ವಿಷಯಕ್ಕೆ ಹೋಗು

ರಾಂಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಂಚಿ
ರಾಂಚಿ
capital
Population
 (2019)
 • Total೨೫,೬೮,೫೩೮

ರಾಂಚಿಯು pronunciation (ಹಿಂದಿ:राँची) (Bengali:রাঁচি) (Urdu:رانچی) ಬಂಗಾಲಿ রাঁচি) (ಉರ್ದು:رانچی), ಭಾರತಜಾರ್ಖಂಡ್ ರಾಜ್ಯರಾಜಧಾನಿ ನಗರ. ದಕ್ಷಿಣ ಬಿಹಾರ,ಉತ್ತರ ಒಡಿಶಾ,ಪಶ್ಚಿಮದ ಪಶ್ಚಿಮ ಬಂಗಾಲ್ ಹಾಗು ಈಗಿರುವ ಪೂರ್ವದ ಛತ್ತೀಸಗಢ್ ಗಳಲ್ಲಿನ ಬುಡಕಟ್ಟು ಜನಾಂಗದ ಪ್ರತ್ಯೇಕ ರಾಜ್ಯ [] ಜಾರ್ಖಂಡ್ ಚಳವಳಿಯ ಹೋರಾಟಕ್ಕೆ ಕೇಂದ್ರ ಸ್ಥಾನವಾಗಿತ್ತು. ಜಾರ್ಖಂಡ್ ರಾಜ್ಯವು 15ನವೆಂಬರ್ 2000ರಲ್ಲಿ ಬಿಹಾರದ ವಿಭಾಗೀಕರಣದ ಛೋಟಾ ನಾಗಪುರ್ ಮತ್ತು ಸಂತಾಲ್ ಪರ್ಗನಾಸ್ ಗಳ ಮೂಲಕ ಅಸ್ತಿತ್ವಕ್ಕೆ ಬಂತು. ದೇಶದ ಒಟ್ಟು ಖನಿಜ ಸಂಪತ್ತಿನ 40%ರಷ್ಟು ಜಾರ್ಖಂಡದಲ್ಲಿದೆ. ರಾಜ್ಯದ ಒಟ್ಟು 50%ರಷ್ಟು ಖನಿಜ ಉತ್ಪಾದನೆ ಇದ್ದರೆ ಇಡೀ ದೇಶದ ಒಟ್ಟಾರೆ ಪೂರ್ಣಗೊಂಡ ಖನಿಜ ಉತ್ಪಾದನೆಯ 18%ರಷ್ಟಿದೆ. ಇದಕ್ಕಾಗಿಯೇ ರಾಂಚಿಯನ್ನು ಮ್ಯಾಂಚೆಸ್ಟರ್ ಆಫ್ ಈಸ್ಟ್ ಎಂದು ಕರೆಯಲಾಗುತ್ತದೆ.

ರಾಂಚಿ ಎಂಬ ಶಬ್ದವು ಅಲ್ಲಿನ ಸ್ಥಳೀಯರು ಧಾರ್ಮಿಕ ಶ್ರದ್ದೆ ಪ್ರಕಟಿಸುವ ಹಕ್ಕಿವೊಂದರ ಹೆಸರಿನಿಂದ ಕರೆಯಲ್ಪಡುತ್ತದೆ. ಅಂದರೆ 1927ರ ಮುಂಚೆ(ರಾಂಚಿ) ಈ ಪ್ರದೇಶವನ್ನು ರಾಚಿ ಎಂದು ಹೇಳಲಾಗುತಿತ್ತು. ಈ ಪ್ರದೇಶವು ಮೊದಲು ಕೃಷಿ ಪ್ರದೇಶ ಮತ್ತು ದೊರಂಡಾ('ದುರಾನ್' 'दुरङ' ಅಂದರೆ ಹಾಡು/ಹಾಡುಗಾರಿಕೆ& 'ದ ಅಹ' 'दअः' ಅಂದರೆ ಜಲಸಂಪತ್ತು - ಮುಂಡರಿ ಭಾಷೆಯ ಶಬ್ದಗಳು),ಇದರ ಮಧ್ಯೆ ಹಿನೂ ಮತ್ತು ಹಾರ್ಮೂ ನದಿ ತೀರ ಪ್ರದೇಶವು ಸೈನಿಕ ರಕ್ಷಣಾ ಪ್ರದೇಶದ ಕಾವಲಿನ ಸ್ಥಳವೆನ್ನಬಹುದು. ಈಗಿನ ಹಳೆಯ ರಾಂಚಿಯನ್ನು ಮೂಲದಲ್ಲಿ ಆರ್ಚಿ ಹಳ್ಳಿ ಎಂದು ಕರೆಯಲಾಗುತಿತ್ತು. ರಾಂಚಿಯು ಪೂರ್ವ ಭಾರತದ ಪ್ರಬಲ ರಾಜಕೀಯ,ವಾಣಿಜ್ಯ,ಕೈಗಾರಿಕೆ ಮತ್ತು ಶಿಕ್ಷಣದ ಕೇಂದ್ರ ಸ್ಥಾನವೆನಿಸಿದೆ.

ಇತಿಹಾಸ

[ಬದಲಾಯಿಸಿ]

ರಾಂಚಿಯು ರಾಂಚಿ ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ, ಮೊದಲು ಈ ಜಿಲ್ಲೆಯ ಹೆಸರು ಲೊಹರ್ ದಾಗಾ ಎಂದಾಗಿತ್ತು. ಈ ಹಳೆಯ ಹಿಲ್ಲೆಯು ನೈಋತ್ಯದಲ್ಲಿ Kol 1831-32ರಲ್ಲಿ ತಲೆ ಎತ್ತುತ್ತಿರುವಾಗ ಈ ಹಳೆ ಜಿಲ್ಲೆಯು ಅಸ್ತಿತ್ವಕ್ಕೆ ಅಬಂದಿತು. ಈ ಜಿಲ್ಲೆಯ ಹೆಸರನ್ನು 1899ರಲ್ಲಿ ಲೊಹರ್ ದಾಂಗಾದಿಂದ ಬದಲಾಯಿಸಿ ಈ ಪುಟ್ಟ ಹಳ್ಳಿಯು ಇಂದು ಕೇಂದ್ರೀಯ ಸ್ಥಾನವಾಗಿದೆ.ನಿಜವಾಗಿ ನೋಡಿದರೆ ಇದು ಅಲ್ಲಿನ ಸ್ಥಳೀಯ ಹಕ್ಕಿ "ರಿಂಚಿ" ಬಹುತೇಕ "ಪಹಾಡಿ ಮಂದಿರ್ ಪ್ರಿಮೈಸಿಸ್ "ನಲ್ಲಿ ಕಾಣಬರುತ್ತದೆ.ಇದು ಪವಿತ್ರವಾದ ಹಕ್ಕಿ ಕೆಲವು ಋತುಗಳಲ್ಲಿ ಮಾತ್ರ ಬರುತ್ತದೆ.

ಭೂಗೋಳ

[ಬದಲಾಯಿಸಿ]

ರಾಂಚಿಯು ಇದರಲ್ಲಿ 23°21′N 85°20′E / 23.35°N 85.33°E / 23.35; 85.33ಅಸ್ತಿತ್ವ ಪಡೆದಿದೆ.[] ಒಟ್ಟು ರಾಂಚಿ ಮುನ್ಸಿಪಲ್ ಪ್ರದೇಶ ವ್ಯಾಪ್ತಿಯು 141ಚದರ್ ಕಿಲೊಮೀಟರ್ ಮತ್ತು ನಗರವು ಸುಮಾರು 629ಮೀಟರ್ ನಷ್ಟುMSLನಿಂದ ಮೇಲ್ಭಾಗಕ್ಕಿದೆ.

ಭೌಗೋಳಿಕವಾಗಿ ರಾಂಚಿಯು ಛೋಟಾ ನಾಗಪುರ್ ದ ಪ್ರಸ್ಥಭೂಮಿಯಲ್ಲಿದೆ.ಇದು ದಕ್ಷಿಣ ಪ್ರಸ್ಥಭೂಮಿಯ ಪ್ರದೇಶವನ್ನು ಆಕ್ರಮಿಸುತ್ತದೆ. ರಾಂಚಿಯ ಸುತ್ತಮುತ್ತಲಿನ ಪ್ರದೇಶವು ನೈಸರ್ಗಿಕ ಸಂಪತ್ತಿನಿಂದ ಎಲ್ಲರ ಆಕರ್ಷಣೆಯ ತಾಣವಾಗಿದೆ.ಇದನ್ನು"ಜಲಪಾತಗಳ ನಗರ" ಎನ್ನಲಾಗುತ್ತದೆ. ಅತ್ಯಂತ ಜನಪ್ರಿಯ ಜಲಪಾತಗಳೆಂದರೆ ದಶಮ್ ,ಹುಂಡ್ರು,ಜೊನ್ಹಾ ಫಾಲ್ಸ್ ,ಹಿರ್ನಿ ಮತ್ತು ಪಂಚಘಾಟ್ ಇವೆಲ್ಲವೂ ಸದಾಕಾಲವೂ ಆಕರ್ಷಣೆಯ ಕೇಂದ್ರ ಬಿಂದುಗಳು.

ಸುವರ್ಣರೇಖಾ ನದಿ ಮತ್ತು ಅದರ ಉಪನದಿಗಳು ಸ್ಥಳೀಯ ನದಿಯ ಹೆಗ್ಗುರುತುಗಳಾಗಿವೆ. ಕಂಕೆ,ರುಕ್ಕಾ ಮತ್ತು ಹತಿಯಾ ಅಣೆಕಟ್ಟುಗಳನ್ನು ಇವುಗಳ ಮೇಲೆ ಕಟ್ಟಿ ಸ್ಥಳೀಯ ಜನರ ನೀರು ಬೇಡಿಕೆಯನ್ನು ಪೂರೈಸಲಾಗುತ್ತದೆ.

ರಾಂಚಿಯು ಪರ್ವತಗಳಿಂದ ಆವೃತವಾದ ಪ್ರದೇಶ.ಇದರಲ್ಲಿರುವ ದಟ್ಟಾರಣ್ಯಗಳು ಇಲ್ಲಿನ ಉತ್ತಮ ಹವಾಮಾನಕ್ಕೆ ಕಾರಣವೆನಿಸಿವೆ.ರಾಜ್ಯದ ಇನ್ನುಳಿದ ಪ್ರದೇಶಗಳಿಗೆ ಹೋಲಿಸಿದರೆ ಇದರ ಹವಾಗುಣ ಅತ್ಯುತ್ತಮವಾದದ್ದು.

ರಾಂಚಿಯು ಹಲವಾರು ಜಲಪಾತಗಳಿಗೆ ಉಗಮ ಸ್ಥಾನವೆನಿಸಿದೆ.ನಗರ ಒಳಭಾಗ ಮತ್ತು ಸುತ್ತಮುತ್ತಲು ಸುಮಾರು10 ಜಲಪಾತಗಳಿವೆ,ಇವು ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿನ ಜಲಪಾತಗಳು ರಾಜ್ಯದ ಉಳಿದೆಡೆಗಿಂತ ಹೆಚ್ಚಿನ ಆಕರ್ಷಣೆ ಮತ್ತು ವಿಶಿಷ್ಟತೆ ಪಡೆದಿವೆ. ಅವುಗಳಲ್ಲಿ ಪ್ರಮುಖವಾಗಿ ಜೊಹ್ನಾ ಫಾಲ್ಸ್ ,ಹುಂಡ್ರು ಫಾಲ್ಸ್ ಮತ್ತು ಹಲವಾರು. ಮಹಾರಾಜಾ ನಿಶಾಂತ ಶುಕ್ಲಾ ಮತ್ತು ಪ್ರಶಾಂತ ಶುಕ್ಲಾ ಇದರ ಸಂಪೂರ್ಣ ಉಸ್ತುವಾರಿ ಪಡೆದುಕೊಂಡು ನಂತರ ಈಗ್ರುವ ನೂತನ ರಾಂಚಿಯನ್ನು ನಿರ್ಮಿಸಿದರು. ಅವರು ಬೆಂಗಳೂರಿನಿಂದ ವಾಪಸಾಗಿ ಆಧುನಿಕ ನಗರ ನಿರ್ಮಾಣಕ್ಕೆ ಚಾಲನೆ ನೀಡಿದರು,ರಾಂಚಿಯನ್ನು ಯಾವುದೇ ನಗರಕ್ಕೂ ಸಟಿ ಸಾಟಿ ಇಲ್ಲದಂತೆ ಬೆಳೆಸಲು ಪಣ ತೊಟ್ಟರು.

ಹವಾಗುಣ

[ಬದಲಾಯಿಸಿ]
Ranchi
Climate chart (explanation)
JFMAMJJASOND
 
 
23
 
23
10
 
 
30
 
26
13
 
 
27
 
31
17
 
 
32
 
36
22
 
 
55
 
37
24
 
 
199
 
34
24
 
 
346
 
29
23
 
 
329
 
29
22
 
 
282
 
29
22
 
 
89
 
28
19
 
 
8.7
 
26
14
 
 
6.1
 
23
10
Average max. and min. temperatures in °C
Precipitation totals in mm
Source: IMD

ರಾಂಚಿಯು ಉಪ-ಉಷ್ಣವಲಯದ ಹವಾಗುಣ ಹೊಂದಿದೆ,ಇದರ ವಿಶಿಷ್ಟ ಭೌಗೋಳಿಕತೆಯು ಸುತ್ತಲೂ ಅರಣ್ಯ ಪ್ರದೇಶ ಹೊಂದಿದ್ದರಿಂದ ಉತ್ತಮ ಹವಾಗುಣಹೊಂದಿದೆ.ಅವಿಭಜಿತ ಬಿಹಾರದ ಬೇಸಿಗೆ ರಾಜಧಾನಿಯೂ ಹೌದು./ ಉಷ್ಣತೆಯ(ತಾಪಮಾನದ) ಪ್ರಮಾಣವು ಗರಿಷ್ಟ42 ರಿಂದ 20 °C ಬೇಸಿಗೆಯಲ್ಲಿ ಮತ್ತು 25ರಿಂದ 5 °Cವರೆಗೆ ಚಳಿಗಾಲದಲ್ಲಿ ಕಾಣುತ್ತದೆ. ವಾರ್ಷಿಕ ಮಳೆ ಪ್ರಮಾಣವು1430ಮಿಲಿಮೀಟರ್ (56.34 ಇಂಚ್) ಜೂನ್ ನಿಂದ ಮಳೆ ಬೀಳುವ ಮಟ್ಟವು ಸುಮಾರು 1,100ಮಿಲಿಮೀಟರ.

ಜನಸಾಂದ್ರತೆ

[ಬದಲಾಯಿಸಿ]

ಇತ್ತೀಚಿನ 2001ರ ಭಾರತ ಗಣತಿ ಯ ಪ್ರಕಾರ ರಾಂಚಿಯ ಜನಸಂಖ್ಯೆಯು846,454 ರಷ್ಟಿದೆ. ಈ ಮತದಾರ ಕ್ಷೇತ್ರದಲ್ಲಿ 53%ರಷ್ಟು ಪುರುಷರು ಮತ್ತು 47%ರಷ್ಟು ಮಹಿಳೆಯರ ಪಾಲಿದೆ. ರಾಂಚಿಯಲ್ಲಿ ಸರಾಸರಿ 74%ರಷ್ಟು ಸಾಕ್ಷರತೆ ಇದೆ.ಇದು ರಾಷ್ಟ್ರೀಯ ಸರಾಸರಿ 59.5%ಕ್ಕಿಂತಹೆಚ್ಚಾಗಿದೆ.ಪುರುಷರದು 80%,ಮಹಿಳೆಯರುದು 68%ರಷ್ಟು. ರಾಂಚಿಯ 13% ರಷ್ಟು ಜನಸಂಖ್ಯೆಯಲ್ಲಿ 6ವರ್ಷದೊಳಗಿನವರಿದ್ದಾರೆ. ಜಾರ್ಖಂಡ್ ರಾಜ್ಯವು 2000ರಲ್ಲಿ ರಚಿತಗೊಂಡ ನಂತರ ನಗರದ ಜನಸಂಖ್ಯೆ ಒಮ್ಮೆಲೆ ಹೆಚ್ಚಾಯಿತು. ಹಲವಾರು ಉದ್ಯೋಗವಕಾಶಗಳ ಹೆಚ್ಚಳ ಮತ್ತು ಹಲವಾರು ಪ್ರಾದೇಶಿಕ ಮತ್ತು ರಾಜ್ಯಮಟ್ಟದ ಕಛೇರಿಗಳ ಪ್ರಾರಂಭವು,ಅಂದರೆ ಬ್ಯಾಂಕುಗಳು,ಮಾರಾಟ ಕಂಪನಿಗಳು ಇತ್ಯಾದಿಗಳಿಂದಾಗಿ ಬೇರೆಡೆಯಿಂದ ಜನರ ಧಾರಾಳ ವಲಸೆ ಆರಂಭವಾಯಿತು. ರಾಂಚಿಯು ಬಹುಸಂಸ್ಕೃತಿಯ ಬಹುವರ್ಣೀಯ ಜನರ ವಾಸಸ್ಥಾನವೆನಿಸಿದೆ.ದೇಶದ ಹಲವಾರು ಪ್ರದೇಶಗಳ ಜನರು ಇಲ್ಲಿ ತಮ್ಮ ಜೀವ್ನೋಪಾಯ ಕಂದುಕೊಡಿದ್ದಾರೆ.ಇದೊಂದು ಕಾಸ್ಮಾಪೊಲಿಟನ್ ನಾಡಾಗಿ ಪರಿವರ್ತಿತವಾಗಿದೆ. ಸುಮಾರು 11ಲಕ್ಷದಷ್ಟು ಜನಸಂಖ್ಯೆ ಇಲ್ಲಿರಬಹುದಾದ ಅಂದಾಜಿದೆ. ಕೆಲವು ವರ್ಷಗಳಿಂದ ವೇಗವಾಗಿ ಬೆಳೆಯುತ್ತಿರುವ ನಗರದಿಂದಾಗಿ ಅದರ ಅಹಿವೃದ್ಧಿಗೆ ಪೂರಕವಾಗಿ ಜನಸಾಂದ್ರತೆಯೂ ಹೆಚ್ಚುತ್ತಿದೆ.

ಶಿಕ್ಷಣ

[ಬದಲಾಯಿಸಿ]

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು

ಪೂರ್ವ ಪ್ರಾಥಮಿಕ,ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಮುಖ ಕೇಂದ್ರವೆನಿಸಿದೆ. ಭಾರತದ ಅತ್ಯಾಧುನಿಕ ತಂತ್ರಜ್ಞಾನದ ನಂಬರ್ 1ಶಿಕ್ಷಣ ಕಂಪನಿ ಎಜುಕೊಂಪ್ ತನ್ನ "ರೂಟ್ಸ್ ಟು ವಿಂಗ್ಸ್ "ನ್ನು ತೆರೆದಿದೆ.ರೂಟ್ಸ್ ಟು ವಿಂಗ್ಸ್ Archived 2010-09-28 ವೇಬ್ಯಾಕ್ ಮೆಷಿನ್ ನಲ್ಲಿ.,ಬರಿಯತು ರೋಡ್ ರಾಂಚಿ ಅಲ್ಲದೇ ಇನ್ನುಳಿದ ಪ್ರಮುಖ ಶಾಲೆಗಳೆಂದರೆ LEBB ಹೈಸ್ಕೂಲ್ ,SS ದೊರಂಡಾ ಗರ್ಲ್ಸ್ ಹೈಸ್ಕೂಲ್ ಇತ್ಯಾದಿ. ಛೋಟಾನಾಗಪುರ್ ಗರ್ಲ್ಸ್ ಸ್ಕೂಲ್, ಬಾಲಿಕಾ ಶಿಕ್ಷಾ ಭವನ, ಸುರೇಂದ್ರನಾಥ್ ಸೆಂಟೆನರಿ ಸ್ಕೂಲ್, ಜವಾಹರ ವಿದ್ಯಾ ಮಂದಿರ, ಕೈರಾಲಿ ಸ್ಕೂಲ್,ಗುರು ನಾನಕ್ HR ಸ್ಕೂಲ್,DPS, ಸಂತ್ ಆಂಥೊನಿಯ ಸ್ಕೂಲ್,ಸೇಂಟ್ ಕ್ಸೆವಿಯರ್ಸ್, ಸೇಂಟ್. ಜೊಹಾನ್ಸ್ ಹೈಸ್ಕೂಲ್ , ಸೇಂಟ್ ಥಾಮಸ್ ಸ್ಕೂಲ್ ಧೃವ, ಸಂಟ್ ಫ್ರಾನ್ಸಿಸ್, DAV ಹೆಹಾಲ್, DAV ಕಪಿಲ್ ದೇವ್, DAV ಬರಿಯೆತು, DAV ಗಾಂಧಿನಗರ, 4 ಕೇಂದ್ರೀಯ ವಿದ್ಯಾಲಯಗಳು, ಬೆಥೆಸ್ದ ಗರ್ಲ್ಸ್'ಸ್ಕೂಲ್, ಜಿಲಾ ಸ್ಕೂಲ್, ಸೇಂಟ್ ಪೌಲ್ ಸ್ಕೂಲ್, ಯೋಗದ ಸತ್ಸಂಗ ವಿದ್ಯಾಲಯ (ಇಬ್ಬರಿಗೂ ಬಾಲಕರಿಗೂ & ಬಾಲಕಿಯರಿಗೂ), ಸೇಕ್ರೆಡ್ ಹಾರ್ಟ್ ಕಾನ್ವೆಂಟ್ , ಲೊರೆಟೊ ಸ್ಕೂಲ್ ,ವಿವೇಕಾನಂದ ವಿದ್ಯಾ ಮಂದಿರ ಇತ್ಯಾದಿ

ರಾಂಚಿಯು ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ಗುತುತಿಸಿಕೊಂಡಿದೆ,ವಿದ್ಯೆಯ ಕೇಂದ್ರವಾಗಿರುವ ಇದು ತನ್ನ ರಾಜ್ಯದಲ್ಲಷ್ಟೇ ಅಲ್ಲ ದೇಶದ ವಿವಿಧ ಭಾಗಗಳಿಂದ ತನ್ನ ಎಡೆಗೆ ಆಕರ್ಷಿಸುತ್ತದೆ.ಬಹುಮುಖ್ಯವಾಗಿCIP ಸೆಂಟ್ರಲ್ ಇನ್ಸಸ್ಟಿಟ್ಯೂಟ್ ಆಫ್ ಸೈಕಿಯಾಸ್ಟ್ರಿ,BIT ಬಿರ್ಲಾ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ,RIMS ರಾಜೇಂದ್ರ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ,NIFFT ನ್ಯಾಶನಲ್ ಇನಸ್ಟಿಟ್ಯೂಟ್ ಆಫ್ ಫೌಂಡ್ರಿ ಅಂಡ್ ಫೊರ್ಜ್ ಟೆಕ್ನಾಲಾಜಿ,IILMಇಂಡಿಯನ್ ಇನಸ್ಟಿಟ್ಯೂಟ್ ಆಫ್ ಲೀಗಲ್ ಮೆಟ್ರೊಲಾಜಿ.ಬಹುತೇಕ ರಾಂಚಿಯಲ್ಲಿರುವ ಸರ್ಕಾರ ನಡೆಸುವ ಶಾಲೆಗಳು ಜಾರ್ಖಂಡ್ ಅಕಾಡಿಮಿಕ್ ಕೌನ್ಸಿಲ್ ಆಧೀನಕ್ಕೆ ಒಳಪಟ್ಟರೆ ಇನ್ನುಳಿದವುICSE CBSENIOSಮಂಡಳಿಯ ಆಧೀನಕ್ಕೆ ಒಳಪಟ್ಟಿವೆ. ಹಲವಾರು ಕ್ರಿಶ್ಚಿಯನ್ ಶಾಲೆಗಳೂ ಇವೆ ಕಾನ್ವೆಂಟ್ ಗಳು ಅಥವಾ ಜೆಸುಟ್ ಮಿಶನರೀಸ್ ಮೂಲಕ ನಡೆಯುವ ರೊಮನ್ ಕ್ಯಾಥೊಲಿಕ್ ,ಗೊಸ್ಸ್ನೆರ್ ಇವ್ಯಾಂಜುಲಿಕಲ್ ಮತ್ತು ಲುಥ್ರನ್ ಚರ್ಚಸ್ ಅಲ್ಲದೇ ಚರ್ಚಿಸ್ ಆಫ್ ನಾರ್ತ್ ಇಂಡಿಯಾ ಇತ್ಯಾದಿ. ಎರಡು CBSE ಶಿಕ್ಷಣದ ಹೈಯರ್ ಸೆಕೆಂಡರಿ ಸ್ಕೂಲ್ ಗಳು ಅಂದರೆ ಜವಾಹರ್ ವಿದ್ಯಾಮಂದಿರ ಮತ್ತುDPS ಗಳು ಅತ್ಯಾಧುನಿಕ ಶಿಕ್ಷಣ ಕೇಂದ್ರಗಳಾಗಿದ್ದು,ನೂರಾರು ಎಂಜನೀಯರಿಂಗ್ ಮತ್ತು ವೈದ್ಯಕೀಯ ಸಾಮಾನ್ಯ ಪ್ರವೇಶ ಪರೀಕ್ಷೆಗಳು ವೃತ್ತಿಪರರನ್ನು ಸಿದ್ದಗೊಳಿಸುವಲ್ಲಿ ನಿರತವಗಿವೆ. ಸುಮಾರು ಐವತ್ತಕ್ಕೂ ಹೆಚ್ಚು ಜವಾಹರ್ ವಿದ್ಯಾಮಂದಿರದ ಮಕ್ಕಳು ಪ್ರತಿವರ್ಷIIT ಗಳಲ್ಲಿ ಸ್ಥಾನ ಗಿಟ್ಟಿಸುತ್ತಾರೆ.

ಉನ್ನತ ಶಿಕ್ಷಣ

ರಾಂಚಿಯಲ್ಲಿ ಅತ್ಯಧಿಕ ಜನಪ್ರಿಯ ಕಾಲೇಜುಗಳೆಂದರೆ BIT MESRA ಮತ್ತು ನ್ಯಾಶನಲ್ ಇನಸ್ಟಿಟ್ಯೂಟ್ ಆಫ್ ಫೌಂಡ್ರಿ ಅಂಡ್ ಫೊರ್ಜ್ ಟೆಕ್ನಾಲಾಜಿ.ಭಾರತದ ಅತ್ಯುನ್ನತ 10ಮ್ ಎಂಜನೀಯರಿಂಗ್ ಕಾಲೇಜುಗಳಲ್ಲಿ ಅವುಗಳ ಹೆಸರಿದೆ. ರಾಂಚಿಯ ಬಹುತೇಕ ಉನ್ನತ ಶಿಕ್ಷಣದ ಕಾಲೇಜುಗಳು ಮತ್ತು ಇನಸ್ಟಿಟ್ಯೂಟ್ಸ್ ಗಳು ರಾಂಚಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತವೆ. ಅಲ್ಲಿ ಕೃಷಿ ಮತ್ತು ಪಶುವೈದ್ಯಕೀಯ ಕಾಲೇಜುಗಳಿವೆ.ಇವೆಲ್ಲವೂ ಕಂಕೆಯಲ್ಲಿರುವ ಬಿರ್ಸಾ ಅಗ್ರಿಕಲ್ಚರಲ್ ಯುನ್ವರ್ ಸಿಟಿ ICFAI ವಿಶ್ವವಿದ್ಯಾಲಯ ಗಳ ಭಾಗಗಳಾಗಿವೆ.

ಸೇಂಟ್. ಕ್ಸೀವಿಯರ್ಸ್ ಕಾಲೇಜ್, ಯೊಗೊದ ಸತ್ಸಂಗ್ ಕಾಲೇಜ್, ಮಾರ್ವಾರಿ ಬಾಯ್ಸ್ ಕಾಲೇಜ್ , ಬಿರ್ಲಾ ಇನಸ್ಟಿಟ್ಯೂಟ್ಸ್ ಆಫ್ ಟೆಕ್ನಾಲೊಜಿ, ರಾಜೇಂದ್ರ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ, ಸೆಂಟ್ರಲ್ ಇನಸ್ಟಿಟ್ಯೂಟ್ ಆಫ್ ಸೈಕಿಯಾಸ್ಟ್ರಿ, ನ್ಯಾಶನಲ್ ಇನಸ್ಟಿಟ್ಯೂಟ್ ಆಫ್ ಫೌಂಡ್ರಿ ಅಂಡ್ ಫೊರ್ಜ್ ಟೆಕ್ನಾಲೊಜಿ , ಗೊಸ್ಸೆನರ್ ಕಾಲೇಜ್ Archived 2012-09-01 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ದೊರಂಡಾ ಕಾಲೇಜ್ Archived 2010-08-02 ವೇಬ್ಯಾಕ್ ಮೆಷಿನ್ ನಲ್ಲಿ. ಇತ್ಯಾದಿಗಳು ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿವೆ.


ಹೊಸದಾಗಿ ಆರಂಭವಾಗಲಿರುವ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ 2008ರಲ್ಲಿ ಪ್ರಸ್ತಾವನೆಗೊಂಡು ಸದ್ಯ 2010ರಲ್ಲಿ ರಾಂಚಿಯಲ್ಲಿ ಸುಮಾರು 60ವಿದ್ಯಾರ್ಥಿಗಳೊಂದಿಗೆ ಕಾರ್ಯಪ್ರವೃತ್ತವಾಗಲಿದೆ.ಇದು ಕಲ್ಕತ್ತಾದ IIM ಆಧೀನದಲ್ಲಿ ತನ್ನ ಕಾರ್ಯ ಮಾಡಲಿದೆ. ಈಗಾಗಲೇ ಜಾರ್ಖಂಡ್ ಸರ್ಕಾರವು 214ಎಕರೆ ಜಾಗವನ್ನು ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (IIM)ನ್ನು ಕಂಕೆಯಲ್ಲಿ ಸ್ಥಾಪಿಸಲು ಮಂಜೂರು ಮಾಡಿದೆ. ಕೇಂದ್ರ ಸರ್ಕಾರವು ಸುಮಾರು 250ಕೋಟಿ ರೂಪಾಯಿಗಳನ್ನು ಈ ಇನಸ್ಟಿಟ್ಯೂಟ್ ಗೆ ಹಣಕಾಸಿನ ನೆರವು ನೀಡಿದೆ.ಇದು 2010ರಲ್ಲಿ ಅನುಷ್ಟಾನಗೊಳ್ಳುತ್ತಿದೆ.ಕಾನೂನು ವಿಶ್ವವಿದ್ಯಾಲಯವೂ ಬೆಳಕು ಕಾಣುವ ಹಾದಿಯಲ್ಲಿದೆ.

ಸಾರಿಗೆ ಮತ್ತು ಸಾಗಾಟ(ವಿನಿಮಯ)

[ಬದಲಾಯಿಸಿ]

ರಸ್ತೆ

ರಾಂಚಿಯು 2 ರಾಷ್ಟ್ರೀಯ ಹೆದ್ದಾರಿಗಳೊಂದಿಗೆ(NH-23 & 33) ಸಂಪರ್ಕ ಪಡೆದಿದೆ.ಇವುಗಳನ್ನು ಹಾಯ್ದು ಹೋಗುವ NH-75 ಹೆದ್ದಾರಿಯು ಇಲ್ಲಿಯೇ ಉಗಮ ಸ್ಥಾನವೆನಿಸಿದೆ. ಇತ್ತೀಚಿಗೆ ಮೇ 2009ರಲ್ಲಿ ರಾಜ್ಯ ಸರ್ಕಾರವುNHDCಬೆಂಬಲದೊಂದಿಗೆ ಎಲ್ಲಾ ಜಿಲ್ಲಾ ಕೇಂದ್ರ ಸ್ಥಾನಗಳಿಗೆ ರಸ್ತೆ ಸಂಪರ್ಕ ಸಾಧಿಸಲು ಯೋಜನೆಯನ್ನು ರೂಪಿಸಿದೆ.ಈ ರಾಜಧಾನಿಗೆ ವಿವಿಧ ಸ್ಥಳಗಳಿಂದ ಬರಲು ಅನುಕೂಲವಾಗುವಂತೆ 4-ಚತುಷ್ಪತ ಹೆದ್ದಾರಿಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸುತ್ತಿದೆ.

ಈ ರಾಜಧಾನಿ ನಗರದ ವಿಶಿಷ್ಟತೆ ಎಂದರೆ ಇಲ್ಲಿ ಸ್ಥಳೀಯ ಬಸ್ ಸೌಕರ್ಯವಿಲ್ಲ. ನಗರದಲ್ಲಿ ಸಂಚರಿಸುವವರು ಸೈಕಲ್ ರಿಕ್ಷಾ,ಆಟೊ ರಿಕ್ಷಾ ಅಥವಾ ಟ್ಯಾಕ್ಸಿಗಳನ್ನು ಬಾಡಿಗೆ ಪಡೆಯಬೇಕಾಗುತ್ತದೆ.

ರಾಜ್ಯ ಸಾರಿಗೆ ಬಸ್ ನಿಲ್ದಾಣವು ರಾಂಚಿ ರೈಲ್ವೆ ನಿಲ್ದಾಣದ ಬಳಿ ಇದ್ದು ಇಲ್ಲಿಂದ ಬೊಕಾರೊ ಸ್ಟೀಲ್ ಸಿಟಿ,ಜೆಮ್ ಶೆಡ್ ಪುರ್ ,ಪಾಟ್ನಾ,ಗಯಾ,ಭಾಗಲಪುರ್ ,ಅಲಿಪುರದೌರ್ ,ಸಿಲಿಗುರಿ,ಕೊಲ್ಕತ್ತಾ,ಲೊಹರ್ಡಾಗಾ ಅಥವಾ ರೂರ್ಕೆಲಾಗಳಿಗೆ ಪ್ರಯಾಣಿಸಬಹುದಾಗಿದೆ. ರಾಜ್ಯ ಸಾರಿಗೆ ಬಸ್ ನಿಲ್ದಾಣವು ರಾಂಚಿ ರೈಲ್ವೆ ನಿಲ್ದಾಣದ ಬಳಿ ಇದೆ;ಖಾಡ್ ಗರಹಾ ಮತ್ತು ರತು ರೋಡ್ ಇವೆರಡೂ ಖಾಸಗಿ ಬಸ್ ಸಾರಿಗೆಗಳಾಗಿವೆ,ಇವು ಕೂಡಾ ಅದೇ ರೀತಿ ಕಾರ್ಯ ನಿರ್ವಹಿಸುತ್ತವೆ.

ನಗರದಲ್ಲಿನ ವಾಹನ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರವು ರಿಂಗ್ ರೋಡ್ ವೃತ್ತ ರಸ್ತೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಆರಂಭವಾಗಿದೆ;ಇದು ಕಾಲುಭಾಗದಷ್ಟು ರಿಂಗ್ ರೋಡನ್ನು ಒಳಗೊಳ್ಳಲಿದೆ.(23ಕಿ.ಮಿ) ಮೊದಲ ಹಂತದಲ್ಲಿ ರಾಜ್ಯ ಸರ್ಕಾರವು ರಾಜಧಾನಿಯ ಹೊರಭಾಗದ ಪ್ರದೇಶಗಳ ಸಂಪರ್ಕ ಸಾಧಿಸಲಿದೆ-ಅದರಲ್ಲೂ ಮುಖ್ಯವಾಗಿ ಕಥಿ ತಾಂಡ್ (ರತು ಮತ್ತು ರಾಂಚಿ-ಡಾಲ್ಟೊಂಗಂಜ್ ಹೆದ್ದಾರಿ)ಹತ್ತಿರ ಮತ್ತು ಕರ್ಮಾ(ರಾಂಚಿ-ರಾಮಘರ್ ರಸ್ತೆ). ಇದು ರಾಜ್ಯ ರಾಜಧಾನಿಯ ಒಳಭಾಗದ ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ;ಅಂದರೆ ರಾಂಚಿ-ಡಾಲ್ಟೊನ್ ಗಂಜ್ ,ರಾಂಚಿ-ಗುಮ್ಲಾ ಮತ್ತು ರಾಂಚಿ-ರಾಮ್ ಘರ್ ಮಾರ್ಗದಲ್ಲಿ ಸಂಚರಿಸುವ ಬಸ್ ಮತ್ತು ಟ್ರಕ್ ಗಳ ನಗರ ಪ್ರವೇಶವನ್ನು ತಡೆಯುತ್ತದೆ. ರಾಜ್ಯ ರಾಜಧಾನಿಯ ರಹವಾಸಿಗಳು ಅದರಲ್ಲೂ ಮುಖ್ಯವಾಗಿ ಜನನಿಬಿಡ ರತು ರಸ್ತೆ ಮತ್ತು ಕಾಂತಾ ಟೊಲಿ(ಹಜಾರಿಬಾಗ್ ರಸ್ತೆ)ಈ ಯೋಜನೆಯಿಂದ ನಿರಾಳತೆಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಹಲವಾರು ಭೀಕರ ಅಪಘಾತಗಳು ಸಂಭವಿಸಿವೆ. ಮೂಲ ಯೋಜನೆಯಲ್ಲಿ ಎರಡು ಫ್ಲೈ ಒವರ್ (ಮೇಲ್ಸೇತುವೆ) ಗಳನ್ನು ಮಾಡಲಾಗುತ್ತಿದೆ.ಒಂದು ಕಥಿ ತಾಂಡ್ (ಇದು ರಾಂಚಿ-ಡಾಲ್ಟೊಂಗಂಜ್ ಯ NH-75ನಲ್ಲಿದೆ.)ಇನ್ನೊಂದು ಕರ್ಮಾ (NH-33)ನಲ್ಲಿ ಮಾಡಲಾಗುತ್ತಿದೆ. ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುಮತಿಯೊಂದಿಗೆ ಈ ಯೋಜನೆಗಳನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಒಟ್ಟಾರೆ ರಿಂಗ್ (ವರ್ತುಳ)ರಸ್ತೆಯ ಉದ್ದವು 85ಕಿ.ಮಿ ಆಗಿದೆ.

ರೈಲ್ವೆ

ರೈಲ್ವೆ ವಲಯದಲ್ಲಿ ರಾಂಚಿಯು 2006-9ರ ಮಧ್ಯದಲ್ಲಿ ಕೆಲಮಟ್ಟಿಗೆ ಅಭಿವೃದ್ಧಿ ಕಂಡಿದೆ. ವಾರ್ಷಿಕ ರೈಲ್ವೆ ಮುಂಗಡಪತ್ರದಲ್ಲಿ ರೈಲ್ವೆ ಅಭಿವೃದ್ಧಿಗೆ ತಕ್ಕಂತೆ ಬೇಡಿಕೆ ಮುಂದಿಡಲಾಗಿದೆ. ಸದ್ಯ ರಾಂಚಿಯು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಪಡೆದಿದೆ,ನವ ದೆಹಲಿ,ಮುಂಬಯಿ,ಕೊಲ್ಕತಾ,ಅಮ್ದಾಬಾದ್ ,ಜಬಲ್ ಪುರ್ ,ಲಖ್ನೌ,ಪುಣೆ ಇತ್ಯಾದಿ.ಆದರೆ ಪ್ರಮುಖ ನಗರಗಳೊಂದಿಗೆ ನೇರ ಸಂಪರ್ಕ ಹೊಂದಿಲ್ಲ,ಅವೆಂದರೆ ಭೂಪಾಲ್ ,ಇಂದೋರ್ ,ಜೈಪುರ್ ಹಾಗು ಇನ್ನಿತರ ರಾಜ್ಯ ರಾಜಧಾನಿಗಳು ಸೇರಿವೆ.

ನಗರದಲ್ಲಿನ ರೈಲ್ವೆ ನಿಲ್ದಾಣಗಳೆಂದರೆ:ತಾತಿಸಿಲ್ವೈ,ನಾಮ್ ಕುಮ್ ,ರಾಂಚಿ ಜಂಕ್ಷನ್ ,ಆರ್ಗೊರಾ ಮತ್ತು ಹತಿಯಾ.

ವಿಮಾನಯಾನ

ರಾಂಚಿಯು ಸ್ಥಳೀಯ ವಿಮಾನ ಸಾರಿಗೆ ಹೊಂದಿದೆ-ಬಿರ್ಸಾ ಮುಂಡಾ ಏರ್ ಪೋರ್ಟ್ (Code: IXR)ಏರ್ ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ ಇದರ ಆಡಳಿತ ನಿರ್ವಹಿಸುತ್ತದೆ. ನಗರದ ದಕ್ಷಿಣ ಭಾಗದ ಹಿನೂವಿನಲ್ಲಿ ವಿಮಾನ ನಿಲ್ದಾಣವು ಸುಮಾರು 7ಕಿ.ಮಿ ದೂರದಲ್ಲಿದೆ. ಏಕೈಕ ರನ್ ವೇ ಹೊಂದಿರುವ ವಿಮಾನ ನಿಲ್ದಾಣವು 8900 ಅಡಿx 150ಅಡಿ ಉದ್ದ x ಅಗಲವಿದೆ.ವಿಮಾನ ಸಂಚಾರ ನಿಯಂತ್ರಿಸುವ ತಂತ್ರಜ್ಞಾನ ಇಲ್ಲಿದೆ.ಅವುಗಳೆಂದರೆ HIRLಮತ್ತು PAPIASPL ಮತ್ತು ಎಪ್ರೊನ್ ಫ್ಲಡ್ ಲೈಟ್ಸ್ ಗಳ ವಿಧಾನಗಳನ್ನು ಅಳವಡಿಸಲಾಗಿದೆ. ವಿಮಾನ ಸಾರಿಗೆಗಳು;ಇಂಡಿಯನ್ ಏರ್ ಲೈನ್ಸ್ ,ಜೆಟ್ ಲೈಟ್ ,ಕಿಂಗ್ ಫಿಶರ್ ರೆಡ್,ಏರ್ ಡೆಕ್ಕನ್ ಮತ್ತು MDLR ಏರ್ ಲೈನ್ಸ್. ರಾಂಚಿಯು ಎಲ್ಲಾ ಪ್ರಮುಖ ನಗರಗಳಿಗೆ ವಿಮಾನ ಸಾರಿಗೆ ಸಂಪರ್ಕ ಸಾಧಿಸಿದೆ ಉದಾಹರಣೆಗೆ,ಮುಂಬಯಿ,ದೆಹಲಿ,ಕೊಲ್ಕತ್ತಾ,ಚಂಡೀಗಢ,ಪಾಟ್ನಾ,ಭುವನೇಶ್ವರ್ ,ಜೆಮ್ ಶೆಡ್ ಪುರ್ ,ರಾಯ್ ಪುರ್ ,ಪುಣೆ,ಹೈದ್ರಾಬಾದ್ ,ಬೆಂಗಳೂರು,ಅಹಮದಾಬಾದ್ ಮತ್ತು ಚೆನ್ನೈ.

ವ್ಯಾಪಾರ, ವಾಣಿಜ್ಯ, ಮತ್ತು ಕೈಗಾರಿಕೆ

[ಬದಲಾಯಿಸಿ]

ಬ್ರಿಟಿಶ್ ರಾಜ್ ನಲ್ಲಿ ಇದು ಮಹತ್ವದ ಆಡಳಿತ ಮತ್ತು ಮಿಲಿಟರಿಯ ಕೇಂದ್ರವೆನಿಸಿತ್ತು.ನಂತರ ರಾಂಚಿಯು ವ್ಯಾಪಾರ ಮತ್ತು ವಾಣಿಜ್ಯದ ಪ್ರಮುಖ ಕೇಂದ್ರವಾಗಿ ಪ್ರಗತಿ ಕಂಡಿತು.ರೇಶ್ಮೆ ಕೈಗಾರಿಕೆ ಮತ್ತು ಅರಗು ಕಾರ್ಖಾನೆಗಳು ಪ್ರಸಿದ್ದವಾಗಿವೆ. ರಾಂಚಿಯ ಸುತ್ತಮುತ್ತಲಿನ ಹಳ್ಳಿಗಳನ್ನು ಜಾರ್ಖಂಡ್ ನ "ತರಕಾರಿಗಳ ಅಂಗಳ"ಎನ್ನಲಾಗುತ್ತದೆ.ಇಲ್ಲಿನ ಹಸಿರು ತರಕಾರಿಗಳನ್ನು ಟ್ರಕ್ ಗಳು ನಗರದಿಂದ ಜಾರ್ಖಂಡ್ ನ ವಿವಿಧ ಭಾಗಗಳಿಗೆ ರಫ್ತು ಮಾಡಲಾಗುತ್ತದೆ.ಅಲ್ಲದೇ ಬಿಹಾರ್ ಮತ್ತು ಕೊಲ್ಕತ್ತಾಗಳಿಗೂ ರವಾನೆ ಮಾಡಲಾಗುತ್ತದೆ.

ಭಾರತಕ್ಕೆ ಸ್ವತಂತ್ರ ದೊರೆತ ನಂತರ ರಾಂಚಿಯು ಪ್ರಗತಿ ಹೊಂದಲು ಆರಂಭಿಸಿತು.ಅಸಂಖ್ಯಾತ ಕೈಗಾರಿಕಾ ಸೌಲಭ್ಯಗಳನ್ನು ನಗರದ ಒಳಗೆ ಮತ್ತು ಸುತ್ತಮುತ್ತಲು ಪಡೆದಿರುವ ಅದು ಮಹತ್ವದ ಕೈಗಾರಿಕಾ ಕೇಂದ್ರವಾಗಿದೆ. ಇನ್ನುಳಿದ ಪ್ರದೇಶಗಳನ್ನು ಹೊರತುಪಡಿಸಿ ಕೈಗಾರಿಕಾ ನಗರಗಳಾದ ಜೆಮ್ ಶೆಡ್ ಪುರ್ ಮತ್ತು ಬೊಕಾರೊಗಳು ಜಾರ್ಖಂಡ್ ನ ಕೈಗಾರಿಕರಣದ ಪೂರ್ಣಪ್ರಮಾಣವನ್ನು ನೀಡಿವೆ. ರಾಂಚಿಯ ತಾಂತ್ರಿಕ-ಉದ್ದಿಮೆ ಸೌಲಭ್ಯಗಳು,ಹೇವಿ ಎಂಜಿನಿಯರಿಂಗ್ ಕಾರ್ಪೊರೇಶನ್ ,ಇದು ಆಧುನಿಕ ಭಾರತದ ಕೈಗಾರಿಕೆಗಳಿಗೆ ಮೂಲವಾಗಿದೆ.MECONಇದು ಆಧುನಿಕತೆ ಮತ್ತು ವಿಸ್ತರಣೆಗೆ ಒತ್ತುಕೊಟ್ಟಿದೆ.ಉಕ್ಕು ಸ್ಥಾವರಗಳು ಅಲ್ಲಿನ ಪ್ರಮುಖ ಕೈಗಾರಿಕಾ ವಲಯಗಳಾಗಿ ಮಾರ್ಪಟ್ಟಿವೆ.ಉದಾಹರಣೆಗಾಗಿ CCL, CMPDI ಮತ್ತು ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾಇವುಗಳು ಬಹಳಷ್ಟು ಮಹತ್ವ ಪಡೆದಿವೆ.

ಸ್ಟೀಲ್ ಆಥಾರಟಿ ಆಫ್ ಇಂಡಿಯಾ ಲಿಮಿಟೆಡ್ (SAIL)ಇಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರವನ್ನು 1974ರಲ್ಲಿ ಸ್ಥಾಪಿಸಿದೆ.ಇಂದು ಅದು 350 ವಿಜ್ಞಾನಿಗಳನ್ನು ಹೊಂದಿರುವ; ದೇಶದಲ್ಲೇ ಅತಿ ದೊಡ್ಡ ಉಕ್ಕು ಸಂಶೋಧನಾ ಕೇಂದ್ರವಾಗಿದೆ.ಅದು SAIL ನ ಎಲ್ಲಾ ಸಂಶೋಧನೆ ಅಭಿವೃದ್ಧಿಗಳನಲ್ಲದೇ ಇನ್ನುಳಿದ ಕೈಗಾರಿಕೆಗಳಿಗೆ ಒಪ್ಪಂದದ ಆಧಾರದ ಮೇರೆಗೆ ವೈಜ್ಞಾನಿಕ ಸಲಹೆಗಳನ್ನು ನೀಡಲು ಶಕ್ತವಾಗಿದೆ.

ಸ್ಟೀಲ್ ವೈರ್ ಮತ್ತು ವೈರ್ ರೋಪ್ (ಹಗ್ಗ)ಗಳನ್ನು ಉತ್ಪಾದಿಸುವಲ್ಲಿ ಆದ್ಯ ಪ್ರವರ್ತಕವಾಗಿರುವ ಉಷಾ ಮಾರ್ಟಿನ್ ಲಿಮಿಟೆಡ್ ಕಂಪನಿಯು ತಾತಿಸಿಲ್ವೈನಲ್ಲಿದೆ.ಇದು ರಾಂಚಿ ನಗರದಿಂದ ಸುಮಾರು 15ಕಿ.ಮಿ ದೂರದಲ್ಲಿದೆ.

ಆರೋಗ್ಯ ಸಂರಕ್ಷಣಾ ಸೌಕರ್ಯಗಳು ಮತ್ತು ಆಸ್ಪತ್ರೆಗಳು

[ಬದಲಾಯಿಸಿ]

ನಗರವು ತನ್ನ ಸುಮಾರು 400ಕಿ.ಮಿಯ ಪರಿಧಿಯಲ್ಲಿನ ಆರೋಗ್ಯ ಸೌಲಭ್ಯಗಳಿಗೆ ಸಾಂಪ್ರದಾಯಿಕವಾಗಿ ಪ್ರಮುಖ ಕೇಂದ್ರವೆನಿಸಿದೆ. ಹಲವಾರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ನಗರದಲ್ಲಿ ಕಾರ್ಯಪ್ರವೃತ್ತವಾಗಿವೆ.

  • ರಾಜೇಂದ್ರ ಮೆಡಿಕಲ್ ಕಾಲೇಜ್ ಇಂದು ರಾಜೇಂದ್ರ ಇನ್ ಸ್ಟಿಟುಟ್ ಆಫ್ ಮೆಡಿಕಲ್ ಸೈನ್ಸ್ ,RIMS ಎಂದು ಹೆಸರಾಗಿದ್ದು ರಾಜ್ಯದ ಮೂರು ಅತಿ ದೊಡ್ಡ ಮೆಡಿಕಲ್ ಕಾಲೇಜುಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ರೋಗ ಪರೀಕ್ಷಣಾ ಸೌಕರ್ಯಗಳಲ್ಲಿ ನರರೋಗತಪಾಸಣಾ ಕೇಂದ್ರವು ಇಲ್ಲಿನ ವೈಶಿಷ್ಟ್ಯವೆನಿಸಿದೆ. ಭಾರತೀಯ ಕಾರ್ಪೊರೇಟ್ ಚೇನ್ ಹಾಸ್ಪಿಟಲ್ ಆಗಿರುವ (ಅಪೊಲೊ ಹಾಸ್ಪಿಟಲ್ಸ್ ಸಮೂಹ)ಇಲ್ಲಿ ಅಬ್ದುರ್ ರಜಾಕೆ ಅನ್ಸಾರಿ ಮೆಮೊರಿಯಲ್ ಹಾಸ್ಪಿಟಲ್ (ARAM)ಎಂಬ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತದೆ.ದೇಶದಲ್ಲಿನ ಸುಪರ್ ಸ್ಪೆಸಿಯಾಲಿಟಿ ಆಸ್ಪತ್ರೆಗಳಲ್ಲಿ ಇದು ಒಂದಾಗಿದೆ. ಇದು 1996ರಲ್ಲಿ ಚೋಟಾನಗರ್ ರೀಜನಲ್ ಹ್ಯಾಂಡ್ ಲೂಮ್ ವಿವರ್ಸ್ ಕೊ-ಆಪ್ ರೇಟಿವ್ ಯುನಿಯನ್ ಲಿಮಿಟೆಡ್ ಮತ್ತು ಅಬ್ದುರ್ ರಜಾಕೆ ಅನ್ಸಾರಿ ಅವರ ಕುಟುಂಬದ ಸದಸ್ಯರು ಸೇರಿ ಇದನ್ನು ಸ್ಥಾಪಿಸಿದ್ದಾರೆ;ಇದು ನಗರದ ಹೊರವಲಯದಲ್ಲಿದೆ.
  • ರಾಂಚಿಯಲ್ಲಿರುವ ಮಾನಸಿಕ ರೋಗ ನಿವಾರಣಾ ಕೇಂದ್ರಗಳು ಭಾರತದಲ್ಲೇ ಪ್ರಖ್ಯಾತಿ ಪಡೆದಿವೆ. ರಾಂಚಿಯ ಕಂಕೆಯಲ್ಲಿಯೂ ಸಹ ಮಾನಸಿಕ ಅಸ್ವಸ್ಥರಿಗೆ ಅತ್ಯಧಿಕ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಪ್ರಮುಖ ಮೂರು ಆಸ್ಪತ್ರೆಗಳಿವೆ.
  1. ಸೆಂಟ್ರಲ್ ಇನ್ ಸ್ಟಿಟುಟ್ ಆಫ್ ಸೈಕಿಯಾಸ್ಟ್ರಿ, ಕಂಕೆ
  2. RINPAS, ಕಂಕೆ[clarification needed]

ಪ್ರವಾಸಿಗರ ಆಕರ್ಷಣೆಗಳು

[ಬದಲಾಯಿಸಿ]

ದೇವಾಲಯಗಳು

[ಬದಲಾಯಿಸಿ]
ಜೊನ್ಹಾ ಫಾಲ್ಸ್- ಪ್ರವಾಸಿಗಳಿಗೆ ಆಕರ್ಷಣೀಯ ತಾಣ ನಗರದಿಂದ 40ಕಿ.ಮೀ ದೂರದಲ್ಲಿದೆ.
  • ಕಾಳಿ ಮಾತೆಯ ಪೂಜೆಗಾಗಿ ಇರುವ ರಾಜ್ರಪ್ಪಾ ಮಂದಿರ್ ರಾಂಚಿಯಿಂದ 65ಕಿ.ಮಿ ದೂರದಲ್ಲಿದೆ.ಇದನ್ನು ಚಿನ್ನಮಸ್ತಿಕಾ ಎಂದು ಕರೆಯಲಾಗುತ್ತದೆ. ಇದೂ ಕೂಡಾ ಪ್ರವಾಸಿಗರ ಆಕರ್ಷಕ ತಾಣವಾಗಿದೆ.ಅಲ್ಲದೇ ಪಿಕ್ ನಿಕ್ ತಾಣವೂ ಹೌದು.
  • ಪಹರಿ ದೇವಾಲಯ - ನಗರ ಮಧ್ಯ ಭಾಗದಲ್ಲಿದೆ.
  • ದುರ್ಗಾ ಬಡಿ - ನಗರ ಮಧ್ಯದ ಫಿರಯಾಲಾಲ್ ಚೌಕ್ ಬಳಿ ಇದೆ.
  • ಜಗನ್ನಾಥಪುರಿ ದೇವಾಲಯ -ಸುಮಾರು 300 ವರ್ಷಗಳ ಹಿಂದೆ ಇದನ್ನು ಪುರಿ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ,ಇದು ರಥೋತ್ಸವಕ್ಕೆ ಪ್ರಸಿದ್ದವಾಗಿದೆ.(ರಥ ಯಾತ್ರೆ) ದೇಶದ ನಾನಾ ಭಾಗದಿಂದ ಜನರು ಇದರ ವೀಕ್ಷಣೆಗೆ ಬರುತ್ತಾರೆ.
  • ಸೂರ್ಯ ದೇವಾಲಯ -ರಾಂಚಿಯಿಂದ 38 ಕಿ.ಮಿ ದೂರದಲ್ಲಿ ರಾಂಚಿ-ಟಾಟಾ ರಾಷ್ಟ್ರೀಯ ಹೆದ್ದಾರ್ ಮೇಲಿದೆ.
  • ಪ್ರಶಾಂತ ಅಥವಾ ಶಿಖರ್ಜೀ- ಗಿರ್ಡಿ ಜಿಲ್ಲೆಯಲ್ಲಿರುವ ಜೈನ್ ಯಾತ್ರಾ ಕ್ಷೇತ್ರ,ರಾಂಚಿಯಿಂದ 200ಕಿ.ಮಿ ದೂರದಲ್ಲಿದೆ.
  • ರಾಮಕೃಷ್ಣ ಮಿಶನ್ ಮತ್ತು ಆಶ್ರಮ, ಮೊರಾಬಾದಿ
  • ದೇವ್ರಿ ದೇವಾಲಯ - ರಾಂಚಿಯಿಂದ 58 ಕಿ.ಮಿ ದೂರವಿರುವ ಇದು ರಾಂಚಿ-ಟಾಟಾ NH 33,ನಲ್ಲಿದೆ.ಎಂ.ಎಸ್ ಧೋನಿ ಇಲ್ಲಿಗೆ ಆಗಾಗ ಭೇಟಿ ನೀಡುವುದು ವಾಡಿಕೆ.
  • ದೊರಂಡಾ ಜೈನ್ ಮಂದಿರ್ - ರಾಂಚಿಯಿಂದ 4 ಕಿ.ಮಿ.
  • ಯೊಗೊದಾ ಸತ್ಸಂಗ್ ಸೊಸೈಟಿ ಆಫ್ ಇಂಡಿಯಾ ರಾಂಚಿಯ ರೈಲ್ವೆ ನಿಲ್ದಾಣದಿಂದ 200ಮೀಟರ್ ದೂರದಲ್ಲಿದೆ.ಇದನ್ನು ಪರಮಹಂಸ ಯೊಗಾನಂದ ಸ್ಥಾಪಿಸಿದ್ದಾರೆ.
  • ಬುದ್ದ ವಿಹಾರ , ಚೋಟಾನಾಗಪುರ್ ಬುದ್ದ ಸೊಸೈಟಿ, ನೇಪಾಳ್ ಹೌಸ್, ದೊರಂಡಾ ರಾಂಚಿ.

ಹಿರಿಣಿ ಫಾಲ್ಸ್ ರಾಂಚಿ(ಜಾರ್ಖಂಡ್ )ಪ್ರಖ್ಯಾತ ಜಲಪಾತಗಳಲ್ಲೊಂದು

  • ತಾಪೊಬಾನ್ ಮಂದಿರ್ -ರಾಂಚಿ ಜಂಕ್ಷನ್ ನಿಂದ 1ಕಿ.ಮಿ,ಅಲ್ಲಿಯೇ ಹತ್ತಿರದಲ್ಲಿ ನಿಬರಾನ್ ಪುರ್ ದ ಸೇತುವೆ ಇದೆ.
  • ಸ್ವರ್ಣ ರೇಖಾ - ಪಿಸ್ಕಾ ನಗರಿ ಎಂಬ ಉತ್ತಮ ಪಟ್ಟಣದಲ್ಲಿದ್ದು ಇದು ರಾಂಚಿಯಿಂದ 15 ಕಿ.ಮಿ ದೂರದಲ್ಲಿದೆ.

ಇಲ್ಲಿ ಅನೇಕ ಜಲಪಾತಗಳಿವೆ:ಹುಂಡ್ರು,ಹಿರಿಣಿ,ದಾಸಮ್ ,ಪಂಚ್ ಘಾಗ್ ,ಜೊನ್ಹಾ,ಇತ್ಯಾದಿ ಪ್ರಮುಖ ಆಕರ್ಷಣೆಯ ಕೇಂದ್ರಗಳಾಗಿವೆ.

ಹಬ್ಬಹರಿದಿನದ ಆಚರಣೆ

[ಬದಲಾಯಿಸಿ]

ರಾಂಚಿ ಹಲವಾರು ಜಾತಿ,ಜನಾಂಗ ಮತ್ತು ವಿಭಿನ್ನ ವರ್ಗಗಳಿಗೆ ಆಶ್ರಯವಾಗಿದೆ. ಎಲ್ಲಾ ಹಬ್ಬಗಳ ನ್ನುಹರುಷ,ಉಲ್ಲಾಸ ಮತ್ತು ವೈಭವದಿಂದ ಸೌಹಾರ್ದಯುತವಾಗಿ ಆಚರಿಸಲಾಗುತ್ತದೆ. ರಜಾ ದಿನಗಳಲ್ಲಿ ಜನರು ವಿವಿಧ ಪ್ರದೇಶಗಳಿಂದ ಇಲ್ಲಿಗೆ ಭೇಟಿ ನೀಡಿ ಮನರಂಜನೆಗೆ ಕಾಲ ಕಲೆಯುತ್ತಾರೆ.

ಉದ್ಯಾನಗಳು ಮತ್ತು ವಿಶ್ರಾಂತಿ ತಾಣಗಳು

[ಬದಲಾಯಿಸಿ]

ರಾಂಚಿಯು ಅತ್ಯಂತ ಆಕರ್ಷಣೀಯ ಜಲಪಾತಗಳುಳ್ಳ ನಗರ.

  • ನಕ್ಷತ್ರ ವಾನ್ - ನಗರದ ಮಧ್ಯದಲ್ಲಿ ರಾಜಭವನದ ಹತ್ತಿರ, (ರಾಜ್ಯಪಾಲರ ನಿವಾಸ)
  • ಅಕ್ವಾ ವರ್ಲ್ಡ್ (ಮಛಿಲಿ ಘರ್)- ನಕ್ಷತ್ರ ವಾನ್ ಬಳಿ -ನಗರದ ಮಧ್ಯದಲ್ಲಿ ರಾಜಭವನದ ಹತ್ತಿರ
  • ಬಿರ್ಸಾ ಜ್ಯುವಾಲಾಜಿಕಲ್ ಪಾರ್ಕ್- ರಾಂಚಿಯಿಂದ 14 ಕಿ.ಮಿ [clarification needed]
  • ನೈಟ್ ಸಫಾರಿ- ರಾಂಚಿಯಿಂದ 14 ಕಿ.ಮಿ[clarification needed]
  • ಚಿಗುರೆ ಉದ್ಯಾನವನ- ರಾಂಚಿಯಿಂದ 16 ಕಿ.ಮಿ ರಾಂಚಿ-ಖುಂಟಿ ರಸ್ತೆ [clarification needed]
  • ಸಿದ್ದು ಕಾನ್ಹು ಪಾರ್ಕ್- ನಗರದ ಮಧ್ಯಭಾಗದಲ್ಲಿ
  • ಡಾ. ಝಾಕಿರ್ ಹುಸೇನ್ ಪಾರ್ಕ್- ನಗರದ ಮಧ್ಯಭಾಗದಲ್ಲಿ
  • ರಾಂಚಿ ಹಿಲ್/ ರಿಕಿ ಬುರು- ಪಹರಿ ಬಾಬಾ ದೇವಾಲಯ- ನಗರದ ಮಧ್ಯಭಾಗದಲ್ಲಿ.
  • ಟ್ಯಾಗೋರ್ ಹಿಲ್- ಮೊರಾಬಾದಿ, ನಗರದ ಮಧ್ಯಭಾಗದಿಂದ 5 ಕಿ.ಮಿ
  • ರಾಕ್ ಗಾರ್ಡನ್- ಕಂಕೆ ರೋಡ್, ನಗರದ ಮಧ್ಯಭಾಗದಿಂದ 4 ಕಿ.ಮಿ[clarification needed]
  • ಫನ್ ಕ್ಯಾಸ್ಟಲ್- ರತು, ರಾಂಚಿಯಿಂದ 7 ಕಿ.ಮಿ [clarification needed]
  • ಮೊಸಳೆ ಫಾರ್ಮ್- ಒರ್ಮಂಝಿ, ರಾಂಚಿಯಿಂದ19 ಕಿ.ಮಿ[clarification needed]
  • ರಾಂಚಿ ಸರೋವರ- ನಗರದ ಮಧ್ಯಭಾಗದಲ್ಲಿ[clarification needed]
  • ಧೃವ ಡ್ಯಾಮ್ [clarification needed]
  • ಜೊನ್ಹಾ ಫಾಲ್ಸ್ - ರಾಂಚಿಯಿಂದ 35 ಕಿ.ಮಿ
  • ಹಿರ್ಣಿ & ಪಂಚ್ ಘಾಗ್ ಫಾಲ್ಸ್ ನಗರದ ಮಧ್ಯಭಾಗದಿಂದ ಸುಮಾರು 40-45 ಕಿ.ಮಿ ದೂರ,ಉತ್ತಮ ಪಿಕ್ ನಿಕ್ ತಾಣ.

ಇವುಗಳಲ್ಲದೇ ಇನ್ನೂ ಅನೇಕ ಉದ್ಯಾನ ವನಗಳಿವೆ(ಬಹುತೇಕವುಗಳಲ್ಲಿ ಉಚಿತ ಪ್ರವೇಶ).ಆದರೆ ಹಲವಾರು ತೆರೆದ ಆಟದ ಮೈದಾನಗಳು ಸರ್ಕಾರದ ಆಡಳಿತದ ಹಸ್ತಕ್ಷೇಪದಿಂದ ಮರೆಯಾಗುತ್ತಿವೆ.ಸರ್ಕಾರಿ ಜಮೀನುಗಳ ಆಕ್ರಮಿಸುವಿಕೆ [ಸೂಕ್ತ ಉಲ್ಲೇಖನ ಬೇಕು]ಅವ್ಯಾಹತವಾಗಿದೆ.

ಮಾಧ್ಯಮ

[ಬದಲಾಯಿಸಿ]

ನಗರದಲ್ಲಿ ಹಲವಾರು ಸುದ್ದಿ ಪತ್ರಿಕೆಗಳಿವೆ,ಇದರಲ್ಲಿ ಅತ್ಯಂತ ಹಳೆಯ ಮತ್ತು ಹೆಚ್ಚು ಪ್ರಸಾರ ಹೊಂದಿದ್ದೆಂದರೆ ರಾಂಚಿ ಎಕ್ಸ್ ಪ್ರೆಸ್ (?). ಪ್ರಸಾರ ಹಿಚ್ಚಿರುವ ಹಿಂದೂಸ್ತಾನ್ , ದೈನಿಕ್ ಜಾಗರಣ್ , ಪ್ರಭಾತ್ ಖಬರ್ ಮತ್ತು ಆಜ್ ಡೈಲಿ . ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ , ಹಿಂದೂಸ್ತಾನ್ ಟೈಮ್ಸ್ ಮತ್ತು ದಿ ಪಯೋನರ್ ಉತ್ತಮ ಪ್ರಸರ ಹೊಂದಿವೆ.ಬಂಗಾಳಿ ದಿನಪತ್ರಿಕೆಗಳಾದ ಆನಂದ ಬಜಾರ್ ಪತ್ರಿಕಾ ಮತ್ತು ಬಾರ್ಟ್ ಮನ್.

ಕೆಲವೊಮ್ಮೆ ಸುದ್ದಿ ಚಾನಲ್ ಗಳು ಕೇಬಲ್ TV ಮೂಲಕ ಜಾರ್ಖಂಡ್ ನಿವ್ಸ್ 24 ,PBL ನಜರ್ ಅಂಡ್ ಜಾರ್ಖಂಡ್ TV.ಇದೂಲ್ಲದೇ ಸ್ಥಳೀಯವಾಗಿ ETV ಬಿಹಾರ/ಜಾರ್ಖಂಡ್ ಅಂಡ್ ಸಹಾರಾ ಸಮಯ ಬಿಹಾರ್ /ಜಾರ್ಖಂಡ್ ಇಂಡಿಯನ್ ನಿವ್ಸ್ ನೆಟ್ ವರ್ಕ್ ಗಳಿವೆ.

AIR (ಆಲ್ ಇಂಡಿಯಾ ರೇಡಿಯೊ)ಅಲ್ಲದೇ ವಿವಿಧ ಭಾರತಿ 103,3 ಎಫ್ .ಎಮ್ ,ರೇಡಿಯೊ ಚಾನಲ್ಸ್ ಇತ್ಯಾದಿ. ರೇಡಿಯೊ ಮಂತ್ರ 91.9ಎಫ್ .ಎಂ...(ಲೈಫ್ ಕಾ ಮಂತ್ರ)ಇದು ದೈನಿಕ್ ಜಾಗರಣ ಹೌಸ್ ನಿಂದ ನದೆಸಲ್ಪಡುತ್ತದೆ. ಬಿಗ್ 92.7 ಎಫ್ ,ಎಂ ಇದು ಅನಿಲ ಅಂಬಾನಿ ಮತ್ತು ಆಡ್ ಲ್ಯಾಬ್ಸ್ ನವರ ಜಂಟಿ ಹೂಡಿಕೆ.104.8ರೇಡಿಯೊ ಧೂಮ್ ನ್ನು ಪ್ರಭಾತ್ ಖಬರ್ ಇತ್ತೀಚಿನ ದಿನಗಳಲ್ಲಿ ನಡೆಸುತ್ತಿದೆ.ಅಲ್ಲದೇB.A.Gಗ್ರುಪ್ ನ 106.4 ಎಫ್ ,ಎಂ ರೇಡಿಯಿ ಧಮಾಲ್ ರಾಂಚಿಯಲ್ಲಿನ Fm ಚಾನಲ್ ಜಾಲವನ್ನು ನಿರ್ವಹಿಸುತ್ತದೆ.

ಕ್ರೀಡೆಗಳು

[ಬದಲಾಯಿಸಿ]

ಕ್ರಿಕೆಟ್ ರಾಂಚಿಯ ಜನಪ್ರಿಯ ಕ್ರೀಡೆ ಭಾರತದ ಟೆಸ್ಟ್ ,ಏಕದಿನ ಪಂದ್ಯ ಮತ್ತು T20 ತಂಡದ ನಾಯಕನಾಗಿರುವ MS ಧೋನಿ ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದಿದ್ದಾರೆ.

ಹಾಕಿ ಆಟದ ಸೌಲಭ್ಯಗಳಿಗೆ ನಗರವು ಉತ್ತಮ ವಾತಾವರಣ ನಿರ್ಮಿಸಿದೆ.ಇತ್ತೀಚಿಗೆ ನೂತನವಾಗಿ ನಿರ್ಮಿಸಿದ ಆಸ್ಟ್ರೊ ಟರ್ಫ್ ಸ್ಟೇಡಿಯಮ್ ಇದಕ್ಕೆ ಸಾಕ್ಷಿ. ಹಲವಾರು ಕ್ರೀಡಾಪಟುಗಳು ಅದರಲ್ಲೂ ಮಹಿಳಾ ಕ್ರೀಡಾಪಟುಗಳು ಜಾರ್ಖಂಡ್ ನಿಂದ ದೇಶವನ್ನು ಪ್ರತಿನಿಧಿಸಿದ್ದಾರೆ. ಜೈಪಾಲ್ ಮುಂಡಾ ಅವರು 1928ರ ಆಮ್ ಸ್ಟೆರ್ ಡ್ಯಾಮ್ ಒಲಿಂಪಿಕ್ಸ್ ನ ಭಾರತದ ಹಾಕಿ ತಂಡದ ನಾಯಕರಾಗಿದ್ದರು,ಆದರೆ ಅವರು ಫೈನಲ್ ಪಂದ್ಯದಲ್ಲಿ ಆಡಲಾಗಲಿಲ್ಲ.

- ಆಕಾಶ್ ಗೊಶಲ್ , Iಭಾರತೀಯ ಸರ್ಕಸ್ ಕಲಾವಿದ ಇಲ್ಲೇ ಜನಿಸಿದ್ದು. ಪ್ರಸಿದ್ದ ಸರ್ಕಸ್ ಕಲಾವಿದರಾದ ಫ್ರೆಂಚ್ ನ ಥೆಯೊ ಡುಮೊಥೆಯರ್ ಮತ್ತು ಈಜಿಪ್ತ್ ನ ಆಡಮ್ ಎಲ್ಕಾಡೆಮ್ ಅವರೊಂದಿಗೆ ಆತ ಕೆಲಸ ಮಾಡಿದ್ದಾರೆ.

SS ರಾಂಚಿ

[ಬದಲಾಯಿಸಿ]

ದಿ ಎಸ್ .ಎಸ್ ರಾಂಚಿ ಬ್ರಿಟಿಶ್ ಸಾರಿಗೆ ಮತ್ತು ವಸ್ತು ಸಾಗಾಟದ ಸಮುದ್ರ ಮಾರ್ಗದ ಸಾರಿಗೆಯಾಗಿದೆ. ವಿಶ್ವ ಮಹಾಯುದ್ಧ IIರಲ್ಲಿ ಅದು ಶಸ್ತ್ರಾಸ್ತ್ರ ಸಾಗಾಟ ಮತ್ತು HMS ರಾಂಚಿ ಯಾಗಿ ಪಾಲ್ಗೊಂಡಿತ್ತು. ಇದು ಪೆನಿನ್ಸುಲರ್ & ಒರಿಂಟಲ್ ಸ್ಟೀಮ್ ನೇವಿಗೇಶನ್ ಕಂಪನಿ(P&O)ಗಾಗಿ ನಿರ್ಮಿಸಲ್ಪಟ್ಟಿತು.ಇಂಗ್ಲೆಂಡಿಹಾಥೊರ್ನ್ ಲೆಸ್ಲಿ &ಕಂ ಯಿಂದ ನ್ಯುಕ್ಯಾಸ್ಟಲ್ ಅಪಾನ್ ಟೈನೆನಲ್ಲಿ ಇದನ್ನು ಸಿದ್ದಪಡಿಸಲಾಯಿತು.ಇದರ ಕಾರ್ಯಾರಂಭವು ಜನವರಿ24,1925ರಲ್ಲಾಯಿತು. ರಾಂಚಿ ಎಂಬ ನಾಮಕರಣದೊಂದಿಗೆ ಅದು ನಿಯಮಿತವಾಗಿ ಇಂಗ್ಲೆಂಡ್ ಮತ್ತು ಬಾಂಬೆ,ಭಾರತದ ನಡುವೆ ಸಂಚರಿಸಿತು. ನಂತರ ಅದು ದೂರದ ಪೂರ್ವ ದಿಕ್ಕಿನೆಡೆಗೆ ಸಾಗಿತು. ಒಟ್ಟು ಅದರಲ್ಲಿ 600 ಪ್ರವಾಸಿಗರಿದ್ದರು.

ಸಾಫ್ಟ್ ವೇರ್ ಕಂಪನಿಗಳು

[ಬದಲಾಯಿಸಿ]

ಸಾಫ್ಟ್ ಫಾನಾಟಿಕ್ಸ್ ಸಾಫ್ಟ್ ವೇರ್ ಟೆಕ್ನಾಲಜೀಸ್(p) ಲಿ.

ಸಾಫ್ಟ್ ಫನಾಟಿಕ್ಸ್ 2007ರಲ್ಲಿ ಆರಾಂಭಗೊಂಡದ್ದು ಸ್ಥಳೀಯರಿಗೆ ಸೇವಾ ಸೌಲಭ್ಯ ಒದಗಿಸಲು 2007ರಲ್ಲಿ ಆರಂಭ. ಕಂಪನಿ ವೆಬ್ ಸೈಟ್

ಗ್ಯಾಲರಿ

[ಬದಲಾಯಿಸಿ]

file:///C:/Users/hp%20notebook/Pictures/23032010325.jpg

ಉಲ್ಲೇಖಗಳು

[ಬದಲಾಯಿಸಿ]
  1. "Jharkhand Movement". Country Studies. Archived from the original on 2011-07-08. Retrieved 2009-05-07.
  2. ಫಾಲಿಂಗ್ ರೇನ್ ಜಿನೊಮಿಕ್ಸ್, Inc - ರಾಂಚಿ

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • ಪ್ರವಾಸಿ ಮಾರ್ಗದರ್ಶಿ ಮತ್ತು ರಾಂಚಿ ಬಗ್ಗೆ ಹೆಚ್ಚಿನ ಮಾಹಿತಿ.


ಟೆಂಪ್ಲೇಟು:Million-plus cities in India

"https://kn.wikipedia.org/w/index.php?title=ರಾಂಚಿ&oldid=1254103" ಇಂದ ಪಡೆಯಲ್ಪಟ್ಟಿದೆ