ರಾಮನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮನಗರ ಜಿಲ್ಲೆ
ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ
ಚುಂಚಿ ಜಲಪಾತ
ಮೇಕೆದಾಟು
ಸಾವನದುರ್ಗ
ರವಿಸಿದ್ದೇಶ್ವರ ದೇವಾಲಯ
ಭೂಮಿ
ಕರ್ನಾಟಕ ಭೂಪಟದಲ್ಲಿ ರಾಮನಗರ ಜಿಲ್ಲೆ
ದೇಶಭಾರತ
ನಾಡುಕರ್ನಾಟಕ
ಒಟ್ಟು ಭೂ ಅಳತೆ೩,೫೧೬ ಚ.ಕಿ.ಮೀ
ಕಾಡು೧೮.೯೦%
(೬೬೪.೬೯ ಚ.ಕಿ ಮೀ)
ಆಡಳಿತ
ಜಿಲ್ಲಾಡಳಿತ
ಜಿಲ್ಲಾಕೇಂದ್ರರಾಮನಗರ
ತಾಲೂಕುಗಳು
  • ರಾಮನಗರ
  • ಚನ್ನಪಟ್ಟಣ
  • ಕನಕಪುರ
  • ಮಾಗಡಿ
ಭಾಷೆ
ನುಡಿಕನ್ನಡ
ಲಿಪಿಕನ್ನಡ ಲಿಪಿ
ಪ್ರತಿನಿಧಿ
ಜನ
ಗಣತಿ೨೦೧೧
ಒಟ್ಟು ಜನರು೧೦,೮೨,೬೩೬
ಪಟ್ಟಣದವರು೭೫.೨೭ %
ಹಳ್ಳಿಯವರು೨೪.೭೩%
ಜನದಟ್ಟಣೆ೩೦೮/km²
ಹೆಣ್ಣು/ಗಂಡು೯೭೬♀/೧,೦೦೦♂
ಓದು ಬರಹ ಗೊತ್ತಿರುವವರು೬೯.೨೨%
ಇತರೆ ಮಾಹಿತಿ
ಸಮಯಯುಟಿಸಿ+5:30
ದಿನಾಂಕ ಬರೆಯುವ ರೀತಿದಿನ-ತಿಂಗಳು-ಇಸವಿ
ಗಾಡಿ ಓಡಿಸುವ ಬದಿಎಡಬದಿ
ಗಾಡಿ ಅಂಕಿ
  • ಕೆಎ ೪೨ ರಾಮನಗರ
ಕರೆ ಮಾಡುವ ಅಂಕಿ+೯೧
ಸಂಪರ್ಕ
ತುರ್ತು ಸಹಾಯವಾಣಿ೧೧೨
ಜಾಲತಾಣramanagara.nic.in

ರಾಮನಗರ ಕರ್ನಾಟಕದ ಒಂದು ನಗರ, ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ಕಸಬಾ ಹೋಬಳಿಯ ಕೇಂದ್ರವಾಗಿದೆ. ಈ ಮೊದಲು ಬೆಂಗಳೂರು ಜಿಲ್ಲೆಯ ಭಾಗವಾಗಿದ್ದು 1986ರಲ್ಲಿ ಬೆಂಗಳೂರು ಗ್ರಾಮಾಂತರ ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು ರೇಷ್ಮೆ ನಾಡು, ಕ್ಷೀರ ನಗರ, ಸಪ್ತಗಿರಿ ನಾಡು ಎಂದು ಖ್ಯಾತಿಗಳಿಸಿದೆ. ರಾಮನಗರ ತಾಲೂಕು ವಿಸ್ತೀರ್ಣ 630 ಚ.ಕಿ.ಮೀ ಹೊಂದಿದೆ.

ರಾಮನಗರ ನಗರ ಪ್ರದೇಶ ವ್ಯಾಪ್ತಿಯಲ್ಲಿ ರಾಮನಗರ, ಕೊತ್ತಿಪುರ, ಸಿಡ್ಲುಕಲ್ಲು, ಚನ್ನಮಾನಹಳ್ಳಿ, ಅರ್ಚಕರಹಳ್ಳಿ, ಐಜೂರು, ರಂಗರಾಯರ ದೊಡ್ಡಿ, ಬೋಳಪ್ಪನಹಳ್ಳಿ, ಚನ್ನೇನಹಳ್ಳಿ, ಕೇಶವಪುರ, ಚಾಮುಂಡಿಪುರ, ಜಿಗೇನಹಳ್ಳಿ, ರಾಯರದೊಡ್ಡಿ, ಕೆಂಪೇಗೌಡನ ದೊಡ್ಡಿ,ವಡೆರಹಳ್ಳಿ ಎಂಬ 15 ನಗರಗಳನ್ನು ಕೂಡಿ ರಾಮನಗರ ನಗರವಾಗಿದೆ.

ರಾಮನಗರ ಜಿಲ್ಲೆ 6 ತಾಲೂಕುಗಳನ್ನು ಹೊಂದಿದೆ ಅವುಗಳೆಂದರೆ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಕುಣಿಗಲ್, ಹಾರೋಹಳ್ಳಿಯನ್ನು 2020ರಲ್ಲಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.

ಬೇಡಿಕೆಯಿರುವ 5 ಹೊಸ ತಾಲೂಕುಗಳು ಕನಕಪುರ ತಾಲೂಕನ್ನು ವಿಭಜಿಸಿ ಹಾರೋಹಳ್ಳಿ ಮತ್ತು ಕೋಡಿಹಳ್ಳಿ ತಾಲೂಕು ರಚನೆ ಮಾಡಬೇಕು.

ರಾಮನಗರ ತಾಲೂಕನ್ನು ವಿಭಜಿಸಿ ಬಿಡದಿ ತಾಲೂಕು ರಚನೆ ಮಾಡಬೇಕು

ಮಾಗಡಿ ತಾಲೂಕನ್ನು ವಿಭಜಿಸಿ ಕುದೂರು ತಾಲೂಕು ರಚನೆ ಮಾಡಬೇಕು

ಕುಣಿಗಲ್ ತಾಲೂಕನ್ನು ವಿಭಜಿಸಿ ಹುಲಿಯೂರು ದುರ್ಗ ತಾಲೂಕು ರಚನೆ ಮಾಡಬೇಕು

ಕುಣಿಗಲ್ ತಾಲೂಕನ್ನು ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಬೇಕು ರಾಮನಗರ ಜಿಲ್ಲೆಯ ಒಟ್ಟು ವಿಸ್ತೀರ್ಣ 4497 ಚ.ಕಿ.ಮೀ.

ರಾಮನಗರ ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣ[ಬದಲಾಯಿಸಿ]

ರಾಮನಗರ ಜಿಲ್ಲೆಯ ತಾಲ್ಲೂಕುಗಳು:

ಜಿಲ್ಲೆ ತಾಲೂಕು ವಿಸ್ತೀರ್ಣ


1.ರಾಮನಗರ ಜಿಲ್ಲೆ 2021 (ಜನಗಣತಿ ಪ್ರಕಾರ)
1.ರಾಮನಗರ 630 ಚ.ಕಿ.ಮೀ
2.ಚನ್ನಪಟ್ಟಣ 540 ಚ.ಕಿ.ಮೀ
3.ಕನಕಪುರ 410 ಚ.ಕಿ.ಮೀ
4.ಮಾಗಡಿ 410 ಚ.ಕಿ.ಮೀ
5.ಹಾರೋಹಳ್ಳಿ 502 ಚ.ಕಿ.ಮೀ
ಹೊಸ ತಾಲ್ಲೂಕುಗಳು
7.ಕೋಡಿಹಳ್ಳಿ 630 ಚ.ಕಿ.ಮೀ
9.ಕುದೂರು 394 ಚ.ಕಿ.ಮೀ
10.ಬಿಡದಿ 00 ಚ.ಕಿ.ಮೀ
ಒಟ್ಟು ಜಿಲ್ಲೆಯ ವಿಸ್ತೀರ್ಣ 4006 ಚ.ಕಿ.ಮೀ

ರಾಮನಗರ ಜಿಲ್ಲೆಯ ಹೋಬಳಿಗಳು[ಬದಲಾಯಿಸಿ]

ರಾಮನಗರ ಜಿಲ್ಲೆಯ ಹೋಬಳಿಗಳು ತಾಲ್ಲೂಕುವಾರು

ಜಿಲ್ಲೆ ತಾಲೂಕು ಹೋಬಳಿ


01.ರಾಮನಗರ ಜಿಲ್ಲೆ
1.ರಾಮನಗರ ತಾಲ್ಲೂಕು
01.ರಾಮನಗರ ಕಸಬಾ ನಗರ ಸಭೆ
02.ಕೈಲಾಂಚ ಗ್ರಾಮ ಪಂಚಾಯತಿ
03.ಕೂಟಗಲ್ ಗ್ರಾಮ ಪಂಚಾಯತಿ
2.ಚನ್ನಪಟ್ಟಣ
01.ಚನ್ನಪಟ್ಟಣ ಕಸಬಾ ನಗರ ಸಭೆ
02.ಬೇವೂರು ಗ್ರಾಮ ಪಂಚಾಯತಿ
03.ಮಳೂರು ಗ್ರಾಮ ಪಂಚಾಯತಿ
04.ವಿರೂಪಾಕ್ಷಿ ಪುರ ಗ್ರಾಮ ಪಂಚಾಯತಿ
3.ಕನಕಪುರ
01.ಕನಕಪುರ ಕಸಬಾ ನಗರ ಸಭೆ
02.ಸಾತನೂರು ಪಟ್ಟಣ ಪಂಚಾಯಿತಿ
03.ದೊಡ್ಡ ಆಲಹಳ್ಳಿ, ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ
4.ಮಾಗಡಿ
01.ಮಾಗಡಿ ಕಸಬಾ ಪುರ ಸಭೆ
02.ಸೋಲೂರು ಗ್ರಾಮ ಪಂಚಾಯತಿ
03.ಮಾಡಬಾಳ್ ಗ್ರಾಮ ಪಂಚಾಯತಿ

ತಿಪ್ಪ ಸಂದ್ರ

5.ಹಾರೋಹಳ್ಳಿ
01.ಹಾರೋಹಳ್ಳಿ ಕಸಬಾ ಪಟ್ಟಣ ಪಂಚಾಯತಿ
02.ದೊಡ್ಡ ಮರಳವಾಡಿ ಗ್ರಾಮ ಪಂಚಾಯತಿ
03.ತಟ್ಟೆಕೆರೆ ಗ್ರಾಮ ಪಂಚಾಯತಿ
ಹೊಸ ತಾಲ್ಲೂಕುಗಳು
7.ಕೋಡಿಹಳ್ಳಿ
01.ಕೋಡಿಹಳ್ಳಿ ಕಸಬಾ ಪಟ್ಟಣ ಪಂಚಾಯತಿ
02.ಏಳಗಳ್ಳಿ ಗ್ರಾಮ ಪಂಚಾಯತಿ
03.
9.ಕುದೂರು
01.ಕುದೂರು ಕಸಬಾ ಪಟ್ಟಣ ಪಂಚಾಯತಿ
02.ಸೋಲೂರು ಪಟ್ಟಣ ಪಂಚಾಯತಿ
03.ತಿಪ್ಪಸಂದ್ರ ಪಟ್ಟಣ ಪಂಚಾಯತಿ
10.ಬಿಡದಿ
01.ಬಿಡದಿ ಕಸಬಾ ಪುರಸಭೆ
02.ಕಗ್ಗಲೀಪುರ ಪಟ್ಟಣ ಪಂಚಾಯತಿ
03.ಹೆಜ್ಜಾಲ ಪಟ್ಟಣ ಪಂಚಾಯತಿ
ಒಟ್ಟು ಹೋಬಳಿಗಳ ಸಂಖ್ಯೆ 35

ರಾಮನಗರದ ವಿಶೇಷತೆ[ಬದಲಾಯಿಸಿ]

  • ಕರ್ನಾಟಕಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಾಗಿದೆ. ಅವರೆಂದರೆ ವಿಧಾನ ಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಮೊಟ್ಟ ಮೊದಲ ಕನ್ನಡದ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರವಾದ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ಕುಮಾರಸ್ವಾಮಿ.
  • ರಾಮನಗರ ಜಿಲ್ಲೆಯ ಪ್ರಮುಖ ಸ್ಥಳಗಳೆಂದರೆ ಜಾನಪದ ಲೋಕ , ಕೆಂಗಲ್, ದೊಡ್ಡ ಮಳೂರು , ರಂಗರಾಯರದೊಡ್ಡಿ ಕೆರೆ.
  • ರಾಮನಗರ ಮಿನಿ ವಿಧಾನ ಸೌಧ ವನ್ನು ಹೊಂದಿದೆ. ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ರಾಮನಗರ - ಇದು ಹಿಂದಿಯ 'ಶೋಲೆ' ಖ್ಯಾತಿಯ ರೇಷ್ಮೆ ಸೀಮೆ! ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ೪೭ ಕಿಲೋಮೀಟರು ದೂರದಲಿದ್ದು, ನೈರುತ್ಯ ದಿಕ್ಕಿನಲ್ಲಿದೆ.
  • ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಇದೂ ಕೂಡ ಗಂಗ, ಚೋಳ, ಹೊಯ್ಸಳ ಹಾಗು ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಆದರೆ ಈ ಪಟ್ಟಣ ಏಕಾಏಕಿ ಪ್ರಸಿದ್ದಿಗೆ ಬಂದದ್ದು ಸುಮಾರು 70ರ ದಶಕದಲ್ಲಿ ಇಲ್ಲಿ ನಡೆದ 'ಶೋಲೆ' ಚಲನ ಚಿತ್ರದ ಚಿತ್ರೀಕರಣದಿಂದ.
  • ರಾಮನಗರ ಜಿಲ್ಲೆಯು ಪ್ರಮುಖ ಧಾರ್ಮಿಕ ನಾಯಕರುಗಳಾದ ಆದಿ ಚುಂಚನಗಿರಿ ಕ್ಷೇತ್ರದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಮತ್ತು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ತವರು ಜಿಲ್ಲೆ, ರಾಮನಗರ ತಾಲೂಕಿನ ಬಿಡದಿಯ ಬಾನಂದೂರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ತವರಾದರೆ ಮಾಗಡಿ ತಾಲೂಕಿನ ವೀರಾಪುರ ಶ್ರೀ ಶಿವಕುಮಾರ ಸ್ವಾಮೀಜಿಗಳ ತವರು


ರಾಮನಗರದ ಬೆಟ್ಟ ಪ್ರದೇಶ[ಬದಲಾಯಿಸಿ]

  • ರಾಮನಗರವು, ಶಿವರಾಮಗಿರಿ, ಸೋಮಗಿರಿ, ಕೃಷ್ಣಗಿರಿ, ಯತಿರಾಜಗಿರಿ, ರೇವಣ ಸಿದ್ದೇಶ್ವರ, ಸಿಡಿಲಕಲ್ಲು ಹಾಗು ಜಲ ಸಿದ್ದೇಶ್ವರ ಎಂಬ 7 ಭವ್ಯ ಬೆಟ್ಟಗಳಿಂದ ಸುತ್ತುವರಿದಿದೆ. ಇಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಊರು ರೇಷ್ಮೆ ನಗರವೆಂದೂ ಹೆಸರುವಾಸಿ. ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ರಾಮನಗರದ ರೇಷ್ಮೆಯನ್ನು ಬಳಸಿಯೇ ನೇಯಲಾಗುತ್ತದೆ.
  • ಪ್ರಕೃತಿ ಪ್ರೇಮಿಗಳಿಗೆ ಖುಷಿ ಕೊಡುವ ವಿಚಾರವೆಂದರೆ ಇಲ್ಲಿರುವ ಬೆಟ್ಟಗಳು ಈಗ ಅಳಿವಿನಂಚಿನಲ್ಲಿರುವ ಹಳದಿ ಕುತ್ತಿಗೆಯ ಬುಲ್ ಬುಲ್ ಹಾಗು ಉದ್ದ ಕೊಕ್ಕಿನ ರಣಹದ್ದುಗಳಿಗೆ ಮನೆಯಾಗಿರುವುದು. ಇಲ್ಲೇ ಜಾನಪದ ಲೋಕವಿದ್ದು ಕರ್ನಾಟಕದ ಜಾನಪದ ಕಲೆ ಹಾಗು ಸಂಸೃತಿಗೆ ಸಂಬಂದ್ದಪಟ್ಟ ಸಣ್ಣ ವಸ್ತು ಸಂಗ್ರಹಾಲಯವನ್ನು ಇಲ್ಲಿ ನೋಡಬಹುದು.
  • ಈ ಪ್ರದೇಶ ಬೆಟ್ಟಗಳಿಂದ ಸುತ್ತುವರಿದಿದ್ದು ಪರ್ವತಾರೋಹಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಹಾಗೂ ಇದು ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಆಸರೆಯಾಗಿದೆ. ರಾಮನಗರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಇಲ್ಲಿಗೆ ಈ ಎರಡೂ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ರಾಮನಗರ ಜಿಲ್ಲೆಯ ಕಲೆ[ಬದಲಾಯಿಸಿ]

ರಾಮನಗರ ಜಿಲ್ಲೆಯು ವಿಶೇಷವಾಗಿ ಜಾನಪದ ಕಲೆಗೆ ಹೆಸರು ವಾಸಿಯಾದ ಜಿಲ್ಲೆ. ಇಲ್ಲಿ ಅನೇಕ ಪ್ರಕಾರದ ಜಾನಪದ ಕಲೆಗಳು ಅನಾವರಣಗೊಂಡಿವೆ. ಅದಕ್ಕಾಗಿಯೇ ವಿಶೇಷವಾಗಿ ಜಾನಪದ ಲೋಕವನ್ನು ಕಾಣಬಹುದು. ಜಾನಪದ ಕಲೆಗಳ ಸಂಗ್ರಹ ಇಲ್ಲಿದೆ. ಜಾನಪದ ಗಾಯನದಲ್ಲಿ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದಾರೆ. ಅನೇಕ ಹಳ್ಳಿಗಳಲ್ಲಿ ತಾಸು ಗಟ್ಟಲೆಯಲ್ಲದೆ, ದಿನಗಟ್ಟಲೆ ವಿವಿಧ ಕೆಲಸ ಕಾರ್ಯಗಳು, ಸಂಪ್ರದಾಯ ಆಚರಣೆಯ ಜಾನಪದ ವಿವಿಧ ಪ್ರಕಾರದ ಗೀತೆಗಳನ್ನು ಹಾಡುವ ಹಿರಿಯ ತಲೆಗಳು ಜಿಲ್ಲೆಯಲ್ಲಿವೆ. ಹಾಗೆಯೇ ಚನ್ನಪಟ್ಟಣದ ಗೊಂಬೆಗಳಿಗೆ ಪ್ರಸಿದ್ದಿಯಾಗಿದೆ.

ಶಾಸ್ತ್ರೀಯ ಸಂಗೀತ[ಬದಲಾಯಿಸಿ]

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾತನೂರಿನ ಗ್ರಾಮದಲ್ಲಿ ಪುಂಡರೀಕ ವಿಠಲನೆಂಬ ಶ್ರೇಷ್ಠ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕನಿದ್ದದ್ದು ತಿಳಿದುಬರುತ್ತದೆ. ಈತ ಅಕ್ಬರನ ಆಸ್ಥಾನದಲ್ಲಿ, ತಾನ್ ಸೇನನ ಸಮಕಾಲೀನನಾಗಿದ್ದನಂತೆ. ಈತ ಅಕ್ಬರನ ಬಿರುದಿನೊಂದಿಗೆ ಗೌರವಿಸಲ್ಪಟ್ಟವನೆಂದು ಹೇಳಲಾಗಿದೆ. ಇವನು ಆಗಿನ ಕಾಲಕ್ಕೆ ದಕ್ಷಿಣ ಭಾರತದ ಖ್ಯಾತ ಹಿಂದೂಸ್ಥಾನಿ ಗಾಯಕನಾಗಿದ್ದನೆಂದು ಹೇಳಲಾಗಿದೆ. ರಾಮನಗರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುವ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರ ಹೆಸರು ಕೇಳಿಬರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

2. https://ramanagara.nic.in/en/map-of-district/

"https://kn.wikipedia.org/w/index.php?title=ರಾಮನಗರ&oldid=1196836" ಇಂದ ಪಡೆಯಲ್ಪಟ್ಟಿದೆ