ದಿ ಟ್ರಿಬ್ಯೂನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಟ್ರಿಬ್ಯೂನ್ ಚಂಡೀಗಡ, ದಹಲಿ, ಜಲಂಧರ್, ದೆಹ್ರಾದೂನ್ ಮತ್ತು ಬಟಿಂಡಗಳಿಂದ ಪ್ರಕಟವಾಗುವ ಒಂದು ಭಾರತೀಯ ಇಂಗ್ಲೀಷ್ ಭಾಷೆಯ ದಿನಪತ್ರಿಕೆ ಆಗಿದೆ. ಇದು ಸರ್ದಾರ್ ದಯಾಳ್ ಸಿಂಗ್ ಮಜಿಥಿಯ , ಒಬ್ಬ ಲೋಕೋಪಕಾರಿ,ಯವರ ಮೂಲಕ ಲಾಹೋರ್ ನಲ್ಲಿ (ಈಗ ಪಾಕಿಸ್ತಾನದಲ್ಲಿದೆ),೨ ಫೆಬ್ರವರಿ ೧೮೮೧ ರಂದು ಸ್ಥಾಪಿಸಲಾಯಿತು, ಮತ್ತು ಇದು ಐದು ವ್ಯಕ್ತಿಗಳು ಒಳಗೊಂಡಿರುವ ಒಂದು ಧರ್ಮದರ್ಶಿಗಳ ಟ್ರಸ್ಟ್ ನಿಂದ ನಡೆಸಲ್ಪಡುತ್ತಿದೆ. ಇದೊಂದು ಪ್ರಮುಖ ಮತ್ತು ಗೌರವಾನ್ವಿತ ಭಾರತೀಯ ವೃತ್ತಪತ್ರಿಕೆಯಾಗಿದೆ. ಜಗತ್ತಿನಾದ್ಯಂತ ಇದರ ಪ್ರಸಾರವಿದೆ.[೧][೨][7] ಭಾರತದಲ್ಲಿ ಪಂಜಾಬ್ ಹರಿಯಾಣ, ಹಿಮಾಚಲ ಪ್ರದೇಶ, ಮತ್ತು ಚಂಡೀಗಡ ಕೇಂದ್ರಾಡಳಿತ ಪ್ರದೇಶ. [೩] ರಾಜ್ಯಗಳ ಪ್ರಮುಖ ದಿನಪತ್ರಿಕೆಯಾಗಿದೆ

ಇಂಗ್ಲೀಷ್ ರಲ್ಲಿ ಟ್ರಿಬ್ಯೂನ್, ಹೊರತಾಗಿ ದೈನಿಕ್ ಟ್ರಿಬ್ಯೂನ್ (ಹಿಂದಿ)ಯಲ್ಲಿ ಮತ್ತು ಪಂಜಾಬಿ ಟ್ರಿಬ್ಯೂನ್: ಎಂಬ ಎರಡು ಸಹೋದರಿ ಪ್ರಕಾಶನವನ್ನು ಹೊಂದಿದೆ. ನರೇಶ್ ಕೌಶಲ್ ದೈನಿಕ್ ಟ್ರಿಬ್ಯೂನ್ ಮತ್ತು ವರಿಂದರ್ ವಾಲಿಯಾ ಪಂಜಾಬಿ ಟ್ರಿಬ್ಯೂನ್ ಪತ್ರಿಕೆಯ ಸಂಪಾದಕರಾಗಿದ್ದಾರೆ. ರಾಜ್ ಚೆಂಗಪ್ಪ ಟ್ರಿಬ್ಯೂನ್ ಗ್ರೂಪ್ ‍ನ ಮುಖ್ಯ ಸಂಪಾದಕ ರಾಗಿದ್ದಾರೆ . ಟ್ರಿಬ್ಯೂನ್ ಇಂಟರ್ನೆಟ್ ಆವೃತ್ತಿಯನ್ನು ಜುಲೈ ೧೯೯೮ ರಲ್ಲಿ ಪ್ರಾರಂಭಿಸಲಾಯಿತು. ಉಪ ಸಂಪಾದಕ ರೂಪಿಂದರ್ ಸಿಂಗ್ ರಾಗಿದ್ದರು. ಪಂಜಾಬಿ ಟ್ರಿಬ್ಯೂನ್ ಮತ್ತು ದೈನಿಕ್ ಟ್ರಿಬ್ಯೂನ್ ನ ಇಂಟರ್ನೆಟ್ ಆವೃತ್ತಿಗಳು ೧೬ ಆಗಸ್ಟ್ ೨೦೧೦ ರಂದು ಬಿಡುಗಡೆಯಾಗಿದೆ . [೪] ಎಲ್ಲಾ ಮೂರು ಪತ್ರಿಕೆಗಳನ್ನು 'ಟ್ರಿಬ್ಯೂನ್ ಟ್ರಸ್ಟ್' ಪ್ರಕಟಿಸುತ್ತದೆ.

ಉಲ್ಲೇಖಗಳು‌‌[ಬದಲಾಯಿಸಿ]

  1. Mondotimes.com: ಪ್ರಮುಖ ಮಾಧ್ಯಮ
  2. "Himchal.us: ಹಿಮಾಚಲಕ್ಕೆ ಭಾರತ ಟ್ರಿಬ್ಯೂನ್ ಇಂಗ್ಲೀಷ್ ಭಾಷೆ ಆವೃತ್ತಿಯ ಪ್ರಕಟಣೆ". Archived from the original on 2008-02-09. Retrieved 2012-05-12.
  3. "The Tribune Trust places another order with QI Press Controls". indianprinterpublisher.com/. February 08, 2010. Archived from the original on 27 ಡಿಸೆಂಬರ್ 2010. Retrieved 22 August 2011. Check date values in: |date= and |archive-date= (help)
  4. "Varinder Walia made Editor of Punjabi Tribune". Exchange4media.com. 1978-08-15. Archived from the original on 2011-07-20. Retrieved 2011-07-30.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]