ಪಣಜಿ
Panjim
Ponnjé / पणजी Pangim | |
---|---|
City | |
Panaji | |
Country | India |
State | Goa |
District | North Goa |
Sub-district | Ilhas |
ಸರ್ಕಾರ | |
• Mayor | Surendra Furtado |
• Deputy mayor | Bento Lorena |
Area | |
• Total | ೩೬ km೨ (೧೪ sq mi) |
ಎತ್ತರ | ೭ m (೨೩ ft) |
ಜನಸಂಖ್ಯೆ (2011) | |
• ಒಟ್ಟು | ೧,೧೪,೪೦೫ |
• Density | ೩,೨೦೦/km೨ (೮,೨೦೦/sq mi) |
ಸಮಯ ವಲಯ | UTC+5:30 (IST) |
PIN | 403 00x |
Telephone code | 0832 |
ವಾಹನ ನೋಂದಣಿ | GA-07 |
Website | www |
ಪಣಜಿ ಗೋವ ರಾಜ್ಯದ ರಾಜಧಾನಿ. ಇದು ಉತ್ತರ ಗೋವಾ ಜಿಲ್ಲೆಯ, ಮಾಂಡವಿ ನದಿಯ ದಡದಲ್ಲಿದೆ. ೬೫,೦೦೦ ಜನಸಂಖ್ಯೆಯ ( ಉಪನಗರಗಳನ್ನೂ ಸೇರಿಸಿದರೆ ಇದು ೧೦೦,೦೦೦ ಆಗುತ್ತದೆ) ಪಣಜಿ, ವಾಸ್ಕೋ ಮತ್ತು ಮಡಗಾಂವ್ ನಂತರ ಗೋವಾದ ಮೂರನೆಯ ಅತಿದೊಡ್ಡ ನಗರ. ಇಂಗ್ಲೀಷಿನಲ್ಲಿ "ಪಂಜಿಮ್" ಎನ್ನುತ್ತಾರೆ. ೧೯೬೦ರಿಂದ ಈ ನಗರದ ಅಧಿಕೃತ ಹೆಸರು ಪಣಜಿ ಎಂದಾಗಿದೆ. ಇಲ್ಲಿ ಸಾಕಷ್ಟು ಜನ ಮಾತನಾಡುವ ಕೊಂಕಣಿ ಭಾಷೆಯಲ್ಲಿ "ಪೊನ್ಜೆ" ಎಂದು ಕರೆಯುತ್ತಾರೆ.
ಸಣ್ಣ ಹಳ್ಳಿಯಾಗಿದ್ದ ಇದನ್ನು ೧೮೪೩ರಲ್ಲಿ, ಹಳೆಯ ಗೋವಾದ ಬದಲಾಗಿ, ಪೋರ್ಚುಗೀಸರ ಆಡಳಿತಾತ್ಮಕ ರಾಜಧಾನಿಯನ್ನಾಗಿ ಮಾಡಿ, ನವ ಗೋವಾ ಎಂದು ಹೆಸರಿಡಲಾಯಿತು.
ಡಿಸೆಂಬರ್ ೧೯೬೧ರಲ್ಲಿ ಆಪರೇಷನ್ ವಿಜಯ್ ಎಂಬ ಹೆಸರಿನ ಮಿಲಿಟರಿ ಕಾರ್ಯಾಚರಣೆಯ ಮೂಲಕ ಗೋವಾ ಸ್ವತಂತ್ರವಾಯಿತು. ಅಂದಿನಿಂದ ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ೧೯೮೭ರಲ್ಲಿ ಪೂರ್ಣ ಪ್ರಮಾಣದ ರಾಜ್ಯವಾದಾಗ ಪಣಜಿ ಅದರ ರಾಜಧಾನಿಯಾಗಿ ಮುಂದುವರೆಯಿತು. ಪಣಜಿ ಉತ್ತರ ಗೋವಾ ಜಿಲ್ಲೆಯ ಆಡಳಿತ ಕೇಂದ್ರವೂ ಹೌದು.
ಉಲ್ಲೇಖಗಳು[ಬದಲಾಯಿಸಿ]
ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್