ತಿಪ್ಪಸಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಿಪ್ಪಸಂದ್ರವು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಒಂದು ದೊಡ್ಡ ಗ್ರಾಮ ಮತ್ತು ಹೋಬಳಿ. ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಗ್ರಾಮ ಪಂಚಾಯ್ತಿಯೂ ಆಗಿರುವ ತಿಪ್ಪಸಂದ್ರದಲ್ಲಿ ಸರ್ಕಾರಿ ಆಸ್ಪತ್ರೆ, ಶಾಲೆಗಳು, ಪದವಿ ಪೂರ್ವಕಾಲೇಜು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆ ಸೇರಿದಂತೆ ಎಲ್ಲ ಸೌಲಭ್ಯಗಳೂ ಇವೆ. ಇಲ್ಲಿರುವ ದೊಡ್ಡ ಕೆರೆಗೆ ಪಕ್ಕದಲ್ಲಿರುವ ಬಿಳಿಗುಡ್ಡದಿಂದ ಮಳೆಯ ನೀರು ಹರಿದುಬರುತ್ತದೆ. ತುಂಬಿದ ನೀರು ಕೋಡಿಯ ಮೂಲಕ ತಾಳೆಕೆರೆ ಕೆರೆ ಸೇರಿ ನಂತರ ಕುಣಿಗಲ್ ಕೆರೆಗೆ ಸೇರುತ್ತದೆ. ಬೆಂಗಳೂರು-ಹಾಸನ ರೈಲುಮಾರ್ಗ ತಿಪ್ಪಸಂದ್ರ ಕೆರೆಯ ಮಧ್ಯದಿಂದ ಹಾದು ಹೋಗುತ್ತಿದೆ.

ತಿಪ್ಪಸಂದ್ರಹೆಸರಿನ ಮತ್ತೊಂದು ಪ್ರದೇಶ ಬೆಂಗಳೂರಿನ ಉತ್ತರದಲ್ಲಿರುವ ಹೆಚ್.ಎ.ಎಲ್ ಬಳಿ ಇದೆ.