ವಿಷಯಕ್ಕೆ ಹೋಗು

ಆನಂದಬಜಾರ್ ಪತ್ರಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನಂದಬಜಾರ್ ಪತ್ರಿಕಾ
আনন্দবাজার পত্রিকার লোগো.svg
AnandabazarFront.JPG
Front page of 5 March 2009
ವಿಧDaily ದೈನಿಕ
ಸ್ವರೂಪBroadsheet
ಯಜಮಾನಎಬಿಪಿ ಗುಂಪು
ಸಂಪಾದಕIshani Dutta Ray[]
ಸ್ಥಾಪನೆ13 ಮಾರ್ಚಿ 1922
ಭಾಷೆಬಂಗಾಳಿ
ಪ್ರಧಾನ ಕಚೇರಿಕಲ್ಕತ್ತಾ, West Bengal, ಭಾರತ
ಸೋದರಿ ಪತ್ರಿಕೆಗಳುThe Telegraph (Kolkata)
OCLC number187024438
ಅಧಿಕೃತ ಜಾಲತಾಣwww.anandabazar.com

ಆನಂದಬಜಾರ್ ಪತ್ರಿಕಾ (ಬಂಗಾಳಿ: আনন্দবাজার,]) ಎಬಿಪಿ ಗ್ರೂಪ್ ಒಡೆತನದ ಭಾರತೀಯ ಬಂಗಾಳಿ ಭಾಷೆಯ ದಿನಪತ್ರಿಕೆ. ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ ಪ್ರಕಾರ, ಇದು ಡಿಸೆಂಬರ್ 2019 ರ ಹೊತ್ತಿಗೆ 1 ಮಿಲಿಯನ್ ಪ್ರತಿಗಳ ಪ್ರಸರಣವನ್ನು ಹೊಂದಿದೆ[]. ಇದರ ಪ್ರಮುಖ ಸ್ಪರ್ಧಿಗಳು ಬಾರ್ತಮಾನ್, ಐ ಸಮಯ್ ಮತ್ತು ಸಾಂಗ್‌ಬಾದ್ ಪ್ರತಿದಿನ್.

ತುಷಾರ್ ಕಾಂತಿ ಘೋಷ್ ಮತ್ತು ಅವರ ತಂದೆ ಶಿಶಿರ್ ಕುಮಾರ್ ಘೋಷ್ ಅವರು 1876 ರಲ್ಲಿ ಬ್ರಿಟಿಷ್ ಭಾರತದ (ಈಗ ಬಾಂಗ್ಲಾದೇಶ) ಜೆಸ್ಸೋರ್ ಜಿಲ್ಲೆಯ ಮಾಗುರಾ ಎಂಬ ಸಣ್ಣ ಹಳ್ಳಿಯಲ್ಲಿ ಬಂಗಾಳಿ ಪತ್ರಿಕೆ ಪ್ರಕಟಿಸಿದರು. ತುಷರ ಕಾಂತಿಯ ಅಜ್ಜಿಯ ಸಹೋದರಿ ಆನಂದೋಮಾಯಿಯವರ ಹೆಸರನ್ನು ಅವರು ಆನಂದ ಬಜಾರ್ ಎಂದು ಹೆಸರಿಸಿದ್ದಾರೆ. ಆದರೆ, ಶೀಘ್ರದಲ್ಲೇ ಪತ್ರಿಕೆ ಸತ್ತುಹೋಯಿತು.ಆದರೆ 1886 ರಲ್ಲಿ, ಘೋಸ್ ತನ್ನ ಅಜ್ಜಿ ಅಮೃತಮೊಯಿಯವರ ಹೆಸರಿನಲ್ಲಿ ಅಮೃತಾ ಬಜಾರ್ ಪತ್ರಿಕಾ ಹೆಸರಿನ ಮತ್ತೊಂದು ಪತ್ರಿಕೆಯನ್ನು ಪ್ರಕಟಿಸಿದ.[]

ಮುಂದೆ 1922 ರಲ್ಲಿ ಆನಂದಬಜಾರ್ ಪತ್ರಿಕಾ ಪತ್ರಿಕೆಯನ್ನು ಮಾಲೀಕ ಸುರೇಶ್ ಚಂದ್ರ ಮಜುಂದಾರ್ ಮತ್ತು ಸಂಪಾದಕ ಪ್ರಫುಲ್ಲಾ ಕುಮಾರ್ ಸರ್ಕಾರ್ ಅವರು ಪುನರಾರಂಭಿಸಿದರು. ಇದನ್ನು ಮೊದಲು 13 ಮಾರ್ಚ್ 1922 ರಂದು ಅವರ ಮಾಲೀಕತ್ವದಲ್ಲಿ ಮುದ್ರಿಸಲಾಯಿತು ಮತ್ತು ಇದು ಬ್ರಿಟಿಷ್ ಆಡಳಿತಕ್ಕೆ ವಿರುದ್ಧವಾಗಿತ್ತು. .[] 1922 ರಲ್ಲಿ ಇದು ಮೊದಲು ನಾಲ್ಕು ಪುಟಗಳ ಸಂಜೆಪತ್ರಿಕೆಯಾಗಿ ಪ್ರತಿದಿನ ಪ್ರಕಟವಾಯಿತು. ಮೊದಲ ಬಣ್ಣದ ಮುದ್ರಣವು ಪುರವಣಿ ವಿಭಾಗವಾಗಿತ್ತು. ವೃತ್ತಪತ್ರಿಕೆಯ ಅಂತರಜಾಲ ಆವೃತ್ತಿಯನ್ನು 2001 ರಲ್ಲಿ ಪ್ರಾರಂಭಿಸಲಾಯಿತು. ಮುದ್ರಿತ ಪತ್ರಿಕೆಯಲ್ಲಿ ಜಾಹೀರಾತನ್ನು ಸಹ ಒದಗಿಸುತ್ತದೆ.[] .ಫಾರ್ಚೂನ್ ಇಂಡಿಯಾ ನಿಯತಕಾಲಿಕವನ್ನು ಪ್ರಕಟಿಸಲು 2010 ರಲ್ಲಿ ಟೈಮ್ ಇಂಕ್ ಎಬಿಪಿ ಗ್ರೂಪ್‌ನೊಂದಿಗೆ ಪರವಾನಗಿ ಒಪ್ಪಂದ ಮಾಡಿಕೊಂಡಿತು. ಈ ಪತ್ರಿಕೆ ಪ್ರತಿವರ್ಷ ಫಾರ್ಚೂನ್ ಇಂಡಿಯಾ 500 ಪಟ್ಟಿಯನ್ನು ಪ್ರಕಟಿಸುತ್ತದೆ. []

ಉಲ್ಲೇಖಗಳು

[ಬದಲಾಯಿಸಿ]
  1. "Exit of Anandabazar Patrika Editor Heightens Concerns of Press Freedom, Staff Cutbacks". The Wire. Retrieved 7 June 2020.
  2. "Highest Circulated Daily Newspapers (language wise)" (PDF). Audit Bureau of Circulations. Retrieved 5 January 2020.
  3. "The Tribune, Chandigarh, India - Nation". www.tribuneindia.com. Retrieved 2016-09-10.
  4. "Ananda Bazar Patrika Uniqueness: red ink printing" (PDF). Media Mimansa. 2009. Archived from the original (PDF) on 11 June 2012. Retrieved 13 March 2013.
  5. http://archives.anandabazar.com/oldarchives.html?date=01&month=01&year=101[not in citation given]
  6. India magazine[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]