ವಿಷಯಕ್ಕೆ ಹೋಗು

ಹಿಂದೂಸ್ತಾನ್ ಟೈಮ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನವದೆಹಲಿಯಲ್ಲಿರುವ ಹಿಂದೂಸ್ತಾನ್ ಟೈಮ್ಸ್ ಹೌಸ್.

ಹಿಂದೂಸ್ತಾನ್ ಟೈಮ್ಸ್ (HT ) ಎಂಬುದು ಇಂಗ್ಲೀಷ್-ಭಾಷೆಯ ಭಾರತೀಯ ದೈನಿಕ ವೃತ್ತಪತ್ರಿಕೆಯಾಗಿದ್ದು, ಇದನ್ನು 1924ರಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಆರಂಭಿಸಲಾಯಿತು. ("ಹಿಂದೂಸ್ಥಾನ್" ಉತ್ತರ ಭಾರತದ ಐತಿಹಾಸಿಕ ಹೆಸರು).[]

ಹಿಂದೂಸ್ತಾನ್ ಟೈಮ್ಸ್ , HT ಮೀಡಿಯಾ Ltd ಸಂಸ್ಥೆಯಡಿಯ ಪ್ರಧಾನ ಪ್ರಕಾಶನವಾಗಿದೆ. ಈ ವೃತ್ತಪತ್ರಿಕೆಯು, 2008 ರಲ್ಲಿನ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್ ನ ಅಂಕಿಅಂಶದಂತೆ, ಅದರ ಪ್ರಸಾರ ಸಂಖ್ಯೆ 1.14 ಮಿಲಿಯನ್ ಆಗಿತ್ತು. ಭಾರತದ ಇಂಗ್ಲೀಷ್ ವೃತ್ತಪತ್ರಿಕೆಗಳಲ್ಲಿ ಮೂರನೆ ಸ್ಥಾನ ಪಡೆದಿದೆ ಎಂದೂ ವರದಿಯಾಗಿತ್ತು. ಇಂಡಿಯನ್ ರೀಡರ್ ಶಿಪ್ ಸರ್ವೇ, 2010 ರ ಪ್ರಕಾರ (IRS)ನ,(ಭಾರತೀಯ ಓದುಗರ ಸಮೀಕ್ಷೆ), HT (34.67 ಲಕ್ಷ ದಷ್ಟು) ಓದುಗರನ್ನು ಹೊಂದಿದೆ. ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಓದುಗರಿರುವ ಇಂಗ್ಲೀಷ್ ವೃತ್ತಪತ್ರಿಕೆಗಳಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ದ ನಂತರ ಇದು ಎರಡನೆಯ ಸ್ಥಾನ ಪಡೆದಿದೆ,ಎಂದು ಬಹಿರಂಗಪಡಿಸಲಾಯಿತು.[] ಈ ದೈನಿಕವು ನವದೆಹಲಿ ಮುಂಬಯಿ, ಕಲ್ಕತ್ತಾ, ಲಕ್ನೌ, ಪಟ್ನಾ, ರಾಂಚಿ, ಭೂಪಾಲ್ ಮತ್ತು ಚಂಡೀಗಡ ಗಳಿಂದ ಏಕಕಾಲಿಕವಾಗಿ ಮುದ್ರಣ ಆವೃತ್ತಿಗಳೊಂದಿಗೆ ಉತ್ತರ ಭಾರತದಲ್ಲಿ ವ್ಯಾಪಕ ಪ್ರಸಾರ ಹೊಂದಿದೆ. ಜೈಪುರದಲ್ಲಿದ್ದ ಮುದ್ರಣ ಕಚೇರಿಯನ್ನು 2006 ರ ಜೂನ್ ನಿಂದ ಸ್ಥಗಿತಗೊಳಿಸಲಾಗಿದೆ. HT , 2004 ರಲ್ಲಿ ಯುವಕರಿಗೆ ಮೀಸಲಾದ ದಿನಪತ್ರಿಕೆ HT ನೆಕ್ಸ್ಟ್ ಅನ್ನು ಆರಂಭಿಸಿತು. ಮುಂಬಯಿನ ಆವೃತ್ತಿಯನ್ನು 2005 ರ ಜುಲೈ 14 ರಂದು ಹಾಗು ಕಲ್ಕತ್ತಾ ಆವೃತ್ತಿಯನ್ನು 2000ನೆಯ ವರ್ಷದ ಆರಂಭದಲ್ಲಿ ಹೊರತಂದಿತು.

ಹಿಂದೂಸ್ತಾನ್ ಟೈಮ್ಸ್ ನ ಇತರ ಪ್ರಕಾಶನಗಳು ಕೆಳಕಂಡಂತಿವೆ: ಮಿಂಟ್ (ಇಂಗ್ಲೀಷ್ ಭಾಷೆಯ ವ್ಯಾಪಾರ-ವಹಿವಾಟು ವಿವರದ ದಿನಪತ್ರಿಕೆ), ಹಿಂದೂಸ್ತಾನ್ (ಹಿಂದಿ ಭಾಷೆಯ ದಿನ ಪತ್ರಿಕೆ), ನಂದನ್ (ಮಕ್ಕಳ ಮಾಸಿಕ ನಿಯತಕಾಲಿಕೆ) ಮತ್ತು ಕದಂಬನಿ (ಸಾಹಿತ್ಯದ ಮಾಸಿಕ ನಿಯತಕಾಲಿಕೆ). ಈ ಮಾಧ್ಯಮ ಸಮೂಹವು ಫೀವರ್ ರೇಡಿಯೋ ಚಾನಲ್ ನ ಒಡೆತನವನ್ನೂ ಪಡೆದಿದೆ.ಅದಕ್ಕಾಗಿ, ಅದ್ದೂರಿಯ ವಾರ್ಷಿಕ ಸಭೆ ಲಕ್ಸುರಿ ಕಾನಫೆರೆನ್ಸ್ ನ್ನು ಏರ್ಪಡಿಸಿತು. ಈ ಸಭೆಯು ಡೆನಾ ವಾನ್ ಫರ್ಸ್ಟೆನ್ ಬರ್ಗ್ ನಂತಹ ವಿನ್ಯಾಸಕಿ, ಕ್ರಿಸ್ಟೀನ್ ಲೌಬೌಟಿನ್ ನಂತಹ ಶೂ ತಯಾರಕನನ್ನು, ಗ್ಯೂಸಿಯ CEO ರಾಬರ್ಟ್ ಪೊಲೆಟ್ ಮತ್ತು ಕಾರ್ಟಿಯರ್ ನ MD ಪ್ಯಾಟ್ರಿಕ್ ನಾರ್ಮ್ಯಾಂಡ್ ರಂತಹ ಭಾಷಣಕಾರರನ್ನು ಒಳಗೊಂಡಿತ್ತು.

ಹಿಂದೂಸ್ತಾನ್ ಟೈಮ್ಸ್ ಅನ್ನು ಬಿರ್ಲಾ ಕುಟುಂಬದ ಒಡೆತನಯುಳ್ಳ, KK ಬಿರ್ಲಾ ಶಾಖೆಯು ನಡೆಸುತ್ತಿದೆ.

ಇತಿಹಾಸ

[ಬದಲಾಯಿಸಿ]

ಹಿಂದೂಸ್ತಾನ್ ಟೈಮ್ಸ್ ಅನ್ನು ಮಾಸ್ಟರ್ ಸುಂದರ್ ಸಿಂಗ್ ಲ್ಯಾಲ್ ಪುರಿಯವರು 1924 ರಲ್ಲಿ ಆರಂಭಿಸಿದರು. ಇವರು ಅಕಾಲಿ ಚಳವಳಿಯ ಮತ್ತು ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿ ದಳದ ಸ್ಥಾಪಕ-ಜನಕರಾಗಿದ್ದಾರೆ. ಎಸ್ ಮಂಗಲ್ ಸಿಂಗ್ ಗಿಲ್ (ತಾಶೀಲ್ದಾರ್) ಮತ್ತು ಎಸ್. ಚಂಚಲ್ ಸಿಂಗ್ (ಜಲಂಧರ್ ನ ಜಂಡಿಯಾಲಾ) ರವರನ್ನು ಈ ವೃತ್ತಪತ್ರಿಕೆಯ ಮೇಲ್ವಿಚಾರಣೆಗಾಗಿ ಆಗ ನೇಮಿಸಲಾಯಿತು. ಪಂಡಿತ್ ಮದನ್ ಮೋಹನ್ ಮಾಳವಿಯಾ ಮತ್ತು ಮಾಸ್ಟರ್ ತಾರಾ ಸಿಂಗ್ ರವರು ಕೂಡ ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿದ್ದರು. ಮಾಸ್ಟರ್ ಸುಂದರ್ ಸಿಂಗ್ ಲ್ಯಾಲ್ ಪುರಿಯವರು ನಿರ್ವಾಹಕ ಅಧ್ಯಕ್ಷರು ಮತ್ತು ಪ್ರಧಾನ ಪೋಷಕರಾಗಿದ್ದರು.

ಸಂಪಾದಕೀಯ ವಿಭಾಗದ ಮಂಡಲಿಯಲ್ಲಿ ದೇವದಾಸ ಗಾಂಧಿ (ಮಹಾತ್ಮ ಗಾಂಧಿಯವರ ಪುತ್ರ) ಯೊಂದಿಗೆ ಕೆ.ಎಮ್. ಪಣಿಕ್ಕರ್ ರವರು ಇದರ ಮೊದಲ ಸಂಪಾದಕರಾಗಿದ್ದರು. ಇದರ ಉದ್ಘಾಟನಾ ಸಮಾರಂಭವನ್ನು, 1924 ರ ಸೆಪ್ಟೆಂಬರ್ 15 ರಂದು ಮಹಾತ್ಮ ಗಾಂಧಿ ನೆರವೇರಿಸಿದರು. ಮೊದಲ ಪ್ರತಿಯನ್ನು ದೆಹಲಿಯ ನಯಾ ಬಜಾರ್ (ಈಗ ಸ್ವಾಮಿ ಶಾರದ ನಂದ ಮಾರ್ಗ) ನಿಂದ ಪ್ರಕಟಿಸಲಾಯಿತು. ಆವಾಗ ಇದು, ಸಿ.ಎಫ್. ಆಂಡ್ರೀವ್ಯುಸ್, ಸೆಂಟ್. ನಿಹಾಲ್ ಸಿಂಗ್, ಮೌಲಾನಾ ಮೊಹಮದ್ ಅಲಿ, ಸಿ.ಆರ್. ರೆಡ್ಡಿ (ಡಾ. ಕಟ್ಟಮಂಚಿ ರಾಮಲಿಂಗ ರೆಡ್ಡಿ ),ಟಿ. ಎಲ್. ವಾಸ್ವಾನಿ, ರುಚಿ ರಾಮ್ ಸಹ್ನಿ, ಬರ್ನಾರ್ಡ್ ಹ್ಯಾಟನ್ , ಹರಿಂಧರ್ ನಾಥ್ ಚಟ್ಟೋಪಾಧ್ಯಾಯ, ಡಾ:ಸೈಫ್ ಉದ್ದೀನ್ ಕಿಚ್ಲೂ ಮತ್ತು ರೂಬಿ ವ್ಯಾಸ್ಟೋ ನಂತಹ ಪ್ರತಿಭಾವಂತರ ಲೇಖನ ಮತ್ತು ಬರಹಗಳನ್ನು ತನ್ನ ಆವೃತ್ತಿಯಲ್ಲಿ ಹೊಂದಿತ್ತು.

"ಸದರ್ ಪಣಿಕ್ಕರ್ ಹಿಂದೂಸ್ತಾನ್ ಟೈಮ್ಸ್ ಅನ್ನು ಗಂಭೀರವಾದ ಒಂದು ರಾಷ್ಟ್ರೀಯ ವೃತ್ತಪತ್ರಿಕೆಯನ್ನಾಗಿ ಆರಂಭಿಸಿದರು. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಸದಸ್ಯ, ಇತಿಹಾಸಜ್ಞ, ಸಾಹಿತಿಯಾಗಿದ್ದ ಪಣಿಕ್ಕರ್, ಅವರು ಈ ಪತ್ರಿಕೆಯನ್ನು ಅಂತಿಮವಾಗಿ ಅಕಾಲಿ ಪತ್ರಿಕೆಗಿಂತ ಇನ್ನೂ ಹೆಚ್ಚಾಗಿ ಬೆಳೆಸುವ ಭರವಸೆ ಹೊಂದಿದ್ದರು. ಇವರು ಸಂಪಾದಕರಾದ ನಂತರ ಇದಕ್ಕೆ ಅಕಾಲಿ ಕಾರ್ಯಕರ್ತರು, ಪೋಷಕರಿಂದ ಉದಾರ ಧನಸಹಾಯವು ದೊರೆಯಿತು. ಸತತ ಶ್ರಮ,ಪ್ರಯತ್ನ ಮಾಡುವ ಮೂಲಕ ತಮ್ಮ ಶಕ್ತಿಯನ್ನೆಲ್ಲಾ ಪ್ರಯೋಗಿಸಿದರೂ ಕೂಡ ಪತ್ರಿಕೆ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ. ಎರಡು ವರ್ಷಗಳಲ್ಲಿ ಪಣಿಕ್ಕರ್ ಅವರು 3,000 ಕ್ಕಿಂತ ಅಧಿಕ ಪ್ರತಿಗಳಿಗಾಗಿ ಎಲ್ಲಿಂದಲೂ ಮುದ್ರಣ ಆದೇಶ ಪಡೆಯಲಿಲ್ಲ. ಅನಂತರ ಅಕಾಲಿ ಚಳವಳಿ ತನ್ನೆಲ್ಲ ಶಕ್ತಿ ಕಳೆದುಕೊಂಡಿತಲ್ಲದೇ ಧನಸಹಾಯವೂ ನಿಂತುಹೋಯಿತು. ದೆಹಲಿಯಲ್ಲಿ, ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರು ವೃತ್ತಪತ್ರಿಕೆಯ ನೈಜ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವೆಡೆಗೆ ತಮ್ಮ ದೃಢ ಹೆಜ್ಜೆಯನಿಟ್ಟಾಗ, ಪತ್ರಿಕೆಯು ಅಕಾಲಿಕ ಅಳಿವಿನಿಂದ ಉಳಿದುಕೊಂಡಿತು."- TJS ಜಾರ್ಜ್, ಪತ್ರಿಕೋದ್ಯಮದಲ್ಲಿ ಪಾಠಗಳು, 2007, ವೈವಾ ಪುಸ್ತಕಗಳು, ನವದೆಹಲಿ.

ಪತ್ರಿಕೆಯನ್ನು ಸ್ವಾಧೀನಡಿಸಿಕೊಳ್ಳಲು 50,000 ರೂಪಾಯಿಗಳನ್ನು ಮಾಳವಿಯಾ ಅವರು ಸಂಗ್ರಹಿಸಿದರು.ರಾಷ್ಟ್ರೀಯತಾವಾದಿ ನಾಯಕರಾದ ಲಜಪತ ರಾಯ್, ಎಮ್.ಆರ್. ಜಯಕರ್ ಮತ್ತು ಕೈಗಾರಿಕೋದ್ಯಮಿ ಜಿ.ಡಿ. ಬಿರ್ಲಾ, ಅವರುಗಳೇ ಇದರ ಬಹುಪಾಲು ಸಹಾಯವನ್ನು ನೀಡಿದ್ದರು. ಪತ್ರಿಕೆಯ ಸಂಪೂರ್ಣ ನಿಯಂತ್ರಣವನ್ನು 1933 ರಲ್ಲಿ ಬಿರ್ಲಾ ಅವರು ತೆಗೆದುಕೊಂಡರು. ಹೀಗೆ ಬಿರ್ಲಾ ಕುಟುಂಬ ಪತ್ರಿಕೆಯ ಒಡೆತನವನ್ನು ಮುಂದುವರೆಸಿತು.

ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಇದು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನ ಮೂಲ ಬೇರುಗಳನ್ನು ಹೊಂದಿತ್ತು. ಅಲ್ಲದೇ ಇದು ತನ್ನ ವಿರುದ್ದ ಅಲಹಾಬಾದ್ ನ ಉಚ್ಚ ನ್ಯಾಯಾಲಯದಲ್ಲಿ ಹೂಡಲಾದ "ಹಿಂದೂಸ್ತಾನ್ ಟೈಮ್ಸ್ ನ್ಯಾಯಾಂಗ ನಿಂದನಾ ಪ್ರಕರಣದ ಮೊಕದ್ದಮೆ (ಆಗಸ್ಟ್- ನವೆಂಬರ್, 1941)"ಯನ್ನು ಕೂಡ ಎದುರಿಸಿದೆ.[] ಇದನ್ನು ಕಾಲಕಾಲಕ್ಕೆ ದೇವದಾಸ ಗಾಂಧಿ ಮತ್ತು ಖುಷ್ವಂತ್ ಸಿಂಗ್ ರನ್ನು ಒಳಗೊಂಡಂತೆ ಭಾರತದ ಅನೇಕ ಪ್ರಮುಖ ವ್ಯಕ್ತಿಗಳು ಸಂಪಾದಿಸಿದ್ದರು. ಸಂಜಯ್ ನಾರಾಯಣ್ ಅವರು ಇದರ ಪ್ರಧಾನ ಸಂಪಾದಕತ್ವವನ್ನು 2008 ರ ಆಗಸ್ಟ್ ನಲ್ಲಿ ವಹಿಸಿಕೊಳ್ಳುವುದರೊಂದಿಗೆ ಇದರ ಸ್ವಾಧೀನಕ್ಕೂ ಮುಂದಾದರು.[]

ಇತ್ತೀಚೆಗೆ[ಯಾವಾಗ?] ಸಂಪಾದಕೀಯ ಪುಟವು ಪ್ರಮುಖ ಬದಲಾವಣೆ ಕಂಡಿತು. ಅಲ್ಲದೇ ಅದರ ಕ್ಲಿಷ್ಟತೆ ಕಡಿಮೆ ಮಾಡಿ ಅದನ್ನು ಮತ್ತಷ್ಟು ಸರಳವಾಗುವಂತೆ ಮಾಡಲು, ಈ ಪುಟವನ್ನು "ಕಾಮೆಂಟ್"(ಟೀಕೆ) ಎಂದು ಹೆಸರಿಸಲಾಯಿತು.

HT ಮುಂಬಯಿ ಆವೃತ್ತಿ

[ಬದಲಾಯಿಸಿ]

HT ಮುಂಬಯಿ , HT ಕೆಫೆ ಎಂಬ ಶೀರ್ಷಿಕೆಯ ಎಂಟು ಪುಟಗಳ ದಿನನಿತ್ಯದ ಜೀವನ ಶೈಲಿಯ ಚಿತ್ರಣವಿರುವ ಪುರವಣಿ ಆಕಾರವನ್ನು(ಟ್ಯಾಬ್ಲಾಯ್ಡ್ ನ ಫಾರ್ಮೆಟ್ ನಲ್ಲಿದೆ)ಯನ್ನು ಹೊರತಂದಿತು. ಇದು ಪ್ರತಿ ಬುಧವಾರದಂದು ಹರೈಸನ್ಸ್ಎಂಬ ಶಿಕ್ಷಣಕ್ಕೆ ಸಂಬಂಧಿಸಿದ ಪುರವಣಿಯನ್ನು ಕೂಡ ಹೊಂದಿದೆ. ಪತ್ರಿಕೆಯ ಭಾನುವಾರದ ಪುರವಣಿಗಳಲ್ಲಿ ಬ್ರಂಚ್ ಎಂಬ ವಿಶೇಷಾಂಕವನ್ನೂ ನಿಯತಕಾಲಿಕೆಯೊಂದಿಗೂ ನೀಡಲಾಗುತ್ತಿದೆ. ಮುಂಬಯಿ ಆವೃತ್ತಿಯನ್ನು ಬಾಂಬೆಯ NMIMS ನ ಹಳೆಯ ವಿದ್ಯಾರ್ಥಿ ಮೋಹಿತ್ ಅಹುಜಾ ರವರು ನಿರ್ವಹಿಸುತ್ತಿದ್ದರು. ಮುಂಬಯಿನಲ್ಲಿ ಸೌಮ್ಯ ಭಟ್ಟಾಚಾರ್ಯಅವರು ಸ್ಥಾನೀಯ ಸಂಪಾದಕರಾಗಿದ್ದಾರೆ.

ಮಾಲೀಕತ್ವ

[ಬದಲಾಯಿಸಿ]

ದೆಹಲಿ ಮೂಲದ ಇಂಗ್ಲೀಷ್ ವೃತ್ತಪತ್ರಿಕೆ ಹಿಂದೂಸ್ತಾನ್ ಟೈಮ್ಸ್ KK ಬಿರ್ಲಾ ಉದ್ಯಮ ಸಮೂಹದ ಭಾಗವಾಗಿದ್ದು, ಇದನ್ನು ಶೋಭನಾ ಭಾರ್ತಿಯಾ ರವರು ನಿರ್ವಹಿಸುತ್ತಿದ್ದಾರೆ. ಇವರು ಕೈಗಾರಿಕೋದ್ಯಮಿ KK ಬಿರ್ಲಾ ರವರ ಪುತ್ರಿಯಾಗಿದ್ದು, ಜಿ ಡಿ ಬಿರ್ಲಾರವರ ಮೊಮ್ಮಗಳಾಗಿದ್ದಾರೆ. HT ಮೀಡಿಯಾ ಲಿಮಿಟೆಡ್ ಇದರ ಒಡೆತನ ಹೊಂದಿದೆ. KK ಬಿರ್ಲಾ ಉದ್ಯಮ ಸಮೂಹ HT ಮೀಡಿಯ ದಲ್ಲಿ 69 ಪ್ರತಿಶತದಷ್ಟು ಪಾಲನ್ನು ಹೊಂದಿದ್ದು, ಪ್ರಸ್ತುತ ಇದು 834 ಕೋಟಿ ರೂಪಾಯಿ ಮೊತ್ತದ್ದಾಗಿದೆ. ಹಿಂದೂಸ್ತಾನ್ ಟೈಮ್ಸ್ ಅನ್ನು ಶೋಭನಾ ಭಾರ್ತಿಯಾ ಅವರು 1986 ರಲ್ಲಿ ಸೇರಿಕೊಂಡಾಗ, ಅವರು ರಾಷ್ಟ್ರೀಯ ವೃತ್ತಪತ್ರಿಕೆಯಲ್ಲಿ ಪ್ರಧಾನ ಕಾರ್ಯನಿರ್ವಾಹಕಿಯಾದ ಮೊದಲ ವ್ಯಕ್ತಿಯಾದರು. ಶೋಭನಾ ಕಾಂಗ್ರೆಸ್ ಪಕ್ಷದಿಂದ ರಾಜ್ಯ ಸಭೆಗೆ MP ಯಾಗಿ ನಾಮ ನಿರ್ದೇಶನಗೊಂಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ನೊಂದಿಗೆ, HT ಮೀಡಿಯ; ದೇಸಿಮಾರ್ಟಿನಿ, ಫೀವರ್ 104 FM, amd ಮಿಂಟ್(ವೃತ್ತಪತ್ರಿಕೆ) ಗಳನ್ನು ನಡೆಸುತ್ತದೆ.

ಪುರವಣಿಗಳು

[ಬದಲಾಯಿಸಿ]
  • ಬ್ರಂಚ್ : ಇದು ವಾರಪತ್ರಿಕೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಪ್ರತಿ ಭಾನುವಾರದಂದು ವಿತರಿಸಲಾಗುತ್ತಿದೆ. ಇದು, ಪ್ರಮುಖ ಅಂಕಣ ಬರಹಗಾರರಾದ ವೀರ್ ಸಾಂಘ್ವಿ, ಸೀಮಾ ಶರ್ಮಾ ರಂತವರಿಂದ ಬರಹ ಮತ್ತು ಮುಖಪುಟ ಸುದ್ದಿಗಳನ್ನು ಒಳಗೊಂಡಿರುತ್ತದೆ. ವೃತ್ತಪತ್ರಿಕೆಯ ಇನ್ನೊಂದು ಜನಪ್ರಿಯ ಗುಣಲಕ್ಷಣವೆಂದರೆ ಕೊನೆಯಲ್ಲಿ, ಪ್ರಸಿದ್ಧ ವ್ಯಕ್ತಿಯೊಬ್ಬರ ಸಂದರ್ಶನವನ್ನು ಕೂಡ ಒಳಗೊಂಡಿರುತ್ತದೆ.
  • HT ಸಿಟಿ / ಕೆಫೆ :ಇದು ಜನಪ್ರಿಯ ದೈನಿಕ ಪುರವಣಿಯಾಗಿದ್ದು, ವೃತ್ತಪತ್ರಿಕೆಯೊಂದಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಇದು ಸಾಮಾನ್ಯ ಸುದ್ದಿಯ ವಿಶ್ಲೇಷಣೆ, ಅಲ್ಲದೇ ಇದನ್ನು ಪ್ರಾದೇಶಿಕವಾಗಿ ನಗರದಲ್ಲಿ ನಡೆಯುವ ಸಂಗತಿಗಳ ಮಾಹಿತಿಯನ್ನು, ಸ್ಥಳೀಯ ಪಕ್ಷಗಳ ಮತ್ತು ಪ್ರಸಿದ್ಧ ವ್ಯಕ್ತಿಗಳ ವದಂತಿಯಂತಹ ಗಾಳಿಸುದ್ದಿಯನ್ನು ಒಳಗೊಂಡಿರುತ್ತದೆ.
  • HT ಹರೈಸನ್ಸ್ : ಇದು ಕೆಲವು ಉದ್ಯೋಗ ಅವಕಾಶಗಳು, ಉದ್ಯೋಗ ಸಲಹೆ, ಕ್ಯಾಂಪಸ್ ನ ಹೊಸ ಸುದ್ದಿ, ಮನೋವೈಜ್ಞಾನಿಕ ಸಲಹೆ ಇತ್ಯಾದಿಗಳ ರೂಪದಲ್ಲಿ ನೆರವಾಗುವ ಮೂಲಕ ಭಾರತದುದ್ದಕ್ಕೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಪುರವಣಿಯಾಗಿದೆ.

ಇದು ನಿಜವಾಗಿಯೂ ಅತ್ಯುತ್ತಮ ಸಾಧನೆಯಾಗಿದ್ದು ಅಲ್ಲದೇ ಅವರು ಇದನ್ನು ಮುಂದುವರೆಸಬೇಕಾಗಿದೆ.

ಪ್ರಶಸ್ತಿಗಳು

[ಬದಲಾಯಿಸಿ]

HT , ಹಿಂದಿನಿಂದಲೂ IFRA ನಲ್ಲಿ ಉತ್ತಮ ದಾಖಲೆ ಹೊಂದಿದೆ. ಅಲ್ಲದೇ ಈ ವರ್ಷ ಅನೇಕ ಪ್ರಶಸ್ತಿಗಳನ್ನು ಕೂಡ ಗಳಿಸಿದೆ.[ಸೂಕ್ತ ಉಲ್ಲೇಖನ ಬೇಕು]

ಅಂಕಣ ಬರಹಗಾರರು

[ಬದಲಾಯಿಸಿ]
  • ವೀರ್ ಸಾಂಘ್ವಿ: ವೀರ್ ಸಾಂಘ್ವಿ ಹಿಂದೂಸ್ತಾನ್ ಟೈಮ್ಸ್ ನ ಮಾಜಿ ಸಂಪಾದಕರಾಗಿದ್ದಾರೆ. ಇವರು ಪ್ರತಿ ಭಾನುವಾರದಂದು ಎರಡು ಅಂಕಣಗಳನ್ನು ಬರೆಯುತ್ತಿದ್ದರು. ಪ್ರಧಾನ ಪತ್ರಿಕೆಗಾಗಿ ಕೌಂಟರ್ ಪಾಯಿಂಟ್ ಎಂಬ ಶೀರ್ಷಿಕೆಯಡಿ ಹಾಗು ವಾರದ ಪುರವಣಿ ಬ್ರಂಚ್ ಗಾಗಿ "ರೂಡ್ ಫುಡ್" ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದರು. ವೀರ್ ಸಾಂಘ್ವಿ, ಮುಖೇಶ್ ಅಂಬಾನಿಯವರ ಹಿತಾಸಕ್ತಿಯನ್ನು ಕಾಪಾಡಲು ಹಿಂದೂಸ್ತಾನ್ ಟೈಮ್ಸ್ ಅನ್ನು ರಾಡಿಯಾಗೇಟ್ ಹಗರಣದ ಚರ್ಚಾವೇದಿಕೆಯಾಗಿ ಬಳಸಿದರು.[] ಇದರಿಂದಾಗಿ ಪತ್ರಿಕೋದ್ಯಮದ ನೈತಿಕತೆಯ ಪ್ರಶ್ನೆಗಳ ಮೇಲೆ ವ್ಯಾಪಕ ಚರ್ಚೆಗಳು ಆರಂಭವಾದವು. ಇದರೊಂದಿಗೆ ಅನೇಕ ಗಣ್ಯರು ವೀರ್ ಸಾಂಘ್ವಿ ಮತ್ತು ಬರ್ಖಾ ದತ್ತರವರನ್ನು ತೆಗೆದುಹಾಕುವಂತೆ ಮನವಿ ಮಾಡಿದರು.[] ಅಂತಿಮವಾಗಿ HT ಮೀಡಿಯ ಲಿಮಿಟೆಡ್ ನ ಸಲಹಾ ಸಂಪಾದಕೀಯ ನಿರ್ದೇಶಕರಾಗಿದ್ದ ವೀರ್ ಸಾಂಘ್ವಿಯವರನ್ನು, ಅವರ ಸಂಪಾದಕೀಯ ಹುದ್ದೆಯಿಂದ ಕೆಳಗಿಳಿಸಲಾಯಿತು. ಆದರೆ HT ಮೀಡಿಯಾದ ಸಲಹೆಗಾರರಾಗಿ ಅವರನ್ನು ಮರು ನೇಮಿಸಲಾಯಿತು.[] ಇವರ ಅಂಕಣಗಳನ್ನು ಕೂಡ ರದ್ದುಪಡಿಸಲಾಯಿತು.
  • ಕರಣ್ ಥಾಪರ್: ಪ್ರಸ್ತುತದಲ್ಲಿ ಇನ್ ಫೋಟೈನ್ಮೆಂಟ್ ಟೆಲಿವಿಷನ್ ನ ಅಧ್ಯಕ್ಷರಾಗಿದ್ದು, ಭಾರತದ ಪ್ರಮುಖ ದೂರದರ್ಶನ ವಿಶ್ಲೇಷಕ ಮತ್ತು ಸಂದರ್ಶಕರಲ್ಲಿ ಒಬ್ಬರಾಗಿದ್ದಾರೆ. ಕರಣ್ ಥಾಪರ್ ವಾರದ ಅಂಕಣ "ಸಂಡೇ ಸೆಂಟಿ ಮೆಂಟ್ಸ್" ಅನ್ನು ಬರೆಯುತ್ತಾರೆ.
  • ಮಾನಸ್ ಚಕ್ರವರ್ತಿ: ಮಿಂಟ್ ನ ಬಂಡವಾಳ ಮಾರುಕಟ್ಟೆಯ ವಿಶ್ಲೇಷಕರಾಗಿದ್ದಾರೆ. ಭಾನುವಾರದ ದಿನಗಳಂದು ವಾರದ ಅಂಕಣ "ಲೂಸ್ ಕ್ಯಾನನ್" ಅನ್ನೂ ಬರೆಯುತ್ತಾರೆ'.
  • ಪೂನಂ ಸಕ್ಸೇನಾ: ಇವರು ಹಿಂದೂಸ್ತಾನ್ ಟೈಮ್ಸ್ ನ ಭಾನುವಾರದ ನಿಯತಕಾಲಿಕೆ ಬ್ರಂಚ್ ನ ಸಂಪಾದಕಿಯಾಗಿದ್ದಾರೆ. ಇವರು ವಾರದ TV ವಿಮರ್ಶಾತ್ಮಕ ಅಂಕಣ "ಸ್ಮಾಲ್ ಸ್ಕ್ರೀನ್" ಅನ್ನು ಬರೆಯುತ್ತಾರೆ.
  • ಇಂದ್ರಜಿತ್ ಹಾಜ್ರಾ: ಕಾದಂಬರಿಕಾರ ಮತ್ತು ಹಿಂದೂಸ್ತಾನ್ ಟೈಮ್ಸ್ ನ ಹಿರಿಯ ಸಂಪಾದಕರಾಗಿದ್ದಾರೆ, ಹಜ್ರಾ ವಾರದ ಅಂಕಣ "ರೆಡ್ ಹೆರಿಂಗ್" ಅನ್ನು ಬರೆಯುತ್ತಾರೆ.
  • ಸೋನಲ್ ಕಲ್ರಾ: ಲೇಖಕಿ ಮತ್ತು HT ಸಿಟಿ ಯ ಸಂಪಾದಕಿಯಾಗಿದ್ದಾರೆ. ಇದು ಹಿಂದೂಸ್ತಾನ್ ಟೈಮ್ಸ್ ನ ದಿನನಿತ್ಯದ ಜೀವನಶೈಲಿ ಮತ್ತು ಮನೋರಂಜನೆಯ ಪುರವಣಿಯಾಗಿದೆ. ಇವರು ವಾರದ ಅಂಕಣ "ಎ ಕಾಲ್ಮರ್ ಯು" ಅನ್ನು ಬರೆಯುತ್ತಾರೆ.
  • ಖುಷ್ವಂತ್ ಸಿಂಗ್: ಇವರು ಸಂಪಾದಕೀಯ ಬರಹಗಾರರಾಗಿದ್ದು, ಇವರ ಅಂಕಣ "ವಿತ್ ಮಾಲೀಸ್ ಟುವರ್ಡ್ಸ್ ಒನ್ ಅಂಡ್ ಆಲ್", ಭಾನುವಾರದ ಆವೃತ್ತಿಯಲ್ಲಿ ಪ್ರಕಟವಾಗುತ್ತದೆ.
  • ಬರ್ಖಾ ದತ್ತ: ಪತ್ರಿಕೋದ್ಯಮಿ ಮತ್ತು NDTV ಸಮೂಹ ಸಂಪಾದಕರು. ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುವ ಅಂಕಣವನ್ನು ಬರೆಯುತ್ತಾರೆ.
  • ಕಾದಂಬರಿ ಮುರಳಿ: ಪ್ರಸ್ತುತದಲ್ಲಿ ಮಾಜಿ-ರಾಷ್ಟ್ರೀಯ ಕ್ರೀಡಾ ಸಂಪಾದಕಿಯಾಗಿದ್ದಾರೆ. ಕಾದಂಬರಿ HT ಯೊಳಗೆ ಅನೇಕ ಹುದ್ದೆಗಳನ್ನು ಅಲಂಕರಿಸಿದರು, ಆದರೆ ಹೆಚ್ಚಾಗಿ ರಾಷ್ಟ್ರೀಯ ಕ್ರೀಡಾ ಸಂಪಾದಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ವಿಶ್ವದ ಯಾವುದೇ ಪ್ರಮುಖ ವೃತ್ತಪತ್ರಿಕೆಯಲ್ಲಿ ಇಂತಹ ಹುದ್ದೆ ಅಲಂಕರಿಸಿದಂತಹ ಮೊದಲ ಮಹಿಳೆಯಾಗಿದ್ದಾರೆ. ಈಗ ಅವರು ಕ್ರೀಡಾ ವಿವರಗಳನ್ನು ಒಳಗೊಂಡ ಭಾರತದ ಪ್ರಧಾನ ಸಂಪಾದಕಿಯಾಗಿದ್ದಾರೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಟೆಂಪ್ಲೇಟು:Portal

  • ಟೈಮ್ಸ್ ಆಫ್ ಇಂಡಿಯಾ.
  • ದಿ ಹಿಂದೂ
  • ಪ್ರಸರಣದ ಆಧಾರದ ಮೇಲಿನ ಭಾರತದಲ್ಲಿನ ವೃತ್ತಪತ್ರಿಕೆಗಳ ಪಟ್ಟಿ
  • ಪ್ರಸರಣದ ಆಧಾರದ ಮೇಲಿನ ವಿಶ್ವದಲ್ಲಿನ ವೃತ್ತಪತ್ರಿಕೆಗಳ ಪಟ್ಟಿ

ಉಲ್ಲೇಖಗಳು

[ಬದಲಾಯಿಸಿ]
  1. [9] ^ "ನಮ್ಮ ಬಗ್ಗೆ." HT ಮೀಡಿಯಾ. 2008-10-30 ರಂದು ಮರು ಸಂಪಾದಿಸಲಾಯಿತು.
  2. "Indian Readership Survey (IRS) 2010 — Quarter 1". Newswatch.in. 30 June 2010. Archived from the original on 2011-01-01. Retrieved 2007-10-16.
  3. ., Hesperides (2007). Hindustan Times Contempt Case (August-November, 1941). READ BOOKS. p. 283. ISBN 1406767484. {{cite book}}: |last= has numeric name (help); Cite has empty unknown parameter: |coauthors= (help)
  4. ಬಿಸ್ ನೆಸ್ ಟುಡೇ ಎಡಿಟರ್ ಸಂಜಯ್ ನಾರಾಯಣ್ ರೆಸೈನ್ಸ್; ಟು ಜಾಯಿನ್ ಹಿಂದೂಸ್ತಾನ್ ಟೈಮ್ಸ್ ಆಸ್ ಎಡಿಟರ್-ಇನ್-ಚೀಫ್ Archived 2018-01-03 ವೇಬ್ಯಾಕ್ ಮೆಷಿನ್ ನಲ್ಲಿ. ಎಕ್ಸ್ ಜೇಂಜ್4ಮೀಡಿಯ
  5. "Transcript: Radia and Vir Sanghvi". India Today. 2010-11-19.
  6. "Until Barkha Dutt, Vir Sanghvi resign, boycott NDTV & Hindustan Times?". Newspostindia.com. Archived from the original on 2010-11-23. Retrieved 2010-12-03. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  7. "Vir Sanghvi's designation changed, he says no link to controversy". Indian Express. Retrieved 2010-12-03.

ಬಾಹ್ಯ ಕೊಂಡಿಗಳು

[ಬದಲಾಯಿಸಿ]