ಕನಕಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನಕಪುರ
ಕನಕಪುರ
town
NH 209, Bangalore-Coimbatore National Highway passing through Kanakapur town.
NH 209, Bangalore-Coimbatore National Highway passing through Kanakapur town.
Country ಭಾರತ
StateKarnataka
DistrictRamanagar district
Area
 • Total೭.೮೦ km (೩.೦೧ sq mi)
Elevation
೬೩೭ m (೨,೦೯೦ ft)
Population
 (2012)
 • Total೫೪,೦೧೪
 • ಸಾಂದ್ರತೆ೬,೫೩೬.೧೧/km (೧೬,೯೨೮.೪/sq mi)
Languages
 • OfficialKannada
ಸಮಯ ವಲಯಯುಟಿಸಿ+5:30 (IST)
PIN
562 117
Telephone code08117
ವಾಹನ ನೋಂದಣಿKA 42

| ಕನಕಪುರ: ಅರ್ಕಾವತಿ ನದಿ ದಂಡೆಯಲ್ಲಿರುವ ಕರ್ನಾಟಕದ ರಾಮನಗರ ಜಿಲ್ಲೆಗೆ ಸೇರಿದ ಒಂದು ನಗರ.ಮತ್ತು ಇದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ.ದೇಶದಲ್ಲಿಯೇ ಅತೀ ಹೆಚ್ಚು ರೇಷ್ಮೆ ಉತ್ಪಾದಿಸುವ ತಾಲೂಕು '''ರೇಷ್ಮೆ ಕಣಿವೆ''' ಎಂದೇ ಖ್ಯಾತಿ.ಗ್ರಾನೈಟ್ ಉತ್ಪಾದನೆಯಲ್ಲಿ ಸಹ ಕರ್ನಾಟಕದಲ್ಲಿ ಬಹಳ ಮುಂಚೂಣಿಯಲ್ಲಿದೆ ಆದ್ದರಿಂದ ಕರ್ನಾಟಕದ ಗ್ರಾನೈಟ್ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ . ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿತ್ತು. ಹಾಗೂ ಹಿಂದೆ ದೇಶದ ಅತಿ ದೊಡ್ಡ ಲೋಕಸಭಾಕ್ಷೇತ್ರವಾಗಿತ್ತ್ತು. ಈ ತಾಲೂಕು ಬಹಳ ವಿಸ್ತಾರವಾಗಿ ಹರಡಿದೆ(1553 ಚ ಕಿ) . ಹಾಗೂ ಈ ತಾಲೂಕಿನಲ್ಲಿ ಅರಣ್ಯ ಪ್ರದೇಶ ಬಹಳ ವಿಶಾಲವಾಗಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುಮಾರು ಅರ್ಧದಷ್ಟು ಭಾಗ ನಮ್ಮ ಕನಕಪುರದಲ್ಲಿದೆ ಕೋಡಿಹಳ್ಳಿ ವನ್ಯ ಜೀವಿ ವಲಯ, ಹಾರೋಹಳ್ಳಿ ವನ್ಯಜೀವಿವಲಯಇದರ ವಿಭಾಗಗಳು,ಹಾಗೂ ಕಾವೇರಿ ವನ್ಯಜೀವಿ ಧಾಮದ ಎರಡು ಪ್ರಮುಖ ವಲಯಗಳನ್ನು ಒಳಗೊಂಡಿದೆ ಅವುಗಳೆಂದರೆ ಸಂಗಮ ವನ್ಯ ಜೀವಿ ವಲಯ , ಮುಗ್ಗೂರು ವನ್ಯ ಜೀವಿವಲಯ, 23.08.07ರಿಂದ ರಾಮನಗರ ಜಿಲ್ಲೆಗೆ ಸೇರಿತು. ಉ.ಅ. 1 33' ಮತ್ತು ಪು.ರೇ. 77ಂ 29' ನಲ್ಲಿ ಅರ್ಕಾವತಿ ನದಿಯ ಬಲದಂಡೆಯ ಮೇಲೆ, ಉತ್ತರ ದಕ್ಷಿಣವಾಗಿ ಹಬ್ಬಿದೆ. ಬೆಂಗಳೂರು-ರಾಷ್ಟ್ರೀಯ ಹೆದ್ದಾರಿ ೨೦೯ನಲ್ಲಿರುವ ಈ ನಗರ ಬೆಂಗಳೂರಿನ ದಕ್ಷಿಣಕ್ಕೆ58 ಕಿಮೀ, ದೂರ ಮಳವಳ್ಳಿಯಿಂದ ಪೂರ್ವಕ್ಕೆ ೫೦ ಕಿಮೀ ದೂರದಲ್ಲಿದೆದಲ್ಲಿದೆ. ರಾಮನಗರ ರೈಲ್ವೆ ನಿಲ್ದಾಣಕ್ಕೆ ೩೦ಕಿಮೀ ಅಂತರವಿನಗರದ ಜನಸಂಖ್ಯೆ 47,047 (2001). 1974ರ ವರೆಗೂ ಇದಕ್ಕೆ ಕಾನಕಾನಹಳ್ಳಿ ಎಂಬ ಹೆಸರಿತ್ತು. ಕಾನಕಾನನೆಂಬವ ಇಲ್ಲಿ ಒಂದು ಸಣ್ಣ ಕೋಟೆ ಕಟ್ಟಿಕೊಂಡಿದ್ದರಿಂದ ಇದಕ್ಕೆ ಈ ಹೆಸರು ಬಂತೆಂದು ಹೇಳಲಾಗಿದೆ. ಕಾನಿಕಾರ್ನ ಹಳ್ಳಿ ಎಂಬುದು ಮೂಲನಾಮವೆಂದೂ ಕಾಣಿಕಾರ್ (ನೆಲದೊಡೆಯ) ಎಂಬುದರಿಂದ ಈ ಹೆಸರು ಬಂತೆಂದೂ ಇಲ್ಲಿಯ ಜನ ತಿಳಿದು ಕೊಂಡಿದ್ದಾರೆಂದೂ ಆದರೆ ವಾಸ್ತವವಾಗಿ ಇದು ಕನ್ಯಾ-ಕರ್ಣ (ಭವಾನಿಯ ಕಿವಿ) ಎಂದಿರಬೇಕೆಂದೂ ಬುಕಾನನ್ ಅಭಿಪ್ರಾಯಪಟ್ಟಿದ್ದಾನೆ. 13ನೆಯ ಶತಮಾನದ ಶಾಸನವೊಂದರಲ್ಲಿ ಇದರ ಹೆಸರು ಕಾಣಿಕಾರಹಳ್ಳಿ. ಈಗ ಇದರ ಹೆಸರು ಕನಕಪುರ ಎಂದಿರುವುದರಿಂದ ಹಳೆಯ ಹೆಸರನ್ನು ಕುರಿತ ವಾದ ಅಷ್ಟಾಗಿ ಮುಖ್ಯವಲ್ಲ.

ಕನಕಪುರದಲ್ಲಿರುವ ಕೋಟೆಯನ್ನು ಕಟ್ಟಿಸಿದಾತ ಚನ್ನಪಟ್ಟಣದ ಪಾಳೆಗಾರನಾಗಿದ್ದ ಜಗದೇವರಾಯ ಎಂದು ಹೇಳಲಾಗಿದೆ. ಆತ ಇಲ್ಲಿದ್ದ ಸಣ್ಣ ಕೋಟೆಯ ಸ್ಥಳದಲ್ಲಿ ಇದನ್ನು ಕಟ್ಟಿಸಿದ. 1630ರಲ್ಲಿ ಇದನ್ನು ಮೈಸೂರಿನ ಚಾಮರಾಜ ಗೆದ್ದುಕೊಂಡ. ಇಲ್ಲಿ ಜೀರ್ಣವಾದ ರಂಗನಾಥ ದೇವಾಲಯವಿದೆ. ಶ್ರೀರಂಗಪಟ್ಟಣದ ಕಡೆಗೆ ನುಗ್ಗಿಬರುತ್ತಿದ್ದ ಬ್ರಿಟಿಷ್ ಸೇನೆಗೆ ಠಾವು ದೊರೆಯದಿರಲೆಂಬ ಉದ್ದೇಶದಿಂದ ಟಿಪ್ಪುಸುಲ್ತಾನ ಎರಡು ಸಾರಿ ಈ ಪಟ್ಟಣವನ್ನು ಹಾಳುಗೆಡವಿದ. ಅನಂತರ ಬಹುಕಾಲ ಕೋಟೆಯೊಳಗಡೆಯಲ್ಲಿ ಹುಲಿಯೇ ಮುಂತಾದ ದುಷ್ಟಮೃಗಗಳು ಸೇರಿಕೊಂಡು ಮನುಷ್ಯರನ್ನೂ ದನಕರುಗಳನ್ನೂ ಎತ್ತಿಕೊಂಡು ಹೋಗುತ್ತಿದ್ದುವು.

ಹಸಿರು ಹೊದೆದ ಬೆಟ್ಟಗಳ ನಡುವೆ ಮಲಗಿರುವ ಕನಕಪುರ ಒಂದು ರಮ್ಯಪ್ರದೇಶ. ಅರ್ಕಾವತಿಯ ದಂಡೆಯ ಮೇಲೆ ಹಬ್ಬಿದ ತೆಂಗಿನ ಮರಗಳ ಸಾಲು ಈ ಪಟ್ಟಣಕ್ಕೆ ಹಸುರು ಕುಚ್ಚಿನ ಅಂಚು ಕಟ್ಟಿದಂತಿದೆ. ಶಿವಸಮುದ್ರ ಮತ್ತು ಶಿಂಷಾಗಳಿಂದ ಬರುವ ವಿದ್ಯುತ್ ಕನಕಪುರದಿಂದ ಮುಂದೆ ರಾಮನಗರ, ಬೆಂಗಳೂರು, ಕೋಲಾರದ ಚಿನ್ನದ ಗಣಿ ಮುಂತಾದ ಎಡೆಗಳಿಗೆ ಸಾಗುತ್ತದೆ. ರೇಷ್ಮೆ ಬಿತ್ತನೆ ಕೋಠಿಗಳೂ ರೇಷ್ಮೆಗೂಡಿನಿಂದ ನೂಲು ಸುತ್ತುವ ಕಾರ್ಖಾನೆಯೂ (ಫಿಲೇಚರ್ಸ್‌) ಇಲ್ಲುಂಟು. ಶಾಲಾ ಕಾಲೇಜೂ ಇವೆ. ಪ್ರತಿ ಗುರುವಾರವೂ ಇಲ್ಲಿ ನಡೆಯುವ ಸಂತೆ ಸುತ್ತೆಲ್ಲ ಪ್ರಸಿದ್ಧ.

ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆಯ ಅತ್ಯಂತ ದಕ್ಷಿಣದಲ್ಲಿದೆ. ಎಲೆಯಾಕಾರದ, ಕಾವೇರಿ ಜಲಾನಯನ ಭೂಮಿಯ ಪುರ್ವಭಾಗದಲ್ಲಿರುವ ಈ ತಾಲ್ಲೂಕಿನ ಪುರ್ವದಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ, ಈಶಾನ್ಯದಲ್ಲಿ ಆನೆಕಲ್ ತಾಲ್ಲೂಕು, ಉತ್ತರದಲ್ಲಿ ದಕ್ಷಿಣ ಬೆಂಗಳೂರು ತಾಲ್ಲೂಕು, ವಾಯವ್ಯದಲ್ಲಿ ರಾಮನಗರ ತಾಲ್ಲೂಕು, ಪಶ್ಚಿಮದಲ್ಲಿ ಚನ್ನಪಟ್ಟಣ ಮತ್ತು ಮಳವಳ್ಳಿ ತಾಲ್ಲೂಕುಗಳು, ದಕ್ಷಿಣದಲ್ಲಿ ಕಾವೇರಿ ನದಿ, ಅದರ ಬೆನ್ನಿಗೇ ಕೊಳ್ಳೆಗಾಲ ತಾಲ್ಲೂಕು ಇವೆ. ವಿಸ್ತೀರ್ಣ 161,460 ಚ ಕಿಮೀ. ಇದು ಇಡೀ ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ತಾಲ್ಲೂಕು. ನೆಲಮಂಗಲದ ಪಶ್ಚಿಮದ ಕಡೆಯಿಂದ ಬರುವ ಶಿಲಾಬೆಟ್ಟಗಳು ಮಾಗಡಿ, ರಾಮನಗರ ತಾಲೂಕುಗಳನ್ನು ಹಾಯ್ದು, ಈ ತಾಲ್ಲೂಕನ್ನು ಉತ್ತರಭಾಗದಿಂದ ಪ್ರವೇಶಿಸಿ, ಪುರ್ವ, ಪಶ್ಚಿಮ ಮತ್ತು ದಕ್ಷಿಣ ಅಂಚಿನಲ್ಲಿ ಕವಚದಂತೆ ಒತ್ತಾಗಿ ಹಬ್ಬಿವೆ. ಉತ್ತರದಿಂದ ದಕ್ಷಿಣದ ಕಾವೇರಿ ಕಣಿವೆಯ ಕಡೆಗೆ ನೆಲ ಇಳಿಜಾರಾಗಿದೆ.ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಕಬ್ಬಾಳು ಇಲ್ಲಿಯೂ ಸಹ ಅತಿ ಎತ್ತರವಾದ ದುರ್ಗವು ಇದೆ(1071 ಮೀ), ಪಶ್ಚಿಮದಲ್ಲಿ ಬಾಣಂತಿ ಮಾರಿಬೆಟ್ಟ (1046 ಮೀ), ಭೀಮಕಂಡಿ(1057 ಮೀ), ಕಡಕಲ್, ಮುದವಾಡ ಮತ್ತು ನರಸಿಂಹದೇವರ ಬೆಟ್ಟಗಳೂ ಆಗ್ನೇಯದಲ್ಲಿ ದೇವರಬೆಟ್ಟ, ಕೊಪ್ಪಬೆಟ್ಟ (860 ಮೀ), ಬರೀಕಲ್ಲು ಬೆಟ್ಟಗಳೂ ಪುರ್ವದಲ್ಲಿ ಬಿಳೀಕಲ್ಲು ಬೆಟ್ಟ, ಗುಲಕಲ್ ಬೆಟ್ಟಗಳೂ ನೈಋತ್ಯದಲ್ಲಿ ಪತ್ರಧಾರಿದೇವ ಇತ್ಯಾದಿ ಬೆಟ್ಟಗಳೂ ಉತ್ತರದಲ್ಲಿ ಗಂಗಾಧರನ ಬೆಟ್ಟವೂ ಇವೆ. ತಾಲ್ಲೂಕಿನ ನೈಋತ್ಯ ಭಾಗದಲ್ಲಿ ಚಾರ್ನಕೈಟ್ ಶಿಲಾಪದರಗಳಿವೆ. ಉಳಿದ ಕಡೆಗಳಲ್ಲಿರುವುದು ಬೆಣಚುಕಲ್ಲಿನ ಶಿಲೆಗಳು. ರಾಮನಗರದ ಕಣಶಿಲಾ (ಗ್ರಾನೈಟ್) ಸಮುದಾಯ ಕನಕಪುರದಿಂದ ಪ್ರಾರಂಭವಾಗಿ ಉತ್ತರದಲ್ಲಿ ರಾಮನಗರದ ಕಡೆಗೆ ಹರಡಿದೆ. ಈ ಶಿಲೆಗಳದು ಗೋಳಾಕೃತಿ. ಚಾರ್ನಕೈಟ್ನಂತಿರುವ ಡೈಕ್ ಮತ್ತು ಹಾರ್ನ್‌ಬ್ಲೆಂಡ್ ಶಿಲೆಗಳು ಹಾರೋಹಳ್ಳಿಗೆ ವಾಯವ್ಯದಲ್ಲಿವೆ. ಸಾಲಹುಣಿಸೆ ಮತ್ತು ಮರಳವಾಡಿ ಬಳಿ ಪದ್ಮರಾಗ ಶಿಲೆ ಉಂಟು.

ತಾಲ್ಲೂಕಿನ ದಕ್ಷಿಣದಲ್ಲಿ ತ್ರಿಭುಜಾಕೃತಿಯ ಪ್ರದೇಶದಲ್ಲಿರುವುದು ಎರೆಮಣ್ಣು, ಉಳಿದ ಕಡೆಗಳಲ್ಲಿ ಅಗ್ನಿಶಿಲೆಯಿಂದಾದ, ಹಗುರ ರಚನೆಯುಳ್ಳ ಕೆಂಪು ಮಣ್ಣಿದೆ.

ಕಾವೇರಿಯ ಉಪನದಿಯಾದ ಅರ್ಕಾವತಿ ವಾಯವ್ಯದಿಂದ ಪ್ರವೇಶಿಸಿ, ತಾಲ್ಲೂಕಿನ ಮಧ್ಯದಲ್ಲಿ ಉತ್ತರ-ದಕ್ಷಿಣವಾಗಿ ಹರಿದು, ಸಂಗಮದ ಬಳಿ ಕಾವೇರಿಯನ್ನು ಸೇರುತ್ತದೆ. ಅರ್ಕಾವತಿಗೆ ಎರಡೂ ಕಡೆಗಳಿಂದ ಬಂದು ಸೇರುವ ನದಿಗಳೂ ಹೊಳೆಗಳೂ ಅನೇಕ. ವೃಷಭಾವತಿ ನದಿ ಈ ತಾಲ್ಲೂಕನ್ನು ಪ್ರವೇಶಿಸುವಾಗಲೇ ಮುದುವಾಡಿಯ ಬಳಿ ಅರ್ಕಾವತಿಯನ್ನು ಸೇರುತ್ತದೆ. ಈಶಾನ್ಯದ ಕಡೆಯಿಂದ ಹರಿದು ಬರುವ ಅಂತರಗಂಗೆ, ಬಸವನ ಹೊಳೆ, ಕೂಟ್ಲೆ ಹೊಳೆಗಳು ಒಂದುಗೂಡಿ ಅರ್ಕಾವತಿಯನ್ನು ಸೇರುವುದು ಕನಕಪುರದ ಬಳಿ. ಆಗ್ನೇಯ ಎಲ್ಲೆಯವರೆಗೂ ದೊಡ್ಡ ಹೊಳೆ ಹರಿದು ಬಂದು ಸಂಗಮದ ಎದುರು ದಂಡೆಯಲ್ಲಿ ಮಾಹಳ್ಳಿಯ ಬಳಿ ಅರ್ಕಾವತಿಯನ್ನು ಕೂಡಿಕೊಳ್ಳುತ್ತದೆ. ಪಶ್ವಿಮದ ಕಡೆಯಿಂದ ಉಯ್ಯಂ ಬಳ್ಳಿ-ಕಬ್ಬಾಳ ರಸ್ತೆಗೆ ಸಮಾನಾಂತರವಾಗಿ ಹರಿದು ಅರ್ಕಾವತಿಯನ್ನು ಸೇರುವುದೇ ಬಂಡಿಹಳ್ಳ. ಮೇಯಿಂದ ನವೆಂಬರ್ವರೆಗೆ ನೈಋತ್ಯ ಮಾರುತಗಳಿಂದ ಇಲ್ಲಿ 70-75 ಸೆಂಮೀ ಮಳೆಯಾಗುತ್ತದೆ. (ಕನಕಪುರ 75 ಸೆಂಮೀ, ಕೋಡಿಹಳ್ಳಿ 71 ಸೆಂಮೀ, ಸಾತನೂರು 75 ಸೆಂಮೀ). ಬೆಂಗಳೂರು ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಅತ್ಯಂತ ಹೆಚ್ಚಿನ ಮಳೆ ಆದದ್ದೆಂದರೆ ಕನಕಪುರದಲ್ಲಿ-1897ರ ಸೆಪ್ಟೆಂಬರ್ 22ರಂದು (22.5 ಸೆಂಮೀ).

ಬೆಟ್ಟದ ಕಾಡುಗಳಿಂದ ಕೂಡಿದ ಈ ತಾಲ್ಲೂಕಿನಲ್ಲಿ ಸರ್ಕಾರಸಂರಕ್ಷಿತ ಅರಣ್ಯಗಳು ಅನೇಕ ಉಂಟು. ದಕ್ಷಿಣದಲ್ಲಿ ಚಿಲಂದವಾಡಿ, ಆಗ್ನೇಯದಲ್ಲಿ ಮೂಗೂರು, ಪಶ್ಚಿಮದಲ್ಲಿ ಕಬ್ಬಾಳ. ತಲ್ಲೂರು ಮತ್ತು ಬಾಣಂತಿಮಾರಿ, ಪುರ್ವದಲ್ಲಿ ಬಿಳಿಕೆರೆ ಮತ್ತು ಈಶಾನ್ಯದಲ್ಲಿ ರಾಗಿಹಳ್ಳಿಗಳಲ್ಲಿ ಸಂರಕ್ಷಿತ ಕಾಡುಗಳಿವೆ. ಕನಕಪುರದ ಸುತ್ತಮುತ್ತ ತೇಗ, ಹೊನ್ನೆ, ಬೀಟೆ, ಕಮ್ಮಾರ ಮುಂತಾದ ಮರಗಳುಂಟು. ಶ್ರೀಗಂಧದ ಮರಗಳೂ ತಕ್ಕಮಟ್ಟಿಗೆ ಬೆಳೆಯುತ್ತವೆ.

ಉತ್ತರ ಮತ್ತು ಮಧ್ಯಭಾಗಗಳಲ್ಲಿ ನದಿ-ಹೊಳೆಗಳ ದಡಗಳಲ್ಲಿ ವ್ಯವಸಾಯ ಸಾಧ್ಯ. ಅರ್ಕಾವತಿ ನದೀಬಂiÀÄಲು ಮುಖ್ಯವಾದದ್ದು.ಒಟ್ಟು ಬೇಸಾಯದ ನೆಲ 70,106 ಹೆ. ಜಿಲ್ಲೆಯಲ್ಲಿ ಬೇಸಾಯಕ್ಕೊಳಗಾಗಿರುವ ನೆಲದಲ್ಲಿ 1/6 ಭಾಗ ಇಲ್ಲಿದೆ. ಆಹಾರ ಧಾನ್ಯಗಳನ್ನು ಬೆಳೆಯುವ ಪ್ರದೇಶ 45,622 ಹೆ. (61.72%), ತೋಟಗಾರಿಕೆ ಪ್ರದೇಶ (1,88 ಹೆ (2.54%), ವಾಣಿಜ್ಯ ಬೆಳೆ ಬೆಳೆಯುವ ಪ್ರದೇಶ 25,256 ಹೆ. (34.17%), ನೀರಾವರಿಗೊಳಪಟ್ಟ ಪ್ರದೇಶ 10,828 ಹೆ. (15.45%), ಬತ್ತ, ರಾಗಿ, ಹಿಪ್ಪನೇರಳೆ, ಅವರೆ, ತೆಂಗು, ಹರಳು, ಹುಣಿಸೆ, ಕುಂಬಳಕಾಯಿ ಇತರ ಮುಖ್ಯ ಬೆಳಸುಗಳು. ನೀರಾವರಿ ಅನುಕೂಲವಿದ್ದರೆ ಈ ತಾಲ್ಲೂಕಿನಲ್ಲಿ ಇನ್ನೂ ಹೆಚ್ಚು ಫಸಲು ತೆಗೆಯಬಹುದು. ಕನಕಪುರದ ದಕ್ಷಿಣಕ್ಕೆ 12 ಕಿಮೀ ಮೈಲಿ ದೂರದಲ್ಲಿರುವ 25 ಲಕ್ಷ ರೂ ವೆಚ್ಚದ ಸಾತನೂರು ಯೋಜನೆ ಮಧ್ಯಮ ತರಗತಿಯ ನೀರಾವರಿ ಯೋಜನೆಗಳಲ್ಲೊಂದು. ಇದರ ಆಯಕಟ್ಟಿನಿಂದ 4047 ಹೆ. ನೆಲ ನೀರಾವರಿಗೆ ಒಳಪಡುತ್ತದೆ. ಮೇಕೆದಾಟು ವಿದ್ಯುತ್ ಯೋಜನೆಯೂ ಪರಿಶೀಲನೆ ಯಲ್ಲಿದೆ. ಈ ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿವೆ. ಇವು ಬಹುತೇಕ ಸಣ್ಣವು.

ತಾಲ್ಲೂಕಿನ ವಾಯವ್ಯ ಭಾಗದಲ್ಲಿ ಪದ್ಮರಾಗವೂ ಹಾರೋಶಿವರದ ಪಶ್ಚಿಮದಲ್ಲಿ ಕಬ್ಬಿಣದ ಅದಿರೂ ದೊರೆಯುತ್ತವೆ. ರೈಲುಮಾರ್ಗವಿಲ್ಲದ ಈ ತಾಲ್ಲೂಕಿನಲ್ಲಿ ರಸ್ತೆಗಳು ತಕ್ಕಮಟ್ಟಿಗೆ ಅಭಿವೃದ್ಧಿ ಹೊಂದಿವೆಯೆನ್ನಬಹುದು. ಒಟ್ಟು ರಸ್ತೆ ಉದ್ದ 748 ಕಿಮೀ ಸುಧಾರಿತ ರಸ್ತೆಗಳೆ ಹೆಚ್ಚು. ಕನಕಪುರ ಪಟ್ಟಣ ಇವುಗಳ ಕೇಂದ್ರ. ಬೆಂಗಳೂರು-ಮಳವಳ್ಳಿ-ಮೈಸೂರು ರಸ್ತೆ ಇದರ ಮುಖಾಂತರ ಹಾದುಹೋಗುತ್ತದೆ. ಹಲಗೂರು-ಕನಕಪುರ, ಚನ್ನಪಟ್ಟಣ-ಹಸನಹಳ್ಳಿ, ರಾಮನಗರ-ಕನಕಪುರ, ಚನ್ನಪಟ್ಟಣ-ಕನಕಪುರ ಇವು ಇತರ ರಸ್ತೆಗಳು. ಸು. 7291 ಟೆಲಿಪೋನ್ ಸಂಪರ್ಕ ಹಾಗೂ 58 ಅಂಚೆ ಕಛೇರಿಗಳಿವೆ.

ಹಾರೋಹಳ್ಳಿ, ಕನಕಪುರ, ಮರಳವಾಡಿ, ಕೋಡಿಹಳ್ಳಿ, ಸಾತನೂರು, ಉಯ್ಯಂಬಳ್ಳಿ-ಇವು ಈ ತಾಲ್ಲೂಕಿನ ಹೋಬಳಿಗಳು. ಒಟ್ಟು ಹಳ್ಳಿಗಳ ಸಂಖ್ಯೆ 229, ಜನಸಂಖ್ಯೆ 1951ರಲ್ಲಿ 1,68,789 ಇದ್ದುದು 1961ರಲ್ಲಿ 1,98,053 ಆಯಿತು. ತಾಲ್ಲೂಕಿನ ಜನಸಂಖ್ಯೆ 3,37,208 (2001). ಸರಾಸರಿ ಸಾಕ್ಷರತೆ ಶೇ. 50, ನಗರ ಜನಸಂಖ್ಯೆ : 47,060. (ಕೆ.ಆರ್.ಆರ್. )

ಕನಕಪುರ ರಾಮನಗರ ಜಿಲ್ಲೆ ಯ ಪ್ರಮುಖ ತಾಲ್ಲೂಕು.ಹಿಂದೆ ಕನಕಪುರ ಲೋಕಸಭಾ ಕ್ಷೇತ್ರವಾಗಿತ್ತು ಮತ್ತು ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿತ್ತು


ಕನಕಪುರ ನಗರಸಭೆ ವ್ಯಾಪ್ತಿಯಲ್ಲಿ ಬರುತ್ತದೆ




ಕನಕಪುರ ತಾಲೂಕಿನ ಚಿತ್ರರಂಗದವರು :

ಮಠ ಗುರುಪ್ರಸಾದ್- ನಿರ್ದೇಶಕರು

ಹೃದಯ ಶಿವ - ಚಿತ್ರ ಸಾಹಿತಿ

ಎಂ ಶ್ರೀನಿವಾಸ್ - ನಿರ್ಮಾಪಕರು

ಅಂಜಲಿ ಸುಧಾಕರ್ (ಶಾಂತ) ತರ್ಲೆ ನನ್ಮಗ - ಚಿತ್ರನಟಿ ಸಪ್ತಮಿ ಗೌಡ ಕಾಂತಾರ ಚಿತ್ರದ ನಾಯಕಿ.

ರಾಜಕಾರಣಿಗಳು :

ಎಸ್ ಕರಿಯಪ್ಪನವರು (ಕನಕಪುರದ ಗಾಂಧಿ ಎಂದೇ ಹೆಸರುವಾಸಿ)

ಎಂ ವಿ ರಾಜಶೇಖರನ್

ಡಿಕೆ ಶಿವಕುಮಾರ್

ಡಿಕೆ ಸುರೇಶ್

ಕೆ ಎನ್ ಶಿವಲಿಂಗೇಗೌಡ

ಪಿ ಜಿ ಆರ್ ಸಿಂಧ್ಯಾ

ಪಟೇಲ್ ಜವರಿಗೌಡ ಬೊಮ್ಮನಹಳ್ಳಿ ಅಚ್ಚಲು ಪಂಚಾಯತ್ ಮೊದಲ ಪ್ರಸ್ತುತ .ಮತ್ತು (ಗಾಂಧಿಜಿ ಅನುಯಾಯಿ).

ತಲುಪುವ ವಿಧಾನ[ಬದಲಾಯಿಸಿ]

ಕನಕಪುರ ಬೆಂಗಳೂರಿನಿಂದ ಸುಮಾರು ೫೫ ಕಿ.ಮೀ ಇದೆ. ಬೆಂಗಳೂರಿನಿಂದ ಅನೇಕ ಬಸ್ ಗಳು ಕನಕಪುರಕ್ಕೆ ಇವೆ. ರಸ್ತೆ ಸಹ ಬಹಳ ಚೆನ್ನಾಗಿದೆ. ಸ್ವಂತ ವಾಹನಗಳ ಮೂಲಕ ಸಹ ಇಲ್ಲಿಗೆ ತಲುಪಬಹುದು ಅಲ್ಲಿ ಅನೇಕ ಸು೦ದರವಾದ ಪರ್ವತಗಳೂ ಕಾಣಸಿಗುತ್ತದೆ.. ಅವೆ೦ದರೆ,ಬಿಳೀಕಲ್ಲು ಬೆಟ್ಟ,,ಸ೦ಗಮ,ಬಸವನ ಬೆಟ್ಟ, ಶಿವನಾ೦ಕಾರೇಶ್ವರ ಇನ್ನೂ ಮು೦ತಾದ ಪ್ರೇಕ್ಷಣಿಯ ಸ್ಥಳಗಳು ಸಿಗುತ್ತವೆ.

ಕನಕಪುರದ ಪ್ರಮುಖ ಆಕರ್ಷಣೆಗಳು[ಬದಲಾಯಿಸಿ]

ಕನಕಪುರ ಬಹಳ ಸುಂದರವಾದ ತಾಲೂಕು. ಅಲ್ಲಿ ಅನೇಕ ರಮಣೀಯ ಸ್ಥಳಗಳು, ಸುಂದರವಾದ ದೇವಸ್ಥಾನಗಳು ಇವೆ. ಅದರಲ್ಲಿ ಮೊದಲನೆಯದಾಗಿ ಒಂದು ಪುರಾತನವಾದ ದೇವಸ್ತಾನದ ಬಗ್ಗೆ ತಿಳಿಸಲು ಬಯಸಿದ್ದೇನೆ. ಕನಕಪುರದಿಂದ ಸಂಗಮಕ್ಕೆ ಹೋಗುವ ದಾರಿಯಲ್ಲಿ ಸಂಗಮಕ್ಕಿಂತ ೧ ಕಿ.ಮೀ ಮುಂಚೆ ಎಡಭಾಗಕ್ಕೆ ಒಂದು ಕಿರಿದಾದ ರಸ್ತೆ ಇದೆ ಆ ರಸ್ತೆಯಲ್ಲಿ ಹಾಗೆ ಮುಂದೆ ನಡೆದರೆ 'ಕೊಗ್ಗೆ ದೊಡ್ಡಿ'ಎಂಬ ಹಳ್ಳಿಯಿದೆ. ಆ ಹಳ್ಳಿಯನ್ನು ದಾಟಿ ಹೋದರೆ ಮುಂದೆ ಸಾಗಿದರೆ ಸುಮಾರು ೫ ಕಿ.ಮೀ ದೂರದಲ್ಲಿ ಮಡಿವಾಳ (ತಂಬಡಗೇರಿ)ಎಂಬ ಚಿಕ್ಕ ಹಳ್ಳಿಯಿದೆ ಆ ಹಳ್ಳಿಯ ಮೂಲಕ ಹಾದು ಹೋದರೆ ಸುಮಾರು ೧ ಕಿ.ಮೀ ದೂರದಲ್ಲಿ ಶ್ರೀ ಶಿವನಂಕಾರೇಶ್ವರ ಸ್ವಾಮಿಯ ದೇವಸ್ಥಾನವಿದೆ.

ಶ್ರೀ ಶಿವನಂಕಾರೇಶ್ವರ ದೇವಸ್ಥಾನದ ಇತಿಹಾಸ[ಬದಲಾಯಿಸಿ]

  • ಈ ದೇವಸ್ಥಾನವು ತುಂಬಾ ಪ್ರಾಚೀನ ಕಾಲದ್ದಾಗಿದ್ದು, ತುಂಬಾ ಪುರಾತನವಾದ ಇತಿಹಾಸವನ್ನು ಹೊಂದಿದೆ ಎಂದು ದೇವಸ್ಥಾನದ ಕಟ್ಟಡವನ್ನು ನೋಡುವುದರಿಂದ ತಿಳಿಯಬಹುದಾಗಿದೆ ಹೊರತು ಬೇರೆ ಯಾವುದೇ ಪುರಾವೆಗಳು ನಮಗೆ ದೊರೆತಿರುವ ಉದಾಹರಣೆಗಳಿಲ್ಲ. ಆ ದೇವಸ್ಥಾನದ ಪುರೋಹಿತರ ಹೇಳಿಕೆಯ ಪ್ರಕಾರ ಈಗಿರುವ ದೇವಸ್ಥಾನಕ್ಕಿಂತ ಮೊದಲು ದೇವಸ್ಥಾನದ ಮುಂಭಾಗದ ಬಲ ಬದಿಯಲ್ಲಿ ಸುಮಾರು ೨೫೦ಮೀ ದೂರದಲ್ಲಿ ಈಗಿರುವ ದೇವಸ್ಥಾನಕ್ಕಿಂತ ದೊಡ್ಡದಾದ ದೇವಸ್ಥಾನವಿದ್ದು ಅದರ ಅಳಿವಿನ ಬಗ್ಗೆ ಈ ಕೆಳಗಿನಂತೆ ಹೇಳಲಾಗಿದೆ.
  • ದೇವಸ್ಥಾನದ ಹಿಂಭಾಗಕ್ಕೆ ಸುಮಾರು ೨ ಕಿ.ಮೀ ದೂರದಲ್ಲಿ ಆ ದೇವಸ್ಥಾನದ ಪುರೋಹಿತರು ಮತ್ತು ಅವರ ಸಂಭಂದಿಕರು ವಾಸವಾಗಿದ್ದು ಅದನ್ನು ತಂಬಡಗೇರಿ ಎಂದು ಕರೆಯಲಾಗಿದೆ, ಈಗಲೂ ಅದು ತಂಬಡಗೇರಿ ಏಂಬ ಹೆಸರಿನಿಂದಲೇ ನಾಮಾಂಕಿತಗೊಂಡಿದೆ. ದೇವಸ್ಥಾನದ ಬದಿಯಲ್ಲಿ ಚಿಕ್ಕದಾದ ಹೊಳೆಯೊಂದು ಹರಿಯುತ್ತಿದ್ದು ಮಳೆಗಾಲದ ಸಮಯದಲ್ಲಿ ಸುತ್ತಮುತ್ತಲಿನ ಬೆಟ್ಟಗಳಿಂದ ಮತ್ತು 'ಚಿಕ್ಕೊಂಡನಹಳ್ಳಿ ಕೆರೆ' ಎಂಬ ದೊಡ್ಡ ಕೆರೆಯಿಂದ ಬರುವ ಅತಿ ಹೆಚ್ಚು ನೀರಿನಿಂದ ಆ ಹೊಳೆ(ತೊರೆ)ಯಲ್ಲಿ ನೀರಿನ ಪ್ರಮಾಣ ಅಧಿಕವಾಗಿರುತ್ತದೆ.
  • ಅಂದು ಮಳೆಗಾಲದ ಒಂದು ದಿನ ಮಧ್ಯಾಹ್ನ ಆ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಎಂದೂ ಕಾಣದ ಹುಚ್ಚು ಹೊಳೆ ಹರಿದು ಬಂದಿತು.ಆ ಹೊಳೆಯ ರಭಸವು ಸುತ್ತ-ಮುತ್ತಲಿನ ಬೆಟ್ಟಗಳಿಗೆ ನಡುಕವನ್ನುಂಟು ಮಾಡಿತ್ತು. ಆ ಗಂಗೆಯು ನೇರವಾಗಿ ಹರಿದು ಬರುತ್ತಿರಲು ಹೊಳೆಯ ದಡದಲ್ಲಿದ್ದ ತಂಬಡಗೇರಿಯನ್ನು ಕೊಚ್ಚಿಕೊಂಡು ಹೋಗುವ ಮುನ್ಸೂಚನೆ ಕಂಡು ಬಂತು. ಆ ಕೂಡಲೇ ಶಿವನಂಕಾರೇಶ್ವರ ಸ್ವಾಮಿಯು ತನ್ನ ಭಕ್ತರನ್ನು ರಕ್ಷಿಸಲು ಗಂಗೆಗೆ ಅಡ್ಡಲಾಗಿ ಮಂಡಿಯೂರಿ ಕುಳಿತರಂತೆ, ಗಂಗೆಯು ಎಷ್ಟು ಬೇಡಿದರೂ ಮುಂದೆ ಹೋಗಲು ಬಿಡದೆ ಕುಳಿತರಂತೆ.
  • ಆ ಸಮಯದಲ್ಲಿ ಗಂಗೆಯು ಮುಂದೆ ಹೋಗಲು ಯಾವ ದಾರಿಯೂ ಇಲ್ಲದೆ ತನ್ನ ಬಲ ಭಾಗಕ್ಕೆ ಮಾತ್ರ ದಾರಿಯಿದ್ದು ಆ ಭಾಗದಲ್ಲಿ ಶಿವನಂಕಾರೇಶ್ವರ ಸ್ವಾಮಿಯ ದೇವಸ್ಥಾನವಿತ್ತು. ಆಗ ಶಿವನಂಕಾರೇಶ್ವರ ಸ್ವಾಮಿಯು ತನ್ನ ಗುಡಿ ಹೋದರೂ ಸರಿಯೇ ತನ್ನ ಭಕ್ತರು ಉಳಿಯಬೇಕೆಂದು ಆ ಗಂಗೆಗೆ ತನ್ನ ದೇವಸ್ಥಾನದ ಕಡೆ ದಾರಿ ನೀಡಿದರಂತೆ. ಆ ಸಮಯದಲ್ಲಿ ಗಂಗೆಯು ಆ ಸ್ವಾಮಿಯ ಗುಡಿಯನ್ನು ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಈಗಲೂ ಸಹ ಆ ಹಳೆಯ ದೇವಸ್ಥಾನದ ಅವಶೇಷಗಳು ಅಂದರೆ ಕಟ್ಟಡದ ಕಲ್ಲುಗಳು ಅಲ್ಲಿಯೇ ಚಲ್ಲಾಂಪಿಲ್ಲಿಯಾಗಿ ಬಿದ್ದಿವೆ. *ದೇವಸ್ಥಾನದ ಗೋಪುರದ ಕಳಸವು ಆ ಗಂಗೆಯೊಡನೆ ಕೊಚ್ಚಿಕೊಂಡು ಬಂದು ಸಂಗಮದ ಹತ್ತಿರ ಯಾವುದೋ ಆಳವಾದ ಜಾಗದಲ್ಲಿ ಮುಳುಗಿದೆ ಎಂದು ಕೆಲವರು ಹೇಳುತ್ತಾರೆ. ಅನಂತರ ಸ್ವಾಮಿಯ ಭಕ್ತರು ಹಳೆ ದೇವಸ್ತಾನದ ಕೆಲವು ಅವಶೇಷಗಳನ್ನು ತಂದು ಪಕ್ಕದಲ್ಲಿ ಸುಮಾರು ೨೫೦ಮೀ ದೂರದಲ್ಲಿ ದೊಡ್ಡದಾದ ದೇವಸ್ಥಾನವೊಂದನ್ನು ಕಟ್ಟಿದ್ದಾರೆ, ಅದೇ ಈಗಿನ 'ಶ್ರೀ ಶಿವನಂಕಾರೆಶ್ವರ ಸ್ವಾಮಿ ಸನ್ನಿಧಿ'.
  • ಅಲ್ಲಿನ ಹಿರಿಯರು ಹೇಳುವಂತೆ ಆ ಹಿಂದಿನ ದೇವಸ್ಥಾನವು ಸುಮಾರು ೧೦೧ಅಂಕಣದಷ್ಟಿದ್ದು, ಈಗಿನ ದೇವಸ್ತಾನವು ಸುಮಾರು ೩೦ ರಿಂದ ೪೦ ಅಂಕಣವಿದೆ ಎಂದು ಹೇಳಲಾಗುತ್ತಿದೆ. ಆ ದೇವಸ್ಥಾನದಲ್ಲಿ ೩ ಪುಟ್ಟ ಗುಡಿಗಳಿವೆ. ಅವುಗಳಲ್ಲಿ ಒಂದರಲ್ಲಿ ಶಿವನಂಕಾರೇಶ್ವರ ಸ್ವಾಮಿ ಇನ್ನೊಂದರಲ್ಲಿ ವೀರಭದ್ರ ಸ್ವಾಮಿ ಮತ್ತೊಂದರಲ್ಲಿ ಸ್ವಾಲಗಿತ್ತಿಯಮ್ಮ ತಾಯಿ ನೆಲೆಸಿದ್ದಾರೆ. ಈ ಮೂರು ಪುಟ್ಟ ಗುಡಿಗಳ ಪಕ್ಕದಲ್ಲಿ ಒಂದು ಬಸವನ ವಿಗ್ರಹವಿದೆ, ಆ ವಿಗ್ರಹದಲ್ಲಿ ಬಸವಣ್ಣ ಸ್ವಾಮಿಯು ಮಂಡಿಯೂರಿ ಕುಳಿತಿದ್ದು ಅದರ ಬಾಯಿಯ ಭಾಗವನ್ನು ಕತ್ತರಿಸಲಾಗಿದೆ.
  • ಬಸವಣ್ಣನ ಬಾಯಿಯನ್ನು ಕತ್ತರಿಸಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ಕತೆಯು ರೂಡಿಯಲ್ಲಿದೆ: ಅಲ್ಲಿನ ಕೆಲವು ಹಿರಿಯ ನಾಗರಿಕರು, ಭಕ್ತರು, ಮತ್ತು ಪುರೋಹಿತರ ಹೇಳಿಕೆಯ ಪ್ರಕಾರ ಆ ಬಸವ‌‌ ದೈವದತ್ತವಾಗಿ ಜನಿಸಿದ್ದು, ರಾತ್ರಿಯಲ್ಲಿ ಒಬ್ಬ ರೈತನ ಹೊಲದಲ್ಲಿ ಮೆಯ್ಯಲು ಹೋಗುತ್ತಿದ್ದು, ನಂತರ ಹಗಲಿನಲ್ಲಿ ದೇವಸ್ತಾನದಲ್ಲಿ ಬಂದು ಮಲಗುತ್ತಿತ್ತು. ಆ ಹೊಲದ ಮಾಲಿಕನಿಗೆ ರಾತ್ರಿಯಲ್ಲಿ ಯಾವ ಹಸು ಬಂದು ಮೆಯ್ಯುತ್ತಿದೆ ಎಂದು ತಿಳಿಯದೆ ಅದನ್ನು ತಿಳಿಯುವ ಸಲುವಾಗಿ ಒಂದು ದಿನ ರಾತ್ರಿಯಿಡೀ ಕಾಯುತ್ತಾ ಮಚ್ಚು ಹಿಡಿದು ಕುಳಿತನಂತೆ.
  • ಎಂದಿನಂತೆ ಬಸವಣ್ಣ ರಾತ್ರಿಯಲ್ಲಿ ಬಂದು ಮೆಯ್ಯುತ್ತಿರಲು ಸಿಟ್ಟೀಗೆದ್ದ ರೈತನು ತಾಳ್ಮೆಯನ್ನು ಕಳೆದುಕೊಂಡು ಅದರ ಮೊಖವನ್ನು ಕೊಚ್ಚಿದನಂತೆ. ಆಗ ಬಸವಣ್ಣನು ಮೆಯ್ಯಲು ಬಾಯಿ ಇಲ್ಲದೆ ದೇವಸ್ತಾನದ ಬಾಗಿಲಲ್ಲಿ ಬಂದು ಮಲಗಿರಲು ಮುಂಜಾನೆ ಆ ರೈತನು ಬಂದು ನೋಡಲು ಸತ್ಯ ತಿಳಿದ ರೈತನು ಮರುಗಿದನಂತೆ. ಈ ಕತೆಯ ಸತ್ಯಾಂಶದ ಸಂಕೇತವಾಗಿ ದೇವಸ್ತಾನದ ಮುಂಭಾಗದಲ್ಲಿ ಆ ರೈತನು ಮಚ್ಚು ಹಿಡಿದು ನಿಂತಿರುವ ವಿಗ್ರಹವನ್ನು ಕೆತ್ತಲಾಗಿದೆ. ದೇವಸ್ತಾನದ ಹಿಂಭಾಗದ ಗೋಡೆಗೆ ಹೊಂದಿಸಿದಂತೆ ತೇರನ್ನು ನಿಲ್ಲಿಸಲು ಜಾಗವನ್ನು ಮಾಡಲಾಗಿದೆ.

ಕಬ್ಬಾಳು ಶಕ್ತಿ ದೇವತೆ ಆದ ಕಬ್ಬಾಳಮ್ಮ ತಾಯಿಯ ಪವಿತ್ರ ಕ್ಷೇತ್ರ[ಬದಲಾಯಿಸಿ]

ಕನಕಪುರದಿಂದ ಸಾತನೂರು ರಸ್ತೆಯಲ್ಲಿ ಸುಮಾರು ೨೦ ಕಿ. ಮೀ ದೂರ ಕ್ರಮಿಸಿದರೆ ಕಬ್ಬಾಳು ಕ್ಷೇತ್ರವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬಂದು ಕಬ್ಬಾಳಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಇದೊಂದು ಪುರಾತನ ಇತಿಹಾಸವುಳ್ಳ ಪವಿತ್ರ ಕ್ಷೇತ್ರವಾಗಿದೆ.

ಕನಕಪುರದ ಕೋಟೆಯ ಬಗ್ಗೆ[ಬದಲಾಯಿಸಿ]

ಕನಕಪುರದ ಕೋಟೆ ಅರ್ಕಾವತಿ ನದಿ ತೀರದಲ್ಲಿದ್ದು ಇದನ್ನು ಕಟ್ಟಿಸಿದ್ದು ವಿಜಯನಗರ ಸಾಮ್ರಾಜ್ಯಾದ ಚನ್ನಪಟ್ಟಣ್ಣ ಸಂಸ್ಥಾನದ ಅಧಿಪತಿ ಶ್ರೀ ಜಗದೇವರಾಯ - ಈತ ಬಣಜಿಗ ಸಮುದಾಯಕ್ಕೆ ಸೇರಿದ್ದವನಾಗಿದ್ದನು ಈ ಕೋಟೆಯು ಟಿಪ್ಪು ಸುಲ್ತಾನನ ಯುದ್ದ ಯುಕ್ತಿಯ ರಾಜಕೀಯದಲ್ಲಿ ಎರಡು ಭಾರಿ ಅಗ್ನಿಗೆ ಆಹುತಿಯಾಗಿ ಬಹುಶಃ ನಾಶವಾಯಿತು.

"https://kn.wikipedia.org/w/index.php?title=ಕನಕಪುರ&oldid=1133234" ಇಂದ ಪಡೆಯಲ್ಪಟ್ಟಿದೆ