ಕುಣಿಗಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಕುಣಿಗಲ್
India-locator-map-blank.svg
Red pog.svg
ಕುಣಿಗಲ್
ರಾಜ್ಯ
 - ಜಿಲ್ಲೆ
ಕರ್ನಾಟಕ
 - ತುಮಕೂರು
ನಿರ್ದೇಶಾಂಕಗಳು 13.02° N 77.03° E
ವಿಸ್ತಾರ
 - ಎತ್ತರ
 km²
 - 773 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
30,291
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 572130
 - +91-8132
 - KA-06

ಕುಣಿಗಲ್ ತುಮಕೂರು ಜಿಲ್ಲೆಯ ಒಂದು ತಾಲ್ಲೋಕು ಕೇಂದ್ರ. ಈ ಪಟ್ಟಣದ ಅಕ್ಷಾಂಶ 13° 01′ 32″ ಹಾಗೂ ರೇಖಾಂಶ 77° 01′ 31″. ಹಳೆಯ ರಾಷ್ಟ್ರೀಯ ಹೆದ್ದಾರಿಯ ಕಿಮೀ 72 ರಲ್ಲಿ ಸ್ಥಿತಿಗೊಂಡಿರುವ ಈ ಪಟ್ಟಣವು ಬಿತ್ತನೆ ರೇಷ್ಮೆ ಗೂಡುಗಳ ಮಾರುಕಟ್ಟೆಗೆ ಪ್ರಖ್ಯಾತಿಯಾಗಿದೆ.

ಪರಿವಿಡಿ

ಇತಿಹಾಸ[ಮೂಲವನ್ನು ಸಂಪಾದಿಸು]

ಕುಣಿಗಲ್ ತಾಲ್ಲೂಕಿನ ಇತಿಹಾಸವನ್ನು ಗಮನಿಸಿದಾಗ ಶಿಲಾಯುಗದ ನೆಲೆಗಳನ್ನು ಸಹ ನಾವು ಕಾಣಬಹುದಾಗಿದೆ.ಹುಲಿಯೂರುದುರ್ಗದ ಹೇಮಗಿರಿ ತಪ್ಪಲು, ತಿಪ್ಪಸಂದ್ರಗಳಲ್ಲಿ ಶಿಲಾಯುಗದ ಅವಶೇಷಗಳು ಕಾಣಬರುತ್ತವೆ. ಕುಣಿಗಲ್ ನಾಡಿನ ಕೆಲ ಭಾಗ ಕದಂಬರ ಆಳ್ವಿಕೆಗೂ ಸೇರಿರಬಹುದಾದ ಸಾಧ್ಯತೆಯನ್ನು ಎಸ್.ಶ್ರೀಕಂಠಶಾಸ್ತ್ರಿಯವರು ದಾಖಲಿಸಿದ್ದಾರೆ. ನಮಗೆ ನೇರವಾಗಿ ಆಳಿದ ಬಗ್ಗೆ ನಿಖರ ದಾಖಲೆಗಳು ಕಂಡುಬರುವುದು ಗಂಗರ ಕಾಲದಿಂದ. ಗಂಗವಾಡಿ ೯೬೦೦೦ ಕ್ಕೆ ಒಳಪಡುವ ಪ್ರದೇಶದಲ್ಲಿ ಕುಣಿಗಲ್ ಸಹ ಒಂದು. ಗಂಗರ ಪ್ರಸಿದ್ಧನಾದ ದೊರೆಶ್ರೀಪುರುಷನು (ಕ್ರಿ.ಶ.೭೨೫-೭೮೮)ಕುಣಿಗಲ್ಲಿನ ಐತಿಹಾಸಿಕ ಪ್ರಸಿದ್ಧ ಕೆರೆ ದೊಡ್ಡಕೆರೆಯನ್ನು ಕ್ರಿ.ಶ.೮ನೇ ಶತಮಾನದ ಕೊನೆಯ ಭಾಗದಲ್ಲಿ ನಿರ್ಮಿಸಿದ ಬಗ್ಗೆ ನಂತರದ ಶಾಸನವೊಂದು ಉಲ್ಲೇಖಿಸುತ್ತದೆ.ಗಂಗರು ರಾಷ್ಟ್ರಕೂಟರಿಗೆ ಸೋತ ನಂತರ ಚಾಲುಕ್ಯ ಮಾಂಧಾತ ಎಂಬ ಸಾಮಂತನು ಕುಣಿಗಲ್ಲನ್ನು ಆಳುತ್ತಿದ್ದನು. ಆಗ ದೊಡ್ಡಕೆರೆಯು ಒಡೆದು ಹೋದಾಗ ಕ್ರಿ.ಶ.೯೬೩ರ ಸುಮಾರಿನಲ್ಲಿ ದುರಸ್ತಿ ಮಾಡಿಸುತ್ತಾನೆ. ನಂತರ ಬಂದ ರಾಷ್ಟ್ರಕೂಟ ಕಂಭರಾಯ ಎಂಬುವವನು ಕುಣಿಗಲ್ಲಿನಲ್ಲಿ ಒಂದು ಕೋಟೆಯನ್ನು ಸುಮಾರು ಕ್ರಿ.ಶ.೯೮೯ರಲ್ಲಿ ನಿರ್ಮಿಸುತ್ತಾನೆ.ಗಂಗರ ಹಾಗೂ ರಾಷ್ಟ್ರಕೂಟರ ಪತನಾನಂತರ ಕುಣಿಗಲ್ ಚೋಳರ ಆಳ್ವಿಕೆಗೆ ಒಳಪಡುತ್ತದೆ. 'ರಾಜೇಂದ್ರ ಚೋಳಪುರಂ' ಎಂದು ಕುಣಿಗಲ್ಲನ್ನು ಶಾಸನಗಳಲ್ಲಿ ಕರೆದಿದೆ. ನಂತರ ಕುಣಿಗಲ್ ಹೊಯ್ಸಳರ ಆಳ್ವಿಕೆಗೆ ಒಳಪಡುತ್ತದೆ. ಇವರ ಕಾಲದ ಸೋಮೇಶ್ವರ ದೇವಾಲಯ ಕೆರೆಯ ಏರಿಯ ಮೇಲೆ ಇರುವುದನ್ನು ಕಾಣಬಹುದು. ಹೊಯ್ಸಳರ ನಂತರ ವಿಜಯನಗರದ ಅರಸರ ಆಳ್ವಿಕೆಗೆ ಕುಣಿಗಲ್ ಒಳಪಟ್ಟ ಬಗ್ಗೆ ಶಾಸನಗಳಿಂದ ತಿಳಿಯಬಹುದು. ಬುಕ್ಕರಾಯನು ಕ್ರಿ.ಶ.೧೩೬೯ರ ಸುಮಾರಿನಲ್ಲಿ ಕುಣಿಗಲ್ ದೊಡ್ಡ ಕೆರೆಗೆ ಒಂದು ತೂಬನ್ನು ಮಾಡಿಸಿ ಶಾಸನವನ್ನು ಹಾಕಿಸಿದ್ದಾನೆ. ವಿಜಯನಗರದ ಸಾಮಂತನಾಗಿದ್ದ ತಮ್ಮೇಗೌಡನೆಂಬ ಸಾಮಂತನು ಕುಣಿಗಲ್ಲನ್ನು ಆಳಿದ ಬಗ್ಗೆ ಜಾನಪದ ಸಾಹಿತ್ಯದಿಂದ ತಿಳಿದುಬರುತ್ತದೆ. ನಂತರ ಇಮ್ಮಡಿ ಕೆಂಪೇಗೌಡ ಮತ್ತು ಮುಮ್ಮಡಿ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟ ಬಗ್ಗೆ ತಿಳಿಯುತ್ತದೆ. ಹುಲಿಯೂರಿನಲ್ಲಿ ಕೆಂಪೇಗೌಡನು ಕ್ರಿ.ಶ.೧೫೮೦ರ ಸುಮಾರಿನಲ್ಲಿ ದುರ್ಗವನ್ನು ಕಟ್ಟುವ ಮೂಲಕ ಅದು ಹುಲಿಯೂರು ದುರ್ಗ ಎಂದಾಯಿತು. ಅದೇ ವೇಳೆಗೆ ಹುತ್ರಿದುರ್ಗದಲ್ಲಿ ಸಹ ಕೋಟೆಯೊಂದನ್ನು ನಿರ್ಮಿಸಿದರು. ಹೀಗಾಗಿ ಕೆಂಪೇಗೌಡನ ಆಳ್ವಿಕೆಗೆ ಈ ಪ್ರದೇಶ ಸೇರಿದ್ದ ಬಗ್ಗೆ ತಿಳಿಯುತ್ತದೆ. ಹಂದಲಗೆರೆ (ತಾವರೆಕೆರೆ ಪಂಚಾಯ್ತಿ)ಗ್ರಾಮದಲ್ಲಿನ ಅಪ್ರಕಟಿತ ಶಾಸನವೊಂದರಲ್ಲಿ (ಕಾಲ ಕ್ರಿ.ಶ.೧೬೬೩) ದತ್ತಿಯನ್ನು ಬಿಟ್ಟ ಬಗ್ಗೆ ತಿಳಿಯಬಹುದಾಗಿದೆ. ಶಾಸನ ಸಾಕಷ್ಟು ತೃಟಿತಗೊಂಡಿರುವುದರಿಂದ ಅದನ್ನು ಓದಲಾಗಿಲ್ಲ. ಕೆಂಪೇಗೌಡನ ನಾಟಕ ಶಾಲೆಯ ಶೃಂಗಾರಮ್ಮನು ಹುಲಿಯೂರುದುರ್ಗದ ಪಕ್ಕದಲ್ಲಿ 'ಶೃಂಗಾರ ಸಾಗರ' ಎಂಬ ಕೆರೆಯನ್ನು, ಅಗ್ರಹಾರವನ್ನು ನಿರ್ಮಿಸಿದ ಬಗ್ಗೆ ಶಾಸನಗಳು ತಿಳಿಸುತ್ತವೆ. ೧೬ನೇಶತಮಾನದಲ್ಲಿ ಶ್ರೀ ಸಿದ್ದಲಿಂಗೇಶ್ವರ ಯತಿಯವರು ತಪಸ್ಸನ್ನಾಚರಿಸಿ ಸಿದ್ದಿಯನ್ನು ಪಡೆದು, ಲೋಕ ಸಂಚಾರ ಕೈಗೊಂಡು, ಪವಾಡ ಮೆರೆದು, ಗದಗಿನ ಬಳಿಯ ಡಂಬಳದಲ್ಲಿ ಮಠವೊಂದನ್ನು ಸ್ಥಾಪಿಸಿ ಎಡೆಯೂರಿನಲ್ಲಿ ಶಿವೈಕ್ಯವಾದ ಬಗ್ಗೆ ಐತಿಹ್ಯವಿದೆ. ನಂತರ ಮೈಸೂರಿನ ಓಡೆಯರ್ ಹಾಗೂ ಹೈದರ್, ಟಿಪ್ಪು ಸಹ ಆಳಿದರು. ಇಲ್ಲಿನ ಅಶ್ವ ವರ್ಧನ ಶಾಲೆ(ಸ್ಟಡ್ ಫಾರ್ಮ್)ಯನ್ನು ಹೈದರ್ ಆಲಿಯು ಮೈಸೂರು ಸೇನೆಗೆ ಸೇರ್ಪಡೆಗೊಂಡ ಅರಬ್ಬಿ ಯುದ್ದಾಶ್ವಗಳ ಸಾಕಾಣಿಕೆ ಹಾಗೂ ವರ್ಧನೆಗಾಗಿ ಸ್ಥಾಪಿಸಿದನು.

ಪ್ರಮುಖ ಸ್ಥಳಗಳು[ಮೂಲವನ್ನು ಸಂಪಾದಿಸು]

ಕುಣಿಗಲ್[ಮೂಲವನ್ನು ಸಂಪಾದಿಸು]

ತಾಲ್ಲೂಕಿನ ಮುಖ್ಯ ಸ್ಥಳ. ಬೆಂಗಳೂರಿನಿಂದ ಪಶ್ಚಿಮಕ್ಕೆ 72 ಕಿಮೀ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 48 ಕುಣಿಗಲ್ ಪಟ್ಟಣದ ಮೇಲೆ ಹಾದುಹೋಗುತ್ತದೆ. ದೊಡ್ಡ ಕೆರೆ ಹಾಗೂ ಸ್ಟಡ್ ಫಾರಂ ಪಟ್ಟಣದ ಎರಡು ಪ್ರಮುಖ ಆಕರ್ಷಣೆಗಳು. ಕುಣಿಗಲ್ ಪಟ್ಟಣದ ಆಡಳಿತವು ಪುರಸಭೆ ಇಂದ ನಡೆಯುತ್ತಲಿದೆ.

ಹುಲಿಯೂರುದುರ್ಗ[ಮೂಲವನ್ನು ಸಂಪಾದಿಸು]

ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ಕುಣಿಗಲ್ ನಿಂದ ದಕ್ಷಿಣಕ್ಕೆ 26 ಕಿ.ಮೀ. ದೂರದಲ್ಲಿ ಬೆಟ್ಟದ ತಪ್ಪಲಲ್ಲಿದೆ. ಈ ಊರಿನಲ್ಲಿ ಹಳೇವೂರಮ್ಮನ ದೇವಾಲಯವಿದೆ. ಈ ಊರಿನಲ್ಲಿ ನಾಡ ಕಛೇರಿ ಇದೆ.

ಹುತ್ರಿದುರ್ಗ[ಮೂಲವನ್ನು ಸಂಪಾದಿಸು]

ಈ ಊರು ಬೆಟ್ಟದ ಮೇಲಿದೆ. ಬೆಟ್ಟದ ತಪ್ಪಲಲ್ಲಿರುವ ಸಂತೇಪೇಟೆ ಹುತ್ರಿದುರ್ಗ ಹೋಬಳಿಯ ಮುಖ್ಯ ಸ್ಥಳ. ಹುತ್ರಿದುರ್ಗ ಬೆಟ್ಟದ ಸುತ್ತಲಿರುವ ಗ್ರಾಮಗಳು, ಪೂರ್ವಕ್ಕೆ: ಹೊಢಾಘಟ್ಟ, ಪಶ್ಚಿಮಕ್ಕೆ: ಸಂತೆಪೇಟೆ ಉತ್ತರಕ್ಕೆ: ಹಾಲುವಾಗಿಲು ಮತ್ತು ಕತ್ತರಿಘಟ್ಟ ದಕ್ಷಿಣಕ್ಕೆ: ಬೆಟ್ಟಹಳ್ಳಿ ಮಠ ಮತ್ತು ಗುಳ್ಳಳ್ಳಿಪುರ ಮತ್ತು ಹೊಸಹಳ್ಳಿ

ಅಮೃತೂರು[ಮೂಲವನ್ನು ಸಂಪಾದಿಸು]

ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ.

ಯಡಿಯೂರು[ಮೂಲವನ್ನು ಸಂಪಾದಿಸು]

ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ರಾಷ್ಟ್ರೀಯ ಹೆದ್ದಾರಿ 48 ಈ ಊರಿನ ಮೇಲೆ ಹಾದುಹೋಗುತ್ತದೆ. ಈ ಊರಿನಲ್ಲಿ 16ನೇ ಶತಮಾನದಲ್ಲಿ ಬದುಕಿದ್ದ ಶ್ರೀ ಸಿದ್ಧಲಿಂಗೇಶ್ವರರ ಗದ್ದುಗೆ ಇದೆ.

ಕೊತ್ತಗೆರೆ[ಮೂಲವನ್ನು ಸಂಪಾದಿಸು]

ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ಕುಣಿಗಲ್ ಕೆರೆಯ ಕೋಡಿಯ ಹತ್ತಿರ ಇದೆ.

ಪ್ರೇಕ್ಷಣೀಯ ಸ್ಥಳಗಳು[ಮೂಲವನ್ನು ಸಂಪಾದಿಸು]

ಕುಣಿಗಲ್ ಕೆರೆ[ಮೂಲವನ್ನು ಸಂಪಾದಿಸು]

"ಮೂಡಲ್ ಕುಣಿಗಲ್ ಕೆರೆ ನೋಡೋರ್ಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ" ಎಂಬ ಪಿ. ಕಾಳಿಂಗರಾವ್ ರವರ ಕಂಚಿನ ಕಂಠದಿಂದ ಮೊಳಗಿದ ಜನಪದ ಗೀತೆಯು ಕುಣಿಗಲ್ಲಿನ ದೊಡ್ಡ ಕೆರೆಯನ್ನು ಕುರಿತದ್ದಾಗಿದೆ. ಈ ಕೆರೆಯು 15 ಮೈಲಿ ಸುತ್ತಳತೆಯುಳ್ಳದ್ದಾಗಿದ್ದು, ಇತ್ತೀಚೆಗೆ ಹೇಮಾವತಿ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ. ಕೆರೆಯ ಏರಿಯ ಮೇಲೆ ಹೊಯ್ಸಳರ ಕಾಲದ ಪ್ರಾಚೀನ ಸೋಮೇಶ್ವರ ದೇವಾಲಯವಿದೆ.

ಕುಣಿಗಲ್ ಸ್ಟಡ್ ಫಾರಂ[ಮೂಲವನ್ನು ಸಂಪಾದಿಸು]

ಟಿಪ್ಪು ಸುಲ್ತಾನ್ ಪ್ರಾರಂಭಿಸಿದನೆಂದು ಹೇಳಲಾಗುವ ಸ್ಟಡ್ ಫಾರಂ ಕುಣಿಗಲ್ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಂತೆ ಇದೆ. 500 ಎಕರೆ ವಿಸ್ತೀರ್ಣವನ್ನು ಹೊಂದಿದ್ದ ಈ ಸ್ಟಡ್ ಫಾರಂ, ನ್ಯಾಯಾಲಯ ಕಟ್ಟಡಗಳು, ಲೋಕೋಪಯೋಗಿ, ಬಂದರು ಮತ್ತು ಒಳನಾಡ ಜಲಸಾರಿಗೆ ಇಲಾಖೆ ಕಛೇರಿ, ವಸತಿಗೃಹ, ಪರಿವಿಕ್ಷಣಾ ಮಂದಿರ, ಪ್ರಥಮ ದರ್ಜೆ ಕಾಲೇಜು, ಕೋರ್ಟ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮುಂತಾದವುಗಳಿಗೆ ಜಾಗ ಬಿಟ್ಟುಕೊಡುತ್ತಾ 400 ಎಕರೆ ಜಾಗವನ್ನಷ್ಟೇ ಉಳಿಸಿಕೊಂಡಿದೆ. ಸೈನ್ಯಕ್ಕೆ ಕುದುರೆಗಳನ್ನು ಒದಗಿಸುತ್ತಿದ್ದ ಈ ಸ್ಟಡ್ ಫಾರಂನಲ್ಲಿ ಈಗ ರೇಸ್ ಕುದುರೆಗಳನ್ನು ಸಾಕಲಾಗುತ್ತಿದೆ. ಇತ್ತೀಚೆಗೆ ಯುನೈಟೆಡ್ ರೇಸರ್ಸ್ ಮತ್ತು ಬ್ರೀಡರ್ಸ್ ಸಂಸ್ಥೆಯು ಈ ಸ್ಟಡ್ ಫಾರಂಅನ್ನು ಲೀಸ್ ಮೇಲೆ ಪಡೆದು, ಇಲ್ಲಿ ರೇಸ್ ಕುದುರೆಗಳ ತಳಿ ಅಭಿವೃದ್ದಿ ಪಡಿಸುತ್ತಲಿದೆ.

ಯಡಿಯೂರು[ಮೂಲವನ್ನು ಸಂಪಾದಿಸು]

ಯಡಿಯೂರು ತಾಲ್ಲೂಕಿನ ಪ್ರಮುಖ ಯಾತ್ರಾಸ್ಥಳ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಕುಣಿಗಲ್ ನಿಂದ ಪಶ್ಚಿಮಕ್ಕೆ 20 ಕಿ.ಮೀ. ದೂರದಲ್ಲಿದೆ. ಶ್ರೀ ಸಿದ್ಧಲಿಂಗೇಶ್ವರ ಯತಿಗಳ ಗದ್ದುಗೆ ಇಲ್ಲಿದೆ.

ಕಗ್ಗೆರೆ[ಮೂಲವನ್ನು ಸಂಪಾದಿಸು]

ಸಿದ್ಧಲಿಂಗೇಶ್ವರ ಯತಿಗಳು ತಪಸ್ಸು ಮಾಡಿದ ಸ್ಥಳವಿದು.

ಉಜ್ಜಿನಿ ಚೌಡಮ್ಮ ದೇವಾಲಯ[ಮೂಲವನ್ನು ಸಂಪಾದಿಸು]

ಉಜ್ಜಿನಿ ಚೌಡಮ್ಮನ ದೇವಾಲಯವು 800 ವರ್ಷಗಳ ಇತಿಹಾಸವನ್ನು ಹೊಂದಿದೆ.

ಮಾರ್ಕೋನಹಳ್ಳಿ ಜಲಾಶಯ[ಮೂಲವನ್ನು ಸಂಪಾದಿಸು]

ತಾಲ್ಲೂಕಿನ ಪ್ರಮುಖ ಜಲಾಶಯ. ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. 1939ರಲ್ಲಿ ನಿರ್ಮಿಸಲಾಯಿತು. ತುಮಕೂರು ಜಿಲ್ಲೆಯ ಅತ್ಯಂತ ದೊಡ್ಡ ಜಲಾಶಯ.

ಮಂಗಳಾ ಜಲಾಶಯ[ಮೂಲವನ್ನು ಸಂಪಾದಿಸು]

ತಾಲ್ಲೂಕಿನಲ್ಲಿರುವ ಇನ್ನೊಂದು ಜಲಾಶಯ. ನಾಗಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಇತರ ಪ್ರೇಕ್ಷಣೀಯ ಸ್ಥಳಗಳು[ಮೂಲವನ್ನು ಸಂಪಾದಿಸು]

ಹುತ್ರಿದುರ್ಗ ಬೆಟ್ಟ, ಮತ್ತು ಮಾಗಡಿ ಕೆಂಪೇಗೌಡರು ಕಟ್ಟಿರುವ ಕೊಟ್ಟೆ ಕೊತ್ತಲುಗಳು: ಕಲ್ಲುದೇವನಹಳ್ಳಿಯ ಮಲೆಮಹದೇಶ್ವರಸ್ವಾಮಿ ದೇವಸ್ಥಾನ ತಾವರೆಕೆರೆ ಕೋಟೆವರದಾಂಜನೇಯ ಸ್ವಾಮಿ ದೇವಸ್ಥಾನ,ಗಿಡದಕೆಂಚನಹಳ್ಳಿಯ ಕೊಲ್ಲಾಪುರದಮ್ಮ ಮತ್ತು ಸಲ್ಲಾಪುರದಮ್ಮ ದೇವಸ್ಥಾನ, ಹುತ್ರಿದುರ್ಗ ಬೆಟ್ಟದಲ್ಲಿ, ಪಾತಾಳ ಗಂಗೆ,ಗವಿಗಂಗಾಧರೇಶ್ವರ ದೇವಾಲಯ, ಸಂಕೋಲೆಯ ಬಸವಣ್ಣ ದೇವಾಲಯ, ಕೇಂಪೇಗೌಡನು ಕಟ್ಟಿಸಿರುವ ಕೋಟೆಗಳು, ಈ ಬೆಟ್ಟದಿಂದ ಶಿವಗಂಗೆ ಬೆಟ್ಟಕ್ಕೆ ಸುರಂಗ ಮಾರ್ಗ, ಆದಿ ಹನುಮಂತರಾಯ ಸ್ವಾಮಿಯ ದೇವಸ್ಥಾನ, ಮತ್ತು ಕೆರೆ, ಕಾಡಪ್ಪನವರ ಮಠ, ಹುತ್ರಿದುರ್ಗದ ಚಿಕ್ಕ ಬೆಟ್ಟ, ಮತ್ತು ಹೊಡಾಘಟ್ಟ ಗ್ರಾಮದಲ್ಲಿ ಹೊಯ್ಸಳರ ಕಾಲದ ಕಲ್ಲಿನಲ್ಲಿ ಕೆತ್ತಿರುವ ವಿಗ್ರಹಗಳಲ್ಲಿ ಸಳನು ಹುಲಿಯ ಜೊತೆ ಯುದ್ಧ ಮಾಡುವ ದೃಶ್ಯ. ಶ್ರೀ ಉರಿಗದ್ದಿಗೇಶ್ವರ ಗ್ರಾಮಾಂತರ ವಸತಿ ಶಾಲೆ ಮತ್ತು ಸಂಸ್ಕೃತ ಶಾಲೆ, ಪದವಿ ಪೂರ್ವ ಕಾಲೇಜು,

ಪ್ರಸಿದ್ಧ ವ್ಯಕ್ತಿಗಳು[ಮೂಲವನ್ನು ಸಂಪಾದಿಸು]

ಯಡಿಯೂರು ಸಿದ್ಧಲಿಂಗೇಶ್ವರ[ಮೂಲವನ್ನು ಸಂಪಾದಿಸು]

16ನೇ ಶತಮಾನದಲ್ಲಿ ಬದುಕಿದ್ದ ಶಿವಶರಣರು. ಅನೇಕ ಪವಾಡಗಳನ್ನು ಮಾಡಿದ್ದಾರೆ. ವಚನಗಳನ್ನು ರಚಿಸಿದ್ದಾರೆ. ಕಗ್ಗೆರೆಯಲ್ಲಿ ತಪಸ್ಸು ಮಾಡಿದರು. ಯಡಿಯೂರಿನಲ್ಲಿ ಇವರ ಗದ್ದುಗೆ ಇದೆ.

ಕುಣಿಗಲ್ ರಾಮಾಶಾಸ್ತ್ರಿ[ಮೂಲವನ್ನು ಸಂಪಾದಿಸು]

ಮೈಸೂರು ಮಹಾರಾಜರ ಆಸ್ಥಾನ ವಿದ್ವಾಂಸ. ಎಂ.ಎಸ್.ಪುಟ್ಟಣ್ಣನವರು ಬರೆದಿರುವ 'ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ' ಕನ್ನಡದ ಮೊಟ್ಟಮೊದಲ ಜೀವನಚರಿತ್ರೆ.

ವೈ.ಕೆ.ರಾಮಯ್ಯ[ಮೂಲವನ್ನು ಸಂಪಾದಿಸು]

ಕುಣಿಗಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ಕರ್ನಾಟಕ ಸರ್ಕಾರದ ಸಚಿವರೂ ಆಗಿದ್ದರು. ಜನಪರ ರಾಜಕಾರಣಿ. ರೇಷ್ಮೆ ಹಾಗೂ ಹೇಮಾವತಿ ನಾಲೆಗಾಗಿ ಹೋರಾಟ ನಡೆಸಿದವರು. ತಾಲ್ಲೂಕಿನ ಎಲೆಕಡಕಲು ಗ್ರಾಮದಲ್ಲಿ ಜನಿಸಿದರು.

ನೀಲತ್ತಹಳ್ಳಿ ಕಸ್ತೂರಿ[ಮೂಲವನ್ನು ಸಂಪಾದಿಸು]

ಗಾಂಧೀವಾದಿ. ಗಾಂಧೀ ಸಾಹಿತ್ಯ ರಚಿಸಿರುವರು.

ಹಿ. ಚಿ. ಬೋರಲಿಂಗಯ್ಯ[ಮೂಲವನ್ನು ಸಂಪಾದಿಸು]

ಜಾನಪದ ವಿದ್ವಾಂಸ. ಪ್ರಸ್ತುತ ಹಂಪಿಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾರೆ. ಜನವರಿ 16, 2015ರಲ್ಲಿ ನಡೆದ ಕುಣಿಗಲ್ ತಾಲ್ಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಡಾ. ಕರೀಗೌಡ ಬೀಚನಹಳ್ಳಿ[ಮೂಲವನ್ನು ಸಂಪಾದಿಸು]

ಸಾಹಿತಿ. ಹಂಪಿಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1993ರಲ್ಲಿ ನಡೆದ ಕುಣಿಗಲ್ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2013ರಲ್ಲಿ ಕುಣಿಗಲ್ ನಲ್ಲಿ ನಡೆದ ತುಮಕೂರು ಜಿಲ್ಲಾ ಕನ್ನಡ ಭಾಷಾ ಬೋಧಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಜಾಣಗೆರೆ ವೆಂಕಟರಾಮಯ್ಯ[ಮೂಲವನ್ನು ಸಂಪಾದಿಸು]

ಪತ್ರಿಕೋದ್ಯಮಿ ಹಾಗೂ ಕನ್ನಡಪರ ಹೋರಾಟಗಾರ. ಕೊತ್ತಗೆರೆ ಹೋಬಳಿಯ ಜಾಣಗೆರೆ ಹೋಬಳಿಯಲ್ಲಿ ಜನಿಸಿದರು.

ಕುಣಿಗಲ್ ನಾಗಭೂಷಣ್[ಮೂಲವನ್ನು ಸಂಪಾದಿಸು]

ಚಲನಚಿತ್ರ ನಟ,ನಿರ್ದೇಶಕ ಹಾಗೂ ಸಂಭಾಷಣೆಕಾರ. 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಅತ್ಯುತ್ತಮ ಸಂಭಾಷಣೆಗಾಗಿ ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಜೂನ್ 23, 2013ರಂದು ಹೃದಯಾಘಾತದಿಂದ ನಿಧನರಾದರು.

ಕುಣಿಗಲ್ ರಾಮನಾಥ್[ಮೂಲವನ್ನು ಸಂಪಾದಿಸು]

ಕನ್ನಡ ಚಲನಚಿತ್ರ ನಟ. 220ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಕುಣಿಗಲ್ ನಲ್ಲಿರುವ ದುರ್ಗಾಭವನ್ ಲಾಡ್ಜ್ ಇವರಿಗೆ ಸೇರಿದ್ದು.

ಕುಣಿಗಲ್ ವಸಂತ್[ಮೂಲವನ್ನು ಸಂಪಾದಿಸು]

ಚಲನಚಿತ್ರ ನಟ, ನಿರ್ದೇಶಕ ಹಾಗೂ ಚಿತ್ರಸಾಹಿತಿ.

ಎನ್ ಹುಚ್ಚಮಾಸ್ತಿಗೌಡ[ಮೂಲವನ್ನು ಸಂಪಾದಿಸು]

ಅಮೃತೂರು ಹೋಬಳಿಯ ಯಡವಾಣಿ ಗ್ರಾಮದವರು. ಜನಪ್ರಿಯ ರಾಜಕಾರಣಿ. ಹಿಂದಿನ ಹುಲಿಯೂರುದುರ್ಗ ವಿಧಾನಸಭಾ ಕ್ಶೇತ್ರ ಪ್ರತಿನಿಧಿಸುತ್ತಿದ್ದರು. ಮೈಸೂರು ಅರಸರು ಸ್ಥಾಪಿಸಿದ್ದ ಪ್ರ್ಜಾ ಪ್ರತಿನಿಧಿ ಸಭೆಯ ಕಾಲದಿಂದಲೂ ಕುಣಿಗಲ್ ಭಾಗದ ಜನ ಪ್ರತಿನಿಧಿಯಾಗಿದ್ದ ಹಿರಿಮೆ. ದೇವರಾಜ ಅರಸು ಮಂತ್ರಿ ಮಂಡಳದಲ್ಲಿ ಕಂದಾಯ ಖಾತೆ ಸಚೀವರಾಗಿದ್ದವರು.

ಎಸ್ ಪಿ ಮುದ್ದಹನುಮೇಗೌಡ[ಮೂಲವನ್ನು ಸಂಪಾದಿಸು]

ತಾಲ್ಲೂಕಿನ ಸೊಬಗಾನಹಳ್ಳಿಯಲ್ಲಿ ಜನಿಸಿದರು. ಸಜ್ಜನ, ಸುಸಂಸ್ಕೃತ ರಾಜಕಾರಣಿ. ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಈಗ ತುಮಕೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದಾರೆ.

ಡಿ. ನಾಗರಾಜಯ್ಯ[ಮೂಲವನ್ನು ಸಂಪಾದಿಸು]

ಜನಪ್ರಿಯ ರಾಜಕಾರಣಿ. ಹಿಂದಿನ ಹುಲಿಯೂರುದುರ್ಗ ವಿಧಾನಸಭಾ ಕ್ಶೇತ್ರ ಪ್ರತಿನಿಧಿಸುತ್ತಿದ್ದು ಇದೀಗ ಒಟ್ಟುಗೂಡಿದ ಕುಣಿಗಲ್ ಕ್ಷೇತ್ರವನ್ನು ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಲಿದ್ದಾರೆ. ಈಗಾಗಲೆ ನಾಲ್ಕುಬಾರಿ ಶಾಸಕರಾಗಿರುವರು.

ಸುರೇಶ್ ಗೌಡ[ಮೂಲವನ್ನು ಸಂಪಾದಿಸು]

ಜನಪ್ರಿಯ ರಾಜಕಾರಣಿ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರು.

ಡಾ|| ರವಿ ಬಿ ನಾಗರಾಜಯ್ಯ[ಮೂಲವನ್ನು ಸಂಪಾದಿಸು]

ಅಮೃತೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾದ ಇವರು ಮೊದಲ ಯತ್ನದಲ್ಲಿಯೇ ತುಮಕೂರು ಜಿಲ್ಲೆಯ ಜಿಲ್ಲಾಪಂಚಾಯ್ತಿಯ ಅಧ್ಯಕ್ಶರಾಗಿದ್ದವರು

ವೈ.ಎಚ್. ಹುಚ್ಚಯ್ಯ[ಮೂಲವನ್ನು ಸಂಪಾದಿಸು]

ರಾಜಕಾರಣಿ. ತುಮಕೂರು ಜಿಲ್ಲೆಯ ಜಿಲ್ಲಾಪಂಚಾಯ್ತಿಯ ಅಧ್ಯಕ್ಶ

"https://kn.wikipedia.org/w/index.php?title=ಕುಣಿಗಲ್&oldid=659619" ಇಂದ ಪಡೆಯಲ್ಪಟ್ಟಿದೆ