ಮ. ಲಿಂಗಾಯತ ಧರ್ಮವು ಜನನ ದಿಂದ ಯಾರನ್ನೂ ಮೇಲು ಕೀಳೆಂದು ಅಳೆಯದೆ 'ಹೊಲೆ ಗಂಡಲ್ಲದೆ ಪಿಂಡದ ನೆಲೆಗೆ ಅಶ್ರಯವಿಲ್ಲ ಎಂದು ಸಾರಿ; 'ಮರೆತವನು ಮಾನವ, ಅರಿತವನು ಶರಣ' ಎಂದು ಬೋದಿಸುವುದು, ಮರೆತ ಮಾನವನು ಅರಿತ ಶರಣ ನಾಗಲಿಕ್ಕೆ ಬೇಕಾಗುವ ದೀಕ್ಷಾಸಸ್ಕಾರವನ್ನು, ಪೂಜೆಯ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡುವುದು, ಆದಕಾರಣ ಇದು ಧರ್ಮ.

ಇಷ್ಟಲಿಂಗ ಯೋಗ ಸಾಧನ[ಬದಲಾಯಿಸಿ]

ಇಷ್ಟ ಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ ಅದು ದೃಷ್ಟಿ ಯೋಗ ಅಥವಾ ತ್ರಟಕ ಯೋಗಕ್ಕೆ ಸಹಾಯಕ ಸಾಧನವಾಗುವುದು. ಆಲಿಯ ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪ್ಪವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪವ ಮಾಡಿ ಹಚ್ಚಿದರೆ ತಾನೇ ನೋವು ಮಾಯವಾಗುವುದು! ಅದೇ ರೀತಿ ಮಾನವನ ಒಳಗಿರುವ ಆತ್ಮ ಚೈತನ್ಯವು ಭವನ್ನ ಕಳೆಯಲಾರದು; ಇದನ್ನರಿತ ಶ್ರೀ ಗುರುವು ಅಂತರಂಗದ ಆತ್ಮ ಚೈತನ್ಯವನ್ನು ಚುಳಕಾಗಿ ಹೊರತೆಗೆದು ಹುಟ್ಟುಲಿಂಗವನ್ನಾಗಿ ರೂಪಿಸಿ, ಎರಡನ್ನು ಅಭಿನ್ನವಾಗಿ ಇಂಬಿಟ್ಟು ಶಿಷ್ಯನಿಗೆ ಧಾರಣ ಮಾಡುವನು. ಈ ಕರಸ್ತಲದ ಚ್ಯೋತಿ, ಅರುಹಿನ ಕುರುಹು ಮತ್ತೆ ಅಂತರಂಗವನ್ನು ಪ್ರವೇಶಿಸಿ ಕಾಯವನ್ನೇ ಕೈಲಾಸವನ್ನಾಗಿ ಮಾಡಿ ಪುನೀತಗೊಳಿಸುವುದು.

ಲಿಂಗಾಯತವು ಸ್ಯೆದ್ದಾಂತಿಕ ಧರ್ಮ[ಬದಲಾಯಿಸಿ]

ಒಂದು ಸ್ಯೆದ್ದಾಂತಿಕ ಘಟನೆಯು ಧರ್ಮ ಎನ್ನಿಸಿಕೊಳ್ಳಬೇಕಾದರೆ ಅದಕ್ಕೆ ತನ್ನದೇ ಆದ ಏಕಾದಶ ಲಕ್ಷಣಗಳಿರಬೇಕು. ಅವಾವೆಂದರೆ ಜೀವ, ಜಗತ್ತು, ಈಶ್ವರ ರ ಸಂಭಂದವನ್ನು ವಿವೇಚಿಸುವ ಸಿದ್ದಾಂತ; ಈ ಸಿದ್ದಾಂತವನ್ನು ಅಳವಡಿಸಿಕೊಳ್ಳಲಿಕ್ಕೆ ಅಂದು ಸಾಧನೆ. ಸಾಧನೆಯಿಂದ ಸಿದ್ದಾಂತವನ್ನು ಸಕ್ಷಾತ್ಕರಿಸಿಕೊಂಡುದನ್ನು ಹೇಳುವ ಅನುಭಾವ ಪೂರ್ಣ ದರ್ಶನ, ಈ ತತ್ವ ದ ಅನುಯಯಿಯಾಗಬೇಕೆಂದು ಹಂಬಲಿಸುವ ವ್ಯಕ್ತಿಯನ್ನು ಇಂಬಿಟ್ಟುಕೊಳ್ಳಲಿಕ್ಕೆ ಬೇಕಾದ ದೀಕ್ಷಾ ಸಂಸ್ಕಾರ, ಈ ಸಮಾಜದ ಅನುಯಾಯಿದವನು ತನ್ನ ಸಮಾಜದೊಡನೆ ಮತ್ತು ಅನ್ಯ ಸಮಾಜದೊಡನೆ ಯಾವ ತತ್ವದ ಅನುಯಾಯಿಯದವನು ತನ್ನ ಸಮಾಜದೊಡನೆ ಮತ್ತು ಅನ್ಯ ಸಮಾಜದೊಡನೆ ಯಾವ ತತ್ವದ ಆಧಾರದಮೇಲೆ ಹೊಂದಿಕೊಂಡು ಬಾಳಬೇಕೆಂಬ ಸಮಾಜ ಶಾಸ್ತ್ರ. , ಮಾನವರು ಯಾವ ಕ್ರಿಯೆಗಳಿಂದ ಪರರಿಗೆ ಹಿತವನ್ನುಂಟು ಮಾಡಬಹುದು; ಅವರ ವ್ಯವಹಾರ ಗಳು ಹೇಗಿರಬೇಕೆಂದು ಹೇಳುವ ನೀತಿಶಾಸ್ತ್ರ, ಸಮಾಜ-ರಾಷ್ಟ್ರದ ವ್ಯಕ್ತಿಯು ರಾಷ್ಟ್ರದ ಆರ್ಥಿಕಾಭಿವೃದ್ದಿಯಲ್ಲಿ ಹೇಗೆ ಭಾಗವಹಿಸಬೇಕೆಂದು ಹೇಳುವ ಅರ್ಥಶಾಸ್ತ್ರ; ಅನ್ಯ ಸಮಾಜದ ಆಚರಣೆಗಳಿಂದ ಭಿನ್ನವಾದ ಸಂಸ್ಕೃತಿ; ಈ ಎಲ್ಲಾ ತತ್ವ ಗಳನ್ನು ಅಳವಡಿಸಿಕೊಂಡು ಒಂದು ಪರಂಪರೆ; ಇವೆಲ್ಲವು ಗಳನ್ನೂ ವಿವೇಚನೆ ಮಾಡುವ ಸಾಹಿತ್ಯ; ಇಂಥ ಹಲವಾರು ತತ್ವಗಳುಳ್ಳ ಒಂದು ಪಥವನ್ನು ಹಾಕಿಕೊಟ್ಟ ಧರ್ಮಗುರು. ಈ ಹನ್ನೊಂದು ಲಕ್ಷಣಗಳು ಇದ್ದಾಗ ಮಾತ್ರವೇ ಅದು ಧರ್ಮ; ಇಲ್ಲವಾದರೆ ಅದು ಜಾತಿ, ಅಥವಾ ಮತ, ಈ ದೃಷ್ಟಿಯಿಂದ ನೋಡಿದಾಗ ಲಿಂಗಾಯತ ಧರ್ಮಕ್ಕೆ ಶಕ್ತಿ ವಿಶಿಷ್ಟಾದ್ವ್ಯೆತ ವೆಂಬ ದರ್ಶನ ವುಂಟು, ಲಿಂಗ ಧೀಕ್ಷೆ ಎಂಬ ಧರ್ಮ ಸಂಸ್ಕಾರವುಂಟು, ಅಪ್ರಾಕೃತ ಅಥವಾ ಅತಿವರ್ಣಾಶ್ರಮ ಸಮಾಜ ಶಾಸ್ತ್ರ, ಮಾನವೀಯ ನೀತಿಶಾಸ್ತ್ರ ವುಂಟು, ಕಾಯಕವೇ ಕ್ಯೆಲಾಸ, ದಸೋಹವೇ ದೇವಧಾಮ ಎಂಬ ಅರ್ಥಶಾಸ್ತ್ರವುಂಟು, ಅನ್ಯ ಸಮಾಜಗಳಿಂದ ಭಿನ್ನವಾದ ಶರಣ ಸಂಸ್ಕೃತಿ ಯುಂಟು ; ಮಂತ್ರ ಪುರುಷ ಬಸವಣ್ಣ ನವರೇ ಆದಿಯಾಗಿ ಅಂದಿನಿಂದಲೂ ಅವ್ಯಾಹತವಾಗಿ ಹರಿದು ಬಂದ ಶರಣ ಪರಂಪರೆ ಯುಂಟು; ಇವೆಲ್ಲವುಗಳನ್ನು ಒಳಗೊಂಡ ವಿವೇಚನಾತ್ಮಕ ಸ್ವತಂತ್ರ ವಚನ ಸಾಹಿತ್ಯ ಸಂವಿಧಾನದ ಕತೃವಾದ ಬಸವಣ್ಣನವರೆಂಬ ಧರ್ಮ ಗುರುವುಂಟು. ಆದುದರಿಂದ ಲಿಂಗಯತವು ಕುರುಬ, ಹರಿಜನ, ಬ್ರಾಹ್ಮಣ. ರೆಡ್ಡಿ. ಒಕ್ಕಲಿಗ ಇತ್ಯಾದಿ ಗಳಂತೆ ಜಾತಿಯಾಗದೆ ಸ್ವತಂತ್ರ ಧರ್ಮವಾಗದು, ಜಾತಿಯನ್ನು ತ್ಯಜಿಸಿ ಧರ್ಮವಂತ ನಾಗಲು ಬರುವುದು; ಧರ್ಮವನ್ನು ತ್ಯಜಿಸಿ ಕುರುಬ ಜಾತಿಯವನಾಗ್ಲಿ ಆಗಲು ಬಾರದು, ಏಕೆಂದರೆ ಹುಟ್ಟಿನಿಂದ ಬರವುದು ಜಾತಿ ; ಸಂಸ್ಕಾರದಿಂದ ಬರವುದು ಧರ್ಮ. ಲಿಂಗಾಯತ ಧರ್ಮವು ಸಂಸ್ಕಾರ ದಿಂದ ಬರವುದು, ಇದನ್ನು ಪ್ರವೇಶಿಸಲು ಎಲ್ಲರಿಗೂ ಹಕ್ಕಿದೆ.

ವೇದಾಗಮಗಳ ಪ್ರಾಮಾಣ್ಯ[ಬದಲಾಯಿಸಿ]

 • ಬಸವೇಶ್ವರರು ತಮ್ಮದೊಂದು ವಚನದಲ್ಲಿ ವೇದಾಗಮಗಳ ಕುರಿತು ಈ ರೀತಿಯಾಗಿ ಹೇಳಿದ್ದಾರೆ:

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ. -1/717[1]

ಒರೆ = ಖಡ್ಗವಿಡುವ ಕೋಶ (ಕತ್ತಿ/ಖಡ್ಗವನ್ನು ಕಟ್ಟು); ನಿಗಳ = ಬೇಡಿ, ಬಂಧನ; ಬಾರನೆತ್ತು = ಚರ್ಮಸುಲಿ;

ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ
ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ.
ಓದಿದ ಫಲವು ಮಾದಾರ ಚೆನ್ನಯ್ಯಂಗಾಯಿತ್ತು
ಕೂಡಲಸಂಗಮದೇವಾ. -1/143[1]

ಶುಕ = ಗಿಳಿ

ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ.
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಭೇದವ ಮಾಡಲಮ್ಮವು. -1/81[1]

 • ಮಡಿವಾಳ ಮಾಚಿದೇವ ವೇದಾಗಮಗಳ ಕುರಿತು ಈ ರೀತಿಯಾಗಿ ಹೇಳಿದ್ದಾರೆ:

ವೇದವನೋದಿದಡೇನು? ಶಾಸ್ತ್ರವ ಕಲಿತಡೇನು?
ಮಾಘವ ಮಿಂದಡೇನು? ಮೂಗ ಹಿಡಿದಡೇನು?
ಹಲ್ಲ ಕಿರಿದಡೇನು? ಬಾಯ ಹುಯ್ದುಕೊಂಡಡೇನು?
ಉಟ್ಟುದನೊಗೆದಡೇನು? ಮಟ್ಟಿಯನಿಟ್ಟಡೇನು?
ಮಂಡೆಯ ಬಿಟ್ಟಡೇನು? ತಿಟ್ಟನೆ ತಿರುಗಿದಡೇನು?
ಕಣ್ಣು ಮುಚ್ಚಿದಡೇನು? ಕೈಗಳ ಮುಗಿದಡೇನು?
ಬೊಟ್ಟನಿಟ್ಟಡೇನು? ಬಯಲಿಂಗೆ ನೆನೆದಡೇನು?
ಮುಸುಡ ಹಿಡಿದಡೇನು? ಮೌನದಲ್ಲಿರ್ದಡೇನು?
ಅವಕ್ಕೆ ಶಿವಗತಿ ಸಿಕ್ಕದು.
ಕುಲವಳಿದು ಛಲವಳಿದು ಮದವಳಿದು ಮತ್ಸರವಳಿದು,
ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ,
ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬಲ್ಲಡೆ,
ಶಿವಗತಿ ಸಿಕ್ಕುವುದು.
ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ,
ಕೈಲಾಸದ ಬಟ್ಟೆ ಬೇರಿಲ್ಲವೆಂದ, ಕಲಿದೇವಯ್ಯ. -8/732[1]

ತತ್ವಗಳೇ ಧರ್ಮದ ತಿರುಳು[ಬದಲಾಯಿಸಿ]

ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ ತತ್ವಗಳೇ ಈ ಧರ್ಮದ ಪ್ರತಿಪಾದ್ಯ ವಿಷಯಗಳಾಗಿವೆ. ಈ ತತ್ವಗಳನ್ನು ಹೊರತುಪಡಿಸಿ ಲಿಂಗಾಯತವನ್ನು ಕಲ್ಪಿಸಲು ಆಗುವುದಿಲ್ಲ. ಸಾಮಾಜಿಕ ಕಾಳಜಿಪರ ವಚನಗಳಷ್ಟೇ ಒಂದು ಧರ್ಮ ಎಂದು ಹೇಳಲಾಗುವುದಿಲ್ಲ. ಅಲ್ಲಿ ಆಧ್ಯಾತ್ಮಿಕ ಸಾಧನಪಥವಿರಬೇಕು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಧರ್ಮಾಚರಣೆಗಳಿರಬೇಕು. ಶರಣರು ಈ ಎಲ್ಲಾ ತತ್ವಗಳನ್ನೊಳಗೊಂಡ ಅನುಭಾವದ ವಚನಗಳನ್ನು ನೀಡಿದ್ದಾರೆ.

ವಚನಗಳು[ಬದಲಾಯಿಸಿ]

ಗುರು ಬಸವಣ್ಣನವರೆ ಲಿಂಗಾಯತ ಧರ್ಮ ಸ್ಥಾಪಕರು ಎಂದು ಹೇಳುವ ವಚನಗಳು. ಈ ವಚನಗಳು ೧೨ನೇ ಶತಮಾನದಲ್ಲಿ ರಚನೆಯಾಗಿದ್ದು ನಂಬಲರ್ಹವಾಗಿವೆ(?).
(ಸ್ವಂತಅಭಿಪ್ರಾಯ- ಆದಾರ ಅಗತ್ಯವಿದೆ)

ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು
ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು
ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು
ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು
ಇರೇಳು ಲೋಕವಾಯಿತ್ತು ಬಸವಣ್ಣನಿಂದ ಕಲಿದೇವಯ್ಯಾ.

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ,
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು,
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,
ಆಯತವು ಬಸವಣ್ಣನಿಂದ, ಸ್ವಾಯತವು ಬಸವಣ್ಣನಿಂದ ಸನ್ನಿಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ,
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ,
ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ.
- ಮಡಿವಾಳ ಮಾಚಿದೇವ[೨]

ಆದಿ ಬಸವಣ್ಣ ಅನಾದಿ ಲಿಂಗವೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು,
ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು,
ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ.
- ಚೆನ್ನ ಬಸವಣ್ಣ [೩]

ಎನ್ನ ತನುವೆ ಬಸವಣ್ಣನು,
ಎನ್ನ ಮನವ ಚೆನ್ನಬಸವಣ್ಣನು,
ಎನ್ನ ಪ್ರಾಣವೇ ಪ್ರಭುದೇವರು,
ಎನ್ನ ಸರ್ವಕರಣಂಗಳೆಲ್ಲ ಅಸಂಖ್ಯಾತ ಮಹಗಣಂಗಳಾಗಿರ್ಪರಾಗಿ,
ಅಖಂಡೇಶ್ವರಾ ನಿಮ್ಮೊಳಗೆ ನಿಜವು ಸಾಧ್ಯವಾಯಿತ್ತಯ್ಯ ಇಂದೆನೆಗೆ.

ಬಸವಣ್ಣನೆ ಗುರುವೆನಗೆ,
ಬಸವಣ್ಣನೆ ಲಿಂಗವೆನಗೆ,
ಬಸವಣ್ಣನೆ ಜಂಗಮವೆನಗೆ
ಬಸವಣ್ಣನೆ ಪಾದೋದಕವೆನಗೆ,
ಬಸವಣ್ಣನೆ ಪ್ರಸಾದವೆನಗೆ,
ಬಸವಣ್ಣನೆ ವಿಭೂತಿಯೆನಗೆ,
ಬಸವಣ್ಣನೆ ರುದ್ರಾಕ್ಷಿಯೆನಗೆ,
ಬಸವಣ್ಣನೆ ಮೂಲ ಮಂತ್ರವೆನಗೆ,
ಬಸವಣ್ಣನೆ ಅಷ್ಟಾವರಣವೆನಗೆ,
ಬಸವಣ್ಣನೆ ಪಂಚಾಚಾರವೆನಗೆ,
ಬಸವಣ್ಣನೆ ಷಟ್ ಸ್ಥಲಬ್ರಹ್ಮವೆನಗೆ,
ಬಸವಣ್ಣನೆ ಸರ್ವಾಚಾರ ಸಂಪತ್ತಾದನಾಗಿ,
ಬಸವಣ್ಣನ ಹಾಸಿಕೊಂಡು,
ಬಸವಣ್ಣನ ಹೊದ್ದುಕೊಂಡು,
ಬಸವಣ್ಣನ ತೊಂತಿಕೊಂಡು,
ಬಸವಣ್ಣನ ಧರಿಸಿಕೊಂಡು,
ಬಸವಣ್ಣನ ಚಿದ್ ಗರ್ಭದೊಳಗೆ ಕುಳ್ಳಿರ್ದು
ನಾನು ಬಸವ ಬಸವ ಬಸವಾ ಎನುತಿರ್ದೆನಯ್ಯ ಅಖಂಡೇಶ್ವರಾ.

ಬಸವನ ನಾಮವು ಕಾಮಧೇನು ಕಾಣಿರೋ,
ಬಸವನ ನಾಮವು ಕಲ್ಪವೃಕ್ಷ ಕಾಣಿರೋ,
ಬಸವನ ನಾಮವು ಚಿಂತಾಮಣಿ ಕಾಣಿರೋ,
ಬಸವನ ನಾಮವು ಪರುಷದ ಖಣಿ ಕಾಣಿರೋ,
ಬಸವನ ನಾಮವು ಸಂಜೀವನ ಮೂಲಿಕೆ ಕಾಣಿರೋ,
ಇಂತಪ್ಪ ಬಸವ ನಾಮಾಮೃತವು ಎನ್ನ ಜಿಹ್ವೆಯ ತುಂಬಿ ಹೊರಸೂಸಿ ಮನವ ತುಂಬಿತ್ತು,
ಆ ಮನವ ತುಂಬಿ ಹೊರಸೂಸಿ ಭಾವವ ತುಂಬಿತ್ತು,
ಆ ಭಾವವ ತುಂಬಿ ಹೊರಸೂಸಿ ಸಕಲ ಕರಣೇಂದ್ರಿಯಂಗಳ ತುಂಬಿತ್ತು,
ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ ಸರ್ವಾಂಗದ ರೋಮ ಕುಳಿಗಳನೆಲ್ಲ ವೇಧಿಸಿತ್ತಾಗಿ,
ನಾನು ಬಸವಾಕ್ಷರವೆಂಬ ಹಡಗನೇರಿ ಬಸವ ಬಸವಾ ಎಂದು ಭವ ಸಾಗರವ ದಾಂಟಿದೆನಯ್ಯ ಅಖಂಡೇಶ್ವರಾ.

ಇದಲ್ಲದೆ ಬಸವಣ್ಣನವರ ಕಾಲಾನಂತರದಲ್ಲಿ ಈ ಕೆಳಗಿನವರು ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನವರು ಎಂದು ತಿಳಿಸಿದ್ದಾರೆ.

 • (ಬಸವಣ್ಣ -೧೧೩೪-೧೧೯೬ CE/1134-1196)
 • ಹಂಪೆಯ ಕವಿ ಹರಿಹರ (ಕ್ರಿ. ಶ.೧೧೯೫)
 • ಪಾಲ್ಕುರಿಕೆಯ ಸೋಮನಾಥ (ಕ್ರಿ. ಶ. ಸುಮಾರು ೧೨೦೦ ರಲ್ಲಿ ತೆಲುಗಿನಲ್ಲಿ)
 • ಚಾಮರಸನ ಪ್ರಭುಲಿಂಗಲೀಲೆ (ಕ್ರಿ. ಶ. ೧೪೦೦ )
 • ಮಗ್ಗೆಯ ಮಾಯಿದೇವಪ್ರಭು (ಕ್ರಿ. ಶ. ೧೪೩೦)
 • ಚತುರ್ಮುಖ ಬೊಮ್ಮರಸ (ಕ್ರಿ. ಶ.೧೫೦೦)

ಹಿರೆಮಲ್ಲೂರ ಈಶ್ವರನ[೪] ಅವರು ಲಿಂಗಾಯತವು ಗುರು ಬಸವಣ್ಣನವರಿಗಿಂತ ಮುಂಚೆ ಇಲ್ಲವೆಂದು ಸ್ಪಷ್ಟವಾಗಿ ಅವರ "ಲಿಂಗಾಯತ ಒಂದು ಅಧ್ಯಯನ’ ಪುಸ್ತಕದಲ್ಲಿ ತಿಳಿಸಿದ್ದಾರೆ.
ಪ್ರೋ ವಿ.ವಿ. ಸಂಗಮದ ಅವರು "ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು’ [೫] ಎಂಬ ಪುಸ್ತಕವನ್ನು ಬರೆದಿದ್ದಾರೆ.

ಕಾಯಕ ಸಿದ್ಧಾಂತ[ಬದಲಾಯಿಸಿ]

"ದೇವ ಸಹಿತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ."

ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.

"ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ"

ಎಂದು ಆಯ್ದಕ್ಕಿ ಲಕ್ಕಮ್ಮ ಕಾಯಕದ ಮಹತ್ವವನ್ನು ವ್ಯಕ್ತಪಡಿಸುತ್ತಾಳೆ.

"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."

ಎಂದು ಬಸವಣ್ಣನವರು ಕಾಯಕಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನ ವ್ಯಕ್ತಿತ್ವವನ್ನು ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧರೂ ಸ್ವತಂತ್ರ ಧೀರರೂ ಆಗಿದ್ದಾರೆ.

"ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು"

ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನಂಬುಗುವಂತೆ ಹೇಳಿದ್ದಾರೆ.

"ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು."
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.

"ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ." ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.

ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲಬಾರಿಗೆ ಯಾವರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭಾವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ.

ನಂಬಿಕೆಗಳು[ಬದಲಾಯಿಸಿ]

 • ಎನಗಿಂತ ಕಿರಿಯರಿಲ್ಲ ಎಂಬ ಸವಿನಯದ ಮಾತನಾಡುತ್ತಾ,
 • ಕಾಸಿ ಕಮ್ಮಾರನಾದ /
 • ಬೀಸಿ ಮಡಿವಾಳನಾದ /
 • ಹಾಸನಿಕ್ಕಿ ಸಾಲಿಗನಾದ /
 • ವೇದವನೋದಿ ಹಾರುವನಾದ / ಎಂದು ಜಾತಿಯ ಬಣ್ಣವನ್ನು ಬಯಲು ಮಾಡಿದ ಬಸವಣ್ಣ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ;

ನೆಲವೊಂದೆ : ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ : ಶೌಚಾಚಮನಕ್ಕೆ
ಕುಲವೊಂದೆ : ತನ್ನ ತಾನರಿದವಂಗೆ
ಫಲವೊಂದೆ : ಷಡುದರುಶನ ಮುಕ್ತಿಗೆ
ನಿಲವೊಂದೆ : ಕೂಡಲ ಸಂಗಮದೇವ ನಿಮ್ಮನರಿವವಂಗೆ

ಎಂದು ಸಾರಿದ ಬಸವಣ್ಣನ ಈ ವಚನ ಇಂದಿಗೂ ಪ್ರಸ್ತುತವಾಗಿದೆ. ಲಿಂಗಾಯತವು ದೇಗುಲ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿರಾಕರಿಸಿದೆ ಇದನ್ನು ಧರ್ಮ ಗುರು ಬಸವಣ್ಣನವರ ವಚನದಲ್ಲಿ ಕಾಣಬಹುದು.

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಭ, ದೇಹವೇ ದೇಗುಲ,
ಶಿರ ಹೊನ್ನ ಕಳಶವಯ್ಯಾ.
ಕೂಡಲ ಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಗ್ರಂಥ ಋಣ[ಬದಲಾಯಿಸಿ]

 1. ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮಗಳಲ್ಲ;ಡಾ. ಎಂ. ಚಿದಾನಂದಮೂರ್ತಿ,ಬೆಂಗಳೂರು;7 May, 2014
 2. ಸಮಗ್ರ ವಚನ ಸಾಹಿತ್ಯ ಸಂಪುಟ-೮ ವಚನ ಸಂಖ್ಯೆ ೫೨೬, ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ ಬೆಂಗಳೂರು.
 3. ಸಮಗ್ರ ವಚನ ಸಾಹಿತ್ಯ ಸಂಪುಟ-೩ ವಚನ ಸಂಖ್ಯೆ ೫, ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ ಬೆಂಗಳೂರು.
 4. [1] Page no 161, **165of Lingayatha Dharma : Ondu Adhyayana,by Hiremallur K. Ishwaran: Published by Priyadarshini Prakashana, Bangalore.
 5. [2] Page no 1 of Basavannanavru Lingayath Dharma Samsthapakaru (Basavanna the founder of Lingayath religion). By: Prof: V. V. Sangamad.Pub: Basava Balaga, Akkamahadevi Road, Davanagere-3


ನೋಡಿ[ಬದಲಾಯಿಸಿ]

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಗೀತೆ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಲಿಂಗಾಯತ&oldid=983094" ಇಂದ ಪಡೆಯಲ್ಪಟ್ಟಿದೆ