ಚೆಂಗಲರಾಯ ರೆಡ್ಡಿ

ವಿಕಿಪೀಡಿಯ ಇಂದ
Jump to navigation Jump to search

ಮೈಸೂರು ರಾಜ್ಯದ ಮೊಟ್ಟ ಮೊದಲ ಮುಖ್ಯಮಂತ್ರಿ(೧೯೦೨ - ೧೯೭೬)[ಬದಲಾಯಿಸಿ]

ಚೆಂಗಲರಾಯ ರೆಡ್ಡಿ, ಅವರು ಮೈಸೂರು ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಆಗಿದ್ದವರು. ಇವರು ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಕ್ಯಾಸಂಬಳ್ಳಿ ಊರಿನವರು. ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, ಶ್ರೀ.ಎಚ್.ಆರ್. ಗುರುವರೆಡ್ಡಿ ಯವರ ತರಹ, ಸಕ್ರಿಯ ಪಾತ್ರತೆಗೆದುಕೊಂಡಿದ್ದರು. ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸಕ್ರಿಯಪಾತ್ರ ವಹಿಸಿದ್ದರು. ಅವರ ಮಂತ್ರಿಮಂಡಲದಲ್ಲಿ ಶ್ರೀ.ಭಾಷ್ಯಂ, ಎಂಬ ನಿಷ್ಠಾವಂತ, ಹಾಗೂ ದೇಶಪ್ರೇಮಿ, ಮಂತ್ರಿಯಿದ್ದರು. ಭಾಷ್ಯಂ, ತಮಗೆ ಕೊಡಲಾಗಿದ್ದ 'ಸರ್ಕಾರಿ ವಸತಿಗೃಹವನ್ನು, ತಿರಸ್ಕರಿಸಿದರು. ಚೆಂಗಲರಾಯ ರೆಡ್ಡಿಯವರ ಮಂತ್ರಿಮಂಡಲದಲ್ಲಿ ಒಮ್ಮೆ ಭಿನ್ನಾಭಿಪ್ರಾಯ ತಲೆದೋರಿ ರೆಡ್ಡಿಯವರಿಗೆ ಮಾನಸಿಕ ಆಘಾತವಾಯಿತು. ಮುಂದೆ ಅವರು ಪಂಡಿತ್ ನೆಹರೂರವರ, ಮಂತ್ರಿಮಂಡಲದ ಸದಸ್ಯರಾಗಿದ್ದರು. 'ಮಧ್ಯಪ್ರದೇಶದ ಗವರ್ನರ್' ಆಗಿ, ಸೇವೆ ಸಲ್ಲಿಸಿದರು. ೧೯೫೧ ರಲ್ಲಿ ಬೆಂಗಳೂರಿನಲ್ಲಿ ವಿಧಾನಸೌಧದ ನಿರ್ಮಾಣದ ಸಮಯದಲ್ಲಿ ಆವರಿದ್ದರು. ಸೌಧದ ಕೊನೆಯ ಹಂತವನ್ನು ಶ್ರೀ. ಕೆಂಗಲ್ ಹನುಮಂತಯ್ಯ ನವರು ಪೂರ್ಣಗೊಳಿಸಿದರು[೧] .

ಉಲ್ಲೇಖಗಳು[ಬದಲಾಯಿಸಿ]

  1. "ಕರ್ನಾಟಕದ ಮುಖ್ಯಮಂತ್ರಿಗಳು". kannadamahiti.in. Retrieved 8-2-2014. Check date values in: |accessdate= (help)