ಆಜ್ ಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Aajkaal

Aajkaal
ಚಿತ್ರ:Aajkaal Frontpage of 28.03.2012.jpg
Front page of 28th March 2012
ವರ್ಗದೈನಿಕ ವಾರ್ತಾಪತ್ರಿಕೆ
ವಿನ್ಯಾಸBroadsheet
ಮಾಲೀಕAajkaal Publishers Pvt. Ltd.
ಸಂಪಾದಕಅಶೋಕ್ ದಾಸ್‍ಗುಪ್ತಾ
ಸ್ಥಾಪನೆ೧೯೮೧[೧]
Political alignmentLeftist
ಭಾಷೆಬಂಗಾಳಿ
ಕೇಂದ್ರ ಕಾರ್ಯಾಲಯಕಲ್ಕತ್ತಾ, ಭಾರತ
ಅಧಿಕೃತ ತಾಣwww.aajkaal.net

ಆಜ್ ಕಲ್ (ಉಚ್ಚಾರಣೆ: IPA: [aːdʒkaːl] ಮತ್ತು ಸಂಜೆ ಆವೃತ್ತಿ ಸಂಧ್ಯಾ ಆಜ್ ಕಲ್ ) ಕೋಲ್ಕತಾ, ಭಾರತ ದಿಂದ ಪ್ರಸಾರ ವಾಗುವ ಒಂದು ಬಂಗಾಳಿ ಪತ್ರಿಕೆಗಳು ಆಗಿದೆ. ಆಜ್ ಕಲ್ ಏಕಕಾಲದಲ್ಲಿ ಕೋಲ್ಕತಾ, ಸಿಲಿಗುರಿ ಯಿಂದ ಪ್ರಕಟ ವಾಗುತ್ತದೆ ಮತ್ತು ಅದರ ತ್ರಿಪುರ ಆವೃತ್ತಿ ಅಗರ್ತಲ ರಿಂದ ಪ್ರಕಟವಾಗುತ್ತದೆ . ಪತ್ರಿಕೆಯನ್ನು ಅಭಿಕ್ ಕುಮಾರ್ ಘೋಷ್ ೧೯೮೧ ರಲ್ಲಿ ಪ್ರಾರಂಭಿಸಿದರು, ಮತ್ತು ೧೯೮೦ ರಲ್ಲಿ ಪತ್ತ್ರಿಕೆಯು ಭಾರತೀಯ ಪತ್ರಿಕೋದ್ಯಮದ ರೂಪಾಂತರದ ಭಾಗವಾಗಿತ್ತು . ಆಜ್ ಕಲ್ ತನ್ನ ಎಡಪಂಥೀಯ ದೃಷ್ಟಿಕೋನದಿಂದ ಮತ್ತು ಕ್ರೀಡೆಗಳ ಪ್ರಾಶಸ್ತ್ಯ ದಿಂದ ಪಶ್ಚಿಮ ಬಂಗಾಳದ ಅತ್ಯಂತ ಸ್ಪರ್ಧಾತ್ಮಕ ವೃತ್ತಪತ್ರಿಕೆ ಮಾರುಕಟ್ಟೆಯಲ್ಲಿ ಉಳಿಯಲು ಶ್ರಮಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವೀಕ್ಷಕರು [who?] ತನ್ನ ಕ್ರೀಡೆ ಸುದ್ದಿ ಗುಣಮಟ್ಟದಲ್ಲಿ ಹದಗೆಟ್ಟಿತು ಎಂದು ಅಭಿಪ್ರಾಯ ಪಡುತ್ತಾರೆ . ಇದು ಜ್ಯೋತಿಷ್ಯ, ಭವಿಷ್ಯವನ್ನು ಪ್ರಕಟಿಸದೇ ಇರುವಂತಹ ಕೆಲವೇ ಭಾರತೀಯ ದಿನಪತ್ರಿಕೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಹೆಚ್ಚು ವಿಶ್ಲೇಷಣಾತ್ಮಕ ವೈಶಿಷ್ಟ್ಯಗಳನ್ನು ಅಳವಡಿಸಲು ಸ್ವರೂಪದಲ್ಲಿ ಬದಲಾವಣೆಯನ್ನು ತಂದಿದೆ.

ಪತ್ರಿಕೆಯ ಮೊದಲ ಸಂಪಾದಕ ಪ್ರಸಿದ್ದ ಪತ್ರಕರ್ತ ಶ್ರೀ ಗೌರ್ ಕಿಶೋರ್ ಘೋಷ್. ಪ್ರಸ್ತುತ ಸಂಪಾದಕ ಅಶೋಕ್ ದಾಸ ಗುಪ್ತಾ, ಕ್ರೀಡಾ ಪತ್ರಕರ್ತನಾಗಿದ್ದು ಕೂಡ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಸಂಪಾದಕರಾದವರಲ್ಲಿ ಮೊದಲಿಗರಾಗಿದ್ದಾರೆ.

ಉಲ್ಲೇಖಗಳು‌‌[ಬದಲಾಯಿಸಿ]

  1. The Illustrated Weekly of India. Published for the proprietors, Bennett, Coleman & Company, Limited, at the Times of India Press. 1988. p. 47.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

"https://kn.wikipedia.org/w/index.php?title=ಆಜ್_ಕಲ್&oldid=1080568" ಇಂದ ಪಡೆಯಲ್ಪಟ್ಟಿದೆ