ದೆಹರಾದೂನ್
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.June 2007) ( |
Dehradun | |
ರಾಜ್ಯ - ಜಿಲ್ಲೆ |
Uttarakhand - Dehradun |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
{{{area_total}}} km² - 399 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
447,808 - {{{population_density}}}/ಚದರ ಕಿ.ಮಿ. |
ಅಂತರ್ಜಾಲ ತಾಣ: http://dehradun.nic.in/ |
ದೆಹರಾದೂನ್ (ಹಿಂದಿ: देहरादून) pronunciation (help·info) ಭಾರತ ದೇಶದ ಉತ್ತರಾಖಂಡ್ (ಮುಂಚಿನ ಉತ್ತರಾಂಚಲ್ ) ರಾಜ್ಯದ ರಾಜಧಾನಿ ಹಾಗೂ ದೆಹರಾದೂನ್ ಜಿಲ್ಲೆಯ ಜಿಲ್ಲಾ ಕೇಂದ್ರ .
ಇದು ಭಾರತದ ರಾಜಧಾನಿ ಹೊಸ ದಿಲ್ಲಿ ಮತ್ತು ದಿಲ್ಲಿ ಮಹಾನಗರ ಕ್ಷೇತ್ರದಿಂದ ಉತ್ತರ ದಿಕ್ಕಿನಲ್ಲಿ 230 ಕಿಲೋಮೀಟರ್ ದೂರವಿರುವ ದೂನ್ ಕಣಿವೆಯಲ್ಲಿದೆ. ಉತ್ತರದಲ್ಲಿ ಹಿಮಾಲಯ ಪರ್ವತಗಳು, ದಕ್ಷಿಣದಲ್ಲಿ ಶಿವಾಲಿಕ್ ಬೆಟ್ಟಗಳು, ಪೂರ್ವದಲ್ಲಿ ಗಂಗಾ ನದಿ ಮತ್ತು ಪಶ್ಚಿಮದಲ್ಲಿ ಯಮುನಾ ನದಿ - ಇವುಗಳಿಂದ ದೆಹರಾದೂನ್ ಜಿಲ್ಲೆಯು ಸುತ್ತುವರೆದಿದೆ. ಗಂಗಾ-ಯಮುನಾ ನದಿಗಳ ಹರಿಯುವುದರಿಂದ ನಗರವು ವಿಭಜಿಸುತ್ತದೆ.
ಭಾರತದಲ್ಲಿರುವ ಫಲವತ್ತಾದ ಗಂಗಾನದಿಯ ಬಯಲು ಪ್ರದೇಶದ ವಾಯವ್ಯ ದಿಕ್ಕಿನಲ್ಲಿದೆ. ಉತ್ತರಾಖಂಡ್ 2000ದ ನವೆಂಬರ್ 9ರಂದು ಆಸ್ತಿತ್ವಕ್ಕೆ ಬರುವ ಮುಂಚೆ, ದೆಹರಾದೂನ್ ಉತ್ತರ ಪ್ರದೇಶದ ಭಾಗವಾಗಿತ್ತು. ಹರಿದ್ವಾರ್, ಋಷಿಕೇಶ್, ರೂರ್ಕೀ, ಮಸ್ಸೂರಿ ಮತ್ತು ಸಹಾರಾನ್ಪುರ ಈ ನಗರದ ಆಜೂಬಾಜಿನಲ್ಲಿದೆ.
ದೆಹರಾದೂನ್ ONGCಯ ಪ್ರಧಾನ ಕಾರ್ಯಸ್ಥಾನ. ಇದರ ಜೊತೆಗೆ, KDMIPE (ಪೆಟ್ರೊಲ್ ಪರಿಶೋಧನಾ ಸಂಸ್ಥೆ); GEOPIC (ಭೂ ದತ್ತಾಂಶ ಸಂಸ್ಕರಣೆ ಮತ್ತು ನಿರ್ದಿಷ್ಟಾರ್ಥ ಅಧ್ಯಯನ ಕೇಂದ್ರ) ಮತ್ತು IDT (ಡ್ರಿಲಿಂಗ್ ತಂತ್ರಜ್ಞಾನ ಸಂಸ್ಥೆ) - ಇವೆಲ್ಲ ONGCಯ ಪ್ರಮುಖ ಸಂಶೋಧನಾ ಕೇಂದ್ರಗಳು ದೆಹರಾದೂನ್‌ನಲ್ಲಿವೆ.
ದೆಹರಾದೂನ್ ಮೂಲವಾದ "ದೆಹರಾದೂನಿ ಬಾಸಮತಿ ಅಕ್ಕಿ" ಮತ್ತು ಲಿಚಿ ಹಣ್ಣು ದೇಶಾದ್ಯಂತ ಪ್ರಸಿದ್ಧವಾಗಿದೆ.ಇದರಿಂದಾಗಿಯೇ ಈ ನಗರದ ಹೆಸರು ಪರಿಚಿತಗೊಂಡಿದೆ. ಜೊತೆಗೆ, ಭಾರತೀಯ ಸರ್ವೇಕ್ಷಣ ಸಂಸ್ಥೆ, ಅರಣ್ಯ ಸಂಶೋಧನಾ ಸಂಸ್ಥೆ (FRI) ಮತ್ತು ಹೆಸರಾಂತ ಶಿಕ್ಷಣಾ ಸಂಸ್ಥೆಗಳಾದ ರಾಷ್ಟ್ರೀಯ ಭಾರತೀಯ ಸೇನಾ ಕಾಲೇಜ್, ಭಾರತೀಯ ಸೇನಾ ಅಕಾಡೆಮಿ, ದಿ ದೂನ್ ಸ್ಕೂಲ್, ಸೇಂಟ್ ಜೋಸೆಫ್ ಅಕಾಡೆಮಿ, ಬ್ರೈಟ್‌ಲ್ಯಾಮಡ್ಸ್ ಶಾಲೆ, ಸೇಂಟ್ ಥಾಮಸ್ ಕಾಲೇಜ್, ವೆಲ್ಹಮ್ ಬಾಲಕರ ಶಾಲೆ ಮತ್ತು ವೆಲ್ಹಮ್ ಬಾಲಿಕೆಯರ ಶಾಲೆ ದೆಹರಾದೂನಿನಲ್ಲಿವೆ.
ವ್ಯುತ್ಪತ್ತಿ ಮತ್ತು ಇತಿಹಾಸ[ಬದಲಾಯಿಸಿ]
'ದೇರಾ' (ಅಥವಾ ಡೆಹರಾ) ಎಂದರೆ ಶಿಬಿರ; 'ದೂನ್' ಶಿವಾಲಿಕ್ ಸಣ್ಣ ಶ್ರೇಣಿ ಮತ್ತು ಪ್ರಮುಖ ಹಿಮಾಲಯ ಶ್ರೇಣಿಯ ನಡುವಿನ ನದಿಯ ಕಣಿವೆಗೆ ಸ್ಥಳೀಯ ಹೆಸರನ್ನು ಉಲ್ಲೇಖಿಸುತ್ತದೆ. ಇಂದಿನ ದೆಹರಾದೂನ್ ಪಟ್ಟಣವನ್ನು ಸಿಖ್ಖರ ಏಳನೆಯ ಗುರು ಶ್ರೀ ಗುರು ಹರ್ ರಾಯ್ ಜಿ ಅವರ ಹಿರಿಯ ಪುತ್ರ ಶ್ರೀ ಗುರು ರಾಮ್ ರಾಯ್ ಜಿ ಅವರು ಹದಿನೆಂಟನೆಯ ಶತಮಾನದ ಆರಂಭದಲ್ಲಿ ಸ್ಥಾಪಿಸಿದರು. ಶ್ರೀ ಗುರು ಹರ್ ರಾಯ್ ಜಿ ಅವರು ಉದಾಸಿನ್ ಸಾಧುಗಳ ಪಂಥವನ್ನು[೧] ಸ್ಧಾಪಿಸಿದರು. ಗಡೀಪಾರಾಗಿದ್ದ ಇವರು 1675ರಲ್ಲಿ ಇಲ್ಲಿಗೆ ಬಂದು ಧಮಾವಾಲಾ ಎಂಬ ಗ್ರಾಮದಲ್ಲಿ ನೆಲೆಸಿದರು. ಈ ಗ್ರಾಮದಲ್ಲಿ ಇಂದಿಗೂ ಸಹ, ಅವರ ಸ್ಮರಣಾರ್ಥಕವಾಗಿ,[೨] ಹೋಳಿ ಹಬ್ಬದ ಬಳಿಕ ಐದನೆಯ ದಿನದಂದು ವಾರ್ಷಿಕ 'ಝಂಡಾ ಜಾತ್ರೆ'ಯನ್ನು ಹಮ್ಮಿಕೊಳ್ಳಲಾಗುತ್ತದೆ. ಹಾಗಾಗಿ, ಹೆಸರು ಕಣಿವೆಯಲ್ಲಿ ಅವರ ಡೇರಾ ಅಥವಾ ನೆಲಗೊಳ್ಳುವಿಕೆಯನ್ನು ಉಲ್ಲೇಖಿಸುತ್ತದೆ.[೩] ಹೀಗೆ ನೆಲೆಗೊಂಡಿದ್ದನ್ನು ಗುರುತಿಸಲು, 1699ರಲ್ಲಿ ನಿರ್ಮಿಸಲಾದ "ಶ್ರೀ ಗುರು ರಾಮ್ ರಾಯ್ ದರ್ಬಾರ್" ಎಂಬ ಒಂದು ದರ್ಬಾರ್ ಸಹ ಇದೆ.[೪] ಇದನ್ನು ಮೊಗಲ್ ಚಕ್ರವರ್ತಿ ಜಹಾಂಗೀರ್ನ ಸಮಾಧಿಯನ್ನು ಮಾದರಿಯಾಗಿಟ್ಟುಕೊಂಡು ಈ ಸ್ಮಾರಕವನ್ನು ನಿರ್ಮಿಸಲಾಗಿದೆ.[೫]
ದೂನ್ ಶಿವನ ನಿವಾಸವಾದ ಕೇದಾರ್ ಖಂಡ್ ದ ಒಂದು ಭಾಗ ಎಂದು ಸ್ಜಂದ ಪುರಾಣಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪ್ರಾಚೀನ ಭಾರತದಲ್ಲಿ,ಅಂದರೆ ಮಹಾಭಾರತದ ಕಾಲದಲ್ಲಿ, ಪಾಂಡವರ ಮತ್ತು ಕೌರವರಿಗೆ ಅಸಾಮಾನ್ಯ ಗುರುಗಳಾಗಿದ್ದ ದ್ರೋಣಾಚಾರ್ಯರು ಇಲ್ಲಿ ವಾಸಿಸುತ್ತಿದ್ದರೆಂದೂ,ಹಾಗಾಗಿ ಈ ಸ್ಥಳಕ್ಕೆ "ದ್ರೋಣ-ನಗರಿ"[೬] ಎಂಬ ಹೆಸರು ಬಂದಿತೆಂದು ಹೇಳಲಾಗಿದೆ.
ಭೌಗೋಳಿಕ ಮತ್ತು ಹವಾಮಾನ ವಿವರ[ಬದಲಾಯಿಸಿ]
Dehradun | ||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
Climate chart (explanation) | ||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||
|
ದೆಹರಾದೂನ್ ಉಪ-ಉಷ್ಣ ಹವಾಮಾನವನ್ನು ಹೊಂದಿದೆ. ತಂಪಾದ ಚಳಿಗಾಲ ಮತ್ತು ಬೆಚ್ಚಗಿನ, ಉಲ್ಲಾಸಕರ ವಸಂತ, ಬಿರು ಬಿಸಿಲ ಬೇಸಿಗೆ ಇರುವ ಈ ನಗರದಲ್ಲಿ ಮಳೆಯ ರಭಸವೂ ಹೆಚ್ಚು. ದೆಹರಾದೂನ್ ಸುತ್ತಲಿನ ಪರ್ವತಗಳು ಶೀತಕಾಲದಲ್ಲಿ ದೀರ್ಘಕಾಲ ಹಿಮಪಾತಕ್ಕೊಳಗಾಗುತ್ತದೆ. ಆದಾಗ್ಯೂ ನಗರದಲ್ಲಿ ಉಷ್ಣಾಂಶವು ದ್ರವ ಘನವಾಗುವ ಮಟ್ಟಕ್ಕೂ ಕಡಿಮೆಗೆ ಇಳಿಯಲಾರದು.[೭]
ಸರ್ಕಾರೀ ಸಂಸ್ಥೆಗಳು[ಬದಲಾಯಿಸಿ]
ದಹರಾದೂನ್ ನಗರವು ಹಲವು ಸರ್ಕಾರೀ ಸಂಸ್ಥೆಗಳ ಪ್ರಧಾನ ಕಾರ್ಯಸ್ಥಾನಗಳನ್ನು ಹೊಂದಿದೆ:
- ಭಾರತೀಯ ಸರ್ವೇಕ್ಷಣ ಸಂಸ್ಥೆ
- ಅರಣ್ಯ ಸಂಶೋಧನಾ ಸಂಸ್ಥೆ (FRI)- ಸ್ಥಾಪನೆ: 1906
- ರಾಷ್ಟ್ರೀಯ ಭಾರತೀಯ ಸೇನಾ ಕಾಲೇಜ್ , (RIMC)- ಸ್ಥಾಪನೆ:1922
- ಭಾರತೀಯ ಸೇನಾ ಅಕಾಡೆಮಿ[೮], ಸ್ಥಾಪನೆ: 1932
- ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿ [೯]
- ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣಾ ಪರಿಷತ್ತು (ICFRE)[೧೦]
- ಭಾರತೀಯ ವನ್ಯಜೀವಿ ಸಂಸ್ಥೆ[೧೧]
- ಭಾರತೀಯ ದೂರಸಂವೇದಿ ಸಂಸ್ಥೆ[೧೨]
- ಭಾರತೀಯ ಪ್ರಾಣಿ ವಿಜ್ಞಾನ ಸಂಸ್ಥೆ
- ಭಾರತೀಯ ಭೂವೈಜ್ಞಾನಿಕ ಸಂಸ್ಥೆ
- ಹಿಮಾಲಯ ಭೂವಿಜ್ಞಾನ ವಾಡಿಯಾ ಸಂಸ್ಥೆ[೧೩]
- ರಾಷ್ಟ್ರೀಯ ದೃಷ್ಟಿವಿಕಲರ ಸಂಸ್ಥೆ (NIVH)[೧೪]
- ರಕ್ಷಣಾ ವಿದ್ಯುನ್ಮಾನ ಅನ್ವಯಿಕ ಪ್ರಯೋಗಾಲಯ (DEAL)[೧೫]
- ಉಪಕರಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (IRDE)[೧೬]
- ಕೇಶವ ದೇವ ಮಾಳವೀಯ ಪೆಟ್ರೋಲ್ ಪರಿಶೋಧನಾ ಸಂಸ್ಥೆ
- ಭಾರತೀಯ ಸಸ್ಯ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆ
- ಕೇಂದ್ರೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಶೋಧನೆ ಮತ್ತು ತರಬೇತಿ ಸಂಸ್ಥೆ
- ಭಾರತೀಯ ದೂರ ಸಂವೇದಿ ಸಂಸ್ಥೆ
- ಭಾರತೀಯ ಪೆಟ್ರೋಲಿಯಮ್ ಸಂಸ್ಥೆ
- SOPHIA
- WFP ದೆಹರಾದೂನ್
- ಗುಣಮಟ್ಟ ಖಾತ್ರಿ (ಉಪಕರಣ) ನಿಯಂತ್ರಣಾಲಯ, ರಕ್ಷಣಾ ಮಂತ್ರಾಲಯ, ಭಾರತ ಸರ್ಕಾರ (DGQAನ ಸ್ಥಾಪನೆ)
ಸಾರಿಗೆ[ಬದಲಾಯಿಸಿ]
ನೀಲಿ ಪಟ್ಟಿಗಳುಳ್ಳ ಬಸ್‌ಗಳು ನಗರದಲ್ಲಿ ಸಾರಿಗೆ ಸೌಲಭ್ಯವನ್ನು ನೀಡುತ್ತಿವೆ. ಜೊತೆಗೆ,ಸಾರಿಗೆಗಾಗಿ ನೀಲಿ ತ್ರಿಚಕ್ರ ವಾಹನಗಳು ಸಹ ಎಲ್ಲೆಡೆ ಲಭ್ಯವಿವೆ.(ಇದನ್ನು"ವಿಕ್ರಂ" ಎನ್ನಲಾಗಿದೆ) ಈ ವಾಹನಗಳು ಸಾಮಾನ್ಯವಾದ ಮತ್ತು ಅತ್ಯಲ್ಪ ದರದ ಸಾರ್ವಜನಿಕ ಸಾರಿಗೆಯಾಗಿದೆ. ಏನೇ ಆದರೂ ಇಂತಹ ವಾಹನಗಳು ನಗರದಲ್ಲಿ ಅಧಿಕ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗಿವೆ.
ನಗರದಿಂದ 25 ಕಿಲೋಮೀಟರ್ ಪೂರ್ವದಲ್ಲಿರುವ ಜಾಲಿ ಗ್ರ್ಯಾಂಟ್ ಹೆಸರಿನ ವಿಮಾನ ನಿಲ್ದಾಣ ದೆಹರಾದೂನ್ ನಗರದಲ್ಲಿದೆ.
ಸಂಸ್ಕೃತಿ[ಬದಲಾಯಿಸಿ]
ಠಾಕುಠೀಕಾದ ದೆಹರಾದೂನ್ ಸಡಗರದಿಂದ ಕೂಡಿದೆ ನಗರ. ಇದು ರಾಜ್ಯದ ರಾಜಧಾನಿಯಾಗಿದ್ದು, ಹಲವು ಸರ್ಕಾರಿ ಸಂಸ್ಥೆಗಳು ಇಲ್ಲಿ ಮನೆ ಮಾಡಿವೆ. ಐದು ಸಕ್ರಿಯ ಗಡಿಯಾರಗಳನ್ನು ಹೊಂದಿರುವ ಕ್ಲಾಕ್ ಟವರ್ (ಘಂಟಾ ಘರ್) ಒಂದು ಎತ್ತರದ ಗೋಪುರವಾಗಿದ್ದು, ನಗರದ ಜನಪ್ರಿಯ ಹೆಗ್ಗುರುತಾಗಿದೆ. ಇದು ನಗರದ ಚಟುವಟಿಕೆಗಳ ಕೇಂದ್ರ ಬಿಂದು. ಇಲ್ಲಿನ ಹಲವು ಪ್ರೌಢಶಾಲೆಗಳು ದೇಶದ ವಿವಿಧ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳನ್ನು ಹೊಂದಿವೆ. ವಿವಿಧ ಪ್ರೌಢಶಾಲಾ ಸಮವಸ್ತ್ರಧಾರಿ ವಿದ್ಯಾರ್ಥಿಗಳು ನಗರದಲ್ಲಿ ಸಂಚರಿಸುವ (ಪ್ರೌಢ ಶಾಲೆಗಳ ವಿವಿಧ ಸಮವಸ್ತ್ರಗಳಲ್ಲಿ)ನೋಟವು ಸರ್ವೇಸಾಮಾನ್ಯವಾಗಿದೆ.
ಆರ್ಥಿಕತೆ[ಬದಲಾಯಿಸಿ]
ಕಳೆದ 20 ವರ್ಷಗಳಲ್ಲಿ ದೆಹರಾದೂನ್ ಭಾರೀ ಅಭಿವೃದ್ಧಿಯನ್ನು ಕಂಡಿದೆ. ಅದರ ಶೈಕ್ಷಣಿಕ ಹಿನ್ನಲೆ ಮತ್ತು ಹೆಚ್ಚಾಗಿರುವ ಅಂತಾರಾಷ್ಟ್ರೀಯ ಹಣ ಸಂದಾಯಗಳ ಕಾರಣ, ದಹರಾದೂನ್ ನಗರವಾಸಿಗಳ ತಲಾ ಆದಾಯವು(ಪರ್ ಕ್ಯಾಪಿಟಾ ಇನ್ಕಮ್) ಡಾಲರ್ ಲೆಕ್ಕದಲ್ಲಿ ಸುಮಾರು $1800ದಷ್ಟರಲ್ಲಿದೆ (ರಾಷ್ಟ್ರೀಯ ಸರಾಸರಿ $800). ದೆಹರಾದೂನ್ ಒಂದು ದೊಡ್ಡ ನಗರ ಕೇಂದ್ರವಾಗಿ ಪರಿವರ್ತಿತವಾಗಿರುವುದು ಅಸಾಧಾರಣವೇ ಸರಿ. ನಗರಾದ್ಯಂತ ಭಾರತೀಯ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ (STPI[೧೭]) ಹಾಗೂ ವಿವಿಧ ವಿಶೇಷ ಆರ್ಥಿಕ ವಲಯ (SEZ) ಗಳ ಸ್ಥಾಪನೆಯಾಗುವುದರೊಂದಿಗೆ, ದೆಹರಾದೂನ್ ನಗರವು ವಾಣಿಜ್ಯ ಮತ್ತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಅಭಿವೃದ್ಧಿ ಕಾಣುತ್ತಿದೆ. IT ಪಾರ್ರ್ಕಗಳಿಂದ ಹಿಡಿದು ವಿಶಿಷ್ಟವಾಗಿ ನಿರ್ಮಾಣವಾದ ಕೈಗಾರಿಕಾ ಪ್ರದೇಶಗಳು ರಾಷ್ಟ್ರೀಯ ಮತ್ತು ಜಾಗತಿಕ ಖ್ಯಾತಿ ಗಳಿಸಿದ ಉದ್ಯಮಿಗಳನ್ನು ತಮ್ಮತ್ತ ಸೆಳೆದಿವೆ. ತೆರಿಗೆ ರಿಯಾಯಿತಿಯಂತಹ ಸೌಲಭ್ಯಗಳು ದೊರೆಯುವ ಕಾರಣ, ದೆಹರಾದೂನ್ ನಗರದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವಂತಾಗಿವೆ.(ಉತ್ತರಾಂಚಲ್‌ನ ಇತರೆ ಭಾಗಗಳಲ್ಲಿರುವಂತೆ)ದಿಲ್ಲಿ-ದೆಹರಾದೂನ್ ನಾಲ್ಕು ಸಾಲಿನ ಹೆದ್ದಾರಿಯ ನಿರ್ಮಾಣವು ಭರದಿಂದ ಸಾಗುತ್ತಿದೆ. ಹೀಗಾಗಿ, ನಗರದ ಅಭಿವೃದ್ಧಿಗೆ ಎದುರಾಗಿದ್ದ ಅಡ್ಡಿ ಬಗೆಹರಿದಂತಾಗಿದೆ ಇನ್ನಷ್ಟು ಭಾರಿ ಪ್ರಮಾಣದಲ್ಲಿ ಆರ್ಥಿಕ ಬೆಳವಣಿಗೆಯ ನಿರೀಕ್ಷೆಯಿದೆ.
ಪ್ರವಾಸೋದ್ಯಮ[ಬದಲಾಯಿಸಿ]
ಇಲ್ಲಿಗೆ ಸಮೀಪದ ಸ್ಥಳಗಳು:
- ಗುಲರ್ ಘಾಟಿ
- ಬುಧ ದೇವಾಲಯ ಮತ್ತು ಪಾರ್ಕ್ ಮತ್ತು ಪಾರ್ಕ್ ಕ್ಲೆಮೆಂಟೌನ್l
- ಮಾಲ್ ದೇವತಾ
- ಮಾಲಸೀ ಜಿಂಕೆ ಉದ್ಯಾನ
- ಡತ್ ಕಾಲೀ ಮಾತಾ ಮಂದಿರ್
- ಸಹಸ್ರಧಾರಾ
- ತಾಪಕೇಶ್ವರ ಶಿವ್ ದೇವಾಲಯ
- ಲಕ್ಷ್ಮಣ್ ಸಿದ್ಧ್ ದೇವಾಲಯ,
- ರಾಬರ್ಸ್ ಕೇವ್,
- ಲಚ್ಛಿವಾಲಾ
- ಅಭಿಮನ್ಯು ಕ್ರಿಕೆಟ್ ಅಕಾಡೆಮಿ (ನಗರದಿಂದ 11 ಕಿ.ಮೀ.ದೂರ)
- ರಾಜಾಜಿ ರಾಷ್ಟ್ರೀಯ ಉದ್ಯಾನ
- ಶಾಂತಲಾ ದೇವಿ ಮುಂತಾದವು ಈ ಸುಂದರ ನಗರವನ್ನು ಸುತ್ತುವರೆದಿವೆ,
ಮಸ್ಸೂರೀ ಗಿರಿಧಾಮವಿದೆ ಸಮೀಪದಲ್ಲೆ ಇದೆ. ಲಾಂಡೋರ್ ಕೇವಲ 36 ಕಿ.ಮೀ.ದೂರದಲ್ಲಿದೆ. ದೆಹರಾದೂನ್‌ನಿಂದ ಮಸ್ಸೂರೀಗೆ ಕೇವಲ 16 ಕಿಲೋಮೀಟರ್ ದೂರದ (ಸುಲಭವಾದ) ಕಾಲ್ನಡಿಗೆ ಮಾರ್ಗವಿದೆ.
ಧನೌಲ್ತಿ ಮಸ್ಸೂರಿಯಿಂದಾಚಿಗಿರುವ ಒಂದು ಆಕರ್ಷಕ ಗಿರಿಧಾಮ. ಮಸ್ಸೂರೀ-ಧನೌಲ್ತಿ ರಸ್ತೆಯಲ್ಲಿರುವ ಹಿಮಾಲಯನ್ ವೀವರ್ಸ್ ಸಂಸ್ಥೆ ಕೇವಲ ನೈಸರ್ಗಿಕ ಬಣ್ಣ, ಉಣ್ಣೆ, 'ಎರಿ' ರೇಷ್ಮೆ ಮತ್ತು ಪಶ್ಮಿನಾ ಬಳಸಿ ಕೈನೇಯ್ಗೆಯ ಶಾಲು, ಕಂಠವಸ್ತ್ರ, ಶಿರೋವಸ್ತ್ರ ಮತ್ತು ಹಗುರವಾದ ಕಂಬಳಿ ಇವುಗಳನ್ನು ತಯಾರಿಸುತ್ತದೆ. ಉತ್ತಮ ಗುಣಮಟ್ಟದ ಕೈಮಗ್ಗದ ಉತ್ಪಾದನೆಗಳು , ಪರಿಸರ-ಸ್ನೇಹಿ ನೈಸರ್ಗಿಕ ಬಣ್ಣಗಳ ಬಳಕೆಯನ್ನು ಜನಪ್ರಿಯಗೊಳಿಸುವುದು ಮತ್ತು ಹಿಮಾಲಯ ವಲಯದಲ್ಲಿ ತಯಾರಿಸಲಾದ ಕರಕುಶಲ ಉತ್ಪಾದನೆಗಳಿಗಾಗಿ ಮಾರುಕಟ್ಟೆಯನ್ನು ಕಲ್ಪಿಸುವುದು ಸಂಸ್ಥೆಯ ಉದ್ದೇಶವಾಗಿದೆ. http://www.himalayanweavers.org
ಚಕ್ರತಾ ಎಂಬುದು ಸಹ ಸಮೀಪದ ಗಿರಿಧಾಮ, ಆದರೆ ಅದು 80 ಕಿ.ಮೀ.ದೂರದಲ್ಲಿದೆ. ಯಮುನಾ ನದಿಯ ದಂಡೆಯಲ್ಲಿ ಐತಿಹಾಸಿಕ ಗುರುದ್ವಾರವಿರುವ ಪೋಂಟಾ ಸಾಹಿಬ್ ಸಿಖ್ಖರ ಪುಣ್ಯಕ್ಷೇತ್ರವಾಗಿದೆ. ಹರಿದ್ವಾರ್ ಮತ್ತು ಋಷಿಕೇಶ್ ಸಮೀಪದಲ್ಲಿರುವ ಇತರೆ ಪುಣ್ಯಕ್ಷೇತ್ರಗಳು.
ಚಿತ್ರಗಳು[ಬದಲಾಯಿಸಿ]
- Dehradun Night View.JPG
ದೆಹರಾದೂನ್ ಮಸ್ಸೂರೀ ಮಧ್ಯದಿಂದ ದೆಹರಾದೂನ್‌ನ ರಾತ್ರಿಯ ವೇಳೆಯ ನೋಟ.
ಆಕರಗಳು[ಬದಲಾಯಿಸಿ]
- ↑ 4
- ↑ ಶ್ರೀ ಗುರು ರಾಮ್ ರಾಯ್ ದರ್ಬಾರ್ ದೆಹರಾದೂನ್‌ನ ಅಧಿಕೃತ ಜಾಲತಾಣ.
- ↑ ಇದೇ ಹೆಸರುಗಳನ್ನು ಹೊಂದಿರುವ ಇತರ ನಗರಗಳು ಪಾಕಿಸ್ತಾನದಲ್ಲಿರುವ ಡೇರಾ ಇಸ್ಮಯಿಲ್ ಖಾನ್, ಡೇರಾ ಬುಗ್ತಿ ಮತ್ತು ಡೇರಾ ಗಾಜಿ ಖಾನ್.
- ↑ ದೆಹರಾ
This article incorporates text from a publication now in the public domain: Chisholm, Hugh, ed. (1911). Encyclopædia Britannica (11th ed.). Cambridge University Press. Missing or empty
|title=
(help)CS1 maint: ref=harv (link) - ↑ ದೆಹರಾ ಟೌನ್ ದಿ ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯಾ, 1909, v. 11, p. 221-223.
- ↑ ಉತ್ತರಾಖಂಡ್ ಜಾಲತಾಣದಲ್ಲಿನ ದೆಹರಾದೂನ್‌ನ ಸಂಕ್ಷಿಪ್ತ ಇತಿಹಾಸ ಮತ್ತು ಕಿರುಪರಿಚಯ.
- ↑ ಹವಾಮಾನ ಮತ್ತು ಮಳೆ
- ↑ http://www.indianarmy.nic.in/arimamain.htm
- ↑ http://www.ignfa.gov.in
- ↑ http://www.icfre.org/
- ↑ http://www.wii.gov.in/
- ↑ http://www.iirs-nrsa.gov.in
- ↑ http://www.himgeology.com
- ↑ http://www.nivh.org
- ↑ http://www.drdo.org
- ↑ http://www.drdo.org/labs/electronics/irde/index.shtml
- ↑ http://www.dehradun.stpi.in
ಹೊರಗಿನ ಕೊಂಡಿಗಳು[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ ದೆಹರಾದೂನ್ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- ದೆಹರಾದೂನ್ ನಗರದ ಅಧಿಕೃತ ಜಾಲತಾಣ
- ದೆಹರಾದೂನ್ ಗೈಡ್
- ದೆಹರಾದೂನ್ ಜಿಲ್ಲೆಯ ಅಧಿಕೃತ ಜಾಲತಾಣ
ವಿಕಿಟ್ರಾವೆಲ್ ನಲ್ಲಿ ದೆಹರಾದೂನ್ ಪ್ರವಾಸ ಕೈಪಿಡಿ (ಆಂಗ್ಲ)
ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using duplicate arguments in template calls
- Pages with citations lacking titles
- CS1 maint: ref=harv
- Wikipedia articles incorporating a citation from the 1911 Encyclopaedia Britannica with no article parameter
- Wikipedia articles incorporating text from the 1911 Encyclopædia Britannica
- Articles lacking sources from June 2007
- Articles with invalid date parameter in template
- All articles lacking sources
- Articles with hAudio microformats
- Commons category with page title different than on Wikidata
- ಉತ್ತರಾಖಂಡ್ನಲ್ಲಿರುವ ನಗರಗಳು ಮತ್ತು ಪಟ್ಟಣಗಳು
- ದೆಹರಾದೂನ್
- ಉತ್ತರಾಖಂಡ್ನಲ್ಲಿ ಪ್ರವಾಸೋದ್ಯಮ
- ಭಾರತದ ರಾಜಧಾನಿ ನಗರಗಳು
- ಉತ್ತರಾಖಂಡದ ಜಿಲ್ಲೆಗಳು
- ಭಾರತದ ರಾಜಧಾನಿ ಪಟ್ಟಣಗಳು