ಕರ್ನಾಟಕ ಸರ್ಕಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಧಾನ ಸೌದ:ಸರಕಾರದ ಮುಖ್ಯ ಆಡಳಿತ ಕೇಂದ್ರ
ಕರ್ನಾಟಕದ ೩೦ ಜಿಲ್ಲೆಗಳನ್ನು ತೋರಿಸುವ ಭೂಪಟ

ಕರ್ನಾಟಕ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ. ಐದು ವರ್ಷದ ಅವಧಿಗೆ ನೇಮಿತರಾದ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲವನ್ನು ನೇಮಿಸುತ್ತಾರೆ. ರಾಜ್ಯಪಾಲರು ರಾಜ್ಯದ ಸಾಂಪ್ರದಾಯಿಕ ನಾಯಕರಾಗಿರುತ್ತಾರಾದರೂ, ಸರ್ಕಾರದ ದೈನಂದಿನ ನಿರ್ವಹಣೆಯು ಗಮನಾರ್ಹವಾದ ಶಾಸನಾಧಿಕಾರಗಳನ್ನು ವಹಿಸಲಾದ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲದ ಉಸ್ತುವಾರಿಯಲ್ಲಿರುತ್ತದೆ.