ಪ್ರಜಾಸತ್ತಾತ್ಮಕ ಪೌರತ್ವ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಶಾಲೆಗಳಲ್ಲಿ ಪೌರನೀತಿ ಬೋದನೆಯು ಪ್ರಮುಖ ಅಂಶ "ಆದರ್ಶ ಪೌರ" ರನ್ನು ರೂಪಿಸಿ ಪ್ರಜಾಪ್ರಭುತ್ವ ಸಮಾಜದ ಉತ್ತಮ ಪೌರರನ್ನು ರೂಪಿಸುವುದಾಗಿದೆ. ನಾವುಗಳು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದು ಇಲ್ಲಿ ವಿವಿದ ಭಾಷೆ, ಪ್ರಾಂತ ಮತೀಯ ಜನತೆಯನ್ನು ಹೊಂದಿದ್ದರೂ ನಮ್ಮ ಸಂವಿಧಾನ ಪ್ರತಿಯೊಬ್ಬ ಪೌರನಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ ಎಂದು ತಿಳಿಸಬೇಕು. ಹಾಗೆಯೇ ಪ್ರತಿ ಪೌರನಿಗೂ ನಿರ್ದಿಷ್ಟ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು ಅವುಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುವಂತೆ ತಿಳಿಸಬೇಕು. ಅಲ್ಲದೇ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿನ ಎಲ್ಲ ಅಂಶಗಳನ್ನು ಪೌರನಿಗೆ ವಿವರಿಸಿ ಅರ್ಥೈಸಿ ಕರಗತ ಮಾಡಿಕೊಂಡು ಅವುಗಳನ್ನೇ ನಮ್ಮ ಜೀವನ ಮೌಲ್ಯಗಳನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡುವುದಾಗಿದೆ.
<
ಸಂವಿಧಾನ ಪ್ರಸ್ತಾವನೆಯಲ್ಲಿನ ಸ್ವತಂತ್ರ, ಸಮಾನತೆ, ಭ್ರಾತ್ರತ್ವ, ಜಾತ್ಯಾತೀತತೆ, ಸಮಾಜವಾದಿ ಇತ್ಯಾದಿ ಅಂಶಗಳ ಬಗ್ಗೆ ಪೌರರಿಗೆ ಮನವರಿಕೆ ಮಾಡಿ ತಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವಂತೆ ಮಕ್ಕಳಿಗೆ ತಿಳಿಸುವುದು ಅಂದರೆ ಈ ಎಲ್ಲಾ ಅಂಶಗಳನ್ನು ಶಿಕ್ಫಕ ಪೌರನೀತಿ ಬೋದನೆಯ ಮೂಲಕ ಮಕ್ಕಳಿಗೆ ತಿಳಿಸಿ ಉತ್ತಮ ಪ್ರಜಾಸತ್ತಾತ್ಮಕ ಪೌರರನ್ನಾಗಿ ರೂಪಿಸಬೇಕು.