ವಾರ್ತಾ ಭಾರತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾರ್ತಾ ಭಾರತಿ
ವರ್ಗದೈನಿಕ
ವಿನ್ಯಾಸಕಾಗದ
ಮಾಲೀಕದ ಕಮ್ಯುನಿಟಿ ಮೀಡಿಯಾ ಟ್ರಸ್ಟ್
ಸ್ಥಾಪಕಅಬ್ದುಸ್ಸಲಾಮ್ ಪುತ್ತಿಗೆ
ಪ್ರಕಾಶಕಅಬ್ದುಸ್ಸಲಾಮ್ ಪುತ್ತಿಗೆ
ಸಂಪಾದಕಅಬ್ದುಸ್ಸಲಾಮ್ ಪುತ್ತಿಗೆ
ಸುದ್ದಿ ಸಂಪಾದಕಬಿ ಎಮ್ ಬಶೀರ್
ಸ್ಥಾಪನೆ೨೯ನೇ ಆಗಷ್ಟ್ ೨೦೦೩
ಭಾಷೆಕನ್ನಡ
ಕೇಂದ್ರ ಕಾರ್ಯಾಲಯಮಂಗಳೂರು, ಕರ್ನಾಟಕ, ಭಾರತ.
ಅಧಿಕೃತ ತಾಣvarthabharati.in
ವಾರ್ತಾಭಾರತಿ ಪ್ರತಿಗಳು

ವಾತಾ೯ ಭಾರತಿ ಮಂಗಳೂರು ಮತ್ತು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿರುವ ಕನ್ನಡ ದಿನಪತ್ರಿಕೆ. ೨೦೦೩ರಲ್ಲಿ ವಾತಾ೯ ಭಾರತಿಯನ್ನು ಎ.ಎಸ್. ಪುತ್ತಿಗೆಯವರು ಮಂಗಳೂರಿನಿಂದ ಪ್ರಾರಂಭಿಸಿದರು.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉದುಪಿ, ಉತ್ತರ ಕನ್ನಡ ಮಾತ್ರವಲ್ಲದೆ ನೆರೆಯ ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲೂ ಪತ್ರಿಕೆ ಓದುಗರನ್ನು ಪಡೆಯಿತು. ಪತ್ರಿಕೆ ಆರಂಭವಾದ ಮೂರನೇ ವರ್ಷಕ್ಕೆ ಬೆಂಗಳೂರು ಆವೃತ್ತಿಯನ್ನು ಆರಂಭಿಸಲಾಯಿತು. ವಾರ್ತಾಭಾರತಿಯ ಪ್ರಸಾರ ರಾಜ್ಯಾದ್ಯಂತ ವ್ಯಾಪಿಸಿದೆ. ಕರ್ನಾಟಕದ ಹೊರಗೂ ಸಹ ವಾರ್ತಾಭಾರತಿಗೆ ಓದುಗರಿದ್ದಾರೆ.

ಇತಿಹಾಸ[ಬದಲಾಯಿಸಿ]

ಆಗಸ್ಟ್ ೨೯, ೨೦೦೩ರಂದು ಮಂಗಳೂರನ್ನು ಕೇಂದ್ರವಾಗಿಟ್ಟು ಮಾರುಕಟ್ಟೆಗೆ ಬಂತು. ಅಬ್ಧುಸ್ಸಲಾಮ್ ಪುತ್ತಿಗೆ (ಎ.ಎಸ್. ಪುತ್ತಿಗೆ) ಯವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಈ ದೈನಿಕವನ್ನು ಮಾಧ್ಯಮ ಕಮ್ಯುನಿಕೇಶನ್ಸ್ ಲಿ. ಮುದ್ರಿಸುತ್ತಿದೆ. ಎಸ್.ಎಂ. ಸಯ್ಯದ್ ಖಲೀಲ್ ಮಾಧ್ಯಮ ಕಮ್ಯುನಿಕೇಶನ್ಸ್ ಲಿ. ನ ಅಧ್ಯಕ್ಷರಾಗಿದ್ದು, ಅಬ್ದುಸ್ಸಲಾಮ್ ಪುತ್ತಿಗೆಯವರು ದೈನಿಕದ ಆಡಳಿತ ನಿರ್ದೇಶಕರೂ ಆಗಿದ್ದಾರೆ.

ಅಂಕಣಗಳು[ಬದಲಾಯಿಸಿ]

ವಾರ್ತಾಭಾರತಿಯಲ್ಲಿ ನಿಯಮಿತವಾಗಿ ಪ್ರಕತವಾಗುವ ಅಂಕಣಗಳು - ರಾಜಕೀಯ, ಪರಿಸರ, ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ಇತ್ಯಾದಿಗಳ ಕುರಿತು ನಾಡಿನ ಖ್ಯಾತ ಲೇಖಕರು, ಚಿಂತಕರು ಪ್ರತಿವಾರ ಪತ್ರಿಕೆಯಲ್ಲಿ ಬರೆಯುತ್ತಾರೆ. ವಾರ್ತಾಭಾರತಿಯಲ್ಲಿ ಪ್ರಕಟವಾಗುವ ಸ್ಥಿರ ಅಂಕಣಗಳು ಮತ್ತು ಅಂಕಣಕಾರರ ಹೆಸರುಗಳು ಹೀಗಿವೆ:

ದಿನ ಅಂಕಣದ ಹೆಸರು ಅಂಕಣಕಾರರು
ಸೋಮವಾರ ಪ್ರಚಲಿತ ಸನತ್ ಕುಮಾರ್ (ಪತ್ರಕರ್ತ)
ಗುರುವಾರ ನಿಜಾರ್ಥ ಶಿವಸುಂದರ್ (ಲೇಖಕ, ಮಾನವ ಹಕ್ಕುಗಳ ಹೋರಾಟಗಾರ)
ಶುಕ್ರವಾರ ಆಶಯ ಡಾ. ಬಿ. ಭಾಸ್ಕರ್ ರಾವ್ (ಶಿಕ್ಷಣ ತಜ್ನ)
ರವಿವಾರ ಅಂತರಗಂಗೆ ಡಾ. ಸಿ. ಎಸ್. ದ್ವಾರಕನಾಥ್ (ನ್ಯಾಯವಾದಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ)
ರವಿವಾರ ನಗೆಮೊಗೆ ಭುವನೇಶ್ವರಿ ಹೆಗಡೆ(ಹಾಸ್ಯ ಲೇಖಕಿ)
ಸೋಮವಾರ ದಾರಿದೀಪ ಕೆ. ಟಿ. ಗಟ್ಟಿ (ಕಾದಂಬರಿಗಾರ)
ಮಾಸಿಕ ಗಲ್ಫ್ ಭಾರತಿ ಮರಳ ಹೆಜ್ಜೆಗಳು ಇರ್ಶಾದ್ ಮೊಡಬಿದ್ರೆ (ಲೇಖಕ, ಅನಿವಾಸಿ ಭಾರತೀಯ)

ರವಿವಾರದ ಪುರವಣಿ, ಸುಗ್ಗಿ[ಬದಲಾಯಿಸಿ]

ನಿತ್ಯದ ೧೨ ಪುಟಗಳೊಂದಿಗೆ ಪ್ರತಿ ರವಿವಾರ ಸುಗ್ಗಿ ಹೆಸರಿನ ನಾಲ್ಕು ಹೆಚ್ಚುವರಿ ಪುಟಗಳನ್ನು ಪುರವಣಿ ರೂಪದಲ್ಲಿ ವಾರ್ತಾಭಾರತಿ ಪ್ರಕಟಿಸುತ್ತಿದೆ. ನುಡಿಚಿತ್ರ, ಲೇಖನ, ಕಥೆ, ಕವನ, ವಿಮರ್ಶೆ, ಪುಸ್ತಕ ಪರಿಚಯ ಇತ್ಯಾದಿಗಳನ್ನು ಈ ಪುರವಣಿ ಹೊಂದಿದೆ. ಖುಷಿ ಖುಷಿ ಎಂಬ ವಿಭಾಗ ಮಕ್ಕಳಿಗಾಗಿ ಮೀಸಲು. ನೀತಿಕಥೆಗಳು, ಮಕ್ಕಳು ರಚಿಸಿದ ಚಿತ್ರಗಳು, ಮಕ್ಕಳ ಪದ್ಯಗಳು ಇತ್ಯಾದಿ ವಿಷಯಗಳು ಇದರಲ್ಲಿದೆ. ಚಿತ್ರಭಾರತಿ ವಿಭಾಗದಲ್ಲಿ ಪ್ರಚಲಿತ ಚಿತ್ರರಂಗದ ಬೆಳವಣಿಗೆಗಳು ಹಾಗೂ ಚಿತ್ರ ವಿಮರ್ಶೆಗಳಿರುತ್ತವೆ.

ಅಂಕಣಕ್ಕೆ ರಾಜ್ಯ ಅಕಾಡೆಮಿ ಪ್ರಶಸ್ತಿ[ಬದಲಾಯಿಸಿ]

ವಾರ್ತಾಭಾರತಿ ದೈನಿಕದಲ್ಲಿ ಪ್ರತಿ ವಾರ ಪ್ರಕಟವಾಗುತ್ತಿದ್ದ ಪರಿಸರ ಕಾಳಜಿ ಅಂಕಣ ಭೂಮಿಗೀತೆ. ಲೇಖಕ ಹಾಗೂ ಪರಿಸರ ಚಳವಳಿಯ ಸಕ್ರಿಯ ಕಾರ್ಯಕರ್ತ ಡಾ. ಟಿ. ಎಸ್. ವಿವೇಕಾನಂದ ಈ ಅಂಕಣವನ್ನು ವಾರ್ತಾಭಾರತಿಗಾಗಿ ಬರೆದಿದ್ದರು. ನಂತರ ಈ ಬರಹಗಳು ಭೂಮಿಗೀತೆ ಹೆಸರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ೨೦೦೬ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇದಕ್ಕೆ ದೊರಕಿದೆ.[ಸೂಕ್ತ ಉಲ್ಲೇಖನ ಬೇಕು]

ಸಂಪಾದಕರು[ಬದಲಾಯಿಸಿ]

ವಾರ್ತಾಭಾರತಿಯ ಸಂಪಾದಕರು ಎ.ಎಸ್. ಪುತ್ತಿಗೆಯವರು.

ಅಂತರಜಾಲ ತಾಣ[ಬದಲಾಯಿಸಿ]

ವಾರ್ತಾಭಾರತಿ.ನೆಟ್ ಅಥವಾ ವಾರ್ತಾಭಾರತಿ.ಇನ್ ವಾರ್ತಾಭಾರತಿ ದಿನಪತ್ರಿಕೆಯ ಅಂತರಜಾಲ ತಾಣ. ಅಂತರಜಾಲದ ಹೊಸ ತಂತ್ರಜ್ಞಾನ ಬಳಸಿ ಕನ್ನಡದಲ್ಲಿ ವಾರ್ತಾಭಾರತಿಯ ಅಂತರಜಾಲ ಆವೃತ್ತಿಯನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]