ಅಮೇಥಿ
ಅಮೇಥಿ
ಛತ್ರಪತಿ ಸಾಹುಜಿ ಮಹಾರಾಜ್ ನಗರ) | |
---|---|
city | |
Population (2001) | |
• Total | ೧೨,೮೦೮ |
ಅಮೇಥಿ (ಹಿಂದಿ:अमेठी) ಅನ್ನುವುದು ಒಂದು ಪಟ್ಟಣ ಮತ್ತು ಭಾರತೀಯ ರಾಜ್ಯವಾದ ಉತ್ತರ ಪ್ರದೇಶದಲ್ಲಿನ ಛತ್ರಪತಿ ಸಾಹುಜಿ ಮಹಾರಾಜ್ ನಗರ ದಲ್ಲಿನ ಪೌರಸಭೆಯ ಮಂಡಲಿ. ಇದು ಛತ್ರಪತಿ ಸಾಹುಜಿ ಮಹಾರಾಜ್ ನಗರದ ಪ್ರಧಾನ ಕಛೇರಿಯಾಗಿದೆ. ಅಮೇಥಿ ಜಿಲ್ಲೆಯನ್ನು ಅಧಿಕೃತವಾಗಿ ಛತ್ರಪತಿ ಸಾಹುಜಿ ಮಹಾರಾಜ್ ನಗರ ಎಂದು ಕರೆಯಲಾಗುತ್ತದೆ, ಭಾರತದ ಉತ್ತರದಿಕ್ಕಿನಲ್ಲಿನ ಉತ್ತರ ಪ್ರದೇಶ ರಾಜ್ಯದಲ್ಲಿನ ಹೊಸದಾಗಿ ರಚಿಸಿದ ಮತ್ತು ೭೨ನೆಯ ಜಿಲ್ಲೆಯಾಗಿದೆ. ಇದನ್ನು ದಲಿತ ನಾಯಕರ ನಂತರದಲ್ಲಿ ಹೆಸರಿಸಲಾಗಿದೆ. ಅಮೇಥಿಯು ಸುಲ್ತಾನ್‌ಪುರದ ನೈಋತ್ಯ ದಿಕ್ಕಿನಿಂದ ಸುಮಾರು ೪೦ ಕಿ.ಮೀ.ನ ರಾಯ್‌ಬರೇಲಿ-ಅಮೇಥಿ-ಸುಲ್ತಾನ್‌ಪುರ್ ರಸ್ತೆಯಮೇಲೆ ಪೂರ್ಣ ವಿಸ್ತಾರದಲ್ಲಿ ೨೬ ಡಿಗ್ರೀ ೯ ನಿಮಿಷ ಉತ್ತರ ದಿಕ್ಕಿನಲ್ಲಿ ಮತ್ತು ರೇಖಾಂಶದಲ್ಲಿ ೮೧ ಡಿಗ್ರೀ ೪೯ ನಿಮಿಷ ಪೂರ್ವ ದಿಕ್ಕಿನಲ್ಲಿದೆ. ಇದನ್ನು ರಾಯ್ಪುರ್-ಅಮೇಥಿ ಎಂದು ಸಹ ಕರೆಯಲಾಗುತ್ತದೆ, ಇದಕ್ಕೆ ಕಾರಣ ರಾಯ್ಪುರ್ ರಾಮನಗರದಲ್ಲಿ ವಾಸಿಸಿದ ಅಮೇಥಿಯ ರಾಜನಿಗೆ ಸೇರಿದ್ದಾಗಿರುತ್ತದೆ. ಅವರ ಪೂರ್ವಜರು ರಾಯ್ಪುರ್-ಫುಲ್ವಾರಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ, ಅಲ್ಲಿ ಇಂದಿಗೂ ಹಳೆಯ ಕೋಟೆಯನ್ನು ಕಾಣಬಹುದಾಗಿದೆ. ಇಲ್ಲಿ ಹನುಮಾನ್‌ಗರ್ಹಿ ಎಂದು ಕರೆಯುವ ದೇವಸ್ಥಾನ ಮತ್ತು ಮಸೀದಿ ಸಹ ಇವೆ, ಇವೆರಡೂ ಸುಮಾರು ನೂರು ವರ್ಷಗಳ ಹಿಂದೆ ನಿರ್ಮಿಸಿದ್ದವಾಗಿವೆ. ರಾಮನಗರದ ಉತ್ತರ ದಿಕ್ಕಿನಲ್ಲಿ ಸುಮಾರು ಮೂರು ಕಿಲೋಮೀಟರುಗಳ ದೂರದಲ್ಲಿ, ಅವರು ಮರಣಹೊಂದಿದ ಸ್ಥಳದಲ್ಲಿ, ಪ್ರಸಿದ್ಧ ಕವಿಯಾದ ಸಂತ ಮಲಿಕ್ ಮಹಮದ್ ಜಯಸಿರವರ ಗೋರಿ ಇದೆ, ಮತ್ತು ಕೋಟೆಯನ್ನು ಬಚ್ಗೋಟಿ ರಾಜಸ್‌ರವರಿಂದ ನಿರ್ಮಿಸಲಾಯಿತು. ಇದನ್ನು ಭಾರತೀಯ ನೆಹರು-ಗಾಂಧಿ ರಾಜಕೀಯ ರಾಜಮನೆತನದ ಅಧಿಕಾರದ ಸ್ಥಾನವಾಗಿಯು ಗುರುತಿಸಲಾಗುತ್ತದೆ. ಮಾಜಿ ಪ್ರಧಾನ ಮಂತ್ರಿ ಜವಹರ್‌ಲಾಲ್ ನೆಹರು, ಅವರ ಮಮ್ಮಕ್ಕಳಾದ ಸಂಜಯ್ ಮತ್ತು ರಾಜೀವ್ ಗಾಂಧಿ (ಇಂದಿರ ಗಾಂಧಿಯ ಮಕ್ಕಳು), ಹಾಗು ರಾಜೀವ್‌ರ ಪತ್ನಿಯಾದ ಸೋನಿಯ ಗಾಂಧಿ ಇವರೆಲ್ಲರೂ ಈ ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ೨೦೦೪ರಲ್ಲಿ, ಕುಟುಂಬದ ಐದನೇ ಸದಸ್ಯರಾದ, ಸೋನಿಯ ಮತ್ತು ರಾಜೀವ್‌ರ ಮಗ ರಾಹುಲ್ ಗಾಂಧಿ, ೨೦೦೪ರ ಸಾರ್ವತ್ರಿಕ ಚುನಾವಣೆಯ ಸ್ಥಾನಕ್ಕೆ ಸುಲಭವಾಗಿ ಆಯ್ಕೆಯಾದರು. ಆ ಪ್ರದೇಶದ ಶೈಕ್ಷಣಿಕ ಮುಖ್ಯಸ್ಥಳವಾಗಿ ಇದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಪಾರ್ಮೇಷನ್ ಟೆಕ್ನಾಲಜಿ ಮತ್ತು ರಾಜರ್ಷಿ ರನನ್‌ಜಯ್ ಪೋಸ್ಟ್ ಗ್ರಾಜ್ಯುಯೇಟ್ ಕಾಲೇಜ್ ಅನ್ನು ಒಳಗೊಂಡಿದೆ. ಅಮೇಥಿಯು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ವಿಭಾಗವಾದ ಏವಿಯೋನಿಕ್ಸ್‌ನ ಹೆಗ್ಗಳಿಕೆಗೂ ಪಾತ್ರವಾಗಿದೆ, ಈ ಸಂಸ್ಥೆಯು ಇಂಡಿಯನ್ ಏರ್‌ಪೋರ್ಸ್‌ಗೆ ವಿಮಾನಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊತ್ತಿದೆ. ಅಮೇಥಿಯು ಇಂಡೋ ಘಲ್ಫ್ ಫೆರ್ಟಿಲೈಸರ್ಸ್‌ನ ಘಟಕವನ್ನು ಸಹ ಹೊಂದಿದೆ. ಲಕ್ನೋದಲ್ಲಿ ೭ ಅಕ್ಟೋಬರ್ ೨೦೦೩ರಂದು, ರಾಜ್ಯದ ಸಚಿವ ಸಂಪುಟವು, ಅಮೇಥಿಯನ್ನು ಛತ್ರಪತಿ ಸಾಹುಜಿ ಮಹರಾಜ ನಗರ ಎಂದು ಮರು ಹೆಸರಿಸುವ ಮುಂಚಿನ ಪ್ರಕಟಣೆಯನ್ನು ರದ್ದುಪಡಿಸಿತು. ಈಗ ಅಮೇಥಿಯು ಅದರ ಮೊದಲಿನ ಹೆಸರಿನಿಂದಲೇ ಗುರುತಿಸಲಾಗುತ್ತದೆ ಎಂದು, ಮುಖ್ಯ ಕಾರ್ಯದರ್ಶಿಗಳಾದ ಅಖಂದ್ ಪ್ರತಾಪ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದರು. ಅಮೇಥಿಯು ಮುಷಿಗಂಜ್‌ನಲ್ಲಿ ಸಂಜಯ್ ಗಾಂಧಿ ಹಾಸ್ಪಿಟಲ್ ಹೆಸರಿನ ಪ್ರಸಿದ್ಧಆಸ್ಪತ್ರೆಯನ್ನು ಹೊಂದಿದೆ. ಸೊಸೈಟಿ ಫಾರ್ ಅನಿಮಲ್ ಹೆಲ್ತ್ ಅಗ್ರಿಕಲ್ಚರ್ ಸೈನ್ಸ್ ಆಂಡ್ ಹ್ಯುಮ್ಯಾನಿಟಿ ಅನ್ನುವುದು ಸುಪ್ರಸಿದ್ಧ ಸರಕಾರೇತರ ಸಂಸ್ಥೆಯಾಗಿದ್ದು, ಇದರ ನೊಂದಾಯಿತ ಕಛೇರಿಯು ಮನ್ಷಿಗಂಜ್‌ನಲ್ಲಿದೆ, ಇದು ಅಮೇಥಿಯಲ್ಲಿನ ಗ್ರಾಮೀಣ ಜೀವನದ ಮಾರ್ಪಾಟುಗೆ ಮೀಸಲಾಗಿದೆ.
ಇತಿಹಾಸ/ಚರಿತ್ರೆ
[ಬದಲಾಯಿಸಿ]ಆರು ಗಂಡು ಮಕ್ಕಳನ್ನು ಹೊಂದಿದ್ದ, ಮನೋಹರ್ ಸಿಂಗ್, ಮೊದಲನೆಯ ಬಂದಲ್‌ಗೋಟಿಸ್‌ನ ಒಬ್ಬನೇ ಮಗ. ಮನೋಹರ್ ಸಿಂಗ್‌ರ ಆರು ಮಕ್ಕಳು ಎಸ್ಟೇಟ್ ಅನ್ನು ಸಮನಾಗಿ ಹಂಚಿಕೊಂಡರು. ಆರು ಮಕ್ಕಳಲ್ಲಿ ಕೊನೆಯವನಾದ ರಾಜ್ ಸಿಂಗ್, ತನ್ನ ಇಬ್ಬರು ಆಣ್ಣಂದಿರಾದ ರಾಮ್ ಸಿಂಗ್ ಮತ್ತು ಕುಮಾರ್ ಸಿಂಗ್‌ರು ಮಕ್ಕಳಿಲ್ಲದೇ ಮರಣಹೊಂದಿದ ನಂತರ ಅವರ ಪಾಲಿನ ಆಸ್ಥಿಯನ್ನು ತಾವೇ ಪಡೆದುಕೊಂಡರು. ನಾಲ್ಕನೆಯ ವಂಶಸ್ಥ ರಾಮ್ರಾಜ್ ಸಿಂಗ್, ಶ್ರಿರಾಮದೇವ್‌ರವರು, ಪಶ್ಚಿಮದ ತುದಿಯಲ್ಲಿ ಬರ್ನ ಟಿಕರ್ ಎಸ್ಟೇಟ್ ಮತ್ತು ಪೂರ್ವದ ತುದಿಯಲ್ಲಿ ಟಿಕ್ರಿ ಎಸ್ಟೇಟ್‌ನ ಒಡೆತನದ, ಶ್ಯಾಮ್ ಲಾಲ್ ಮತ್ತು ಧರಮಿರ್ ಹೆಸರಿನ ಇಬ್ಬರು ಸಹೋದರರನ್ನು ಹೊಂದಿದ್ದರು. ಶ್ರಿರಾಮ್ ದೇವ್‌ರ ಮಮ್ಮೊಗ ರಾಮ್ ಸಹಯ್‌ಗೆ ಅಮೇಥಿಯ ಉತ್ತರ ಸರಿಹದ್ದಿನಲ್ಲಿರುವ ಕಸ್ರಾನ್ವ ಎಸ್ಟೇಟ್‌ನ್ನು ಅವರ ಭಾಗವಾಗಿ ಕೊಡಲಾಗಿತ್ತು, ಇದೇ ಸಮಯದಲ್ಲಿ ಅವರ ಹಿರಿಯ ಮಮ್ಮೊಗ ಸುಲ್ತಾನ್‌ಶಾಹ್, ಕಸ್‌ರಾನ್ವ ಮತ್ತು ಇತರ ಹಳೆಯ ಎಸ್ಟೇಟ್‌ಗಳ ನಡುವಣದ ಶಹ್‌ಗರ್ಹ್‌ನ್ನು ಪಡೆದುಕೊಂಡರು. ಇದರಿಂದ, ಬಂದಲ್‌ಗೋಟಿಸ್‌ರ ಹಿಡಿತವು ಪೂರ್ಣ ಅಮೇಥಿ ಪರ್ಗಾನವನ್ನು ವಿಭಜಿಸಿದಂತಾಯಿತು. ಬಂದಲ್‌ಗೋಟಿಸ್ ನಂತರದ, ಗುರುದತ್ ಸಿಂಗ್, ೧೭೪೩ರಲ್ಲಿ ಸ್ಥಳೀಯ ಪಾರುಪತ್ಯವನ್ನು ಪ್ರತಿಭಟಿಸಿದರು ಮತ್ತು ಕಟ್ಟಕಡೆಗೆ ನೆರೆಯ ರಾಮ್‌ನಗರ್ ಕಾಡಿನಲ್ಲಿ ಮರೆಯಾದರು. ಅವರ ರೈಪುರ್ ಕೋಟೆಯು ೧೮ ದಿನಗಳ ದಾಳಿಯಲ್ಲಿ ನಾಶವಾಯಿತು ಮತ್ತು ಅವರ ರಾಜ್ಯವನ್ನು ಆಕ್ರಮಿಸಲಾಯಿತು. ಗುರುದತ್ ಸಿಂಗ್‌ರ ಮಗ ದ್ರಿಗ್‌ಪಾಲ್ ಸಿಂಗ್, ಎಸ್ಟೇಟ್‌ನ್ನು ಮತ್ತೆ ವಶಕ್ಕೆ ಪಡೆದುಕೊಂಡರು ಮತ್ತು ಅವರ ಕಾಲದಿಂದ, ಈಗಿನ ಅಮೇಥಿಯ ತಾಲುಕ, ಆಸ್ಥಿಯನ್ನು ಉದೈವನ್ ಎಂದು ಕರೆಯಲಾಗುತ್ತಿತ್ತು. ಗುರುದತ್ ಸಿಂಗ್ ಕೆಲವುಸಲ ರಾಜರ ಶೈಲಿಯನ್ನು ಮತ್ತು ಕೆಲವುಸಲ ಬಾಬುರ ವೈಖರಿಯನ್ನು ಹೊಂದುತ್ತಿದ್ದರು. ರಾಜ ಅನ್ನುವ ಹೆಸರು ವಂಶಪಾರಂಪರ್ಯವಾಗಿ ಬಂದದ್ದು ಆದರೆ ಎಷ್ಟು ಸಮಯದವರೆಗು ಇದನ್ನು ಕುಟುಂಬದ ಮುಖ್ಯಸ್ಥರಿಂದ ಅನುಸರಿಕೊಂಡು ಬಂದಿದೆ ಎಂಬುದು ತಿಳಿದುಬಂದಿಲ್ಲ. ಗುರುದತ್ ಸಿಂಗ್ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದರು, ಅವರ ತಂದೆಯ ಹೆಚ್ಚಿನ ಪ್ರಮಾಣದ ಆಸ್ತಿಪಾಸ್ತಿಗಳನ್ನು ಪಡೆದುಕೊಂಡ, ಹರ್ಚಂದ್ ಸಿಂಗ್, ಮತ್ತು ಕನ್ನು ಕಸ್‌ರನ್ವಗೆ ಪ್ರತ್ಯೇಕ ಒಡೆಯನಾದ ಜಯಚಂದ್ ಸಿಂಗ್. ಹರ್ಚಂದ್ ಸಿಂಗ್ ರಘಿಪುರ್‌ನ್ನು ಬಿಟ್ಟು, ಪೂರ್ಣ ಅಮೇಥಿ ಪರಗನಗೆ ಒಡೆಯರಾದರು. ೧೮೧೦ರಲ್ಲಿ ಅವರು ಸಾದತ್ ಅಲಿ ಖಾನ್‌ರಿಂದ ಅಪಜಯಕ್ಕೊಳಗಾದರು ಮತ್ತು ರಾಜನಿಗೆ ೪೮ ಗ್ರಾಮಗಳು ಮಾತ್ರ ಉಳಿದವು. ಅದಾಗ್ಯೂ, ಅವರು ಅಧಿಕಾರ ಬಿಟ್ಟುಕೊಟ್ಟಂತಹ ಅವರ ಮಗನಾದ, ದಲ್ಪತ್ ಶಾಹ್, ೧೮೧೩ರಲ್ಲಿ ತಮ್ಮ ತಂದೆಯ ಎಲ್ಲಾ ಮೂಲ ಎಸ್ಟೇಟ್‌ಗಳನ್ನು ಮರು ಪಡೆದುಕೊಂದರು. ದಲ್ಪತ್ ಶಾಹ್ ೧೮೧೫ರಲ್ಲಿ ಮರಣಹೊಂದಿದರು ಮತ್ತು ನಂತರ ಅವರ ಮಗ ಬಿಶೆಶರ್ ಸಿಂಗ್ ಉತ್ತರಾಧಿಕಾರಿಯಾದರು, ಅವರು ಮಕ್ಕಳಿಲ್ಲದೆ ೧೮೪೨ರಲ್ಲಿ ಮರಣಹೊಂದಿದರು. ಅವರ ನಂತರ ದಲ್ಪತ್ ಸಿಂಗ್‌ರ ಸೋದರಳಿಯ ಮಧೊ ಸಿಂಗ್ ಉತ್ತರಾಧಿಕಾರಿಯಾದರು. ಮಧೋ ಸಿಂಗ್ ಅವರ ಎಸ್ಟೇಟ್‌ನ್ನು ವಿಸ್ತರಿಸಲು ಯತ್ನಿಸಿದರು ಮತ್ತು ಇದರಿಂದ ೧೮೪೫ರಲ್ಲಿ, ಸುಲ್ತಾನ್ಪುರ್ ನಜೀಮ್, ಮಹರಾಜ ಮನ್ ಸಿಂಗ್‌ರೊಂದಿಗೆ ವಿರೋಧವನ್ನು ಎದುರಿಸಬೇಕಾಯಿತು. ಸಂಧಾನದ ನಂತರ ಮಧು ಸಿಂಗ್‌ಗೆ ಕೆಲವು ಗ್ರಾಮಗಳನ್ನು ಹೊರತು ಪಡಿಸಿ ಪೂರ್ಣ ಪರ್ಗಾನದ ಗುತ್ತಿಗೆಯನ್ನು ನೀಡಲಾಯಿತು. ಮಧು ಸಿಂಗ್ ಆಗಸ್ಟ್ ೧೮೯೧ರಲ್ಲಿ ಮರಣ ಹೊಂದಿದರು, ಅವರ ಒಬ್ಬನೇ ಮಗನ ಮರಣ ನಂತರ ಕೂಡಲೇ, ದತ್ತು ವಾರಸದಾರನ ಹಕ್ಕಿನಿಂದ, ರಾಜ ಭಗವಾನ್ ಬಕ್ಷ್ ಸಿಂಗ್ ಉತ್ತರಾಧಿಕಾರಿಯಾದರು, ಇವರು ಬಾಬು ಶೆಯ್‌ದರ್ಶನ್ ಸಿಂಗ್‌ರ ಮಗನಾಗಿದ್ದು, ದಿವಂಗತ ರಾಜನ ಸಂಬಂಧಿ ಆಗಿದ್ದರು. ಎಸ್ಟೇಟ್ ೩೧೪ ಗ್ರಾಮಗಳನ್ನು ಮತ್ತು ನಾಲ್ಕು ಪಟ್ಟಿಗಳನ್ನು ಒಳಗೊಂಡಿತ್ತು, ಇವೆಲ್ಲವು ಅಮೇಥಿ ಪರ್ಗಾನನಲ್ಲೇ ಇದ್ದವು. ಶಹ್‌ಗರ್ಹ್ ಮನೆಯನ್ನು, ಅಮೇಥಿಯ ಬಿಕ್ರಮ್ ಶಾಹ್ ಸಹೋದರನಾದ ಸುಲ್ತಾನ್ ಶಾಹ್‌ರಿಂದ ನಿರ್ಮಿಸಲಾಯಿತು. ಇದು ಇದರ ಹೆಸರನ್ನು ಅವರಿಂದಲೇ ಸ್ಥಾಪಿತಗೊಂಡು ಅವರ ನೆನಪಿಗಾಗಿ ಅವರ ಹೆಸರಿನಿಂದ ಕರೆಯಲ್ಪಡುವ ಕೋಟೆಯಿಂದ ಪಡೆದುಕೊಂಡಿದೆ. ಎಸ್ಟೇಟ್ ೧೨೧ ಗ್ರಾಮಗಳನ್ನು ಒಳಗೊಂಡಿದೆ. ೧೮೦೩ರಿಂದ ೧೮೧೦ರ ವರೆಗು ಸ್ಗಹ್‌ಗರ್ಹ್‌ನ್ನು ಇತರ ಪರ್ಗಾನದ ಜೊತೆಗೆ ಹರ್ಚಂದ್ ಸಿಂಗ್‌ಗೆ ಗುತ್ತಿಗೆಗೆ ಕೊಡಲಾಗಿತ್ತು, ಆದರೆ ನಂತರದ ವರ್ಷದಲ್ಲಿ ವಾಪಾಸು ಪಡೆದುಕೊಳ್ಳಲಾಯಿತು. ಆಗ ಇದು ೪೦ ಗ್ರಾಮಗಳನ್ನು ಮಾತ್ರ ಒಳಗೊಂಡಿತು ಆದರೆ ೧೮೪೬ರಲ್ಲಿ ಪುನಃ ಅಮೇಥಿಗೆ ಹಸ್ತಾಂತರಿಸಿದಾಗ ಇದರ ಗ್ರಾಮಗಳ ಸಂಖ್ಯೆಯು ೬೦ಕ್ಕೆ ಏರಿತು. ಸುಲ್ತಾನ್ಪುರ್‌ನ ಎಲ್ಲಾ ಕನ್‌ಹಪುರಿಯಗಳು, ಕ್ಲಾನ್ ಬುಡಕಟ್ಟಿನ ಸಂಸ್ಥಾಪಕರು, ಕಾನ್‌ಹ್‌ರ ಎರಡನೆಯ ಮಗ ರಹಸ್‌ರ ವಂಶಸ್ಥರು. ರಹಸ್‌ರ ಏಳನೆಯ ವಂಸಸ್ಥರಾಗಿ, ಮೂರು ಗಂಡು ಮಕ್ಕಳನ್ನು ಹೊಂದಿದ್ದ ಪ್ರಾಶಾದ್ ಸಿಂಗ್ ಬಂದಿದ್ದರು. ಜಂಗ ಸಿಂಗ್‌ರ ನಾಲ್ಕನೆಯ ವಂಶಸ್ಥರು ತಿಲೈನ ಉದೆಭಾನ್ ಮತ್ತು ಶಹ್‌ಮಯ್‌ನ ಗುಲಾಲ್ ಶಾಹ್. ರಾಜ ತಿಲೈ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಉದೆಭಾನ್‌ರ ವಂಶಸ್ಥರಾಗಿದ್ದರು. ಜಿಲ್ಲೆಯಲ್ಲಿನ ಅವರ ಆಸ್ತಿಯು ಸುರತ್‌ಗರ್ ಮತ್ತು ಪರ್ಗಾನ ಗವ್‌ರ ಜಮೊದಲ್ಲಿನ ನವ್‌ದಂದ್‌ನ್ನು ಒಳಗೊಂಡಿದೆ. ಸುಲ್ತಾನ್‌ಪುರ್‌ನ ಇತರ ಕನ್‌ಹಾಪುರಿಯಗಳು, ಜಂಗ ಸಿಂಗ್‌ರ ಹಿರಿಯ ಮಮ್ಮೊಗ ಇಂದ್ರಜಿತ್ ಸಿಂಗ್‌ರ ವಂಶಸ್ಥರು. ಇಂದ್ರಜಿತ್ ಸಿಂಗ್‌ರ ಮಗ, ಬಲ್ಭದರ್ ಸಿಂಗ್ ನಾಲ್ಕು ಗಂಡು ಮಕ್ಕಳನ್ನು ಹೊಂದಿದ್ದರು. ಪರ್ಗಾನ ಗವ್‌ರ ಜಮೊದಲ್ಲಿ ೧೩ ಗ್ರಾಮಗಳ ಒಡೆಯ, ಕತರಿಯ ರಾಜ ಪ್ರತಾಪ್ ಬಹದೂರ್ ಸಿಂಗ್, ಬಲ್ಭಾದರ್ ಸಿಂಗ್‌ರ ಮಮ್ಮೊಗ. ಜಮೊ ಮನೆಯ ಸ್ಥಾಪಕರಾದ ರಾಜ್ ಸಾಹ್, ಬಲ್ಭಾದರ್‌ರ ಎರಡನೆಯ ಮಗ. ಆ ಪರ್ಗಾನದ ೧೭ ಗ್ರಾಮಗಳ ಒಡೆಯ ಮಹಬಿರ್ ಬಕ್ಷ ಸಿಂಗ್‌ರವರು ಹತ್ತನೆಯ ತಲೆಮಾರಿನಲ್ಲಿ ರಾಜ್ ಸಾಹ್‌ರ ವಂಶಸ್ಥರು. ಗವ್‌ರ ಜಮೊದಲ್ಲಿ ೧೩ ಗ್ರಾಮಗಳ ಒಡೆಯ ಬರವುಲಿಯದ ಬಾಬು ರಘುರಾಜ್ ಸಿಂಗ್‌ರವರು ಮತ್ತೊಬ್ಬ ವಂಶಸ್ಥರು. ಅಮೇಥಿಯ ಉತ್ತರ ಪರ್ಗಾನದಲ್ಲಿ ೧೨ ಗ್ರಾಮಗಳ ಒಡೆಯರಾದ ಭವನ್‌ಶಹ್‌ಪುರ್‌ನ ತಾಲುಖ್‌ದರ್, ಬಾಬು ದೆಬಿ ಬಕ್ಷ ಸಿಂಗ್, ಬಲ್ಭಾದರ್‌ರ ಮೂರನೆಯ ಮಗನಾದ ತ್ರಿಭುಭನ್ ಸಾಹ್‌ರ ಮಗ. ಕಾನ್‌ಪುರಿಯದ ಪೂರ್ಣ ಆಸ್ತಿಪಾಸ್ತಿಗಳು ಜೈಸ್‌ನ ಹಳೇ ಪರ್ಗಾನದಲ್ಲೇ ಒಳಗೊಂಡಿದಿದ್ದವು, ಆದರೆ ೧೭೭೫ರ ಹೊತ್ತಿಗೆ ಇವು ಜೈಸ್, ಮೊಹಂಗಂಜ್, ಸುಮ್‌ರವ್‌ತ, ಮತ್ತು ಗೌರ ಜಮೊನ ನಾಲ್ಕು ಪರ್ಗಾನಗಳಾಗಿ ವಿಭಜನೆಗೊಂಡವು.
ಭೂಗೋಳ ಶಾಸ್ತ್ರ
[ಬದಲಾಯಿಸಿ]ಅಮೇಥಿಯು ಇರುವುದು26°09′N 81°49′E / 26.15°N 81.82°E[೧]. ಸರಾಸರಿ ೧೩೧ ಮೀಟರ್ (೪೩೩ ಅಡಿ) ಎತ್ತರದಲ್ಲಿ.
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]As of 2001[update]ಭಾರತದ ಜನಗಣತಿಯ[೨] ಪ್ರಕಾರ, ಅಮೇಥಿಯ ಜನಸಂಖ್ಯೆ ೧೨,೮೦೮ (ಸಾವಿರ?) ಆಗಿದೆ. ಈ ಜನಸಂಖ್ಯೆಯಲ್ಲಿ ಶೇಕಡಾ ೫೨ ರಷ್ಟು ಪುರುಷರು ಮತ್ತು ಶೇಕಡಾ ೪೮ರಷ್ಟು ಸ್ತ್ರೀಯರು ಇದ್ದಾರೆ. ಅಮೇಥಿಯ ಸರಾಸರಿ ೫೯%ರಷ್ಟು ಸಾಕ್ಷರತೆ ಇದೆ, ಇದು ರಾಷ್ಟ್ರೀಯ ಸರಾಸರಿ ಸಾಕ್ಷರತೆ ೫೯.೫%ಕ್ಕಿಂತಲೂ ಕಡಿಮೆ ಇದೆ; ಅದರಲ್ಲಿ ೫೯%ರಷ್ಟು ಪುರುಷರು ಮತ್ತು ೪೧%ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ. ಒಟ್ಟು ಜನಸಂಖ್ಯೆಯ ಸುಮಾರು ೧೭%ರಷ್ಟು ೬ ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ. (The total Rural Population of Amethi is 83299 and the literacy rate is 39.5%.(www.amethi.com - www.google.co.in)
ಸಾರಿಗೆ
[ಬದಲಾಯಿಸಿ]ಅಮೇಥಿಯು ಉತ್ತರ ಪ್ರದೇಶದ ಮತ್ತು ಈಶಾನ್ಯ ಭಾರತದ ಭಾರತೀಯ ರೈಲುಮಾರ್ಗಗಳು ಮತ್ತು ರಸ್ತೆಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಬಹಳಷ್ಟು ಪ್ರಮುಖ ಪ್ರದೇಶಗಳಿಗೆ ನೇರ ರೈಲು ಸಂಪರ್ಕ ವ್ಯವಸ್ಥೆಯಿದೆ, ಅವೆಂದರೆ ದೆಹಲಿ, ಲಕ್ನೌ, ಕಾನ್ಪುರ್, ಡೆಹ್ರಾಡೂನ್, ಹರಿದ್ವಾರ, ಅಲಹಬಾದ್, ವಾರಣಾಸಿ, ಕೊಲ್ಕತ್ತಾ, ಪುರಿ ಇನ್ನೂ ಹೆಚ್ಚಿನ ನಗರಗಳಿವೆ. ಉತ್ತರ ಪ್ರದೇಶ್ ಸ್ಟೇಟ್ ರೋಡ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್‌ನ ಹಲವಾರು ಬಸ್ಸುಗಳು ಅಮೇಥಿಯಿಂದ ಸ್ಥಳೀಯ ಹಾಗೂ ರಾಷ್ಟ್ರೀಯ ಸ್ಥಳಗಳೊಂದಿಗೆ ಸಂಪರ್ಕ ಹೊಂದುವಂತೆ ಕಾರ್ಯನಿರ್ವಹಿಸುತ್ತವೆ.
ಲೋಕಸಭೆಯ ಚುನಾವಣೆ ಫಲಿತಾಶಗಳು
[ಬದಲಾಯಿಸಿ]ಅಮೇಥಿಯಲ್ಲಿ ಲೋಕಸಭೆ ಸ್ಥಾನ ಗೆದ್ದ ಅಭ್ಯೃರ್ಥಿಗಳ ಪಟ್ಟಿ - M=ಪುರುಷ ; F =ಮಹಿಳೆ ; ಅಮೇಥಿ -ಕ್ಷೇತ್ರ ೩೭
ವರ್ಷ(Year) | ಗೆಲುವು(Winner)-ಕಾಂ.(INC) | ಪಕ್ಷ(Party)INC | ಓಟು(Vote) | ಪಕ್ಷ(Party | ಓಟು(Vote) |
---|---|---|---|---|---|
1967 | V. D. Bajpai M | 63231 | G. Prasad M | BJS | 59566 |
1971 | Vidya Dhar Bajpai M | 96312 | Gokul Prasad Pathak M | BJS | 21335 |
1977 | ರವೀಂದ್ರ ಪ್ರತಾಪ ಸಿಂಹ M BLD | 176410 | ಸಂಜಯ ಗಾಂಧಿ M | INC | 100566 |
1980 | ಸಂಜಯ್ ಗಾಂಧಿ M | 186990 | ರವೀಂದ್ರ ಪ್ರತಾಪ ಸಿಂಹ M | JNP | 58445 |
1984 | ರಾಜೀವ್ ಗಾಂಧಿ M | 365041 | ಮನೇಕಾ ಗಾಂಧಿ F | IND | 50163 |
1991 | ರಾಜೀವ್ ಗಾಂಧಿ | 187138 | ರವೀಂದ್ರ ಪ್ರತಾಪ ಸಿಂಹ M | BJP | 75053 |
1996 | ಸತೀಶ್ ಶರ್ಮಾ M | 157868 | ರಾಜಾ ಮೋಹನ್ ಸಿನಗಹ. M | BJP | 117725 |
1998 | ಸಂಜಯ್ ಸಿಂಗ್ M BJP | 205025 | ಕ್ಯಾ. ಸತೀಶ್ ಶರ್ಮಾ M | INC | 181755 |
1999 | ರಾಹುಲ್ ಗಾಂಧಿ (ಗಂ) | 418960 | ಡಾ.ಸಂಜಯ್ ಸಿಂಗ್ M | BJP | 118948 |
2004 | ರಾಹುಲ್ ಗಾಂಧಿ (ಗಂ) | 390179 | ಚಂದ್ರ ಪ್ರಕಾಶ್ ಮಿಶ್ರ -M | BSP | 99326 |
2009 | ರಾಹುಲ್ ಗಾಂಧಿ (ಗಂ) M | 464195 | ಅಶೀಶ್ ಶುಕುಲ್ M | BSP | 93997 |
2014 | ರಾಹುಲ್ ಗಾಂಧಿ (ಗಂ) | 408651(ಅಂತರ-1,07,903) | (೧)ಸ್ಮೃತಿ ಇರಾನಿ(ಹೆ) | ಭಾ.ಜ.ಪಕ್ಷ | 300748 |
ಆಧಾರ
[ಬದಲಾಯಿಸಿ]- (ಚುನಾವಣೆ ಪಟ್ಟಿ- ಇಂಗ್ಲಿಷ್ ವಿಕಿ-ವಿಭಾಗ-C- Amethi )
ಉಲ್ಲೇಖಗಳು
[ಬದಲಾಯಿಸಿ]
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Pages using gadget WikiMiniAtlas
- Articles containing potentially dated statements from 2001
- All articles containing potentially dated statements
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಸುಲ್ತಾನಪುರ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು
- ಉತ್ತರ ಪ್ರದೇಶ