ಅಗರ್ತಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಅಗರ್ತಲ
আগরতলা
Agortôla
ರಾಜಧಾನಿ
ದೇಶಭಾರತ
ರಾಜ್ಯತ್ರಿಪುರ
ಜಿಲ್ಲೆWest Tripura
Government
 • BodyAMC
Area
 • Total೫೮.೮೪ km (೨೨.೭೨ sq mi)
Elevation
೧೨.೮೦ m (೪೧.೯೯ ft)
Population
 (2011)
 • Total೩,೯೯,೬೮೮
 • Density೬,೨೫೧/km (೧೬,೧೯೦/sq mi)
Languages
 • OfficialBengali, English
Time zoneUTC+5:30 (IST)
PIN
799001-799010, 799012, 799014-799015, 799022, 799055
Telephone code91 (0)381
Vehicle registrationTR 01 XX YYYY
Spoken languagesBengali, English, Kokborok
EthnicityBengali, Tripuri, Chakma, Other
Websiteagartalacity.nic.in

ಅಗರ್ತಲ ತ್ರಿಪುರ ರಾಜ್ಯದ ರಾಜಧಾನಿ ಮತ್ತು ಈಶಾನ್ಯ ಭಾರತದ ಎರಡನೆಯ ದೊಡ್ಡ ಪಟ್ಟಣ.ಈ ಪಟ್ಟಣವು ಹೊರಾ ನದಿಯ ದಡದಲ್ಲಿದೆ.ಈ ಪಟ್ಟಣದಲ್ಲಿ ಹಲವಾರು ದೇವಾಲಯಗಳೂ,ಅರಮನೆಗಳೂ ಇವೆ. ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೯೯,೬೮೮.[೧] ಶಿಕ್ಷಣ, ವ್ಯಾಪಾರ ವಾಣಿಜ್ಯ - ಮುಂತಾದುವುಗಳ ದೃಷ್ಟಿಯಿಂದ ಹಿಂದುಳಿದಿರುವ ಒಂದು ಚಿಕ್ಕ ಪಟ್ಟಣ. ಇಲ್ಲಿ ಹೋರಾ ನದಿ ಹರಿಯುತ್ತದೆ. ಇದು ಬಂಗ್ಲಾದೇಶ ಮತ್ತು ಭಾರತಗಳ ಗಡಿಯಾಗಿದೆ. ಕೃಷಿಗೆ ಫಲವತ್ತಾದ ಮೈದಾನ. ತ್ರಿಪುರ ಪ್ರಾಂತದಲ್ಲೇ ಪ್ರಮುಖ ರೈಲುನಿಲ್ದಾಣವುಳ್ಳ ಪಟ್ಟಣ. ಇಲ್ಲಿಂದ ಬ್ರಹ್ಮಪುತ್ರ ಪ್ರದೇಶದ ಕೆಲವು ಪಟ್ಟಣಗಳಿಗೆ ರೈಲು ಸಂಪರ್ಕವಿದೆ. ಭಾರತ ಮತ್ತು ಬಂಗ್ಲಾದೇಶ ಗಡಿಪ್ರದೇಶದಲ್ಲಿರುವ ಈ ಪಟ್ಟಣದಲ್ಲಿ ಸೇನಾಶಿಬಿರಗಳಿವೆ. ಈ ಪ್ರದೇಶದಲ್ಲಿ ಅಧಿಕವಾಗಿ ಮಳೆಯಾಗುವುದರಿಂದ ಹವಾಗುಣ ಅಷ್ಟು ಹಿತಕರವಾಗಿಲ್ಲ. ಪ್ರವಾಹಗಳಿಂದಾಗಿ ಜನ ಆಗಾಗ ತೊಂದರೆಗೊಳಗಾಗುತ್ತಾರೆ. ಇದೇ ಇಲ್ಲಿನ ಅಲ್ಪ ಜನಸಂಖ್ಯೆಗೆ ಕಾರಣ. ಗುಡ್ಡಗಾಡಿನ ಪ್ರದೇಶದಲ್ಲಿರುವ ಈ ಪಟ್ಟಣದ ನಿವಾಸಿಗಳಿಗೆ ಇತ್ತೀಚೆಗೆ ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರದ ನೆರವು ಹೆಚ್ಚಾಗಿ ದೊರೆತಿದೆ. ವಾಣಿಜ್ಯ ಕೇಂದ್ರ ಕೋಲ್ಕೊತ ವಿಶ್ವವಿದ್ಯಾಲಯಕ್ಕೆ ಸೇರಿದ 4 ಕಾಲೇಜುಗಳಿವೆ. ಮಹಾರಾಜರ ಅರಮನೆ ಹಾಗೂ ಒಂದು ದೇವಾಲಯವಿದೆ.

ಚರಿತ್ರೆ[ಬದಲಾಯಿಸಿ]

ಅಗರ್ತಲ ಎಂಬ ಹೆಸರು ಅಗರ್ (ಎಂದರೆ ಒಂದು ಬಗೆಯ ಸುಗಂಧ ದ್ರವ್ಯ ) ಮತ್ತು ತಲ (ಎಂದರೆ ಸ್ಥಳ) ಎಂಬ ಎರಡು ಪದಗಳಿಂದ ಬಂದಿದ್ದು, ಸುಗಂಧದ್ರವ್ಯಗಳ ಸ್ಥಳ ಎಂದಾಗುತ್ತದೆ. ಈ ಸ್ಥಳದಲ್ಲಿ ಅಗರ್ ವೃಕ್ಷಗಳು ಹೇರಳವಾಗಿವೆ. ಈ ಪಟ್ಟಣವು ಮಾಣಿಕ್ಯ ವಂಶಜರಿಂದ ಆಳಲ್ಪಟ್ಟತ್ತು.ಬ್ರಿಟಿಷರ ಕಾಲದಲ್ಲಿ "ಹಿಲ್ ತಿಪ್ಪರ" (ಪರ್ವತ ತ್ರಿಪುರ) ದ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿತ್ತು.ಇಲ್ಲಿಯ ಮಹಾರಾಜ ಬೀರ್ ಬಿಕ್ರಮ ಕಿಶೋರ್ ಮಾಣಿಕ್ಯ ಬಹಾದೂರ್ ರವರು ಆಧುನಿಕ ಅಗರ್ತಲದ ಸ್ಥಾಪಕರು ಎಂದು ಹೇಳಬಹುದು.

ಹವಾಮಾನ[ಬದಲಾಯಿಸಿ]

ಅಗರ್ತಲದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 25.7
(78.3)
28.5
(83.3)
32.9
(91.2)
34.2
(93.6)
32.9
(91.2)
31.5
(88.7)
31.3
(88.3)
31.5
(88.7)
31.7
(89.1)
30.9
(87.6)
29.0
(84.2)
26.4
(79.5)
30.54
(86.98)
ಕಡಮೆ ಸರಾಸರಿ °C (°F) 9.8
(49.6)
13.1
(55.6)
18.6
(65.5)
22.3
(72.1)
23.6
(74.5)
24.5
(76.1)
24.7
(76.5)
24.6
(76.3)
24.2
(75.6)
22.0
(71.6)
16.5
(61.7)
11.1
(52)
19.58
(67.26)
Average precipitation mm (inches) 9.1
(0.358)
19.7
(0.776)
59.0
(2.323)
182.1
(7.169)
316.4
(12.457)
455.3
(17.925)
385.8
(15.189)
312.8
(12.315)
224.8
(8.85)
165.2
(6.504)
40.0
(1.575)
8.4
(0.331)
೨,೧೭೮.೬
(೮೫.೭೭೨)
Source: IMD

ಅಗರ್ತಲವು ಹೋರಾ ನದಿಯ ಕಣಿವೆಯಲ್ಲಿದ್ದರೂ ಅದರ ಉತ್ತರದ ಭಾಗವು ಕಡಿಮೆ ಎತ್ತರದ ಬೆಟ್ಟಗಳಲ್ಲಿ ಹರಡಿಕೊಂಡಿದೆ. ಮಾನ್ಸೂನ್ ಹವಾಮಾನ ಇಲ್ಲಿಯದು.ಎಪ್ರಿಲ್ ನಿಂದ ಅಕ್ಟೋಬರ್ ತನಕ ವಿಸ್ತರಿಸಿದ ಮಳೆಗಾಲ, ಸರಾಸರಿ ೨೮ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ, ನವಂಬರ್ ನಿಂದ ಮಾರ್ಚಿವರೆಗೆ ಸಾಧಾರಣ ಚಳಿ ಇಲ್ಲಿಯ ಹವಾಮಾನ ವೈಶಿಷ್ಟ್ಯ.

ಪ್ರವಾಸೋದ್ಯಮ[ಬದಲಾಯಿಸಿ]

ಆಸಕ್ತಿಯ ಸ್ಥಳಗಳು[ಬದಲಾಯಿಸಿ]

ಉಜ್ಜಯಂತ ಅರಮನೆ ಲಕ್ಷ್ಮಿ ನಾರಾಯಣ ಬಾರಿಯಿಂದ ಕಂಡಾಗ
 • ಕಾಲೇಜ್ ಟಿಲ್ಲಾ – ಮಹಾರಾಜ ಬೀರ್ ಬಿಕ್ರಮ್ ಕಾಲೇಜ್, ತ್ರಿಪುರ ವಿಶ್ವವಿದ್ಯಾಲಯದ ಕಟ್ಟಡಗಳು, ಕ್ರೀಡಾಂಗಣಗಳು, ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ ಇತ್ಯಾದಿ. ಇದು ರಾಷ್ಟ್ರೀಯ ಪಕ್ಷಿಧಾಮವೂ ಆಗಿದೆ.
 • ಉಜ್ಜಯಂತ ಅರಮನೆ – ತ್ರಿಪುರದ ರಾಜರ ಅರಮನೆಯಾಗಿತ್ತು. ಮೊದಲು ಇದನ್ನು ರಾಜ್ಯ ವಿಧಾನಸಭೆಯಾಗಿ ಪರಿವರ್ತಿಸಲಾಗಿತ್ತು. ಈಗ ವಸ್ತು ಸಂಗ್ರಹಾಲಯವಾಗಿದೆ.
 • ಜಗನ್ನಾಥ ದೇವಾಲಯ — ವೈಷ್ಣವ ವಿಚಾರಧಾರೆಯ ಹಿಂದೂ ದೇವಾಲಯ

ಉದ್ಯಾನಗಳು ಮತ್ತು ಆಟದ ಮೈದಾನಗಳು[ಬದಲಾಯಿಸಿ]

ಹೆರಿಟೇಜ್ ಪಾರ್ಕ್‌ನ ಮುಖ್ಯ ದ್ವಾರ
 • ಹೆರಿಟೇಜ್ ಪಾರ್ಕ್: ನಗರದ ಎಲ್ಲ ಉದ್ಯಾನಗಳಲ್ಲಿ ಅತಿ ಹೆಚ್ಚು ಭೇಟಿನೀಡಲ್ಪಡುವ ಉದ್ಯಾನ. ಇಲ್ಲಿ ರಾಜ್ಯದ ವಿವಿಧ ಸ್ಮಾರಕಗಳ ಕಿರುಮಾದರಿಗಳಿವೆ, ಆಯುರ್ವೇದಿಕ ಮೂಲಿಕೆ ಉದ್ಯಾನ ಮತ್ತು ಕಾರಂಜಿಯಿದೆ.
 • ರಬೀಂದ್ರ ಕಾನನ್: ಹೆರಿಟೇಜ್ ಪಾರ್ಕ್ ಹತ್ತಿರವಿರುವ ಇದರಲ್ಲಿ ವಾರ್ಷಿಕವಾಗಿ ರವೀಂದ್ರನಾಥ ಠಾಗೋರ್‌ರ ಜನ್ಮ ವಾರ್ಷಿಕೋತ್ಸವವನ್ನು ಆಯೋಜಿಸಲಾಗುತ್ತದೆ.
 • ಲೆಂಬುಚೆರಾ ಉದ್ಯಾನ
 • ನೆಹರು ಉದ್ಯಾನ
 • ಮಕ್ಕಳ ಉದ್ಯಾನ

ವಸ್ತು ಸಂಗ್ರಹಾಲಯಗಳು[ಬದಲಾಯಿಸಿ]

ತ್ರಿಪುರ ರಾಜ್ಯ ಸಂಗ್ರಹಾಲಯ
 • ತ್ರಿಪುರಾ ರಾಜ್ಯ ಸಂಗ್ರಹಾಲಯ, ಉಜ್ಜಯಂತ ಅರಮನೆಯಲ್ಲಿದೆ
 • ವಿಜ್ಞಾನ ಸಂಗ್ರಹಾಲಯ, ಸುಕಾಂತ ಅಕಾಡೆಮಿಯಲ್ಲಿ ಸ್ಥಿತವಾಗಿದೆ
 • ಹವೇಲಿ ಸಂಗ್ರಹಾಲಯ, ಕಾಶೀಪುರ್‌ನಲ್ಲಿ ಸ್ಥಿತವಾಗಿದೆ

ಮಲ್ಟಿಪ್ಲೆಕ್ಸ್‌ಗಳು[ಬದಲಾಯಿಸಿ]

 • ರೂಪಸಿ ಮಲ್ಟಿಪ್ಲೆಕ್ಸ್
 • ಬಾಲಕ ಸಿನೆಮಾ

ಉಲ್ಲೇಖಗಳು[ಬದಲಾಯಿಸಿ]

 1. [೧] Census of India 2011


Flag of India.svg

ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್

"https://kn.wikipedia.org/w/index.php?title=ಅಗರ್ತಲ&oldid=1080822" ಇಂದ ಪಡೆಯಲ್ಪಟ್ಟಿದೆ