ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಕ್ಷದ ಧ್ವಜ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಥವಾ ಕಾಂಗ್ರೆಸ್(ಐ) ಪಕ್ಷ ಅಥವಾ ಕಾಂಗ್ರೆಸ್ ಪಕ್ಷ ಭಾರತದಲ್ಲಿ ಇಂದು ಇರುವ ರಾಜಕೀಯ ಪಕ್ಷಗಳಲ್ಲಿ ಅತ್ಯಂತ ಹಳೆಯದು, ಮತ್ತು ಅತ್ಯಂತ ದೊಡ್ಡ ರಾಜಕೀಯ ಪಕ್ಷಗಳಲ್ಲಿ ಒಂದು. ೧೮೮೫ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷ, ಬ್ರಿಟೀಷ್ ಆಳ್ವಿಕೆಯ ವಿರುದ್ಧ ಹೊರಾಟದಲ್ಲಿ ಮುಂಚೂಣಿಯಲ್ಲಿದ್ದು ಹಾಗು ಸ್ವಾತಂತ್ರ್ಯದ ನಂತರ ಭಾರತದ ಆಡಳಿತವನ್ನು ಅತಿ ಹೆಚ್ಚು ಕಾಲ ವಹಿಸಿದೆ.

೧೪ ನೆಯ ಲೋಕ ಸಭೆಯಲ್ಲಿ (೨೦೦೪-೨೦೦೯) ೧೪೫ ಸ್ಥಾನಗಳನ್ನು ಹೊಂದಿದ್ದು ಸದ್ಯಕ್ಕೆ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷ. ಸದ್ಯಕ್ಕೆ ಎಡಪಂಥೀಯ ಪಕ್ಷಗಳಿಂದ ಬೆಂಬಲಿತವಾಗಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದ ಮುಖ್ಯ ಪಕ್ಷ.

ಚರಿತ್ರೆ[ಬದಲಾಯಿಸಿ]

ಸ್ವಾತಂತ್ರ್ಯಪೂರ್ವ[ಬದಲಾಯಿಸಿ]

ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸುಶಿಕ್ಷಿತ ಭಾರತೀಯರಿಗೆ ಸರ್ಕಾರದಲ್ಲಿ ಹೆಚ್ಚಿನ ಅವಕಾಶ ಸೃಷ್ಟಿಸುವ ಉದ್ದೇಶದೊಂದಿಗೆ ೧೮೮೫ ರಲ್ಲಿ ಸ್ಥಾಪಿಸಲಾಯಿತು. ಪ್ರಾರಂಭಿಕ ಹಂತದಲ್ಲಿ ಕಾಂಗ್ರೆಸ್ ಬ್ರಿಟಿಷ್ ಆಡಳಿತಕ್ಕೆ ವಿರೋಧಿಯಾಗಿರಲಿಲ್ಲ. ಇದರ ಮೊದಲ ಸಭೆ ಸ್ಕಾಟ್ಲೆಂಡ್ನ ಅಲನ್ ಆಕ್ಟೇವಿಯನ್ ಹ್ಯೂಮ್ ಎಂಬವರಿಂದ ಆಗಿನ ವೈಸ್‍ರಾಯ್ ಆದ ಲಾರ್ಡ್ ಡಫರಿನ್ ಅವರ ಅನುಮತಿಯೊಂದಿಗೆ ವ್ಯವಸ್ಥೆಯಾದದ್ದು. ಆದರೆ ನಂತರದ ವರ್ಷಗಳಲ್ಲಿ ಬ್ರಿಟಿಷ್ ಸರ್ಕಾರದಿಂದ ಹೆಚ್ಚು ಪ್ರತಿಕ್ರಿಯೆ ಕಾಣದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಾರಂಭಿಸಿತು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿದ್ದವು: ಗರಂ ದಳ ಮತ್ತು ನರಂ ದಳ; ಬ್ರಿಟಿಷರ ಕಡೆಗೆ ಕಾಂಗ್ರೆಸ್ ನಾಯಕರು ತಾಳುತ್ತಿದ್ದ ನಿಲುವಿನ ಮೇಲೆ ಈ ವರ್ಗೀಕರಣ ಆಧರಿತವಾಗಿದೆ. ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯಪೂರ್ವ ನಾಯಕರಲ್ಲಿ ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ರನ್ನು ಹೆಸರಿಸಬಹುದು.

ಸ್ವಾತಂತ್ರ್ಯಾನಂತರ[ಬದಲಾಯಿಸಿ]

ಅನೇಕರ ಹೇಳಿಕೆಯಂತೆ, ಗಾಂಧೀಜಿಯವರ ಅಭಿಪ್ರಾಯದ ಪ್ರಕಾರ ಕಾಂಗ್ರೆಸ್ ಪಕ್ಷದ ಉದ್ದೇಶ ಸ್ವಾತಂತ್ರ್ಯದ ಗಳಿಕೆ ಮತ್ತು ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷವನ್ನು ಮುಚ್ಚಬೇಕೆಂದಿದ್ದಿತು. ಆದರೆ ಸ್ವಾತಂತ್ರ್ಯದ ನಂತರ ಅನೇಕ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿತ್ತು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷದ ಇತರ ನಾಯಕರೆಂದರೆ ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ಪಿ ವಿ ನರಸಿಂಹರಾವ್ ಮತ್ತು ಇತರರು. ೮೦ ರ ದಶಕದ ನಂತರ ಮುಖ್ಯ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ (ಐ) ಎಂಬ ಹೆಸರು ಬಂದಿತು - ಐ ಎಂಬುದು 'ಇಂದಿರಾ' ಎಂಬುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಪಕ್ಷ ಒಡೆದು ಬೇರೆ ಬೇರೆ ಪಕ್ಷಗಳಾದ ಮೇಲೆ ಬೇರೆ ಬೇರೆ ಪಕ್ಷಗಳನ್ನು ಗುರುತಿಸಲು ಈ ವಿಧಾನವನ್ನು ಉಪಯೋಗಿಸಲಾಗಿತ್ತು.ಆದರೆ ೯೦ ರ ದಶಕದಲ್ಲಿ ಟಿ ಎನ್ ಶೇಷನ್ ಚುನಾವಣಾ ಆಯುಕ್ತಾರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ (ಐ) ಯನ್ನು ಪುನಃ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಗಿ ಮರುನಾಮಕರಣ ಮಾಡುವಂತೆ ಸೂಚಿಸಿದರು.ಹೀಗೆ ಕಾಂಗ್ರೆಸ್ (ಐ) ಎಂಬುದು ಈಗ ಕೇವಲ ಇತಿಹಾಸ. ನಿಧಾನವಾಗಿ, ಅನೇಕ ರಾಜಕೀಯ ಪಕ್ಷಗಳು ಕಾಂಗ್ರೆಸ್ ಪಕ್ಷದಿಂದ ಒಡೆದು ಬಂದಿವೆ - ಇದರಿಂದಾಗಿ ೪೦ರ ದಶಕದಿಂದ ೬೦ ರ ದಶಕದವರೆಗೆ ಸುಲಭವಾಗಿ ಲೋಕಸಭೆಯ ಮೂರನೇ ಎರಡರಷ್ಟು ಸ್ಥಾನಗಳನ್ನು ಪಡೆಯುತ್ತಿದ್ದ ಕಾಂಗ್ರೆಸ್ ಪಕ್ಷದ ಶಕ್ತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕಾಂಗ್ರೆಸ್ ಪಕ್ಷದ ಪ್ರಸಕ್ತ ನಾಯಕರು ಸೋನಿಯಾ ಗಾಂಧಿ, ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಪತ್ನಿ. ಅವರ ವಿದೇಶಿ ಮೂಲ (ಅವರು ಇಟಲಿ ದೇಶದಲ್ಲಿ ಬೆಳೆದದ್ದು) ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡಂದಿನಿಂದಲೂ ಸಾಕಷ್ಟು ವಿವಾದಕ್ಕೆ ಎಡೆ ಮಾಡಿದೆ. ಸೋನಿಯಾ ಅವರನ್ನು ಭಾರತದ ಪ್ರಧಾನ ಮಂತ್ರಿಯನ್ನಾಗಿ ಚುನಾಯಿಸುವ ಪ್ರಸ್ತಾಪ ಬಂದಾಗಲೆಲ್ಲ ಈ ವಿವಾದ ತೀವ್ರವಾದದ್ದುಂಟು.

ಪ್ರಸಕ್ತ ಭಾರತ ಸರ್ಕಾರದ ರಚನೆ[ಬದಲಾಯಿಸಿ]

ಲೋಕ ಸಭೆ ಚುನಾವಣಾ ಫಲಿತಾಂಶ ೨೦೦೪, ಪೂರ್ಣ ಚಿತ್ರಕ್ಕಾಗಿ ಕ್ಲಿಕ್ ಮಾಡಿ

೨೦೦೯ ರಲ್ಲಿ ನಡೆದ ಲೋಕಸಭೆಯ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೨೦೬ ಸ್ಥಾನಗಳನ್ನು ಪಡೆದು ಅತ್ಯಂತ ದೊಡ್ಡ ಪಕ್ಷವಾಗಿ ಅದಿಕಾರದ ಚುಕ್ಕಾಣಿ ಹಿಡಿಯಿತು.ಡಾ. ಮನಮೋಹನ್ ಸಿಂಗ್ ಅವರು ಜವಹಾರ್ ಲಾಲ್ ನೆಹರುರವರ ನಂತರ ಏರಡನೇ ಬಾರಿಗೆ ಸತತವಾಗಿ ದೇಶವನ್ನು ಮುನ್ನಡೆಸಲು ಜನಾದೇಶಾ ಪಡೆದ ಏರಡನೇ ಪ್ರಧಾನ ಮಂತ್ರಿ ಯೆಂಬ ಖ್ಯಾತಿಗೊಳಪಟ್ಟರು. ೨೦೦೪ ರ ಚುನಾವಣೆಗಳಲ್ಲಿ ಕಾಂಗ್ರೆಸ್ ಮೈತ್ರಿತ್ವ ಬೇರೆ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿತು ಹಾಗೂ ಎಡಪಂಥೀಯ ಪಕ್ಷಗಳಿಂದ ಬೆಂಬಲವನ್ನು ಪಡೆಯಿತು. ಇದರಿಂದಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿದ್ದ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟ ಪದಚ್ಯುತವಾಯಿತು. ಇದರ ನಂತರ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ೧೯ ರಾಜಕೀಯಪಕ್ಷಗಳ ಮೈತ್ರಿಕೂಟ ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಸೂಚಿಸಿತು. ಆದರೆ ಎಲ್ಲರಿಗೂ ಆಶ್ಚರ್ಯ ತಂದ ನಡೆಯಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನವನ್ನು ನಿರಾಕರಿಸಿ ಗಣ್ಯ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ವಿತ್ತ ಸಚಿವರಾದ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಸೂಚಿಸಿದರು. ಪ್ರಮಾಣವಚನ ಸಮಾರಂಭ ಮೇ ೨೨, ೨೦೦೪ ರಂದು ನಡೆಯಿತು.

ಭಾರತೀಯ ಕಾಂಗ್ರೆಸ್ ಪಕ್ಷದ ಬೆಳವಣಿಗೆ[ಬದಲಾಯಿಸಿ]

 • Year --- Congress -- BJS-Janata-BJP.
 • 1952 --- 364--- 3 (BJS) (ಭಾರತೀಯ ಜನಸಂಘ)
 • 1957--- 371--- 4 (BJS)
 • 1962--- 361--- 14 (BJS)
 • 1967--- 283--- 35 (BJS)
 • 1971--- 352--- 23 (BJS)
 • 1977--- 154--- 295 (Janata)Janata party Government
 • 1980--- 353 ----31 (Janata)
 • 1984--- 415-----2 (BJP)
 • 1989---197---- 86 (BJP)
 • 1991--- 232---120 (BJP)
 • 1996--- 140---161(ಬಿಜೆಪಿBJP) ಭಾರತೀಯ ಜನತಾ ಪಾರ್ಟಿ ಸರ್ಕಾರ ೧೩ ದಿನ
 • 1998--- 141---182(ಬಿಜೆಪಿ) ಬಿಜೆಪಿ ಸರ್ಕಾರ
 • 1999--- 114---182 (ಬಿಜೆಪಿ) ಬಿಜೆಪಿ ಸರ್ಕಾರ
 • 2004--- 145---138 (ಬಿ ಜೆ ಪಿ) ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು ಪಿ ಯೆ. ಸರ್ಕಾರ .
 • 2009--- 206---116 (ಬಿ ಜೆ ಪಿ) ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು ಪಿ ಯೆ. ಸರ್ಕಾರ .(೨೬೨+ ಹೊರಗಿನ ಬೆಂಬಲ)

-

 • 1998--- 141(25.82%)--182(ಬಿಜೆಪಿ :25.59%)ಬಿಜೆಪಿ ಸರ್ಕಾರ (NDA 37.21% :United Front26.14%)
 • 1999--114(Uted Ft 28.30)--182 (ಬಿಜೆಪಿ) ಬಿಜೆಪಿ ಸರ್ಕಾರ (NDA37.06  :United Front26.14%)
 • 2004-145(35.4%+7.1%)-138(ಬಿ ಜೆ ಪಿ+ 33.3%-3.76%)ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಒಕ್ಕೂಟ -ಯುಪಿಯೆ. ಸರ್ಕಾರ .
 • (2004 ಕಾಂಗ್ರೆಸ್--: 26.53% ) & (ಬಿ ಜೆ ಪಿ--:22.16%)
 • 2009-ಕಾಂಗ್ರೆಸ್, 206---116 (ಬಿ ಜೆ ಪಿ) ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು ಪಿ ಯೆ. ಸರ್ಕಾರ .(೨೬೨+ ಹೊರಗಿನ ಬೆಂಬಲ)
 • 2009 /ಕಾಂಗ್ರೆಸ್: 28.55% :ಬದಲಾವಣೆ: +80; ಒಟ್ಟು ಓಟು:153,482,356;ಯು.ಪಿಎ.:ಶೇಕಡ :37.22%; ಹೆಚ್ಚುವರಿ ಶೇ. :+3.96%
 • 2009 ಬಿ.ಜೆ.ಪಿ 116.:ಎನ್.ಡಿ.ಎ159 ;ಕಡಿಮೆಸೀಟು −17: ಶೇ:18.80% ; ಕಡಿಮೆ: -3.36% : ಒಟ್ಟು ಓಟು :102,689,312 ; ಎನ್.ಡಿ.ಎ. 24.63%; ಕಡಿಮೆ :-4.88
 • (೧೯೭೭ರಲ್ಲಿ ಜನತಾ ಪಾರ್ಟಿ ಸರ್ಕಾರ)
 • ೧೯೫೨,೧೯೫೭,೧೯೬೨,೧೯೬೭,೧೯೭೧ ಬಿ ಜೆ ಎಸ್ -ಭಾರತೀಯ ಜನ ಸಂಘ (ಪಕ್ಷ)

ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು ಪಿ ಯೆ.೨೦೦೯[ಬದಲಾಯಿಸಿ]


 • ಒಟ್ಟು ಲೋಕ ಸಭಾ ಸದಸ್ಯರು ೫೪೫ - ಬಹುಮತಕ್ಕೆ ೨೭೩ ಸ್ಥಾನಗಳು ಬೇಕು
 • ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು ಪಿ ಯೆ. ಸರ್ಕಾರ ಸೇರಿದ ರಾಜಕೀಯ ಪಕ್ಷಗಳು
 • ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಿಯನ್ಸ್ ಕಾಂಗ್ರೆಸ್ + ಜೊತೆಯವರು =೨೬೨
 • ಕಾಂಗ್ರೆಸ್ ----೨೦೬;
 • ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ --೧೯ ((ಬೇಬಲ ಹಿಂತೆಗೆದಿದೆ)
 • ಡಿಎಮ್ ಕೆ . -- ೧೮
 • ಎನ್ ಸಿ ಪಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ -- ೯
 • ನ್ಯಾಷನಲ್ ಕಾನ್ಪರೆನ್ಸ್ ----೩
 • ಜಾರ್ಖಂಡ್ ಮುಕ್ತಿಮೋರ್ಚ -- ೨
 • ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್ --- ೨
 • ವಿದುತಲೈ ತಿರುತಾಯ್ಗಳ್ ಕಚ್ಚಿ ---- ೧
 • ಕೇರಳ ಕಾಂಗ್ರೆಸ್ (ಮಣಿ) --೧
 • ಆಲ್ ಇಂಡಿಯಾ ಮುಜ್ಲಿಸ್-ಇತ್ತೇಹಾದ್ -ನುಸ್ಲಿಮೀನ್ - -- ೧
 • ರಿಪಬ್ಲಿಕನ್ ಪಾರ್ಟಿ ಆಫ್ ಇಚಿಡಿಯ (ಅಥೆವಲೆ) ೦
 • (ಹೊರಗಿನಿಂದ ಬೆಂಬಲ-ಸಮಾಜವಾದಿ ಪಾರ್ಟಿ ೨೩ ; ಬಹುಜನ ಸಮಾಜವಾದಿ ಪಾರ್ಟಿ ೨೧ ; ಆರ್ ಜೆ. ಡಿ. ೪ : ಜೆ ಡಿ ಎಸ್ ೪ ; (ಆರ್ ಎಲ್ಡಿ ೫)ಜೆಡಿಎಸ್ ೩ ; ಪಕ್ಷೇತರ ೪

೧೯೯೮ ರಿಂದ ೨೦೦೯ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ[ಬದಲಾಯಿಸಿ]

ವರ್ಷ ಕಾಂಗ್ರೆಸ್.ಸ್ಥಾನ .ಶೇಕಡ ಓಟು. ಹೆಚ್ಚು/ಕಡಿಮೆ ಯು.ಪಿಯೆ. ಬಿ ಜೆ ಪಿ.ಸ್ಥಾನ .ಶೇಕಡ ಓಟು ಹೆಚ್ಚು/ಕಡಿಮೆ. +/-% ಎನ್.ಡಿ.ಎ
1998 141 25.82% - ೧ 26.14% (26.42) 182  :25.59% +25 --- 37.21%(46.61)
1999 114 -- -27 Utd.Ft 28.30% 182 -- -- -- 269+29 TDP;37.06%
2004 145 26.53% 31:+7.1% 218+117 /35.4% 138 22.16% -44 -3.76% ಎನ್.ಡಿ.ಎ(-89: 33.3%)
2009 206 +2 28.55% +80:+2.೦2% 262 +63 ಇತರೆ ಬೆಂಬಲ(37.22%) 116 18.80% -3.36% - 22 ಎನ್.ಡಿ.ಎ:159:24.63% (:-4.88%)
2009 ಕಾಂ:ಪಡೆ ದ ಓಟು 153482356 -- ಬಿಜೆಪಿ ಪಡೆದ ಓಟು 102689312 -- -- -- --
2014 1 44 19.4 -9.2 58 283 31.2 116+167 +12.4 ಎನ್.ಡಿಎ.283+54=337 /31.2%

ಇವನ್ನೂ ನೋಡಿ[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]

 • ವಿಚಾರ ಮಂಥನ:ಪಕ್ಷದಲ್ಲಿ ಕಾಣುತ್ತಿರುವ ಮೊದಲ ಅಂಶ ‘ನಿರಾಕರಣೆ’. ಎರಡನೆಯ ಸಮಸ್ಯೆ, ನಾಯಕ ಇಲ್ಲದಿರುವುದೊಂದೇ ಅಲ್ಲ. ಪಕ್ಷದ ವಿಚಾರಗಳನ್ನು ಸಮರ್ಥವಾಗಿ ಹೇಳುವವರು ಇಲ್ಲ. ನರೇಂದ್ರ ಮೋದಿ ಅವರು ವರ್ಚಸ್ಸು ಇರುವ ನಾಯಕ, ಇನ್ನೊಬ್ಬರಲ್ಲಿ ಭಕ್ತಿ ಮೂಡಿಸುವ ವ್ಯಕ್ತಿ ಎಂಬುದು ನಿಜ. ನಮಗೆಲ್ಲ ಗೊತ್ತಿರುವಂತೆ ಅವರು ಉತ್ತಮ ವಾಗ್ಮಿಯೂ ಹೌದು. ಆದರೆ, ಅವರ ಬಹುದೊಡ್ಡ ಕೌಶಲ ಇರುವುದು ಸಮಸ್ಯೆಗಳನ್ನು ಗೌಣವಾಗಿಸುವಲ್ಲಿ. ಅಂದರೆ, ಮೋದಿ ಅವರು ಭಾರತದ ಸಂಕೀರ್ಣ ಸಮಸ್ಯೆಗಳನ್ನು ತೀರಾ ಸರಳವಾದ ಚೌಕಟ್ಟಿನಲ್ಲಿ ಇಟ್ಟು ತೋರಿಸುತ್ತಾರೆ.ಉದಾಹರಣೆಗೆ, ‘ದುರ್ಬಲ ಹಾಗೂ ಹೇಡಿ ನಾಯಕತ್ವದಿಂದಾಗಿ ಭಯೋತ್ಪಾದನೆ ನಡೆಯುತ್ತಿದೆ. ನಾನು ಅದನ್ನು ಕೊನೆಗಾಣಿಸುವೆ’ ಎಂದು ಮೋದಿ ಹೇಳಬಲ್ಲರು.ಆಕಾರ್‌ ಪಟೇಲ್;ಕಾಂಗ್ರೆಸ್: ಅಸ್ತಿತ್ವದಲ್ಲಿರಲು ಕಾರಣ ಕಂಡುಕೊಳ್ಳದಿದ್ದರೆ...;27 Mar, 2017

ಆಧಾರ[ಬದಲಾಯಿಸಿ]

ಬಾಹ್ಯ ಅಂತರ್ಜಾಲ ಸಂಪರ್ಕಗಳು[ಬದಲಾಯಿಸಿ]